For Quick Alerts
ALLOW NOTIFICATIONS  
For Daily Alerts

ಅನಿಲ್ ಅಂಬಾನಿಯ ವಿಶ್ವದಾದ್ಯಂತದ ಆಸ್ತಿಯ ವಶಕ್ಕೆ ಚೈನೀಸ್ ಬ್ಯಾಂಕ್ ಗಳ ಪ್ರಯತ್ನ

|

ಉದ್ಯಮಿ ಅನಿಲ್ ಅಂಬಾನಿ ಒಡೆತನದಲ್ಲಿ ವಿಶ್ವದಾದ್ಯಂತ ಇರುವ ಆಸ್ತಿ ಮೇಲೆ ಹಕ್ಕು ಸ್ಥಾಪನೆಗೆ ಅವಕಾಶ ನೀಡಬೇಕು ಎಂದು ಮೂರು ಚೈನೀಸ್ ಬ್ಯಾಂಕ್ ಗಳು ಕೇಳಿಕೊಂಡಿವೆ. ಈ ಮೂರು ಬ್ಯಾಂಕ್ ಗಳಿಗೆ ಅನಿಲ್ ಅಂಬಾನಿ 5276 ಕೊಟಿ ರುಪಾಯಿ ಬಾಕಿ ಉಳಿಸಿಕೊಂಡಿದ್ದು, ಇದರ ಜತೆಗೆ ಕಾನೂನು ವೆಚ್ಚಗಳನ್ನು ಸಹ ರಿಲಯನ್ಸ್ ಸಮೂಹದ ಅಧ್ಯಕ್ಷ ಅನಿಲ್ ಅಂಬಾನಿ ಪಾವತಿಸಬೇಕಿದೆ.

ಒಂದು ಕಾಲಕ್ಕೆ ವಿಶ್ವದ ಆರನೇ ಶ್ರೀಮಂತ ವ್ಯಕ್ತಿ ಅನಿಲ್ ಅಂಬಾನಿ. ಈ ವರ್ಷ ಮೇ 22ನೇ ತಾರೀಕಿನಂದು ಯು.ಕೆ. ಕೋರ್ಟ್ ಆದೇಶ ನೀಡಿತ್ತು. ಅದರ ಪ್ರಕಾರ, ಎಲ್ಲ ಬಡ್ಡಿ ಸೇರಿ 5276 ಕೋಟಿ ರುಪಾಯಿ ($ 716 ಮಿಲಿಯನ್) ಹಾಗೂ ಕಾನೂನು ವೆಚ್ಚ 7.04 ಕೋಟಿ ರುಪಾಯಿ ಪಾವತಿಸಬೇಕಿದೆ. ಇಂಡಸ್ಟ್ರಿಯಲ್ ಅಂಡ್ ಕಮರ್ಷಿಯಲ್ ಬ್ಯಾಂಕ್ ಆಫ್ ಚೀನಾ, ಎಕ್ಸ್ ಪೋರ್ಟ್- ಇಂಪೋರ್ಟ್ ಬ್ಯಾಂಕ್ ಆಫ್ ಚೀನಾ ಹಾಗೂ ಚೀನಾ ಡೆವಲಪ್ ಮೆಂಟ್ ಬ್ಯಾಂಕ್ ಗೆ ಸಾಲ ಮರುಪಾವತಿಸಬೇಕಿದೆ.

ಅನಿಲ್ ಅಂಬಾನಿಯ ರಿಲಯನ್ಸ್ ಗ್ರೂಪ್ ಕಚೇರಿ ಯೆಸ್ ಬ್ಯಾಂಕ್ ಸುಪರ್ದಿಗೆಅನಿಲ್ ಅಂಬಾನಿಯ ರಿಲಯನ್ಸ್ ಗ್ರೂಪ್ ಕಚೇರಿ ಯೆಸ್ ಬ್ಯಾಂಕ್ ಸುಪರ್ದಿಗೆ

