For Quick Alerts
ALLOW NOTIFICATIONS  
For Daily Alerts

ಅಮೆರಿಕದಲ್ಲಿ ಬಡ್ಡಿ ದರ ಮತ್ತೆ ತೀವ್ರ ಹೆಚ್ಚಳ; ಹಣದುಬ್ಬರ ಇಳಿಯೋವರೆಗೂ ಬಿಡಲ್ಲ ಎಂದ ಫೆಡ್ ರಿಸರ್ವ್ ಮುಖ್ಯಸ್ಥ

|

ವಾಷಿಂಗ್ಟನ್, ನ. 3: ಹೆಚ್ಚುತ್ತಿರುವ ಹಣದುಬ್ಬರವನ್ನು ನಿಯಂತ್ರಿಸಲು ಅಮೆರಿಕದ ಫೆಡರಲ್ ರಿಸರ್ವ್ ಬ್ಯಾಂಕ್ ಗುರುವಾರ 75 ಮೂಲಾಂಕಗಳಷ್ಟು ಬಡ್ಡಿ ದರ ಏರಿಕೆ ಮಾಡಿದೆ. ಬ್ಯಾಂಕ್‌ನ ನೀತಿ ರೂಪಕರು ಇಂದು ನಡೆಸಿದ ಈ ಸಭೆಯಲ್ಲಿ ಸರ್ವಾನುಮತದಿಂದ ಬಡ್ಡಿ ದರ ಏರಿಕೆಗೆ ನಿರ್ಧಾರ ಕೈಗೊಂಡರು. ಇದರೊಂದಿಗೆ ರಿಸರ್ವ್ ಬ್ಯಾಂಕ್‌ನ ಬಡ್ಡಿ ದರ ಶೇ. 3.75ರಿಂದ ಶೇ. 4ರ ಶ್ರೇಣಿಯಲ್ಲಿ ಇರಲಿದೆ. 2008ರ ನಂತರ ಇದು ಗರಿಷ್ಠ ಮಟ್ಟ ಎನಿಸಿದೆ.

ಇದು ಸತತ ನಾಲ್ಕನೇ ಬಾರಿ ಆಗಿರುವ ಬಡ್ಡಿ ದರ ಹೆಚ್ಚಳವಾಗಿದೆ. ಅಮೆರಿಕದಲ್ಲಿ ಇನ್ನಷ್ಟು ಬಡ್ಡಿ ದರ ಏರಿಕೆ ಸದ್ಯಕ್ಕೆ ಇರುವುದಿಲ್ಲ ಎನ್ನುವಂಥ ಅನಿಸಿಕೆಗಳು ಇತ್ತೀಚಿನವರೆಗೂ ಇದ್ದವು. ಆ ನಿರೀಕ್ಷೆಮೀರಿ ಫೆಡರಲ್ ರಿಸರ್ವ್ ಬ್ಯಾಂಕ್ ತನ್ನ ದರಗಳನ್ನು ಹೆಚ್ಚಿಸಿದೆ. ಅದೂ 75 ಬೇಸಿಸ್ ಪಾಯಿಂಟ್‌ಗಳಷ್ಟು ತೀವ್ರ ಮಟ್ಟದಲ್ಲಿ ಹೆಚ್ಚಿಸಿರುವುದು ಜಾಗತಿಕ ಆರ್ಥಿಕತೆಗಳಿಗೆ ಕಸಿವಿಸಿ ತಂದಿದೆ.

ಇಂದು ಆರ್‌ಬಿಐನ ಎಂಪಿಸಿ ಸಭೆ; ಬಡ್ಡಿ ದರ ಏರಿಕೆ ಆಗುತ್ತಾ?ಇಂದು ಆರ್‌ಬಿಐನ ಎಂಪಿಸಿ ಸಭೆ; ಬಡ್ಡಿ ದರ ಏರಿಕೆ ಆಗುತ್ತಾ?

