ಜೂನ್‌ನಲ್ಲಿ 2.62 ಲಕ್ಷ ಕೋಟಿ ರುಪಾಯಿಗೆ ಮುಟ್ಟಿದ UPI ಪಾವತಿಗಳು
ನವದೆಹಲಿ: ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್‌ಪಿಸಿಐ) ಅಂಕಿಅಂಶಗಳ ಪ್ರಕಾರ ಜೂನ್‌ನಲ್ಲಿ ಏಕೀಕೃತ ಪಾವತಿ ಇಂಟರ್ಫೇಸ್ (UPI) ಮೇಲಿನ ಪಾವತಿಗಳು 2.62 ಲಕ್ಷ ಕೋಟಿ ರುಪಾಯಿಗೆ ಮುಟ್ಟಿದೆ ಎಂದು ತಿಳಿದು ಬಂದಿದೆ.
ಇದು ಒಂದು ತಿಂಗಳ ಆಧಾರದ ಮೇಲೆ ಜೂನ್ ತಿಂಗಳಲ್ಲಿ ಶೇ .8.94 ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ ಎಂದು ಎನ್‌ಪಿಸಿಐ ತಿಳಿಸಿದೆ.
ಕರೋನವೈರಸ್ ಲಾಕ್‌ಡೌನ್ ನಂತರ ಯುಪಿಐ ಪಾವತಿಗಳು ಹೆಚ್ಚಾದವು ಆನ್‌ಲೈನ್ ಪಾವತಿಗಳು ಮೇ ತಿಂಗಳಿನಿಂದ ನಿಧಾನವಾಗಿ ವೇಗವನ್ನು ತೋರಿಸಿದವು. ಜೂನ್‌ನಲ್ಲಿ, ವಹಿವಾಟಿನ ಪರಿಮಾಣವು ಇಲ್ಲಿಯವರೆಗಿನ ಅತ್ಯುನ್ನತ ಮಟ್ಟವನ್ನು ಮುಟ್ಟಿದೆ.

ಎನ್‌ಪಿಸಿಐ ಅನ್ನು 2008 ರಲ್ಲಿ ಭಾರತದಲ್ಲಿ ಚಿಲ್ಲರೆ ಪಾವತಿವ್ಯವಸ್ಥೆಗಳನ್ನು ನಿರ್ವಹಿಸಲು ಸಂಯೋಜಿಸಲಾಯಿತು. ಇದು ಚಿಲ್ಲರೆ ಪಾವತಿ ಉತ್ಪನ್ನಗಳಗಳಾದ ರುಪೇ ಕಾರ್ಡ್, ತಕ್ಷಣದ ಪಾವತಿ ಸೇವೆ (ಐಎಂಪಿಎಸ್), ಯುಪಿಐ, ಭಾರತ್ ಇಂಟರ್ಫೇಸ್ ಫಾರ್ ಮನಿ (ಬಿಹೆಚ್ಐಎಂ), ಭೀಮ್ ಆಧಾರ್, ನ್ಯಾಷನಲ್ ಎಲೆಕ್ಟ್ರಾನಿಕ್ ಟೋಲ್ ಕಲೆಕ್ಷನ್ (ಎನ್‌ಇಟಿಸಿ ಫಾಸ್ಟ್ಯಾಗ್) ಮತ್ತು ಭಾರತ್ ಬಿಲ್ಪೇ ಮೂಲಕ ಪಾವತಿಗಳನ್ನು ಸುಗಮಗೊಳಿಸುತ್ತದೆ. ಗ್ರಾಹಕರು ಮತ್ತು ವ್ಯಾಪಾರಿಗಳಿಗೆ ಹೆಚ್ಚು ಸುರಕ್ಷಿತ ಮತ್ತು ಸಮಗ್ರ ಸೇವೆಗಳನ್ನು ನೀಡಲು ಎನ್‌ಪಿಸಿಐ ಯುಪಿಐ 2.0 ಅನ್ನು ಸಹ ಪ್ರಾರಂಭಿಸಿತು.
More From GoodReturns

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಸೇಫ್ಟಿ ಕಂಟ್ರೋಲ್ಸ್ ಐಪಿಒ: ಹೂಡಿಕೆದಾರರೇ ಇಂದೇ ಕೊನೆಯ ಅವಕಾಶ!

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಆರ್ಬಿಐ ಪಾಲಿಸಿ: ಇಂದಿನ ನಿರ್ಧಾರ ನಿಮ್ಮ ಹೂಡಿಕೆಯನ್ನು ಬದಲಿಸುತ್ತಾ?

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಹೋಮ್ ಲೋನ್ ಇಎಂಐ ಉಳಿಸಲು ಈ ಟ್ರಿಕ್ ಬಳಸಿ ನೋಡಿ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಚಿನ್ನದ ಬೆಲೆ ಏರಿಕೆ: ಹೂಡಿಕೆದಾರರೇ ಎಚ್ಚರ, ಈ ತಪ್ಪು ಮಾಡಬೇಡಿ!



Click it and Unblock the Notifications