ಅಬಕಾರಿ ಸುಂಕ ಕಡಿತದ ಬಳಿಕ ಪೆಟ್ರೋಲ್ ಶೇ. 50, ಡೀಸೆಲ್ ಶೇ. 40 ತೆರಿಗೆ ಇಳಿಕೆ
ಕೇಂದ್ರ ಸರ್ಕಾರವು ಕಳೆದ ವಾರ ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಕಡಿತ ಮಾಡಿದೆ. ಈ ಬೆನ್ನಲ್ಲೇ ರಾಜ್ಯ ಸರ್ಕಾರಗಳು ಕೂಡಾ ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಸುಂಕವನ್ನು ಕಡಿಮೆ ಮಾಡಿದೆ. ಈ ನಡುವೆ ಪೆಟ್ರೋಲ್ ಮೇಲಿನ ಒಟ್ಟು ತೆರಿಗೆಯು ಶೇಕಡ 50 ರಷ್ಟು ಹಾಗೂ ಡೀಸೆಲ್ ಮೇಲಿನ ಒಟ್ಟು ತೆರಿಗೆಯು ಶೇಕಡಾ 40 ಕ್ಕೆ ಇಳಿದಿದೆ. ಇನ್ನು ಇಂಧನದ ಮೇಲಿನ ಸ್ಥಳೀಯ ಮಾರಾಟ ತೆರಿಗೆ ಅಥವಾ ವ್ಯಾಟ್ ಅನ್ನು ಕಡಿತಗೊಳಿಸಿದ ರಾಜ್ಯಗಳಲ್ಲಿ ಇಂಧನದ ಮೇಲಿನ ತೆರಿಗೆಯು ಇನ್ನೂ ಕೂಡಾ ಕಡಿತವಾಗಿದೆ ಎಂದು ವರದಿಯು ಉಲ್ಲೇಖ ಮಾಡಿದೆ.
ಪೆಟ್ರೋಲ್ ಮತ್ತು ಡೀಸೆಲ್‌ನ ಚಿಲ್ಲರೆ ಬೆಲೆಯನ್ನು ಕೇಂದ್ರೀಯ ಅಬಕಾರಿ, ಡೀಲರ್‌ಗಳಿಗೆ ಪಾವತಿಸುವ ಕಮಿಷನ್ ಮತ್ತು ಮೂಲ ತೈಲ ಬೆಲೆಗಳಿಗೆ ಮೌಲ್ಯವರ್ಧಿತ ತೆರಿಗೆ (ವ್ಯಾಟ್) ಸೇರಿಸಿದ ನಂತರ ನಿರ್ಧರಿಸಲಾಗುತ್ತದೆ. ಮೂಲ ತೈಲ ಬೆಲೆಯು ಚಾಲ್ತಿಯಲ್ಲಿರುವ ಅಂತರರಾಷ್ಟ್ರೀಯ ಮಾನದಂಡದ ದರ ಮತ್ತು ಸರಕು ಸಾಗಣೆಯನ್ನು ಒಳಗೊಂಡಿರುತ್ತದೆ.
ಪ್ಯಾನ್, ಟ್ಯಾನ್ ಮತ್ತು ಟಿನ್ ನಡುವಿನ ಮೂಲ ವ್ಯತ್ಯಾಸವೇನು? ನಮಗೇಕೆ ಅಗತ್ಯ?
