Infographics: ಬಜೆಟ್ 2023ನಲ್ಲಿ ಕೇಂದ್ರದ ಯೋಜನೆಗಳಿಗೆ ಸಿಕ್ಕ ಅನುದಾನ ಎಷ್ಟು? ವಿವಿರ ಇಲ್ಲಿದೆ

ಕೇಂದ್ರ ಸರ್ಕಾರ ಮಂಡಿಸಿದ ಬಜೆಟ್ (2023) ನಲ್ಲಿ ಜನಪರ ಯೋಜನೆಗಳಿಗೆ ಅನುದಾನ ಹೆಚ್ಚಳ ಮಾಡಿದೆ. ಯಾವ ವರ್ಷದಲ್ಲಿ ಎಷ್ಟು ಅನುದಾನ ನೀಡಲಾಗಿತ್ತು ಎಂಬ ಮಾಹಿತಿ ನಿಮ್ಮ ಮುಂದೆ. ಓದಿ...

ಬೆಂಗಳೂರು, ಫೆಬ್ರುವರಿ 03: ಕೇಂದ್ರ ಸರ್ಕಾರ ಇತ್ತೀಚಿಗೆ ಮಂಡಿಸಿದ ಬಜೆಟ್ 2023ನಲ್ಲಿ ಜನಪರ ಯೋಜನೆಗಳಿಗೆ ಈ ಹಿಂದಿನಿಂದಲೂ ನೀಡುತ್ತಿದ್ದ ಅನುದಾನದ ಪ್ರಮಾಣವನ್ನು ಈ ವರ್ಷ ಮತ್ತಷ್ಟು ಏರಿಕೆ ಮಾಡಿದ್ದಾಗಿ ತಿಳಿಸಿದೆ.

ಬುಧವಾರ ಫೆಬ್ರುವರಿ 1ರಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದರು. ಈ ವೇಳೆ ಅವರು, ದೇಶದ ಎಲ್ಲ ಕ್ಷೇತ್ರಗಳ ಬೆಳವಣಿಗೆಗೆ ಹಾಗೂ ಯೋಜನೆಗಳಿಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಅನೇಕ ಯೋಜನೆಗಳು ಇವೆ. ಅವುಗಳಲ್ಲಿ ಬಹುತೇಕವುಗಳಿಗೆ ಈ ಆರ್ಥಿಕ ವರ್ಷ (2023-24) ಅನುದಾನ ಹೆಚ್ಚಿಸಲಾಗಿದೆ ಎಂದು ಅವರು ಹೇಳಿದರು.

ಪ್ರಧಾನಮಂತ್ರಿ ಜನ್ ಆಯೋಗ್ ಯೋಜನೆ, ಜಲಜೀವನ್ ಮಿಷನ್ (ರಾಷ್ಟ್ರೀಯ, ಗ್ರಾಮೀಣ), ಆರೋಗ್ಯ ಶೀಕ್ಷಣ ವಲಯಗಳ ಯೋಜನೆಗಳು, ಗಡಿ ಪ್ರದೇಶದ ಅಭಿವೃದ್ಧಿ ಪರಿಸರ, ಅರಣ್ಯ, ವನ್ಯಜೀವಿ ಸಂರಕ್ಷಣೆ ಸೇರಿದಂತೆ ಸಾಕಷ್ಟು ಯೋಜನೆಗಳಿಗೆ 2021-22ನೇ ಸಾಲಿನಗಿಂತಲೂ ಈ ಬಾರಿ ಅಧಿಕ ಅನುದಾನ ಘೋಷಣೆ ಆಗಿದೆ.

Union Budget 2023: ಕೇಂದ್ರದ ಯೋಜನೆಗಳಿಗೆ ಸಿಕ್ಕ ಅನುದಾನ?

ಇದುವರೆಗೆ ಸ್ಮಾರ್ಟ್ ಸಿಟಿ ಯೋಜನೆಗೆಂದು 2021-22ರಲ್ಲಿ ಅನುದಾನ ಘೋಷಣೆ ಮಾಡಿರಲಿಲ್ಲ. ಹಿಂದಿನ ವರ್ಷ ಈ ವರ್ಷ ಆ ಯೋಜನೆಗೆ ಒಟ್ಟು 7425 ಕೋಟಿ ರೂ. ಹಣ ನೀಡುವುದಾಗಿ ಕೇಂದ್ರ ಹೇಳಿದೆ. ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಗೆ ಎರಡು ವರ್ಷದ ಹಿಂದೆ 2021-22ರಲ್ಲಿ 13,992 ಕೋಟಿ ರೂಪಾಯಿ, 2022-23ರಲ್ಲಿ 19,000 ಕೋಟಿ ರೂಪಾಯಿ ಹಾಗೂ ಈ ವರ್ಷ 2023-24ರಲ್ಲಿ 19,000 ಕೋಟಿ ರೂಪಾಯಿ ಘೋಷಣೆ ಆಗಿದೆ. ನಂತರ 2022-23ರಲ್ಲಿ 6572 ಕೋಟಿ ರೂ. ಮತ್ತು ಈವರ್ಷ 7425 ಕೋಟಿ ರೂಪಾಯಿ ಒದಗಿಸಲಾಗುವುದಾಗಿ ವಿತ್ತ ಸಚಿವರು ತಿಳಿಸಿದರು.

Union Budget 2023: ಕೇಂದ್ರದ ಯೋಜನೆಗಳಿಗೆ ಸಿಕ್ಕ ಅನುದಾನ?

ಇನ್ನಿತರ ಯೋಜನೆಗಳನ್ನು ನೋಡುವುದಾದರೆ ಮಿಷನ್ ಶಕ್ತಿ (ಮಹಿಳಾ ಸಬಲೀಕರಣ) ಯೋಜನೆಗೆ 2021-22ರಲ್ಲಿ 1912 ಕೋಟಿ ರೂಪಾಯಿ, 2022-23ರಲ್ಲಿ 2280 ಕೋಟಿ ರೂಪಾಯಿ ಹಾಗೂ 2023-24ರಲ್ಲಿ ಒಟ್ಟು 3144 ಕೋಟಿ ರೂಪಾಯಿ ಘೋಷಣೆ ಆಗಿದೆ. ಅಲ್ಲದೇ ಆರೋಗ್ಯ ಇಲಾಖೆಯಲ್ಲಿ ಮುಖ್ಯ ಪಾತ್ರವಹಿಸುತ್ತಿರುವ ಆಯುಷ್ಮಾನ್ ಭಾರತ್ ಯೋಜನೆಗೆ 3116 ಕೋಟಿ ರೂಪಾಯಿ (2021-22ರಲ್ಲಿ), 6427 ಕೋಟಿ ರೂಪಾಯಿ (2022-23ರಲ್ಲಿ) ಮತ್ತು ಪ್ರಸ್ತಕ ಆರ್ಥಿಕ ವರ್ಷದಲ್ಲಿ ಒಟ್ಟು 7,200 ಕೋಟಿ ರೂಪಾಯಿ (2023-24) ನೀಡುವುದಾಗಿ ಕೇಂದ್ರ ತಿಳಿಸಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+