ಜೂನ್ 29ರ ಹೊತ್ತಿಗೆ ಬಡ್ಡಿಯೂ ಸೇರಿದಂತೆ ಸಾಲದ ಮೊತ್ತ 717.67 ಮಿಲಿಯನ್ ಅಮೆರಿಕನ್ ಡಾಲರ್ ಇತ್ತು. ಬ್ಯಾಂಕ್ ಗಳ ಪರವಾಗಿ ವಾದ ಮಂಡಿಸಿದ ಬಂಕಿಮ್ ಥಂಕಿ ಕ್ಯೂಸಿ ಯುಕೆ ಹೈಕೋರ್ಟ್ ನಲ್ಲಿ ಶುಕ್ರವಾರ ಮಾತನಾಡಿ, ನಮಗೆ ಒಂದು ಪೆನ್ನಿ ಕೂಡ ಪಾವತಿ ಮಾಡಬಾರದು ಎಂದು ಅನಿಲ್ ಅಂಬಾನಿ ಶತಾಯಗತಾಯ ಹೋರಾಟ ಮಾಡಿದ್ದಾರೆ ಎಂದು ಹೇಳಿದ್ದಾರೆ.

ಅನಿಲ್ ಅಂಬಾನಿ ವಿರುದ್ಧ ಕಾನೂನು ಕ್ರಮ

ಅನಿಲ್ ಅಂಬಾನಿ ವಿರುದ್ಧ ಕಾನೂನು ಕ್ರಮ

ಶುಕ್ರವಾರದ ವಿಚಾರಣೆ ನಂತರ, ಬ್ಯಾಂಕ್ ಗಳು ಹೇಳಿಕೆ ನೀಡಿದ್ದು, ಅನಿಲ್ ಅಂಬಾನಿ ವಿರುದ್ಧ ಏನೆಲ್ಲ ಕ್ರಮಗಳನ್ನು ಕೈಗೊಳ್ಳಬಹುದು ಮತ್ತು ವಶಪಡಿಸಿಕೊಳ್ಳಬಹುದು ಎಂಬ ನಿಟ್ಟಿನಲ್ಲಿ ಪ್ರಯತ್ನಿಸುತ್ತೇವೆ. ಸಾಲ ವಸೂಲಾತಿಗೆ ಏನೆಲ್ಲ ಕಾನೂನು ಕ್ರಮಗಳನ್ನು ಅನುಸರಿಸಬಹುದೋ ಅವೆಲ್ಲವನ್ನು ಮಾಡಬಹುದು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಸದ್ಯಕ್ಕೆ ಚೈನೀಸ್ ಬ್ಯಾಂಕ್ ಗಳು ಅನಿಲ್ ಅಂಬಾನಿ ಆಸ್ತಿಯನ್ನು ವಶಪಡಿಸಿಕೊಳ್ಳುತ್ತಿಲ್ಲ. ಏಕೆಂದರೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ ಸಾಲ ಬಾಕಿ ಉಳಿಸಿಕೊಂಡಿರುವ ಅನಿಲ್ ವಿರುದ್ಧ ದಿವಾಳಿತನದ ಕಲಾಪ ನಡೆಸುತ್ತಿದೆ. ಸದ್ಯಕ್ಕೆ ಅದಕ್ಕೆ ದೆಹಲಿ ಹೈ ಕೋರ್ಟ್ ನಿಂದ ತಡೆ ನೀಡಲಾಗಿದೆ.