ಮುಂದೆಯೂ ಬಡ್ಡಿ ದರ ಏರಿಕೆ ಆಗಬಹುದು ಎಂದು ಫೆಡರಲ್ ರಿಸರ್ವ್ ಬ್ಯಾಂಕ್‌ನ ಛೇರ್ಮನ್ ಜಿರೋಮ್ ಪೋವೆಲ್ ಸುಳಿವು ನೀಡಿದ್ದಾರೆ. ಆದರೆ, ಮುಂದಿನ ದಿನಗಳಲ್ಲಿ ಇಷ್ಟು ದೊಡ್ಡ ಮಟ್ಟದಲ್ಲಿ ಬಡ್ಡಿ ಏರಿಕೆ ಆಗುವ ಸಾಧ್ಯತೆ ಕಡಿಮೆ. ಹಂತ ಹಂತವಾಗಿ ಕಡಿಮೆ ಮಟ್ಟದಲ್ಲಿ ಬಡ್ಡಿ ಏರಿಕೆಯಾಗಬಹುದು. ಆದರೆ, ಕಳೆದ ಹಲವು ದಶಕಗಳಲ್ಲೇ ಅತಿ ಹೆಚ್ಚು ಬಡ್ಡಿ ದರ ಅಮೆರಿಕದಲ್ಲಿ ಮುಂದಿನ ದಿನಗಳಲ್ಲಿ ಇರುವುದಂತೂ ಖಚಿತ ಎಂದು ಹೇಳಲಾಗುತ್ತಿದೆ.

ಬಡ್ಡಿದರ ಏರಿಕೆಯಿಂದ ಹಣದುಬ್ಬರ ಹೇಗೆ ಕಡಿವಾಣ?

ಬಡ್ಡಿದರ ಏರಿಕೆಯಿಂದ ಹಣದುಬ್ಬರ ಹೇಗೆ ಕಡಿವಾಣ?

ಹಣದುಬ್ಬರ ನಿಯಂತ್ರಣಕ್ಕೆ ತರಲು ಬಡ್ಡಿ ದರ ಏರಿಸುವ ನಿರ್ಧಾರ ಏಕೆ ಎಂಬ ಪ್ರಶ್ನೆ ಸಹಜವಾಗಿ ಬರುತ್ತದೆ. ಮೊದಲಿಗೆ ಹಣದುಬ್ಬರ ಏನು ಎಂಬುದು ತಿಳಿಯುವುದು ಮುಖ್ಯ. ಬಹಳ ಸರಳವಾಗಿ ಹೇಳುವುದಾದರೆ ಈಗ ಒಂದು ವಸ್ತುವಿನ ಬೆಲೆ ಎಷ್ಟಿದೆ ಮತ್ತು ಹಿಂದಿನ ವರ್ಷದ ಇದೇ ಅವಧಿಯಲ್ಲಿ ಇದೇ ವಸ್ತುವಿನ ಬೆಲೆ ಇಷ್ಟಿತ್ತು ಎಂಬುದರ ವ್ಯತ್ಯಾಸವೇ ಹಣದುಬ್ಬರ. ಹಿಂದಿನ ವರ್ಷದಕ್ಕೆ ಹೋಲಿಸಿದರೆ ಒಂದು ವಸ್ತುವಿನ ಬೆಲೆ ಎಷ್ಟು ಹೆಚ್ಚಳವಾಗಿದೆ ಎಂಬುದು ಹಣದುಬ್ಬರ.

ಬಡ್ಡಿ ಹೆಚ್ಚಳದಿಂದ ಹಣದುಬ್ಬರ ಹೇಗೆ ನಿಯಂತ್ರಣಕ್ಕೆ ಬರುತ್ತದೆ ಎಂದು ನೋಡುವುದಾದರೆ, ಆರ್ಥಿಕ ತಜ್ಞರ ಪ್ರಕಾರ ಬಡ್ಡಿ ದರಗಳ ಏರಿಕೆಯಿಂದ ಆರ್ಥಿಕತೆಯಲ್ಲಿ ಬೇಡಿಕೆ ಕುಗ್ಗುತ್ತದೆ. ಇದರಿಂದ ಹಣದುಬ್ಬರ ದರ ಇಳಿಕೆಯಾಗಲು ಸಹಾಯವಾಗುತ್ತದೆ. ಆದರೆ, ಆರ್ಥಿಕ ಚಟುವಟಿಕೆ ಕಡಿಮೆಗೊಂಡ ಪರಿಣಾಮ ಆರ್ಥಿಕತೆಯ ಬೆಳವಣಿಗೆಯೂ ನಿಧಾನಗೊಳ್ಳುತ್ತದೆ. ಹೀಗಾಗಿ, ಹಣದುಬ್ಬರ ಮತ್ತು ಬಡ್ಡಿ ಏರಿಕೆ ಬಹಳ ಸಂಕೀರ್ಣವಾದ ಆರ್ಥಿಕ ಪರಿಸ್ಥಿತಿಗೆ ಕಾರಣವಾಗುತ್ತವೆ. ಇಂಗ್ಲೀಷ್‌ನಲ್ಲಿ Necessary Evil ಎಂಬ ಪದ ಕೇಳಿರುತ್ತೇವೆ. ಹಣದುಬ್ಬರ ಇದ್ದಾಗ ಬಡ್ಡಿ ಏರಿಕೆ ಎಂಬುದು ಆರ್ಥಿಕ ತಜ್ಞರ ಪಾಲಿಗೆ ನೆಸಸರಿ ಎವಿಲ್.

