ಯುನೈಟೆಡ್ ಕಿಂಗ್ ಡಮ್ ಗೆ ಶತಮಾನದ ಆರ್ಥಿಕ ಕುಸಿತ ತಂದ ಕೊರೊನಾ

ಈಗಾಗಲೇ ಘೋಷಣೆ ಮಾಡಿರುವ ಕೊರೊನಾ ಲಾಕ್ ಡೌನ್ ಕನಿಷ್ಠ ಇನ್ನೂ ಮೂರು ವಾರ ಯು.ಕೆ.ನಲ್ಲಿ (ಯುನೈಟೆಡ್ ಕಿಂಗ್ ಡಮ್) ಮುಂದುವರಿಯುವಂತೆ ಕಾಣುತ್ತಿದೆ. ಈ ಲಾಕ್ ಡೌನ್ ನಿಂದ ಹೊರಬರುವ ದಾರಿ ಗೊತ್ತಾಗುತ್ತಿಲ್ಲ. ಆದ್ದರಿಂದ ದೇಶವು ಈ ಶತಮಾನದ ಅತ್ಯಂತ ತೀವ್ರ ಆರ್ಥಿಕ ಕುಸಿತ ಎದುರಿಸಲಿದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಕೊರೊನಾ ಹಬ್ಬದಂತೆ ತಡೆಯಲು ಮಾರ್ಚ್ 23ನೇ ತಾರೀಕಿನಂದು ನಿರ್ಬಂಧ ಹೇರಲಾಗಿತ್ತು. ಆ ನಿರ್ಬಂಧ ಕನಿಷ್ಠ ಮೂರು ವಾರ ಮುಂದುವರಿಯಲಿದೆ ಎಂದು ಹೇಳಲಾಗಿದೆ. ಆದರೆ ಈ ಲಾಕ್ ಡೌನ್ ಅನ್ನು ಯಾವಾಗ ತೆಗೆಯಬಹುದು ಎಂಬ ಬಗ್ಗೆ ಪ್ರಶ್ನೆ ಹಾಗೇ ಉಳಿದುಕೊಂಡಿದೆ.

2020ರ ಯು.ಕೆ. ಜಿಡಿಪಿ ಮೇಲೆ ಈ ಲಾಕ್ ಡೌನ್ ಪರಿಣಾಮ ಪ್ರಮುಖವಾಗಿ ಇರಲಿದೆ. ಕಳೆದ ಬಾರಿ ಈ ಪ್ರಮಾಣದ ಆರ್ಥಿಕ ಕುಸಿತ ಕಂಡಿದ್ದು 1921ನೇ ಇಸವಿಯಲ್ಲಿ ಎಂದು ಯುನೈಟೆಡ್ ಕಿಂಗ್ ಡಮ್ ನ ಆರ್ಥಿಕ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಈಗಿನ ಅಂದಾಜಿನ ಪ್ರಕಾರ ಮೇ ತಿಂಗಳ ಮಧ್ಯಭಾಗದವರೆಗೆ ಲಾಕ್ ಡೌನ್ ಇರಲಿದೆ. ಇದು ಕ್ರಮೇಣ ವಾಪಸ್ ತೆಗೆದುಕೊಳ್ಳಲಾಗುತ್ತದೆ. ಈ ವರ್ಷದ ಜಿಡಿಪಿ 5 ಪರ್ಸೆಂಟ್ ಗೆ ಕುಸಿಯುವ ಅಂದಾಜು ಮಾಡಲಾಗಿದೆ.

ಯುನೈಟೆಡ್ ಕಿಂಗ್ ಡಮ್ ಗೆ ಶತಮಾನದ ಆರ್ಥಿಕ ಕುಸಿತ ತಂದ ಕೊರೊನಾ

ಆದರೆ, 2021ರಲ್ಲಿ ಯುನೈಟೆಡ್ ಕಿಂಗ್ ಡಮ್ ನ ಆರ್ಥಿಕತೆ ಶೀಘ್ರವಾಗಿ ಚೇತರಿಸಿಕೊಳ್ಳಲಿದೆ ಎಂಬ ಆಶಾಭಾವ ವ್ಯಕ್ತಪಡಿಸಲಾಗುತ್ತಿದೆ. ಈ ವರೆಗೆ ಯು.ಕೆ.ನಲ್ಲಿ 1,15,314 ಕೊರೊನಾ ಪಾಸಿಟಿವ್ ಪ್ರಕರಣಗಳು ಕಂಡುಬಂದಿದ್ದು, 15,498 ಮಂದಿ ಮೃತಪಟ್ಟಿದ್ದಾರೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+