For Quick Alerts
ALLOW NOTIFICATIONS  
For Daily Alerts

ಕೋಟಕ್ ಮಹೀಂದ್ರಾ ಬ್ಯಾಂಕ್‌ನಲ್ಲಿ ಉನ್ನತ ಸ್ಥಾನಕ್ಕೆ ಸಜ್ಜಾದ ಜೈ ಕೋಟಕ್

|

ಹಾರ್ವರ್ಡ್ ಹಳೆಯ ವಿದ್ಯಾರ್ಥಿ ಮತ್ತು ಉದಯ್ ಕೋಟಕ್ ಅವರ ಹಿರಿಯ ಮಗ ಜೈ ಕೋಟಕ್ ಇತ್ತೀಚೆಗೆ ಕೊಟಕ್ ಮಹೀಂದ್ರಾ ಬ್ಯಾಂಕ್‌ನಲ್ಲಿ ಉನ್ನತ ಸ್ಥಾನಕ್ಕೆ ಸಜ್ಜಾಗುತ್ತಿದ್ದಾರೆ. ಕೇಂದ್ರ ಬ್ಯಾಂಕ್ ಒಂದು ಬ್ಯಾಂಕ್‌ನ ಕಾರ್ಯನಿರ್ವಾಹಕ ಹುದ್ದೆಗೆ 15 ವರ್ಷಗಳ ಅವಧಿಯ ಮಿತಿಯನ್ನು ಹಾಕಿದೆ. ಉದಯ್ ಕೋಟಕ್ ಅವರು ಈಗಾಗಲೇ 18 ವರ್ಷಗಳಿಗೂ ಹೆಚ್ಚು ಕಾಲ ತಾನು ಸ್ಥಾಪಿಸಿದ ಖಾಸಗಿ ಬ್ಯಾಂಕ್ ಅನ್ನು ಮುನ್ನಡೆಸಿದ್ದಾರೆ.

 

ಬ್ಯಾಂಕ್‌ನ ಮುಖ್ಯಸ್ಥರಾಗಿರುವ ಉದಯ್ ಕೋಟಕ್ ಅವರ ಇತ್ತೀಚಿನ ಮೂರು ವರ್ಷಗಳ ಅವಧಿಯು ಡಿಸೆಂಬರ್ 2023 ರಲ್ಲಿ ಕೊನೆಗೊಳ್ಳಲಿದೆ. ಉದಯ್ ಕೋಟಕ್ ಅವರ ತಕ್ಷಣದ ಉತ್ತರಾಧಿಕಾರಿ ನಿರ್ದೇಶಕ ಮತ್ತು ಬ್ಯಾಂಕ್‌ನಲ್ಲಿ ಅನುಭವಿ ಆಗಿರುವ ಕೆವಿಎಸ್ ಮಣಿಯನ್ ಆಗಿರಬಹುದು ಎಂದು ವಿಶ್ಲೇಷಕರು ನಂಬಿದ್ದಾರೆ.

 

ಕಳೆದ ವಾರ ಟಾಪ್ 10 ಕಂಪನಿಗಳ ಪೈಕಿ HDFC ಬ್ಯಾಂಕಿಗೆ ಹೆಚ್ಚಿನ ಲಾಭಕಳೆದ ವಾರ ಟಾಪ್ 10 ಕಂಪನಿಗಳ ಪೈಕಿ HDFC ಬ್ಯಾಂಕಿಗೆ ಹೆಚ್ಚಿನ ಲಾಭ

ಬ್ಯಾಂಕ್‌ನ ಪ್ರಗತಿ ಮತ್ತು ಡಿಜಿಟಲ್ ಬ್ಯಾಂಕಿಂಗ್ ಉತ್ಪನ್ನ 811 ಗಾಗಿ ಯೋಜನೆಗಳನ್ನು ಹೈಲೈಟ್ ಮಾಡಲು ನವೆಂಬರ್‌ನಲ್ಲಿ ನಡೆದ ಹೂಡಿಕೆದಾರರ ಸಭೆಯಲ್ಲಿ ಜೈ ಕೋಟಕ್ ಉಪಸ್ಥಿತಿಯು ಮಣಿಯನ್ ಅವರ ಉಸ್ತುವಾರಿಯಲ್ಲಿ ಉದಯ್ ಕೋಟಕ್ ಅವರ ಪುತ್ರನಿಗೆ ದಕ್ಕಬಹುದು ಎಂದು ವಿಶ್ಲೇಷಕರು ನಂಬಿದ್ದಾರೆ. ಜೆಫರೀಸ್ ವಿಶ್ಲೇಷಕರಾದ ಪ್ರಖರ್ ಶರ್ಮಾ, ಅಭಿಷೇಕ್ ಖನ್ನಾ ಮತ್ತು ಭಾಸ್ಕರ್ ಬಸು ಕೂಡಾ ಇದೇ ನಂಬಿಕೆ ಇಟ್ಟಿದ್ದಾರೆ.

ಕೋಟಕ್ ಮಹೀಂದ್ರಾ ಬ್ಯಾಂಕ್‌ನಲ್ಲಿ ಉನ್ನತ ಸ್ಥಾನಕ್ಕೆ ಸಜ್ಜಾದ ಜೈ ಕೋಟಕ್

'ಮೆರಿಟ್' ಆಧಾರ ?

