For Quick Alerts
ALLOW NOTIFICATIONS  
For Daily Alerts

ಹೊಸ ವರ್ಷಕ್ಕೆ ಕೇಂದ್ರದ ಸಿಹಿಸುದ್ದಿ, ಸಣ್ಣ ಉಳಿತಾಯ ಯೋಜನೆ ಬಡ್ಡಿದರ ಏರಿಕೆ

|

ಅಂಚೆ ಕಚೇರಿ ಮೂಲಕ ನೀಡುವ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರವನ್ನು ಕೇಂದ್ರ ಸರ್ಕಾರವು ಏರಿಕೆ ಮಾಡಿ ಶುಕ್ರವಾರ ಘೋಷಣೆ ಮಾಡಿದೆ. ಈ ನೂತನ ಬಡ್ಡಿದರವು ಜನವರಿಯಿಂದ ಮಾರ್ಚ್‌ಗೆ ಕೊನೆಯಾಗುವ ತ್ರೈಮಾಸಿಕಕ್ಕೆ ಅನ್ವಯವಾಗಲಿದೆ. ಆದರೆ ಕೇಂದ್ರ ಸರ್ಕಾರವು ಪಬ್ಲಿಕ್ ಪ್ರಾವಿಂಡೆಂಟ್ ಫಂಡ್ (ಪಿಪಿಎಫ್) ಹಾಗೂ ಸುಕನ್ಯ ಸಮೃದ್ಧಿ ಯೋಜನೆಯ ಬಡ್ಡಿದರದಲ್ಲಿ ಯಾವುದೇ ಬದಲಾವಣೆಯನ್ನು ಮಾಡಿಲ್ಲ.

ಕೇಂದ್ರ ಸರ್ಕಾರವು ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರವನ್ನು 110 ಮೂಲಾಂಕ ಹೆಚ್ಚಳ ಮಾಡಿದೆ. ಆದರೆ ಪಬ್ಲಿಕ್ ಪ್ರಾವಿಂಡೆಂಟ್ ಫಂಡ್ (ಪಿಪಿಎಫ್) ಹಾಗೂ ಸುಕನ್ಯ ಸಮೃದ್ಧಿ ಯೋಜನೆಯ ಬಡ್ಡಿದರವು ಈ ಹಿಂದಿನಂತೆ ಕ್ರಮವಾಗಿ ಶೇಕಡ 7.1 ಮತ್ತು ಶೇಕಡ 7.6ರಷ್ಟಾಗಿದೆ. ಈ ಬಡ್ಡಿದರವು ಜನವರಿ-ಮಾರ್ಚ್ ತ್ರೈಮಾಸಿಕಕ್ಕೆ ಈ ಬಡ್ಡಿದರ ಅನ್ವಯವಾಗುತ್ತದೆ.

ಪಿಪಿಎಫ್‌, ಎನ್‌ಎಸ್‌ಸಿ ಹಣ ಟ್ರ್ಯಾಕ್ ಮಾಡುವುದು ಹೇಗೆ?ಪಿಪಿಎಫ್‌, ಎನ್‌ಎಸ್‌ಸಿ ಹಣ ಟ್ರ್ಯಾಕ್ ಮಾಡುವುದು ಹೇಗೆ?

ರೆಪೋ ದರ ಹೆಚ್ಚಾದಂತೆ ಬಡ್ಡಿರವು ಕೂಡಾ ಹೆಚ್ಚಾಗುತ್ತಿದೆ. ಈ ನಡುವೆ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರ ಏರಿಕೆಯನ್ನು ಈ ಹಿಂದೆಯೇ ನಿರೀಕ್ಷೆ ಮಾಡಲಾಗಿತ್ತು. ಆದರೆ ಉಕ್ರೇನ್ ಯುದ್ಧ, ಕೋವಿಡ್‌ನಿಂದಾಗಿ ಸರ್ಕಾರದ ಹಣಕಾಸು ಸ್ಥಿತಿ ಈಗಲೇ ಒತ್ತಡಕ್ಕೆ ಒಳಗಾಗಿರುವಾಗ ಬಡ್ಡಿದರದಿಂದಾಗಿ ಸರ್ಕಾರವು ಕೊಂಚ ಒತ್ತಡಕ್ಕೆ ಒಳಗಾಗಬಹುದು ಎಂದು ತಜ್ಞರ ಅಭಿಪ್ರಾಯವಾಗಿದೆ.

 ಹೊಸ ವರ್ಷಕ್ಕೆ ಸಿಹಿಸುದ್ದಿ, ಸಣ್ಣ ಉಳಿತಾಯ ಯೋಜನೆ ಬಡ್ಡಿದರ ಏರಿಕೆ

ಯಾವೆಲ್ಲ ಯೋಜನೆಗಳ ಬಡ್ಡಿದರ ಏರಿಕೆ?

ಎರಡನೇ ಬಾರಿಗೆ ಹೀಗೆ ಬಡ್ಡಿದರವನ್ನು ಹೆಚ್ಚಳ ಮಾಡಲಾಗಿದೆ. ಸುಮಾರು ಒಂಬತ್ತು ತಿಂಗಳುಗಳ ಬಳಿಕ ಸರ್ಕಾರವು ಡಿಸೆಂಬರ್‌ ತ್ರೈಮಾಸಿಕದಲ್ಲಿ ಬಡ್ಡಿದರವನ್ನು ಹೆಚ್ಚಳ ಮಾಡಿತ್ತು. ರಾಷ್ಟ್ರೀಯ ಉಳಿತಾಯ ಯೋಜನೆ (ಎನ್‌ಎಸ್‌ಪಿ), ಹಿರಿಯ ನಾಗರಿಕರ ಉಳಿತಾಯ ಯೋಜನೆ, ಕಿಸಾನ್ ವಿಕಾಸ ಪತ್ರ ಯೋಜನೆಗಳ ಮೇಲಿನ ಬಡ್ಡಿದರವನ್ನು ಏರಿಕೆ ಮಾಡಲಾಗಿದೆ. ಈ ಯೋಜನೆಗಳ ಅಡಿಯಲ್ಲಿ ಲಭ್ಯವಾಗುವ ಬಡ್ಡಿಗೆ ತೆರಿಗೆ ಇದೆ.

ಹೆಣ್ಣು ಮಕ್ಕಳ ಹೆಸರಿನಲ್ಲಿ ಉಳಿತಾಯ ಮಾಡುವುದನ್ನು ಪ್ರೋತ್ಸಾಹಿಸುವ ಸಲುವಾಗಿ ಸುಕನ್ಯಾ ಸಮೃದ್ಧಿ ಯೋಜನೆಯಿದ್ದು ಅದರ ಬಡ್ಡಿದರವು ಶೇಕಡ 7.6ರಷ್ಟಿದೆ. 2022ರ ಮೇ ತಿಂಗಳ ಬಳಿಕ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ರೆಪೋ ದರವನ್ನು ಶೇಕಡ 2.25ರಷ್ಟು ಬಡ್ಡಿದರವನ್ನು ಹೆಚ್ಚಿಸಿದೆ. ಪ್ರಸ್ತುತ ರೆಪೋ ದರ ಶೇಕಡ 6.25ರಷ್ಟಿದೆ.

English summary

Union Government New Year Gift: Small Savings Rates Hiked

The finance ministry on Friday raised by up to 110 basis points interest rates on most small savings schemes which don’t extend tax benefits to investors for the March quarter.
Story first published: Saturday, December 31, 2022, 12:35 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X