For Quick Alerts
ALLOW NOTIFICATIONS  
For Daily Alerts

ಉದ್ಯೋಗಿಗಳಿಗೆ 2 ಲಕ್ಷ ಉಚಿತ 'ತಿರುಪತಿ ಲಡ್ಡು' ವಿತರಿಸಿದ TTD

|

ಕೊರೊನಾವೈರಸ್ ಮುನ್ನೆಚ್ಚರಿಕೆಯ ಕ್ರಮವಾಗಿ ದೇಶದ ಪ್ರಸಿದ್ಧ ದೇವಾಲಯ ತಿರುಪತಿ ದೇವಾಲಯ ಈಗಾಗಲೇ ಬಾಗಿಲು ಮುಚ್ಚಿದೆ. ಈ ವೇಳೆ ದೇವಾಲಯದ ಆಡಳಿತ ಮಂಡಳಿ ತನ್ನ ಉದ್ಯೋಗಿಗಳಿಗೆ 2 ಲಕ್ಷ ಲಡ್ಡುಗಳನ್ನು ಉಚಿತವಾಗಿ ಹಂಚಿದೆ.

ಬೆಟ್ಟದ ದೇವಾಲಯದ ವ್ಯವಹಾರಗಳನ್ನು ನಿರ್ವಹಿಸುವ ತಿರುಮಲ ತಿರುಪತಿ ದೇವಾಸ್ತಾನಂ(ಟಿಟಿಡಿ) 21,000 ಸಾಮಾನ್ಯ ಮತ್ತು ಗುತ್ತಿಗೆ ನೌಕರರಿಗೆ 2.4 ಲಕ್ಷಗಳನ್ನು ವಿತರಿಸಿಲಿದೆ.

 ಉದ್ಯೋಗಿಗಳಿಗೆ 2 ಲಕ್ಷ ಉಚಿತ 'ತಿರುಪತಿ ಲಡ್ಡು' ವಿತರಿಸಿದ TTD

ಉಗಾದಿ ಹಬ್ಬದ ಉಡುಗೊರೆಯಾಗಿ ಪ್ರತಿ ಉದ್ಯೋಗಿಗೆ ತಲಾ 10 ಲಡ್ಡುಗಳನ್ನು ನೀಡಲಾಗುವುದು ಎಂದು ದೇವಾಲಯದ ಅಧಿಕಾರಿಗಳು ತಿಳಿಸಿದ್ದಾರೆ. ತಿರುಪತಿ ಲಡ್ಡು ಎಂದು ಪ್ರಸಿದ್ಧವಾಗಿರುವ ಈ ಸಿಹಿತಿಂಡಿಯನ್ನು ಲಕ್ಷಾಂತರ ಯಾತ್ರಾರ್ಥಿಗಳಿಗೆ 'ಪ್ರಸಾದಂ' ಅಥವಾ ದೇವಾಲಯದ ಪವಿತ್ರ ಅರ್ಪಣೆ ಎಂದು ನೀಡಲಾಗುತ್ತದೆ.

ದೇವಾಲಯದ ಅಧಿಕಾರಿಗಳು ಸಾವಿರಾರು ಯಾತ್ರಿಕರ ದೈನಂದಿನ ಅಗತ್ಯವನ್ನು ಪೂರೈಸಲು ಲಕ್ಷಾಂತರ ಲಡ್ಡುಗಳನ್ನು ಮೊದಲೇ ತಯಾರಿಸುತ್ತಾರೆ. ಆದಾಗ್ಯೂ, ಕೊರೊನಾವೈರಸ್ ಮುನ್ನೆಚ್ಚರಿಕೆಯ ದೃಷ್ಟಿಯಿಂದ ದೇವಾಲಯವನ್ನು ಶುಕ್ರವಾರದಿಂದ ಮುಚ್ಚಲಾಗುತ್ತಿರುವುದರಿಂದ, ಈಗಾಗಲೇ ಸಿದ್ಧಪಡಿಸಿದ ಲಾಡುಗಳನ್ನು ವಿತರಿಸಲು ಸಾಧ್ಯವಾಗಲಿಲ್ಲ.

English summary

Tirupati Temple To Give Free 2 Lakh Laddus To Employees

TTD will be distributing 2.4 lakh laddus, among 21,000 regular and contract employees.
Story first published: Sunday, March 22, 2020, 9:31 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X