For Quick Alerts
ALLOW NOTIFICATIONS  
For Daily Alerts

ಏಪ್ರಿಲ್ ನಿಂದ ಸೆಪ್ಟೆಂಬರ್ ಮಧ್ಯೆ ಬಂದ FDIನ ಎರಡನೇ ಅತಿ ದೊಡ್ಡ ಮೂಲ ಯುಎಸ್

|

ಭಾರತಕ್ಕೆ ಈ ವರ್ಷದ ಏಪ್ರಿಲ್ ನಿಂದ ಸೆಪ್ಟೆಂಬರ್ ಮಧ್ಯೆ ಬಂದಿರುವ ವಿದೇಶಿ ನೇರ ಬಂಡವಾಳ (FDI) ಪೈಕಿ ಎರಡನೇ ಅತಿ ದೊಡ್ಡ ಮೂಲವಾಗಿ ಯುನೈಟೆಡ್ ಸ್ಟೇಟ್ಸ್ ಹೊರಹೊಮ್ಮಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಮಾರಿಷಿಯಸ್ ಸ್ಥಾನವನ್ನು ಯು.ಎಸ್. ಅಲಂಕರಿಸಿದೆ. ಇದು ವಾಣಿಜ್ಯ ಹಾಗೂ ಕೈಗಾರಿಕೆ ಸಚಿವಾಲಯದ ಮಾಹಿತಿಯಿಂದ ಗೊತ್ತಾಗಿರುವ ಅಂಶ.

2020ರ ಏಪ್ರಿಲ್ ಹಾಗೂ ಸೆಪ್ಟೆಂಬರ್ ಮಧ್ಯೆ ಭಾರತಕ್ಕೆ ಯುನೈಟೆಡ್ ಸ್ಟೇಟ್ಸ್ ನಿಂದ 7.12 ಬಿಲಿಯನ್ ಡಾಲರ್ ಬಂದಿದೆ. ಇನ್ನು ಮಾರಿಷಿಯಸ್ ನಿಂದ 2 ಬಿಲಿಯನ್ ಡಾಲರ್ ಬಂದಿದ್ದು, ನಾಲ್ಕನೇ ಸ್ಥಾನಕ್ಕೆ ಕುಸಿದಿದೆ ಎಂದು ಕೈಗಾರಿಕೆ ಉತ್ತೇಜನ ಮತ್ತು ಆಂತರಿಕ ವಾಣಿಜ್ಯ ಸಚಿವಾಲಯ ಇಲಾಖೆ (ಡಿಪಿಐಐಟಿ) ದತ್ತಾಂಶದ ಮೂಲಕ ತಿಳಿದುಬಂದಿದೆ.

 

ನವೆಂಬರ್ ನಲ್ಲಿ 50,000 ಕೋಟಿ ರುಪಾಯಿ ದಾಟಿದ FII ಹೂಡಿಕೆ

ಕಳೆದ ವರ್ಷ ಇದೇ ಅವಧಿಯಲ್ಲಿ ಮಾರಿಷಿಯಸ್ ಎರಡನೇ ಅತಿ ದೊಡ್ಡ ಎಫ್ ಡಿಐ ಮೂಲವಾಗಿತ್ತು. ಇನ್ನು ಯು.ಎಸ್. ನಾಲ್ಕನೇ ಸ್ಥಾನದಲ್ಲಿತ್ತು. ಇನ್ನು 2021- 21ನೇ ಸಾಲಿನ ಏಪ್ರಿಲ್- ಸೆಪ್ಟೆಂಬರ್ ಮಧ್ಯೆ 8.30 ಬಿಲಿಯನ್ ಡಾಲರ್ ವಿದೇಶಿ ಒಳಹರಿವಿನೊಂದಿಗೆ ಸಿಂಗಾಪೂರ ಅಗ್ರ ಸ್ಥಾನದಲ್ಲಿದೆ. ಕೇಯ್ಮನ್ ದ್ವೀಪಗಳಿಂದ 2.1 ಬಿಲಿಯನ್ ಅಮೆರಿಕನ್ ಡಾಲರ್ ಒಳಹರಿವು ಇದೆ.

ಏಪ್ರಿಲ್ ನಿಂದ ಸೆಪ್ಟೆಂಬರ್ ಮಧ್ಯೆ ಬಂದ FDIನ 2ನೇ ಅತಿ ದೊಡ್ಡ ಮೂಲ US

ನಂತರದ ಸ್ಥಾನಗಳಲ್ಲಿ ನೆದರ್ಲೆಂಡ್ಸ್ (1.5 ಬಿಲಿಯನ್ ಯುಎಸ್ ಡಿ), ಯುನೈಟೆಡ್ ಕಿಂಗ್ ಡಮ್ (1.35 ಬಿಲಿಯನ್ ಯುಎಸ್ ಡಿ), ಫ್ರಾನ್ಸ್ (1.13 ಬಿಲಿಯನ್ ಯುಎಸ್ ಡಿ), ಜಪಾನ್ (653 ಮಿಲಿಯನ್ ಯುಎಸ್ ಡಿ), ಜರ್ಮನಿ (202 ಮಿಲಿಯನ್ ಯುಎಸ್ ಡಿ) ಹಾಗೂ ಸೈಪ್ರಸ್ (48 ಮಿಲಿಯನ್ ಯುಎಸ್ ಡಿ) ಇವೆ.

ತಜ್ಞರು ಹೇಳುವ ಪ್ರಕಾರ, ಯುಎಸ್ ನಿಂದ ಹೆಚ್ಚಾಗಿರುವ ವಿದೇಶಿ ನೇರ ಬಂಡವಾಳವು ಎರಡೂ ದೇಶಗಳ (ಭಾರತ- ಯುಎಸ್) ಮಧ್ಯದ ಆರ್ಥಿಕ ಸಹಭಾಗಿತ್ವ ಇನ್ನಷ್ಟು ಗಟ್ಟಿಯಾಗಿರುವುದನ್ನು ಸೂಚಿಸುತ್ತದೆ.

English summary

United States Second Biggest Source Of FDI For India During 2020 April To September

During 2020 April to September United States second biggest source of FDI. Here is the complete details.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X