ಸರ್ಕಾರಿ ಸ್ವಾಮ್ಯದ ಇಂಧನ ಚಿಲ್ಲರೆ ವ್ಯಾಪಾರಿಗಳಿಂದ ಲಭ್ಯವಿರುವ ಇಂಧನದ ಬೆಲೆ ಪ್ರಕಾರ ನವೆಂಬರ್ 1 ರಂದು ಅಬಕಾರಿ ಸುಂಕ ಕಡಿತ ಮಾಡುವುದಕ್ಕೂ ಮುನ್ನ ಕೇಂದ್ರೀಯ ಅಬಕಾರಿ ಸುಂಕವು 32.90 ರೂಪಾಯಿ ಆಗಿದೆ. ದೆಹಲಿಯಲ್ಲಿ ಶೇಕಡಾ 30 ರಷ್ಟು ವ್ಯಾಟ್ ಆಗಿತ್ತು. ಡೀಸೆಲ್‌ನ ಚಿಲ್ಲರೆ ಮಾರಾಟ ಬೆಲೆಯ ಶೇಕಡ 54 ರಷ್ಟು ಅಬಕಾರಿ ಸುಂಕವೇ ಆಗಿತ್ತು. ಇನ್ನು ಅಬಕಾರಿ ಸುಂಕದಲ್ಲಿ ಲೀಟರ್‌ಗೆ 5 ರೂಪಾಯಿ ಕಡಿತ ಮಾಡಿದ ಬಳಿಕ ದೆಹಲಿಯಲ್ಲಿ ಶೇಕಡ 50 ರಷ್ಟು ಪೆಟ್ರೋಲ್ ಬೆಲೆಯು ಇಳಿಕೆಯಾಗಿದೆ. ಇನ್ನು ಈ ನಡುವೆ ಹಲವಾರು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಪೆಟ್ರೋಲ್, ಡೀಸೆಲ್ ಮೇಲಿನ ವ್ಯಾಟ್ ಅನ್ನು ಕಡಿತ ಮಾಡಿದೆ. ಈ ರಾಜ್ಯಗಳಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯು ಇನ್ನೂ ಕೂಡಾ ಕಡಿಮೆ ಆಗಿದೆ.

ದೆಹಲಿ ಸರ್ಕಾರವು ಇನ್ನೂ ಕೂಡಾ ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ವ್ಯಾಟ್ ಅನ್ನು ಇಳಿಕೆ ಮಾಡಿಲ್ಲ. ಅದೇ ರೀತಿ ಡೀಸೆಲ್‌ನ ಮೇಲೆ ಪ್ರತಿ ಲೀಟರ್‌ಗೆ ರೂ 31.80 ರ ಕೇಂದ್ರೀಯ ಅಬಕಾರಿ ಸುಂಕ ಮತ್ತು ವ್ಯಾಟ್‌ನ 16.75 ಪ್ರತಿಶತ ವ್ಯಾಟ್ ಹೇರಿದ್ದು, ಈ ಮೂಲಕ ದೆಹಲಿಯಲ್ಲಿ ಒಟ್ಟು ತೆರಿಗೆಯ ಪ್ರಮಾಣವನ್ನು 48 ಪ್ರತಿಶತಕ್ಕೆ ಏರಿಕೆ ಆಗಿತ್ತು. ಹತ್ತು ರೂಪಾಯಿ ಅಬಕಾರಿ ಸುಂಕವನ್ನು ಕಡಿತ ಮಾಡಿದ ಬಳಿಕ ದೆಹಲಿಯಲ್ಲಿ ಶೇಕಡ 40 ರಷ್ಟು ಡೀಸೆಲ್ ದರವು ಇಳಿಕೆ ಆಗಿದೆ. ಇನ್ನು ದೆಹಲಿಯಲ್ಲಿ ವ್ಯಾಟ್ ಕಡಿತ ಮಾಡಿದರೆ, ಡಿಸೇಲ್ ಬೆಲೆಯು ಇನ್ನಷ್ಟು ಇಳಿಕೆ ಆಗಲಿದೆ.