ಅಮೆರಿಕದ ಫೆಡರಲ್ ರಿಸರ್ವ್ ಬ್ಯಾಂಕ್‌ನ ಮುಖ್ಯಸ್ಥ ಜಿರೋಮ್ ಪೋವೆಲ್ ಕೂಡ ಇಂಥದ್ದೇ ಅನಿಸಿಕೆ ವ್ಯಕ್ತಪಡಿಸಿದರು. ಬಡ್ಡಿ ಏರಿಕೆಯಿಂದ ಹಣದುಬ್ಬರ ಇಳಿಕೆಯಾಗಲು ಸಮಯ ಹಿಡಿಯುತ್ತದೆ. ಜೊತೆಗೆ ಅಮೆರಿಕದ ಆರ್ಥಿಕ ಪ್ರಗತಿಯನ್ನೂ ನಿಧಾನಗೊಳಿಸುತ್ತದೆ ಎಂದು ಪೋವೆಲ್ ಅಭಿಪ್ರಾಯಪಟ್ಟರು.

 

ಅಮೆರಿಕದಲ್ಲಿ ಹಣದುಬ್ಬರ ವಿಪರೀತ

ಅಮೆರಿಕದಲ್ಲಿ ಹಣದುಬ್ಬರ ವಿಪರೀತ

ವಿಶ್ವದ ದೊಡ್ಡಣ್ಣ ಎಂದು ಕರೆಯಿಸಿಕೊಳ್ಳುವ ಅಮೆರಿಕದಲ್ಲಿ ಹಣದುಬ್ಬರ ಸೆಪ್ಟೆಂಬರ್‌ನಲ್ಲಿ ಶೇ 8.2ರಷ್ಟು ಇದೆ. ಆಗಸ್ಟ್‌ನಲ್ಲಿ ಶೇ. 8.3ರಷ್ಟಿದ್ದ ಹಣದುಬ್ಬರ ಸೆಪ್ಟೆಂಬರ್‌ನಲ್ಲಿ ಸ್ವಲ್ಪ ಇಳಿದಿರುವುದು ಹೌದು. ಆಧರೂ ಕಳೆದ ನಾಲ್ಕು ದಶಕದಲ್ಲೇ ಅತಿ ಹೆಚ್ಚು ಹಣದುಬ್ಬರ ಎಂದು ಹೇಳಲಾಗುತ್ತಿದೆ. ಕಳೆದ ಹಲವು ತಿಂಗಳಿಂದಲೂ ಹಣದುಬ್ಬರ ಹೆಚ್ಚೇ ಇದೆ. ಆರು ಬಾರಿ ಫೆಡರಲ್ ರೇಟ್ ಹೆಚ್ಚಿಸಲಾಗಿದೆ. 1980ರ ನಂತರ ಅಮೆರಿಕದಲ್ಲಿ ತೆಗೆದುಕೊಳ್ಳಲಾಗಿರುವ ಅತ್ಯಂತ ಬಿಗಿ ಹಣಕಾಸು ಕ್ರಮ ಇದೆನಿಸಿದೆ.

