For Quick Alerts
ALLOW NOTIFICATIONS  
For Daily Alerts

ಪಾಕಿಸ್ತಾನದಲ್ಲಿ 4 ಟೊಮೆಟೊಗೆ 100 ರುಪಾಯಿ; ಸರ್ಕಾರಕ್ಕೆ ಜನರ ಛೀ ಥೂ...

|

ಪಾಕಿಸ್ತಾನದಲ್ಲಿ ಮಂಗಳವಾರ ಟೊಮೆಟೊ ಬೆಲೆ ಕೇಜಿಗೆ ಅಲ್ಲಿನ ರುಪಾಯಿ ಲೆಕ್ಕದಲ್ಲಿ 400ಕ್ಕೆ ವಹಿವಾಟು ಆಗಿದೆ. ಅದಕ್ಕೆ ಒಂದು ದಿನಕ್ಕೆ ಮೊದಲು, ಅಂದರೆ ಸೋಮವಾರದಂದು 300ರಿಂದ 320 ರುಪಾಯಿಗೆ ಮಾರಾಟ ಆಗಿದೆ. ಇರಾನ್ ನಿಂದ ಆಮದು ಆಗಬೇಕಿದ್ದ ಟೊಮೆಟೊ ಅಗತ್ಯ ಪ್ರಮಾಣದಲ್ಲಿ ಬಾರದ ಕಾರಣಕ್ಕೆ ಆಸೆಬುರುಕ ವರ್ತಕರು, ಇರಾನ್ ನ ಟೊಮೆಟೊ ಬೆಲೆಗೆ ಸ್ವಾಟ್, ಸಿಂಧ್ ಪ್ರಾಂತ್ಯದ ಟೊಮೆಟೊ ಖರೀದಿಸಿದ್ದಾರೆ.

ಆದರೆ, ಸ್ಥಳೀಯ ಆಡಳಿತದಿಂದ ಈ ಹಿಂದಿನಂತೆಯೇ ಅವಾಸ್ತವಿಕವಾಗಿ ಬೆಲೆ ನಿಗದಿ ಮಾಡಲಾಗಿದೆ. ಮಂಗಳವಾರದಂದು ಕೇಜಿ ಟೊಮೆಟೊಗೆ 253 ರುಪಾಯಿ ದರ ನಿಗದಿ ಮಾಡಲಾಗಿದೆ. ಅದರ ಹಿಂದಿನ ದಿನ, ಅಂದರೆ ಸೋಮವಾರ ಕೇಜಿ ಟೊಮೆಟೊಗೆ 193 ರುಪಾಯಿ ಬೆಲೆ ತೀರ್ಮಾನಿಸಲಾಗಿತ್ತು ಎಂದು ಪಾಕಿಸ್ತಾನದ 'ಡಾನ್' ಪತ್ರಿಕೆ ವರದಿ ಮಾಡಿದೆ.

ಅಂದ ಹಾಗೆ ನವೆಂಬರ್ ಮೊದಲ ವಾರದಲ್ಲಿ ಟೊಮೆಟೊ ಅಧಿಕೃತ ಬೆಲೆ ಕೇಜಿಗೆ 117 ರುಪಾಯಿ ಇತ್ತು. ಆದರೆ ಮಂಗಳವಾರದ ದರ ಗಮನಿಸಿದರೆ ಸರ್ಕಾರವೇ ಬೆಲೆ ಏರಿಕೆ ಮಾಡುತ್ತಿರುವುದು ಕಂಡುಬರುತ್ತದೆ. ಸರ್ಕಾರ ನಿಗದಿ ಮಾಡಿದ ದರದಲ್ಲಿ ಯಾವ ವರ್ತಕರೂ ಟೊಮೆಟೊ ಮಾರಾಟ ಮಾಡುತ್ತಿಲ್ಲ.

ಪಾಕಿಸ್ತಾನದಲ್ಲಿ 4 ಟೊಮೆಟೊಗೆ 100 ರುಪಾಯಿ; ಸರ್ಕಾರಕ್ಕೆ ಜನರ ಛೀ ಥೂ..