ಬ್ಯಾಂಕಿನಲ್ಲಿ ಜೈ ಕೋಟಕ್ ಅವರ ಪ್ರಸ್ತುತ ಮತ್ತು ಭವಿಷ್ಯದ ಪಾತ್ರಗಳು ಮತ್ತು ಉತ್ತರಾಧಿಕಾರ ಯೋಜನೆಯಲ್ಲಿ ಅವರ ಸಂಭಾವ್ಯ ಪ್ರಭಾವದ ಕುರಿತು ಪ್ರತಿಕ್ರಿಯಿಸಿದ ಕೋಟಾಕ್ ಮಹೀಂದ್ರಾ ವಕ್ತಾರರು, ಜೈ ಕೋಟಕ್ ಈಗ 811 ನ ಕಾರ್ಯತಂತ್ರ ಮತ್ತು ಸಹ-ಮುಖ್ಯಸ್ಥರಾಗಿ ಉಸ್ತುವಾರಿ ವಹಿಸಿದ್ದಾರೆ. ಈ ಬ್ಯಾಂಕಿನಲ್ಲಿ "ಮೆರಿಟ್" ಅವರ ವೃತ್ತಿಜೀವನದ ಪ್ರಗತಿಯನ್ನು ನಿರ್ಧರಿಸುತ್ತದೆ ಎಂದು ತಿಳಿಸಿದ್ದಾರೆ.

'ತಂತ್ರ ಮತ್ತು ನಿರ್ವಹಣೆ ಜವಾಬ್ದಾರಿ'

ಹಾರ್ವರ್ಡ್‌ನಿಂದ ಎಂಬಿಎ ಮುಗಿಸಿದ ನಂತರ, ಜೈ ಕೋಟಕ್ 2017 ರಲ್ಲಿ ಕೋಟಕ್ ಇನ್ವೆಸ್ಟ್‌ಮೆಂಟ್ ಬ್ಯಾಂಕ್ (ಕೋಟಕ್ ಮಹೀಂದ್ರಾ ಕ್ಯಾಪಿಟಲ್ ಕಂಪನಿ) ಸೇರಿದರು. 2019 ರಲ್ಲಿ, ಬ್ಯಾಂಕಿನ ಗ್ರೂಪ್ ಅಧ್ಯಕ್ಷರಾದ ಶಾಂತಿ ಏಕಾಂಬರಂ ಅವರ ಕಾರ್ಯನಿರ್ವಾಹಕ ಸಹಾಯಕರಾಗಿ ಬ್ಯಾಂಕಿಂಗ್ ವ್ಯವಹಾರದಲ್ಲಿ ಜೈ ಕೋಟಕ್ ಮಹೀಂದ್ರಾ ಬ್ಯಾಂಕ್‌ಗೆ ಸೇರಿದರು

ಆ ಬಳಿಕ ಜನವರಿ 2021 ರಲ್ಲಿ, ಜೈ ಕೋಟಕ್ 811 ತಂಡವನ್ನು ಸೇರಿಕೊಂಡರು. ಮನೀಶ್ ಅಗರ್ವಾಲ್ ಕೊಟಕ್ 811 ನ ವ್ಯಾಪಾರ ಮುಖ್ಯಸ್ಥರಾಗಿದ್ದಾರೆ ಮತ್ತು ವ್ಯವಹಾರದ ಜವಾಬ್ದಾರಿಯನ್ನು ಹೊಂದಿದ್ದಾರೆ. ಜೈ ಜನವರಿ 2022 ರಿಂದ ಕೋಟಾಕ್ 811 ನ ಸಹ-ಮುಖ್ಯಸ್ಥರಾಗಿ ನೇಮಕಗೊಂಡಿದ್ದಾರೆ. ಮನೀಶ್ ಮತ್ತು ಜೈ ಇಬ್ಬರೂ ಕೋಟಕ್ 811 ನಡೆಸುತ್ತಿದ್ದಾರೆ. ವೃತ್ತಿಪರರಾಗಿ ಜೈ ಪ್ರಗತಿಯು ಅರ್ಹತೆ ಮೇಲೆ ಮುಂದುವರಿಯುತ್ತದೆ.

ಜೈ ಕೋಟಕ್ ತನ್ನ ತಂದೆ ಸ್ಥಾಪಿಸಿದ ಬ್ಯಾಂಕ್‌ನಲ್ಲಿ ಸುಮಾರು ಐದು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಹಾರ್ವರ್ಡ್‌ನಿಂದ ಎಂಬಿಎ ಮತ್ತು ಕೊಲಂಬಿಯಾ ವಿಶ್ವವಿದ್ಯಾಲಯದಿಂದ ಇತಿಹಾಸದಲ್ಲಿ ಬಿಎ ಪದವಿ ಪಡೆದಿದ್ದಾರೆ. ಜೈ ಈ ಹಿಂದೆ McKinsey & Co ಮತ್ತು Goldman Sachs ಜೊತೆ ಕಾರ್ಯ ನಿರ್ವಹಣೆ ಮಾಡಿದ್ದಾರೆ.

English summary

Uday Kotak Son Jay Kotak is being readied for top role at Kotak Mahindra Bank

Uday Kotak's elder son Jay Kotak has lately had significant enhancements to his executive role at the Kotak Mahindra Bank. Know more.
Story first published: Monday, May 30, 2022, 19:09 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X