ಭಾರತದ ಹೊರಗೆ ಇರುವ ಆಸ್ತಿ ವಿವರ
 

ಭಾರತದ ಹೊರಗೆ ಇರುವ ಆಸ್ತಿ ವಿವರ

ಅನಿಲ್ ಅಂಬಾನಿ ಅಫಿಡವಿಟ್ ನಲ್ಲಿ ಅವರಿಗೆ ಇರುವ ಆಸ್ತಿ ವಿವರಗಳನ್ನು ನೀಡಲಾಗಿರುತ್ತಿದೆ. ಭಾರತದ ಹೊರಗೆ ಅನಿಲ್ ಗೆ ಇರುವ ಆಸ್ತಿಗಳನ್ನು ವಶಕ್ಕೆ ಪಡೆಯುವುದಕ್ಕೆ ಚೈನೀಸ್ ಬ್ಯಾಂಕ್ ಗಳು ಪ್ರಯತ್ನಿಸಲಿವೆ ಎಂಬ ನಿರೀಕ್ಷೆ ಇದೆ. ಅನಿಲ್ ಅಂಬಾನಿ ಅವರಿಗೆ 74 ಲಕ್ಷ ಮೇಲ್ಪಟ್ಟ ಆಸ್ತಿ ವಿಶ್ವದಾದ್ಯಂತ ಎಲ್ಲೆಲ್ಲ ಆಸ್ತಿ ಇದೆಯೋ ಆ ಎಲ್ಲದರ ಮಾಹಿತಿಯನ್ನು ಒಳಗೊಂಡ ಅಫಿಡವಿಟ್ ಸಲ್ಲಿಸುವಂತೆ ಜೂನ್ 29, 2020ರಂದು ಹೈಕೋರ್ಟ್ ಆದೇಶ ನೀಡಿತ್ತು. ಆ ದಾಖಲೆಯಲ್ಲಿ ಅನಿಲ್ ಆದಾಯ, ವೆಚ್ಚ, ಆಸ್ತಿ, ಸಾಲ, ಬ್ಯಾಂಕ್ ಸ್ಟೇಟ್ ಮೆಂಟ್ ಗಳು, ಷೇರು ಸರ್ಟಿಫಿಕೇಟ್, ಬ್ಯಾಲೆನ್ಸ್ ಶೀಟ್, ಅವರಿಗೆ ಸೇರಿದ ಎಲ್ಲ ಉದ್ಯಮದ ಪ್ರಾಫಿಟ್ ಅಂಡ್ ಲಾಸ್ ಖಾತೆ ವಿವರಗಳನ್ನು ನೀಡುವಂತೆ ಮತ್ತು ವಿಡಿಯೋ ಲಿಂಕ್ ಮೂಲಕ ಹಾಜರಿರುವಂತೆ ಶುಕ್ರವಾರ ತಿಳಿಸಿತ್ತು.

ಆಸ್ತಿ ಬಗ್ಗೆ ಮಾಹಿತಿ ಬಹಿರಂಗ ಆಗಬಾರದು ಎಂಬ ಮನವಿ

ಆಸ್ತಿ ಬಗ್ಗೆ ಮಾಹಿತಿ ಬಹಿರಂಗ ಆಗಬಾರದು ಎಂಬ ಮನವಿ

ಅನಿಲ್ ಅಂಬಾನಿ ಕ್ರಾಸ್ ಎಕ್ಸಾಮಿನೇಷನ್ ಗೂ ಮುನ್ನ ಒಂದು ಆದೇಶವನ್ನು ಕೋರ್ಟ್ ನಿಂದ ಪಡೆದಿದ್ದರು. ಅದರ ಪ್ರಕಾರ, ಅನಿಲ್ ಆಸ್ತಿ ವಿವರಗಳನ್ನು ಮೂರನೇ ವ್ಯಕ್ತಿಗೆ ತಿಳಿಸಬಾರದು ಎಂದಿದ್ದರು. ಆದರೆ ಅನಿಲ್ ಕ್ರಾಸ್ ಎಕ್ಸಾಮಿನೇಷನ್ ಖಾಸಗಿಯಾಗಿ ನಡೆಯಬೇಕು ಎಂಬ ಬೇಡಿಕೆ ಈಡೇರಲಿಲ್ಲ. ವಿಚಾರಣೆ ನಂತರ, 1.31 ಕೋಟಿ ರುಪಾಯಿಯನ್ನು ಚೈನೀಸ್ ಬ್ಯಾಂಕ್ ಗಳಿಗೆ ಕಾನೂನು ವೆಚ್ಚವಾಗಿ ನೀಡುವಂತೆ ಸೂಚಿಸಲಾಯಿತು. ಇನ್ನು ಬ್ಯಾಂಕ್ ಗಳು, ಅನಿಲ್ ಅಂಬಾನಿಯ ಖಾಸಗಿತನದ ಅರ್ಜಿಗೆ ಸಂಬಧಿಸಿದ ಮನವಿಯ ಕಾನೂನು ವೆಚ್ಚವನ್ನೂ ಭರಿಸಬೇಕು ಎಂದು ಸೂಚಿಸಲಾಯಿತು.

