For Quick Alerts
ALLOW NOTIFICATIONS  
For Daily Alerts

ವಂದೇ ಭಾರತ್ ರೈಲಿಗೆ ಒಂದು ವರ್ಷ ಪೂರ್ಣ: 92 ಕೋಟಿ ಸಂಪಾದನೆ

|

ಮೇಕ್ ಇನ್ ಇಂಡಿಯಾ ಯೋಜನೆ ಅಡಿಯಲ್ಲಿ ನಿರ್ಮಿಸಲಾದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸೇವೆ ಆರಂಭಗೊಂಡು ಒಂದು ವರ್ಷ ಸಂದಿದೆ. ಸಂಪೂರ್ಣ ಭಾರತದಲ್ಲೇ ತಯಾರಾದ ರೈಲು ಎಂದೇ ಖ್ಯಾತಿಯ ಈ ರೈಲು ಕಳೆದ ಒಂದು ವರ್ಷದಲ್ಲಿ 3.8 ಲಕ್ಷ ಕಿ.ಮೀ ಸಂಂಚಾರ ನಡೆಸಿದ್ದು, 92.29 ಕೋಟಿ ಸಂಪಾದಿಸಿದೆ.

ಭಾರತದ ಮೊದಲ ಸೆಮಿ ಹೈಸ್ಪೀಡ್ ರೈಲು ವಂದೇ ಭಾರತ್ ಎಕ್ಸ್‌ಪ್ರೆಸ್ ಅನ್ನು ಚೆನ್ನೈನ ಇಂಟಿಗ್ರಲ್ ಕೋಚ್ ಫ್ಯಾಕ್ಟರಿಯಲ್ಲಿ ಅಕ್ಟೋಬರ್ 2018ರಂದು ಅಂದಾಜು 98 ಕೋಟಿ ರುಪಾಯಿ ವೆಚ್ಚದಲ್ಲಿ ತಯಾರಿಸಲಾಯಿತು. ಈ ರೈಲು ದೆಹಲಿ-ವಾರಣಾಸಿ ನಡುವೆ ಸಂಚರಿಸುತ್ತಿದೆ.

ವಂದೇ ಭಾರತ್ ರೈಲಿಗೆ ಒಂದು ವರ್ಷ ಪೂರ್ಣ: 92 ಕೋಟಿ ಸಂಪಾದನೆ

ವಂದೇ ಭಾರತ್ ರೈಲು ಸೋಮವಾರ ಮತ್ತು ಗುರುವಾರ ಹೊರತುಪಡಿಸಿ ಇತರ ದಿನಗಳಲ್ಲಿ ದೆಹಲಿ-ವಾರಣಾಸಿ ನಡುವೆ ಸಂಚರಿಸುತ್ತಿದ್ದು, 8 ಗಂಟೆ ಪ್ರಯಾಣಾವಧಿ ಹೊಂದಿದೆ. 16 ಎಸಿ ಬೋಗಿಗಳನ್ನು ಹೊಂದಿರುವ ಈ ರೈಲಿನಲ್ಲಿ ಆಟೋಮೆಟಿಕ್ ಡೋರ್‌ಗಳನ್ನು ಹೊಂದಿದೆ.

ಈ ರೈಲು ಅತ್ಯಾಧುನಿಕ ಸೌಕರ್ಯಗಳನ್ನು ಹೊಂದಿದ್ದು, ಪ್ರತಿ ಕೋಚ್‌ನಲ್ಲಿ ಜಿಪಿಎಸ್ ತಂತ್ರಜ್ಞಾನ, ಪ್ರತಿ ಬೋಗಿಗಳಲ್ಲೂ ಸಿಸಿ ಕ್ಯಾಮೆರಾಗಳು, ವೈಫೈ ಸೌಲಭ್ಯ ನೀಡಲಾಗಿದೆ. ಸಾಮಾನ್ಯ ರೈಲಿನ ಒಂದು ಬೋಗಿಯಲ್ಲಿ 78 ಸೀಟುಗಳಿದ್ದರೆ, ವಂದೇ ಭಾರತ್ ಎಕ್ಸ್‌ಪ್ರೆಸ್‌ನಲ್ಲಿ 52 ಸುಖಾಸನ ಸೀಟುಗಳಿವೆ.

English summary

Vande Bharat Express Completes One Year Of Operations

Vande Bharat Express, India’s first semi-high speed train completes the first year of its successful run, raking up about Rs 92.29 crore revenue
Story first published: Thursday, February 20, 2020, 9:17 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X