For Quick Alerts
ALLOW NOTIFICATIONS  
For Daily Alerts

ಅಡಚಣೆ ಎಂದರೇನು? ಇದರಿಂದ ಯಾರಿಗೆ ನಷ್ಟ?

|

ಅಡಚಣೆ ಎಂಬುದು ಅಸ್ತಿತ್ವದ ಕ್ಷೇತ್ರಗಳನ್ನು ನಾಶಮಾಡುವ ಸಾಮರ್ಥ್ಯವನ್ನು ಹೊಂದಿರುವ ನಾವೀನ್ಯತೆಯನ್ನು ಹೊಂದಿರುವ ವ್ಯವಸ್ಥೆಯನ್ನು ವಿವರಿಸಲು ಬಳಸುವ ಪದವಾಗಿದೆ.

 

ವ್ಯವಸ್ಥೆಯಲ್ಲಿನ ಹಳೆಯ ಮಾದರಿಗಳ ವಿರುದ್ಧ ಹೊಸ ತಂತ್ರಜ್ಞಾನ ಆಕ್ರಮಿಸುವುದಾಗಿದೆ. ಟ್ಯಾಕ್ಸಿ ಚಾಲಕರು ದಿನನಿತ್ಯದ ದುಡಿಮೆಯನ್ನು ಅವಲಂಬಿಸಿರುತ್ತಾರೆ, ಈ ಜಾಗಕ್ಕೆ ತಾನಾಗೆ ಚಲಿಸಬಲ್ಲ ಕಾರುಗಳು ಆಕ್ರಮಿಸುವುದಾಗಿದೆ. ದೊಡ್ಡ ಕೈಗಾರಿಕೆಗಳಲ್ಲಿ ಸಾವಿರಾರು ಕಾರ್ಮಿಕರು ಕೆಲಸ ಮಾಡುತ್ತಾರೆ. ಅವರ ಕೆಲಸವನ್ನೆಲ್ಲಾ ಸುಲಭವಾಗಿ ಮಾಡಿಬಿಡಬಲ್ಲ ರೊಬೊಟ್‌ಗಳ ಪ್ರವೇಶವು ಅನೇಕ ಉದ್ಯೋಗ ನಷ್ಟಕ್ಕೆ ಕಾರಣವಾಗುತ್ತದೆ.

ಅಡಚಣೆ ಎಂದರೇನು? ಇದರಿಂದ ಯಾರಿಗೆ ನಷ್ಟ?

ಈ ರೀತಿಯಾದ ಅಡಚಣೆಗಳು ಹೊಸದೇನಲ್ಲ. ಸ್ಟೀಮ್ ಶಿಪ್‌ಗಳ ಬದಲಿಗೆ ಅತ್ಯಾಧುನಿಕ ಸೈಲಿಂಗ್ ಶಿಪ್‌ಗಳು ಬಂದಿವೆ, ಕುದುರೆ, ಎತ್ತಿನ ಗಾಡಿಯ ಜಾಗವನ್ನ ಕಾರುಗಳು ಆಕ್ರಮಿಸಿವೆ. ವೀಕಿಪೀಡಿಯಾ, ಮುದ್ರಿತ ಸೈಕ್ಲೋಪೀಡಿಯಾವನ್ನ ನಾಶಪಡಿಸಿದೆ. ಹಳೆಯ ಕ್ಯಾಮೆರಾಗಳ ಜಾಗದಲ್ಲಿ ಡಿಜಿಟಲ್ ಕ್ಯಾಮೆರಾಗಳಿವೆ. ಇದರಿಂದ ಹಳೆಯ ಕೋಡಾಕ್ ಕ್ಯಾಮೆರಾ ನಷ್ಟದಿಂದ ನೂರಾರು ಜನರು ಕೆಲಸ ಕಳೆದುಕೊಂಡಿದ್ದಾರೆ.

ಉದಾಹರಣೆಗೆ Airbnb ಇದು ಅಪಾರ್ಟ್‌ಮೆಂಟ್, ಹೋಟೆಲ್‌ಗಳಲ್ಲಿ ರೂಮ್‌ಗಳನ್ನು ಬುಕ್ ಮಾಡಬಲ್ಲ ಇಂಟರ್ನೆಟ್ ಆಧಾರಿತ ಕಂಪನಿಯಾಗಿದೆ. ಇದು 35 ಬಿಲಿಯನ್ ಡಾಲರ್ ಬೆಲೆಬಾಳುತ್ತದೆ. ಆದರೂ ಒಂದೇ ಒಂದು ಹೋಟೆಲ್ ಅನ್ನು ಹೊಂದಿಲ್ಲ. ಅದೇ ಹಿಲ್ಟನ್ ಹೋಟೆಲ್ ಗ್ರೂಪ್ ಕೇವಲ 25 ಬಿಲಿಯನ್ ಡಾಲರ್‌ ಮೌಲ್ಯವನ್ನ ಹೊಂದಿದೆ. ಇದು ಆಧುನಿಕ ತಂತ್ರಜ್ಞಾನ ಐಡಿಯಾಗಳಿಗೆ ಒಂದು ಉದಾಹರಣೆಯಷ್ಟೇ ಆಗಿದೆ.

ಸದ್ಯ ಗೂಗಲ್, ಮೈಕ್ರೋಸಾಫ್ಟ್‌, ಅಮೆಜಾನ್‌ನಂತಹ ದೊಡ್ಡ ದೊಡ್ಡ ಕಂಪನಿಗಳು ವಿಶ್ವದ ದೈತ್ಯ ಕಂಪನಿಗಳಾಗಿವೆ, ಅನೇಕ ಸ್ಟಾರ್ಟ್‌ ಅಪ್‌ಗಳ ತಾಣವಾಗಿದೆ. ಆದರೆ ಈ ಕಂಪನಿಗಳು ಭವಿಷ್ಯದಲ್ಲಿ ಸಂಪೂರ್ಣ ಸೇಫ್ ಆಗಿದೆ ಎಂದು ಹೇಳಲು ಸಾಧ್ಯವಿಲ್ಲ. ಭವಿಷ್ಯದಲ್ಲಿ ಯಾವುದೇ ತಂತ್ರಜ್ಞಾನ ಇವುಗಳಿಗೂ ಮುಳ್ಳಾಗಬಹುದು.

English summary

What is Disruption Mean In Business? Who Is At A Loss?

Disruption is Term used to describe innovations that have the ability to destroy entire fields.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X