ವರ್ತಕರು ಹೇಳುವಂತೆ, 13-14 ಕೇಜಿಯ ಟೊಮೆಟೊ ಬಾಕ್ಸ್ ಗೆ 4,200ರಿಂದ 4,500 ರುಪಾಯಿ ಇದೆ. ಅದು ಕೂಡ ಗುಣಮಟ್ಟದ ಮೇಲೆ ನಿರ್ಧಾರ ಆಗುತ್ತದೆ. ಆದ್ದರಿಂದ ಎಷ್ಟೋ ವರ್ತಕರು ಟೊಮೆಟೊ ಖರೀದಿ ಮಾಡುವುದನ್ನೇ ನಿಲ್ಲಿಸಿಬಿಟ್ಟಿದ್ದಾರೆ.

4,500 ಟನ್ ಟೊಮೆಟೊವನ್ನು ಇರಾನ್ ನಿಂದ ಆಮದು ಮಾಡಿಕೊಳ್ಳಲು ಕಳೆದ ವಾರ ಪಾಕ್ ಸರ್ಕಾರವು ಅನುಮತಿ ನೀಡಿತ್ತು. ಆದರೆ ಆ ಪೈಕಿ 989 ಟನ್ ಮಾತ್ರ ಮಾರುಕಟ್ಟೆಗೆ ಬಂದಿದೆ. ಇನ್ನೂ ಹೆಚ್ಚಿನ ಸರಕು ತಫ್ತಾನ್ ಗಡಿಗೆ ಬರುತ್ತದೋ ಇಲ್ಲವೋ ಎಂಬ ಖಾತ್ರಿಯೂ ಇಲ್ಲ ಎಂದು ವರ್ತಕರು ಹೇಳಿದ್ದಾರೆ.

ಕೆಲವೇ ಜನರಿಗೆ ಆಮದು ಮಾಡಿಕೊಳ್ಳಲು ಸರ್ಕಾರ ಅವಕಾಶ ನಿಡಿದೆ. ಈಗಿನ ಸಮಸ್ಯೆಗೆ ಆ ನೀತಿಯೇ ಕಾರಣ. ಸೀಮಿತ ಪ್ರಮಾಣದ ಸರಕು ಈಗಾಗಲೇ ತಫ್ತಾನ್ ಗಡಿಯಲ್ಲಿ ಬುಕ್ ಆಗಿ, ಮಾರಾಟವಾಗಿದೆ. ಈ ಹಿಂದೆ ಮುಕ್ತ ಆಮದು ಅವಕಾಶ ಇದ್ದಾಗ ಟೊಮೆಟೊ ದರವು ಸ್ಥಿರವಾಗಿತ್ತು ಎನ್ನುತ್ತಾರೆ.

ಸಿಂಧ್ ನಲ್ಲಿ ಬಹಳ ಸೀಮಿತವಾಗಿ ಫಸಲು ಬರುತ್ತಿದೆ. 10 ಕೇಜಿಯ ಮರದ ಪೆಟ್ಟಿಗೆಯ ಟೊಮೆಟೊ ದರವು 2,300 ರುಪಾಯಿ ಇದೆ. ಗ್ರಾಹಕರು 250 ಗ್ರಾಮ್ ಅಥವಾ 4 ಟೊಮೆಟೊಗೆ 100 ರುಪಾಯಿ ಕೊಡುತ್ತಿದ್ದಾರೆ ಎನ್ನುತ್ತಾರೆ ಕರಾಚಿಯ ಸಗಟು ಮಾರುಕಟ್ಟೆಯ ಹಿರಿಯ ವರ್ತಕರು.

English summary

Tomato Per KG Crossed 400 Rupees In Pakistan; People Blaming Federal Government Rules

Tomato price per kg crossed 400 rupees in Pakistan. Due to new import rule traders facing problem. Here is the complete story.
Story first published: Wednesday, November 20, 2019, 19:13 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X