ಶಾಕಾಹಾರಿ, ಸರಳ ಅಭಿರುಚಿಯ, ಸಿಂಪಲ್ ವ್ಯಕ್ತಿ

ಶಾಕಾಹಾರಿ, ಸರಳ ಅಭಿರುಚಿಯ, ಸಿಂಪಲ್ ವ್ಯಕ್ತಿ

ವಿಚಾರಣೆ ನಂತರ ಅನಿಲ್ ಅಂಬಾನಿ ವಕ್ತಾರ ಮಾತನಾಡಿ, ಅನಿಲ್ ಅಂಬಾನಿ ಯಾವಾಗಲೂ ಸರಳ ಮನುಷ್ಯ. ಸರಳ ಅಭಿರುಚಿಯ ವ್ಯಕ್ತಿ. ಆದರೆ ಅವರು ತುಂಬ ವಿಲಾಸಿ ಜೀವನ ನಡೆಸುತ್ತಿದ್ದಾರೆ ಎಂಬ ಭಾವನೆ ಇದೆ. ಅವರ ಕುಟುಂಬ ಹಾಗೂ ಕಂಪೆನಿಗೆ ಸಂಪೂರ್ಣ ಅರ್ಪಿಸಿಕೊಂಡಿದ್ದಾರೆ. ಮ್ಯಾರಥಾನ್ ರನ್ನರ್ ಆಗಿರುವ ಅನಿಲ್, ಧಾರ್ಮಿಕ ವ್ಯಕ್ತಿ. ಜೀವನ ಪೂರ್ತಿ ಶಾಕಾಹಾರಿ. ಧೂಮಪಾನ ಮಾಡಿದವರಲ್ಲ. ಸಿನಿಮಾಗಳನ್ನು ಸಹ ಮನೆಯಲ್ಲಿ ಮಕ್ಕಳ ಜತೆಗೆ ನೋಡುತ್ತಾರೆ. ಆದರೆ ಅವರ ಬಗ್ಗೆ ವರದಿಗಳು ದಾರಿ ತಪ್ಪಿಸುವಂತಿವೆ ಎಂದು ಹೇಳಿದ್ದಾರೆ.

ಚೈನೀಸ್ ಬ್ಯಾಂಕ್ ನಿಂದ  6817 ಕೋಟಿ ರುಪಾಯಿ ಸಾಲ

ಚೈನೀಸ್ ಬ್ಯಾಂಕ್ ನಿಂದ 6817 ಕೋಟಿ ರುಪಾಯಿ ಸಾಲ

ಈ ವ್ಯಾಜ್ಯ ಆರಂಭವಾಗಿದ್ದು ಮೂರು ಚೈನೀಸ್ ಬ್ಯಾಂಕ್ ಗಳಿಗೆ ನೀಡಬೇಕಾದ ಸಾಲದ ವಿಚಾರವಾಗಿ. 2012ರಲ್ಲಿ ರಿಲಯನ್ಸ್ ಕಮ್ಯೂನಿಕೇಷನ್ಸ್ ಗೆ 6817 ಕೋಟಿ ರುಪಾಯಿ ಸಾಲ ನೀಡಿದ್ದವು ಆ ಬ್ಯಾಂಕ್ ಗಳು. ಆರಂಭದಲ್ಲಿ ಅದನ್ನು ಮರುಪಾವತಿ ಮಾಡಲಾಯಿತು. ಆದರೆ ಆ ನಂತರ ಸಾಲ ಕಟ್ಟಲು ನಿಲ್ಲಿಸಿತು. ಚೈನೀಸ್ ಬ್ಯಾಂಕ್ ಗಳು ಹೇಳುವಂತೆ, ರಿಲಯನ್ಸ್ ಕಮ್ಯೂನಿಕೇಷನ್ಸ್ ಮಾಜಿ ಅಧ್ಯಕ್ಷ ಅನಿಲ್ ಅಂಬಾನಿ ಅವರು ಆ ಸಾಲಕ್ಕೆ ವೈಯಕ್ತಿಕ ಖಾತ್ರಿ ನೀಡಿದ್ದಾರೆ. ತನ್ನ ಜವಾಬ್ದಾರಿಯನ್ನು ನಿರಾಕರಿಸುತ್ತಿದ್ದಾರೆ. ಮೇ 22, 2020ರಲ್ಲಿ ಹೈಕೋರ್ಟ್ ನೀಡಿದ ತೀರ್ಪಿನಲ್ಲಿ, ಬ್ಯಾಂಕ್ ತಿಳಿಸಿರುವಂತೆ ಅನಿಲ್ ಅಂಬಾನಿ ವೈಯಕ್ತಿಕ ಖಾತ್ರಿ ಆಗಿದ್ದಾರೆ ಎಂಬುದನ್ನು ಎತ್ತಿ ಹಿಡಿದಿದೆ.

English summary

UK Case: 3 Chinese Banks To Start Enforcement Action Against Anil Ambani’s World Wide Assets

The 3 Chinese banks to whom Reliance group chairman Anil Ambani owes more than Rs 5,276 crore, as well as legal costs, have decided to pursue their rights against him on his worldwide assets.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X