For Quick Alerts
ALLOW NOTIFICATIONS  
For Daily Alerts

ಆದಾಯ ತೆರಿಗೆ, ಜಿಎಸ್ ಟಿ, ಕಸ್ಟಮ್ಸ್ ರೀಫಂಡ್ ಗೆ ಮುಂದಾದ ಐಟಿ ಇಲಾಖೆ

|

ದೇಶದಲ್ಲಿನ ಸದ್ಯದ ಕೊರೊನಾ ಸನ್ನಿವೇಶವನ್ನು ಗಮನದಲ್ಲಿ ಇಟ್ಟುಕೊಂಡು ಹಾಗೂ ತೆರಿಗೆ ಪಾವತಿದಾರರಿಗೆ ನೆರವಾಗುವ ಉದ್ದೇಶದಿಂದ 5 ಲಕ್ಷ ರುಪಾಯಿಯೊಳಗಿನ ಆದಾಯ ತೆರಿಗೆ ರಿಫಂಡ್ ಮತ್ತು GST/ಕಸ್ಟಮ್ಸ್ ರೀಫಂಡ್ ಗಳನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ವಿತರಿಸಲಾಗುವುದು ಎಂದು ಬುಧವಾರ ಆದಾಯ ತೆರಿಗೆ ಇಲಾಖೆ ತಿಳಿಸಿದೆ.

ಲಾಕ್ ಡೌನ್ ತೆರವಿನ ಬಗ್ಗೆ PM ಮನಸ್ಸಲ್ಲಿ ಏನಿದೆ? ರಾಜ್ಯಗಳ ನಿಲುವೇನು?ಲಾಕ್ ಡೌನ್ ತೆರವಿನ ಬಗ್ಗೆ PM ಮನಸ್ಸಲ್ಲಿ ಏನಿದೆ? ರಾಜ್ಯಗಳ ನಿಲುವೇನು?

ಆದಾಯ ತೆರಿಗೆ ಇಲಾಖೆ ತೆಗೆದುಕೊಂಡಿರುವ ಈ ನಿರ್ಧಾರದಿಂದ 14 ಲಕ್ಷದಷ್ಟು ತೆರಿಗೆ ಪಾವತಿದಾರರಿಗೆ ಅನುಕೂಲ ಆಗಲಿದೆ. ಇನ್ನು ಎಲ್ಲ ಜಿಎಸ್ ಟಿ ಮತ್ತು ಕಸ್ಟಮ್ಸ್ ರೀಫಂಡ್ ಸಹ ಬಿಡುಗಡೆ ಮಾಡಲಾಗುವುದು. ಇನ್ನು ಸಣ್ಣ- ಮಧ್ಯಮ ಕೈಗಾರಿಕೆಗಳೂ ಸೇರಿ ಒಂದು ಲಕ್ಷದಷ್ಟು ವ್ಯಾಪಾರ ಸಂಸ್ಥೆಗಳಿಗೂ ಅನುಕೂಲವಾಗಲಿದೆ.

ಆದಾಯ ತೆರಿಗೆ, ಜಿಎಸ್ ಟಿ, ಕಸ್ಟಮ್ಸ್ ರೀಫಂಡ್ ಗೆ ಮುಂದಾದ ಐಟಿ ಇಲಾಖೆ

ಅಂದ ಹಾಗೆ, ಒಟ್ಟಾರೆ ನೀಡಬೇಕಾದ ರೀಫಂಡ್ ಮೊತ್ತ ಅಂದಾಜು 18 ಸಾವಿರ ಕೋಟಿ ರುಪಾಯಿ ಆಗಲಿದೆ. ಕೊರೊನಾ ಸೋಂಕು ಭಾರತದಲ್ಲಿ 5200ಕ್ಕೂ ಹೆಚ್ಚು ಮಂದಿಗೆ ಹಬ್ಬಿದೆ. ಇನ್ನು ಮುಂಜಾಗ್ರತಾ ಕ್ರಮವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 21 ದಿನಗಳ ಲಾಕ್ ಡೌನ್ ಘೋಷಿಸಿದ್ದಾರೆ. ಅದು ಏಪ್ರಿಲ್ 14ರಂದು ಕೊನೆಯಾಗಲಿದೆ.

English summary

Upto 5 Lakh IT, GST, Customs Refund Immediately

IT department Wednesday announced that, upto 5 lakh income tax, GST, customs refund immediately.
Story first published: Wednesday, April 8, 2020, 18:54 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X