For Quick Alerts
ALLOW NOTIFICATIONS  
For Daily Alerts

ಪ್ರಯಾಣಿಕರಿಗೆ 40,000 ಅಡಿ ಎತ್ತರದಿಂದ ಲೈವ್ ಕ್ರಿಕೆಟ್ ನೋಡುವ ಅವಕಾಶ!

|

ಸಿಂಗಾಪುರ್ ಏರ್‌ಲೈನ್ಸ್‌ ಲಿಮಿಟೆಡ್‌ನ ಭಾರತೀಯ ಅಂಗಸಂಸ್ಥೆಯಾದ ವಿಸ್ತಾರ ತನ್ನ ಹೊಸ ಬೋಯಿಂಗ್ ಕಂ 787 ಡ್ರೀಮ್‌ಲೈನರ್‌ ವಿಮಾನದಲ್ಲಿ ವೈ-ಫೈ ಮತ್ತು ಸ್ಟ್ರೀಮಿಂಗ್ ಸೇವೆಗಳನ್ನು ಒದಗಿಸುವ ದೇಶದ ಮೊದಲ ವಿಮಾನಯಾನ ಸಂಸ್ಥೆಯಾಗಲಿದೆ.

 

ಪ್ರಯಾಣಿಕರು ಫೇಸ್‌ಬುಕ್ ಮತ್ತು ಮೆಸೇಜಿಂಗ್ ಸೇವೆ ವಾಟ್ಸಾಪ್, ಮತ್ತು ಲೈವ್-ಸ್ಟ್ರೀಮ್ ಕ್ರಿಕೆಟ್ ಪಂದ್ಯಗಳಂತಹ ಸೈಟ್‌ಗಳನ್ನು ಪ್ರವೇಶಿಸಲು ಸಾಧ್ಯವಾಗುತ್ತದೆ. ಕ್ರಿಕೆಟ್ ಭಾರತದ ಅತ್ಯಂತ ಜನಪ್ರಿಯ ಕ್ರೀಡೆಯಾಗಿದೆ. ವಿಮಾನದಲ್ಲೇ ಕುಳಿತು ಲೈವ್ ಕ್ರಿಕೆಟ್ ನೋಡಬಹುದು, ಆದರೂ ಸಾಕಷ್ಟು ಡೇಟಾ ಖರ್ಚಾಗುತ್ತದೆ ಎಂದು ವಿಸ್ತಾರ ಮುಖ್ಯ ಕಾರ್ಯತಂತ್ರ ಅಧಿಕಾರಿ ವಿನೋದ್ ಕಣ್ಣನ್ ದೆಹಲಿಯಲ್ಲಿ ಹೇಳಿದ್ದಾರೆ.

 
ಪ್ರಯಾಣಿಕರಿಗೆ 40,000 ಅಡಿ ಎತ್ತರದಿಂದ ಲೈವ್ ಕ್ರಿಕೆಟ್ ನೋಡುವ ಅವಕಾಶ!

ಮುಂದಿನ ವಾರಗಳಲ್ಲಿ ಸೇವೆಯ ಬೆಲೆ ನಿರ್ಧರಿಸಲಾಗುವುದು ಎಂದು ತಿಳಿಸಿರುವ ವಿನೋದ್ ಕಣ್ಣನ್, ಕೊರೊನಾವೈರಸ್ ಭೀತಿಯಿಂದ ಜಾಗತಿಕ ನೆಟ್‌ವರ್ಕ್‌ನಲ್ಲಿ ದುರ್ಬಲ ಬೇಡಿಕೆ ಸೃಷ್ಟಿಯಾಗಿದೆ ಎಂದರು. ಸಿಂಗಾಪೂರ್ ಮೂಲದ ಕಂಪನಿಯು ಶುಕ್ರವಾರವಷ್ಟೇ ಜಾಗತಿಕವಾಗಿ ಹಲವಾರು ವಿಮಾನಗಳನ್ನು ಸ್ಥಗಿತಗೊಳಿಸುವುದಾಗಿ ಘೋಷಿಸಿತು.

ಸಿಂಗಾಪುರ್ ಏರ್‌ಲೈನ್ಸ್‌ ಮತ್ತು ಟಾಟಾ ಗ್ರೂಪ್ ನಡುವಿನ ಜಂಟಿ ಉದ್ಯಮವಾದ ಈ ವಾಹಕವು 2015 ರಲ್ಲಿ ಹಾರಾಟವನ್ನು ಪ್ರಾರಂಭಿಸಿತು ಮತ್ತು ಪ್ರಸ್ತುತ 32 ಏರ್‌ಬಸ್ A320s ಮತ್ತು ಏಳು ಬೋಯಿಂಗ್ 737 ವಿಮಾನಗಳನ್ನು ನಿರ್ವಹಿಸುತ್ತಿದೆ.

English summary

Vistara Offer Live Cricket At 40,000 Feet

Passengers will be able to access sites like Facebook and WhatsApp, as well as live-stream cricket matches
Story first published: Wednesday, February 19, 2020, 18:46 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X