For Quick Alerts
ALLOW NOTIFICATIONS  
For Daily Alerts

ಉಬರ್ ಕಾರು ಚಾಲಕರು ಇನ್ಮುಂದೆ ಹೆಚ್ಚು ಹಣ ಮಾಡಬಹುದು

|

ಉಬರ್ ಕಾರು ಚಾಲಕರು ಇನ್ಮುಂದೆ ಈಗಿನ ಗಳಿಕೆಗಿಂತ ಹೆಚ್ಚಿನ ಹಣ ಮಾಡಬಹುದು. ಅದೇ ಹೇಗೆ ಎಂದು ನೀವು ಅಂದುಕೊಳ್ಳಬಹುದು, ಉಬರ್ ಕಂಪನಿಯು ಕಾರು ಚಾಲಕರಿಗೆ ಹೆಚ್ಚಿನ ಹಣದ ಮೂಲವನ್ನು ಹುಡುಕಿಕೊಡಲಿದ್ದಾರೆ.

ಉಬರ್ ಇಂಡಿಯಾ ಎಸ್‌ಎ ಕಂಪನಿಯು ಜಾಹೀರಾತುದಾರ ಕಂಪನಿ ಕ್ಯಾಶ್‌ ಯುವರ್ ಡ್ರೈವ್ (CASHurDrive) ಮಾರ್ಕೆಂಟಿಗ್ ಸಹಭಾಗಿತ್ವದಲ್ಲಿ ತನ್ನ ಕ್ಯಾಬ್ ಚಾಲಕರಿಗೆ ಹೆಚ್ಚಿನ ಆದಾಯದ ಅವಕಾಶಗಳನ್ನು ಒದಗಿಸುತ್ತದೆ ಎಂದು ಎರಡೂ ಕಂಪನಿಗಳು ಶುಕ್ರವಾರ ತಿಳಿಸಿವೆ.

ಉಬರ್ ಕಾರು ಚಾಲಕರು ಇನ್ಮುಂದೆ ಹೆಚ್ಚು ಹಣ ಮಾಡಬಹುದು

ಅಂದರೆ ಪಾಲುದಾರಿಕೆಯ ಭಾಗವಾಗಿ, 30 ಕ್ಕೂ ಹೆಚ್ಚು ನಗರಗಳಲ್ಲಿನ ಉಬರ್ ಚಾಲಕರು ಕಾರು ಬಾಡಿಗೆ ಜೊತೆಗೆ, ಕಾರಿನ ಮೇಲ್ಮೆ ಜಾಹೀರಾತುಗಳನ್ನು ಪ್ರದರ್ಶಿಸಲು CASHurDrive ನೊಂದಿಗೆ ಸಂಪರ್ಕ ಸಾಧಿಸಬಹುದು. ಉಬರ್ ಪ್ರಕಾರ, ಇದು ಚಾಲಕರಿಗೆ ಹೊಸ ಆದಾಯದ ಮೂಲವನ್ನು ಸೃಷ್ಟಿಸುತ್ತದೆ, ಆದರೆ ಜಾಹೀರಾತಿ ಎಷ್ಟು ಹಣ ನೀಡಲಾಗುವುದು ಎಂದು ಉಲ್ಲೇಖಿಸಿಲ್ಲ.

"ಚಾಲಕರೊಂದಿಗಿನ ನಮ್ಮ ಬದ್ಧತೆಯ ವಿಸ್ತರಣೆಯಾಗಿ, ಹೆಚ್ಚುವರಿ ಆದಾಯದ ಮೂಲವನ್ನು ಹೊಂದಿರುವ ಚಾಲಕರಿಗೆ ಸಹಾಯ ಮಾಡುವ CASHurDrive ನೊಂದಿಗೆ ನಮ್ಮ ಪಾಲುದಾರಿಕೆಯನ್ನು ಘೋಷಿಸಲು ನಾವು ಸಂತೋಷಪಡುತ್ತೇವೆ. ನಮ್ಮ ಚಾಲಕ ಪಾಲುದಾರರು ಈ ಅವಕಾಶವನ್ನು ಬಳಸಿಕೊಳ್ಳುತ್ತಾರೆ ಮತ್ತು ಅದರಿಂದ ಲಾಭ ಪಡೆಯುತ್ತಾರೆ ಎಂದು ನಾವು ಭಾವಿಸುತ್ತೇವೆ. ಚಾಲಕರು ನಮ್ಮ ವ್ಯವಹಾರಕ್ಕೆ ಪ್ರಮುಖರಾಗಿದ್ದಾರೆ . ಮತ್ತು ಚಾಲಕರ ಗಳಿಕೆಯ ಶಕ್ತಿಯನ್ನು ಹೆಚ್ಚಿಸಲು ಮತ್ತು ರಸ್ತೆಯ ಹೆಚ್ಚಿನ ಸಮಯವನ್ನು ಪಡೆಯಲು ಅವರಿಗೆ ಸಹಾಯ ಮಾಡಲು ನಾವು ಯಾವಾಗಲೂ ಹೊಸ ಮಾರ್ಗಗಳನ್ನು ಹುಡುಕುತ್ತಿದ್ದೇವೆ "ಎಂದು ಉಬರ್ ಇಂಡಿಯಾ ಎಸ್‌ಎ ಕೇಂದ್ರ ಕಾರ್ಯಾಚರಣೆಗಳ ಮುಖ್ಯಸ್ಥ ಪವನ್ ವೈಶ್ ಹೇಳಿದರು.

ಕ್ಯಾಶ್‌ ಯುವರ್ ಡ್ರೈವ್ ತನ್ನ ಗ್ರಾಹಕರಿಗೆ ಆನ್‌ ರೋಡ್ ವಾಹನಗಳ ಮೂಲಕ ಜಾಹೀರಾತುಗಳು ಮತ್ತು ಪ್ರಚಾರ ಜಾಹೀರಾತುಗಳನ್ನು ಪ್ರದರ್ಶಿಸುವ ಉದ್ದೇಶ ಹೊಂದಿದೆ.

ಕ್ಯಾಲಿಫೋರ್ನಿಯಾದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಪ್ರಧಾನ ಕಚೇರಿ ಹೊಂದಿರುವ ಉಬರ್, ತನ್ನ ಮೊಬೈಲ್ ಅಪ್ಲಿಕೇಶನ್ ಮೂಲಕ ಜನರ ಪ್ರಯಾಣಕ್ಕೆ ಬಾಡಿಗೆ ಕಾದಿರಿಸಿ ಪ್ರಯಾಣಿಸಲು ಅನುವುಮಾಡಿಕೊಡುತ್ತದೆ. ಜಗತ್ತಿನಾದ್ಯಂತ ಸುಮಾರು 633 ನಗರಗಳಲ್ಲಿ ಈ ಸಂಸ್ಥೆ ಕಾರ್ಯ ನಿರ್ವಹಿಸುತ್ತಿದೆ.

English summary

Uber Drivers Can Now Make Extra Money

Ubers drivers can now make extra money across india by allowing out of home advertisements on cabs
Story first published: Friday, February 14, 2020, 17:51 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X