For Quick Alerts
ALLOW NOTIFICATIONS  
For Daily Alerts

ಉಜ್ವಲ ಯೋಜನೆಯಡಿ 3 ಉಚಿತ ಎಲ್‌ಪಿಜಿ ಸಿಲಿಂಡರ್?

|

ಬಡತನ ರೇಖೆಗಿಂತ ಕೆಳಗಿರುವ ಕುಟುಂಬವನ್ನು ಗಮನದಲ್ಲಿಟ್ಟುಕೊಂಡು ಜಾರಿಗೆ ಬಂದ ಪ್ರಧಾನ ಮಂತ್ರಿ ಉಜ್ವಲ ಯೋಜನೆಯನ್ನು ಇನ್ನಷ್ಟು ವಿಸ್ತರಿಸಲು ಕೇಂದ್ರ ಸರ್ಕಾರ ಚಿಂತಿಸುತ್ತಿದೆ. ಕುಟುಂಬದ ಯೋಜನಾ ವೆಚ್ಚ ಕಡಿಮೆ ಮಾಡುವುದು, ಮಹಿಳೆಯರ ಆರೋಗ್ಯ ಸುಧಾರಣೆಗೆ ಒತ್ತು ನೀಡುವ ಉದ್ದೇಶದಿಂದ ಜಾರಿಗೆ ಬಂದ ಯಶಸ್ವಿ ಯೋಜನೆಯಾಗಿದೆ.

ಈ ಯೋಜನೆಯಡಿ ಕುಟುಂಬಗಳಿಗೆ ಉಚಿತವಾಗಿ ಎಲ್‌ಪಿಜಿ ಸಂಪರ್ಕ ನೀಡಲಾಗುತ್ತದೆ. 2016ರಲ್ಲಿ ಈ ಯೋಜನೆಯನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಘೋಷಣೆ ಮಾಡಿದರು. ಈ ಯೋಜನೆಯಡಿ ಎಲ್‌ಪಿಜಿ ಸಂಪರ್ಕ ಸಿಗದ ಕುಟುಂಬವನ್ನು ಗುರುತಿಸಿ ಸಂಪರ್ಕ ನೀಡಲು ಪಿಎಂಯುವೈ-2 ಯೋಜನೆಯನ್ನು ಸರ್ಕಾರ ಘೋಷಣೆ ಮಾಡಿದೆ.

ಪ್ರಧಾನಮಂತ್ರಿ ಉಜ್ವಲ ಯೋಜನೆ ಅಡಿ ಉಚಿತ ಎಲ್ಪಿಜಿ (LPG) ಕನೆಕ್ಷನ್ ಪಡೆಯುವುದು ಹೇಗೆ?ಪ್ರಧಾನಮಂತ್ರಿ ಉಜ್ವಲ ಯೋಜನೆ ಅಡಿ ಉಚಿತ ಎಲ್ಪಿಜಿ (LPG) ಕನೆಕ್ಷನ್ ಪಡೆಯುವುದು ಹೇಗೆ?

ಬಡತನದ ರೇಖೆಯಿಂದ ಕೆಳಗಿರುವ ಕುಟುಂಬಗಳಿಗೆ ಹಾಲಿ ಉಚಿತವಾಗಿ ಎಲ್‌ಪಿಜಿ ಸಿಲಿಂಡರ್ ಸಿಗುತ್ತಿದ್ದು, ಇದನ್ನು ಇನ್ನಷ್ಟು ವಿಸ್ತರಿಸಿ 3 ಸಿಲಿಂಡರ್ ನೀಡುವುದು ಹಾಗೂ 3 ತಿಂಗಳು ಅವಧಿ ವಿಸ್ತರಣೆ ಮಾಡಲು ಸರ್ಕಾರ ಮುಂದಾಗಿದೆ. ಇದರಿಂದ 83 ಮಿಲಿಯನ್ ಕುಟುಂಬಗಳಿಗೆ ಲಾಭವಾಗಲಿದೆ.

ಉಜ್ವಲ ಯೋಜನೆಯಡಿ 3 ಉಚಿತ ಎಲ್‌ಪಿಜಿ ಸಿಲಿಂಡರ್?

ಎಲ್‌ಪಿಜಿ ಸಿಲಿಂಡರ್ ದರ ಏರಿಕೆ
14.2 ಕೆಜಿ ಗೃಹಬಳಕೆಯ ಸಿಲಿಂಡರ್ ಬೆಲೆ ಜನವರಿಯಿಂದ 125 ರು ಹೆಚ್ಚಳ ಕಂಡಿದೆ. ಕಳೆದ ಮೇ ತಿಂಗಳಿಗೆ ಹೋಲಿಸಿದರೆ ದೆಹಲಿಯಲ್ಲಿ 237.50 ರು ಏರಿಕೆ ಕಂಡಿದೆ. ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ ಪ್ರತಿ ಬಡ ಕುಟುಂಬಕ್ಕೆ ಉಚಿತ ಎಲ್​ಪಿಜಿ ಸಂಪರ್ಕ ಒದಗಿಸುವ ಸರ್ಕಾರಿ ಸ್ವಾಮ್ಯದ ಇಂಧನ ವ್ಯಾಪಾರಿಗಳಿಗೆ ಸರ್ಕಾರವು ರೂ. 1,600 ಸಬ್ಸಿಡಿ ನೀಡಲಿದೆ. ಈ ಸಬ್ಸಿಡಿಯು ಸಿಲಿಂಡರ್‌ ಭದ್ರತೆ ಶುಲ್ಕ ಮತ್ತು ಇತರೆ ಶುಲ್ಕಗಳನ್ನು ಒಳಗೊಂಡಿರುತ್ತದೆ. ನಿಮ್ಮ ನಗರಗಳಲ್ಲಿನ ಪ್ರತಿ ತಿಂಗಳ ಎಲ್‌ಪಿಜಿ ಸಿಲಿಂಡರ್ ದರ ತಿಳಿಯಲಿ ಕ್ಲಿಕ್ ಮಾಡಿ

English summary

Ujjawala scheme beneficiaries may get 3 free LPG cylinders

Government may examine a proposal to extend provision of free LPG cylinders for Ujjwala scheme beneficiaries for three months again in FY22.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X