For Quick Alerts
ALLOW NOTIFICATIONS  
For Daily Alerts

e-RUPI ಎಂದರೇನು? ಹೇಗೆ ಕಾರ್ಯ ನಿರ್ವಹಿಸಲಿದೆ?

|

ವಿಶ್ವದ ಹಲವು ರಾಷ್ಟ್ರಗಳಲ್ಲಿ ಕ್ರಿಪ್ಟೋಕರೆನ್ಸಿಗಳು ಸದ್ದು ಮಾಡುತ್ತಿರುವ ಸಂದರ್ಭದಲ್ಲಿ, ಭಾರತವು ಡಿಜಿಟಲ್ ಕರೆನ್ಸಿ ಹೊಂದುವತ್ತ ಮೊದಲ ಹೆಜ್ಜೆ ಇಟ್ಟಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ e-RUPI ಎಲೆಕ್ಟ್ರಾನಿಕ್ ವೋಚರ್ ಆಧಾರಿತ ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಆರಂಭಿಸಿದ್ದಾರೆ.

ಭಾರತೀಯ ರಾಷ್ಟ್ರೀಯ ಪಾವತಿ ನಿಗಮ (NPCI), ಹಣಕಾಸು ಸೇವೆಗಳ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮತ್ತು ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರವು ಅಭಿವೃದ್ಧಿಪಡಿಸಿದ ವೇದಿಕೆಯು ವ್ಯಕ್ತಿ-ನಿರ್ದಿಷ್ಟ ಮತ್ತು ಉದ್ದೇಶ-ನಿರ್ದಿಷ್ಟ ಪಾವತಿ ವ್ಯವಸ್ಥೆಯಾಗಿದೆ.

e-RUPI ಹೇಗೆ ಕಾರ್ಯ ನಿರ್ವಹಿಸಲಿದೆ?

e-RUPI ಹೇಗೆ ಕಾರ್ಯ ನಿರ್ವಹಿಸಲಿದೆ?

e-RUPI ಒಂದು ನಗದುರಹಿತ ಮತ್ತು ಸಂಪರ್ಕವಿಲ್ಲದ ಡಿಜಿಟಲ್ ಪಾವತಿ ಮಾಧ್ಯಮವಾಗಿದ್ದು, ಇದನ್ನು SMS- ಸ್ಟ್ರಿಂಗ್ ಅಥವಾ QR ಕೋಡ್ ರೂಪದಲ್ಲಿ ಫಲಾನುಭವಿಗಳ ಮೊಬೈಲ್ ಫೋನ್‌ಗಳಿಗೆ ತಲುಪಿಸಲಾಗುತ್ತದೆ. ಇದು ಮೂಲಭೂತವಾಗಿ ಪ್ರಿಪೇಯ್ಡ್ ಗಿಫ್ಟ್ ವೋಚರ್‌ನಂತೆಯೇ ಇರುತ್ತದೆ, ಇದನ್ನು ಯಾವುದೇ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್, ಮೊಬೈಲ್ ಅಪ್ಲಿಕೇಶನ್ ಅಥವಾ ಇಂಟರ್ನೆಟ್ ಬ್ಯಾಂಕಿಂಗ್ ಇಲ್ಲದೆ ನಿರ್ದಿಷ್ಟ ಸ್ವೀಕಾರ ಕೇಂದ್ರಗಳಲ್ಲಿ ರಿಡೀಮ್ ಮಾಡಬಹುದಾಗಿದೆ. ಯಾವುದೇ ಭೌತಿಕ ಇಂಟರ್ಫೇಸ್ ಇಲ್ಲದೆಯೇ ಡಿ-ಡಿಜಿಟಲ್ ರೀತಿಯಲ್ಲಿ ಫಲಾನುಭವಿಗಳು ಮತ್ತು ಸೇವಾ ಪೂರೈಕೆದಾರರೊಂದಿಗೆ e-RUPI ಸೇವೆಗಳ ಪ್ರಾಯೋಜಕರನ್ನು ಸಂಪರ್ಕಿಸುತ್ತದೆ.

ಚಿನ್ನದ ಮೇಲಿನ ಹೂಡಿಕೆ: ನಾಲ್ಕು ಅತ್ಯುತ್ತಮ ಆಯ್ಕೆಗಳು ಇಲ್ಲಿವೆಚಿನ್ನದ ಮೇಲಿನ ಹೂಡಿಕೆ: ನಾಲ್ಕು ಅತ್ಯುತ್ತಮ ಆಯ್ಕೆಗಳು ಇಲ್ಲಿವೆ

ಇ- ವೋಚರ್‌ಗಳನ್ನು ಹೇಗೆ ನೀಡಲಾಗುತ್ತದೆ?
 

ಇ- ವೋಚರ್‌ಗಳನ್ನು ಹೇಗೆ ನೀಡಲಾಗುತ್ತದೆ?