ಗಮನಿಸಿ: ಗೂಗಲ್‌ನಲ್ಲಿ ಈ ವಿಚಾರಗಳನ್ನು ಸರ್ಚ್ ಮಾಡುವಾಗ ಎಚ್ಚರ
ಇನ್ನು ಪ್ರಸ್ತುತ ಕೆಲವು ರಾಜ್ಯಗಳು ಆರ್ಥಿಕ ಪರಿಸ್ಥಿತಿಯ ವಿಚಾರವನ್ನು ಮುಂದಿಟ್ಟುಕೊಂಡು ವ್ಯಾಟ್ ಇಳಿಕೆ ಮಾಡಿಲ್ಲ. ಹಾಗಾಗಿ ರಾಜಸ್ಥಾನ ಸರ್ಕಾರವು ಪೆಟ್ರೋಲ್ ಮೇಲೆ ಅಧಿಕ ವ್ಯಾಟ್ ಅನ್ನು ಹೊಂದಿದೆ. ಬಳಿಕ ಮಹಾರಾಷ್ಟ್ರ ಸರ್ಕಾರ, ಆಂಧ್ರ ಪ್ರದೇಶ, ಮಧ್ಯ ಪ್ರದೇಶದಲ್ಲಿ ಅಧಿಕ ವ್ಯಾಟ್ ಇದೆ. ರಾಜಸ್ಥಾನದಲ್ಲಿ ಲೀಟರ್‌ಗೆ 30.51 ರೂಪಾಯಿ ವ್ಯಾಟ್ ಹೇರಲಾಗಿದೆ. ಮಹಾರಾಷ್ಟ್ರದಲ್ಲಿ 29.99 ರೂಪಾಯಿ ವ್ಯಾಟ್ ಇದೆ. ಆಂಧ್ರ ಪ್ರದೇಶದಲ್ಲಿ 29.02 ರೂಪಾಯಿ ವ್ಯಾಟ್ ಇದೆ. ಮಧ್ಯ ಪ್ರದೇಶದಲ್ಲಿ ಶೇಕಡ 26.87 ರೂಪಾಯಿ ವ್ಯಾಟ್ ಇದೆ. ಇನ್ನು ಕಡಿಮೆ ವ್ಯಾಟ್ ಎಂದರೆ ಅಂಡಮಾನ್ ಹಾಗೂ ನಿಕೋಬರ್‌ನಲ್ಲಿ ಇದೆ. 4.93 ವ್ಯಾಟ್ ಅನ್ನು ವಿಧಿಸಲಾಗಿದೆ.
ದೇಶದಲ್ಲಿ ಅಬಕಾರಿ ಸುಂಕ, ಸೆಸ್, ವ್ಯಾಟ್ ಇಳಿಕೆ ಮಾಡಿದ ಬಳಿಕ ಇಂಧನದ ದರದಲ್ಲಿ ಭಾರೀ ಇಳಿಕೆ ಕಂಡು ಬಂದಿದೆ. ನವದೆಹಲಿಯಲ್ಲಿ ಇಂದು ಪೆಟ್ರೋಲ್ ಬೆಲೆಯು 103.97 ರೂಪಾಯಿ ಆಗಿದೆ. ಕೋಲ್ಕತ್ತಾದಲ್ಲಿ 104.67 ರೂಪಾಯಿ ಆಗಿದೆ. ಮುಂಬೈನಲ್ಲಿ 109.98 ರೂಪಾಯಿಯಷ್ಟು ಬೆಲೆ ಇದೆ. ಚೆನ್ನೈನಲ್ಲಿ 101.40 ರೂಪಾಯಿ ಆಗಿದೆ. ಗುರುಗ್ರಾಮದಲ್ಲಿ 95.90 ರೂಪಾಯಿ ಆಗಿದ್ದರೆ, ನೋಯ್ಡಾದಲ್ಲಿ 95.51 ರೂಪಾಯಿ ಗೆ ಇಳಿದಿದೆ. ಬೆಂಗಳೂರಿನಲ್ಲಿ 100.58 ರೂಪಾಯಿ ಆಗಿದೆ. ಇನ್ನು ಡೀಸೆಲ್ ದರವು ನವದೆಹಲಿಯಲ್ಲಿ ಇಂದು 86.67 ಆಗಿದೆ. ಕೋಲ್ಕತ್ತಾದಲ್ಲಿ 89.79 ರೂಪಾಯಿ ಆಗಿದೆ. ಮುಂಬೈನಲ್ಲಿ 94.14 ರೂಪಾಯಿಯಷ್ಟು ಬೆಲೆ ಇದೆ. ಚೆನ್ನೈನಲ್ಲಿ 91.43 ರೂಪಾಯಿ ಆಗಿದೆ. ಗುರುಗ್ರಾಮದಲ್ಲಿ 87.11 ರೂಪಾಯಿ ಆಗಿದ್ದರೆ, ನೋಯ್ಡಾದಲ್ಲಿ 87.01 ರೂಪಾಯಿ ಗೆ ಇಳಿದಿದೆ. ಬೆಂಗಳೂರಿನಲ್ಲಿ 85.01 ರೂಪಾಯಿ ಆಗಿದೆ.