For Quick Alerts
ALLOW NOTIFICATIONS  
For Daily Alerts

Aadhaar Card Update : ಕೇಂದ್ರ ಮಾರ್ಗಸೂಚಿ ಗಮನಿಸಿ: 10 ವರ್ಷಕ್ಕೊಮ್ಮೆ ಆಧಾರ್ ಅಪ್‌ಡೇಟ್ ಕಡ್ಡಾಯ!

|

ಕೇಂದ್ರ ಸರ್ಕಾರವು ಆಧಾರ್ ಕಾರ್ಡ್ ಸಂಬಂಧಿಸಿದಂತೆ ಹೊಸ ಮಾರ್ಗಸೂಚಿಯನ್ನು ಜಾರಿ ಮಾಡಿದೆ. ಈ ನೂತನ ಮಾರ್ಗಸೂಚಿ ಪ್ರಕಾರವಾಗಿ ಎಲ್ಲ ಭಾರತೀಯ ನಾಗರಿಕರು ಹತ್ತು ವರ್ಷಕ್ಕೊಮ್ಮೆ ತಮ್ಮ ಆಧಾರ್ ಕಾರ್ಡ್‌ನಲ್ಲಿರುವ ಮಾಹಿತಿಯನ್ನು ಅಪ್‌ಡೇಟ್ ಮಾಡಿಕೊಳ್ಳವುದು ಕಡ್ಡಾಯವಾಗಿದೆ.

ಇನ್ಮುಂದೆ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಒದಗಿಸುವ ಆಧಾರ್ ಕಾರ್ಡ್ ಅನ್ನು ನಮ್ಮ ಅಗತ್ಯ ದಾಖಲೆಗಳನ್ನು ಬಳಸಿಕೊಂಡು ಹತ್ತು ವರ್ಷಕ್ಕೊಮ್ಮೆ ಅಪ್‌ಡೇಟ್ ಮಾಡಿಕೊಳ್ಳಬೇಕಾಗುತ್ತದೆ. ಸರ್ಕಾರದ ಪ್ರಕಾರ ದೇಶದಲ್ಲಿ ಆಧಾರ್‌ ಸಂಬಂಧಿಸಿದಂತೆ ನಡೆಯುತ್ತಿರುವ ವಂಚನೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಈ ಕ್ರಮವನ್ನು ಕೈಗೊಳ್ಳಲಾಗುತ್ತದೆ.

ಈ ರಾಜ್ಯದಲ್ಲಿ ಮಕ್ಕಳಿಗೆ ಆಧಾರ್ ಕಾರ್ಡ್ ಸೇವೆ ಮನೆ ಬಾಗಿಲಿಗೆ!ಈ ರಾಜ್ಯದಲ್ಲಿ ಮಕ್ಕಳಿಗೆ ಆಧಾರ್ ಕಾರ್ಡ್ ಸೇವೆ ಮನೆ ಬಾಗಿಲಿಗೆ!

ಈ ಹೊಸ ಮಾರ್ಗಸೂಚಿಯನ್ನು ಈ ಕೂಡಲೇ ಜಾರಿಗೆ ಬರುವಂತೆ ಹೊರಡಿಸಲಾಗಿದೆ. ಆದ್ದರಿಂದಾಗಿ ನೀವು ಆಧಾರ್ ಕಾರ್ಡ್ ಮಾಡಿಸಿಕೊಂಡು 10 ವರ್ಷಗಳು ಆಗಿದ್ದರೆ, ಕೂಡಲೇ ಆಧಾರ್ ಕಾರ್ಡ್ ಕೇಂದ್ರಕ್ಕೆ ತೆರಳಿ ಕಾರ್ಡ್ ಅನ್ನು ಅಪ್‌ಡೇಟ್ ಮಾಡಿಸಿಕೊಳ್ಳಿ. ಈ ಬಗ್ಗೆ ಅಧಿಕ ಮಾಹಿತಿ ಇಲ್ಲಿದೆ ಮುಂದೆ ಓದಿ......

 ಗಮನಿಸಿ: 10 ವರ್ಷಕ್ಕೊಮ್ಮೆ ಆಧಾರ್ ಅಪ್‌ಡೇಟ್ ಕಡ್ಡಾಯ!

ಕೇಂದ್ರದ ಅಧಿಕೃತ ಸುತ್ತೋಲೆ ಹೇಳುವುದೇನು?