ಫೆಡರಲ್ ರಿಸರ್ವ್ ಬ್ಯಾಂಕ್ ಮುಖ್ಯಸ್ಥ ಜಿರೋಮ್ ಪೋವೆಲ್ ಅವರು ಹಣದುಬ್ಬರ ಶೇ. 2ಕ್ಕೆ ಬರುವವರೆಗೂ ಬಿಗಿ ಕ್ರಮ ಮುಂದುವರಿಯುತ್ತದೆ ಎಂದು ಹೇಳಿದ್ದಾರೆ. ಹಣದುಬ್ಬರ ಈಗ ಕಡಿಮೆ ಮಾಡದೇ ಹೋದರೆ ಕೂಪಕ್ಕೆ ಸಿಲುಕಬೇಕಾಗುತ್ತದೆ ಎಂದೂ ಅವರು ಎಚ್ಚರಿಸಿದ್ದಾರೆ.

 

ತಾಂತ್ರಿಕ ಆರ್ಥಿಕತ ಹಿಂಜರಿತದಿಂದ ಪಾರು

ತಾಂತ್ರಿಕ ಆರ್ಥಿಕತ ಹಿಂಜರಿತದಿಂದ ಪಾರು

ಅಮೆರಿಕದಲ್ಲಿ ಆರ್ಥಿಕತೆ ಮತ್ತೆ ಹಳಿಗೆ ಬಂದಿರುವಂತೆ ತೋರುತ್ತಿದೆ. ಆ ದೇಶದ ಹಣಕಾಸು ವರ್ಷದ ಕ್ವಾರ್ಟರ್‌ನಲ್ಲಿ ಜಿಡಿಪಿ ಸಕಾರಾತ್ಮಕ ಸ್ಥಿತಿಯಲ್ಲಿ ಸಾಗುತ್ತಿರುವ ಚಿತ್ರಣವಿದೆ. ಜುಲೈನಿಂದ ಸೆಪ್ಟೆಂಬರ್‌ವರೆಗಿನ ತ್ರೈಮಾಸಿಕ ಅವಧಿಯಲ್ಲಿ ಜಿಡಿಪಿ ಶೇ. 2.6ರಷ್ಟು ಬೆಳವಣಿಗೆ ಸಾಧಿಸಿದೆ. ಈ ಮೂಲಕ ತಾಂತ್ರಿಕ ಹಿಂಜರಿತದಿಂದ ಹೊರಬಂದಿದೆ.

ತಾಂತ್ರಿಕ ಹಿಂಜರಿತ ಅಥವಾ ಟೆಕ್ನಿಕಲ್ ರಿಸಿಶನ್ ಎಂದರೆ ಸತತ ಎರಡು ತ್ರೈಮಾಸಿಕ ಅವಧಿಯಲ್ಲಿ ಋಣಾತ್ಮಕ ಆರ್ಥಿಕ ಬೆಳವಣಿಗೆ ದರ ಇರುವುದು. ಅಂದರೆ, ಜಿಡಿಪಿ ಬೆಳವಣಿಗೆ ಬದಲು ಕುಂಠಿತಗೊಳ್ಳುವದು ಋಣಾತ್ಮಕ ಬೆಳವಣಿಗೆ. ಈ ಹಣಕಾಸು ವರ್ಷದ ಮೊದಲೆರಡು ತ್ರೈಮಾಸಿಕ ಅವಧಿಯಲ್ಲಿ ಅಮೆರಿಕ ಋಣಾತ್ಮಕ ಜಿಡಿಪಿ ಬೆಳವಣಿಗೆ ಕಂಡಿತ್ತು. ಈಗ ಮೂರನೇ ಕ್ವಾರ್ಟರ್‌ನಲ್ಲಿ ಧನಾತ್ಮಕ ಬೆಳವಣಿಗೆ ತೋರುವ ಮೂಲಕ ಟಕ್ನಿಕಲ್ ರಿಸಿ‍ಶನ್‌ನಿಂದ ಹೊರಬಂದಿದೆ.

 

English summary

US Fed Bank Hikes Rates By 75 Basis Points

America's Federal Reserve Bank has gone for the decision for big hike of 75 basis points to contain inflation rate. Now with the hike, the interest rates will be in the range of 3.75 to 4.00%.
Story first published: Thursday, November 3, 2022, 10:55 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X