"ಆಧಾರ್ ಕಾರ್ಡ್ ಬಳಕೆದಾರರು ತಮ್ಮ ಆಧಾರ್ ಅನ್ನು ನೀಡಲಾದ ದಿನಾಂಕದಿಂದ ಪ್ರತಿ ಹತ್ತು ವರ್ಷಗಳಿಗೊಮ್ಮೆ ಆಧಾರ್ ಅನ್ನು ಅಪ್‌ಡೇಟ್ ಮಾಡಿಸಿಕೊಳ್ಳಬೇಕು. ಆಧಾರ್‌ಗೆ ಬೇಕಾದ ದಾಖಲೆಗಳನ್ನು ಸಲ್ಲಿಕೆ ಮಾಡಿ ಆಧಾರ್ ಅನ್ನು ಅಪ್‌ಡೇಟ್ ಮಾಡಿಕೊಳ್ಳಬೇಕು. ಗುರುತಿನ ಪುರಾವೆ ಹಾಗೂ ವಿಳಾಸ ಪುರಾವೆಯನ್ನು ಸಲ್ಲಿಕೆ ಮಾಡುವ ಮೂಲಕ ಆಧಾರ್ ಅಪ್‌ಡೇಟ್ ಮಾಡಿಕೊಳ್ಳಬಹುದು," ಎಂದು ಕೇಂದ್ರದ ಅಧಿಕೃತ ಸುತ್ತೋಲೆಯಲ್ಲಿ ಉಲ್ಲೇಖ ಮಾಡಲಾಗಿದೆ.

ಈ ಜನರಿಗೆ ಆಧಾರ್‌ ಅಪ್‌ಡೇಟ್ ಮಾಡಲು ಯುಐಡಿಎಐ ಸೂಚನೆ, ಯಾಕೆ?ಈ ಜನರಿಗೆ ಆಧಾರ್‌ ಅಪ್‌ಡೇಟ್ ಮಾಡಲು ಯುಐಡಿಎಐ ಸೂಚನೆ, ಯಾಕೆ?

ಈ ಹಿಂದೆ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಜನರು ತಮ್ಮ ಆಧಾರ್ ಕಾರ್ಡ್ ಅನ್ನು ಅಪ್‌ಡೇಟ್ ಮಾಡಿಕೊಳ್ಳುವಂತೆ ಮನವಿ ಮಾಡಿತ್ತು. ಜನರು ತಮ್ಮ ಆಧಾರ್ ಕಾರ್ಡ್ ಅನ್ನು ಅಪ್‌ಡೇಟ್ ಮಾಡಿಕೊಳ್ಳುತ್ತಾ ಇರುವುದು ಉತ್ತಮ ಅಭ್ಯಾಸ ಎಂದು ಕೂಡಾ ಹೇಳಿತ್ತು. ಈಗ ಆಧಾರ್ ಸಂಬಂಧಿತ ವಂಚನೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಆಧಾರ್ ಅಪ್‌ಡೇಟ್ ಮಾಡುವುದನ್ನು ಕಡ್ಡಾಯಗೊಳಿಸಿದೆ.

ಆಧಾರ್ ಅಪ್‌ಡೇಟ್ ಮಾಡಬೇಕಾಗಿರುವವರು ಎಲ್ಲ ಅಗತ್ಯ ದಾಖಲೆಯೊಂದಿಗೆ ತಮ್ಮ ಸಮೀಪದ ಆಧಾರ್ ಸೇವಾ ಕೇಂದ್ರಕ್ಕೆ ಭೇಟಿ ನೀಡಬೇಕಾಗುತ್ತದೆ. ಹಾಗೆಯೇ ನಿಮ್ಮ ಈ ಹಿಂದಿನ ದಾಖಲೆಯನ್ನು ಹಾಗೂ ಈಗಿನ ದಾಖಲೆಯನ್ನು ಸಮಾನವಾಗಿ ತುಲನೆ ಮಾಡಲಾಗುತ್ತದೆ. ಯಾವುದೇ ತಪ್ಪು ಉಂಟಾಗಬಾರದು ಎಂಬ ನಿಟ್ಟಿನಲ್ಲಿ ಈ ಪರಿಶೀಲನೆ ಮಾಡಲಾಗುತ್ತದೆ.

English summary

Updating Aadhaar Card Every 10 Years Mandatory Now, Details of Union Govt Guidelines

Aadhaar Card in india: The Union IT Ministry has said that all Aadhaar card holders will have to update their cards every 10 years in an effort to tackle UIDAI fraud. Details of Union Govt Guidelines in kannada.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X