ಈ ವ್ಯವಸ್ಥೆಯನ್ನು ಎನ್‌ಪಿಸಿಐ ತನ್ನ ಯುಪಿಐ ಪ್ಲಾಟ್‌ಫಾರ್ಮ್‌ನಲ್ಲಿ ನಿರ್ಮಿಸಿದೆ ಮತ್ತು ಆನ್‌ಬೋರ್ಡ್ ಬ್ಯಾಂಕ್‌ಗಳನ್ನು ಹೊಂದಿದ್ದು ಅದು ನೀಡುವ ಸಂಸ್ಥೆಗಳಾಗಿರುತ್ತದೆ. ಯಾವುದೇ ಕಾರ್ಪೊರೇಟ್ ಅಥವಾ ಸರ್ಕಾರಿ ಸಂಸ್ಥೆಯು ಪಾಲುದಾರ ಬ್ಯಾಂಕುಗಳನ್ನು ಸಂಪರ್ಕಿಸಬೇಕು. ನಿರ್ದಿಷ್ಟ ವ್ಯಕ್ತಿಗಳ ವಿವರಗಳು ಮತ್ತು ಪಾವತಿ ಮಾಡಬೇಕಿರುವ ಉದ್ದೇಶದೊಂದಿಗೆ ಫಲಾನುಭವಿಗಳಿಗೆ ಮೊಬೈಲ್ ಸಂಖ್ಯೆಯನ್ನು ಗುರುತಿಸಲಾಗುತ್ತದೆ. ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ವಿಷಯವೆಂದರೆ ಒಬ್ಬ ವ್ಯಕ್ತಿಗೆ ಹೆಸರಿಸಿದ ಇ-ವೋಚರ್‌ ಅನ್ನು ಆ ವ್ಯಕ್ತಿಗೆ ಮಾತ್ರ ನೀಡಲಾಗುವುದು.

ಗ್ಯಾಸ್ ಸಿಲಿಂಡರ್ ರೀಫಿಲ್ ಬುಕಿಂಗ್ ಪೋರ್ಟಬಿಲಿಟಿ: ವಿತರಕರನ್ನು ಆಯ್ಕೆ ಮಾಡಿಗ್ಯಾಸ್ ಸಿಲಿಂಡರ್ ರೀಫಿಲ್ ಬುಕಿಂಗ್ ಪೋರ್ಟಬಿಲಿಟಿ: ವಿತರಕರನ್ನು ಆಯ್ಕೆ ಮಾಡಿ

e-RUPI ಎಲ್ಲೆಲ್ಲಿ ಬಳಸಬಹುದು?

e-RUPI ಎಲ್ಲೆಲ್ಲಿ ಬಳಸಬಹುದು?

ಸರ್ಕಾರದ ಪ್ರಕಾರ, ಇ-ಆರ್‌ಯುಪಿಐ ಕಲ್ಯಾಣ ಸೇವೆಗಳ ಪಾವತಿ ಸಮಯದಲ್ಲಿ ಬಳಕೆ ಮಾಡಬಹುದು. ತಾಯಿ ಮತ್ತು ಮಕ್ಕಳ ಕಲ್ಯಾಣ ಯೋಜನೆಗಳು, ಟಿಬಿ ನಿರ್ಮೂಲನೆ ಕಾರ್ಯಕ್ರಮಗಳು, ಔಷಧಗಳು ಮತ್ತು ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ, ರಸಗೊಬ್ಬರ ಸಬ್ಸಿಡಿ ಇತ್ಯಾದಿ ಯೋಜನೆಗಳ ಅಡಿಯಲ್ಲಿ ಸೇವೆಗಳನ್ನು ನೀಡಲು ಸಹ ಇದನ್ನು ಬಳಸಬಹುದು. ಖಾಸಗಿ ವಲಯವೂ ಸಹ ಈ ಡಿಜಿಟಲ್ ವೋಚರ್‌ಗಳನ್ನು ತಮ್ಮ ಉದ್ಯೋಗಿಗಳ ಕಲ್ಯಾಣ ಮತ್ತು ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ ಕಾರ್ಯಕ್ರಮಗಳ ಭಾಗವಾಗಿ ಬಳಸಿಕೊಳ್ಳಬಹುದು.

e-RUPI ಡಿಜಿಟಲ್ ಕರೆನ್ಸಿಗಿಂತ ಹೇಗೆ ಭಿನ್ನವಾಗಿದೆ?

e-RUPI ಡಿಜಿಟಲ್ ಕರೆನ್ಸಿಗಿಂತ ಹೇಗೆ ಭಿನ್ನವಾಗಿದೆ?

ಸರ್ಕಾರವು ಈಗಾಗಲೇ ಆರ್‌ಬಿಐ ಮೂಲಕ ಡಿಜಿಟಲ್ ಕರೆನ್ಸಿಯನ್ನು ಅಭಿವೃದ್ಧಿಪಡಿಸುವ ಕೆಲಸ ಮಾಡುತ್ತಿದೆ ಮತ್ತು e-RUPI ಆರಂಭವು ಡಿಜಿಟಲ್ ಪಾವತಿ ಮೂಲಸೌಕರ್ಯದಲ್ಲಿನ ಅಂತರವನ್ನು ಸಮರ್ಥವಾಗಿ ತೋರಿಸುತ್ತದೆ. ಇದು ಭವಿಷ್ಯದ ಡಿಜಿಟಲ್ ಕರೆನ್ಸಿಯ ಯಶಸ್ಸಿಗೆ ಅಗತ್ಯವಾಗಿರುತ್ತದೆ. e-RUPI ಪಾವತಿ ವ್ಯವಸ್ಥೆಗೆ ಹಾಗೂ ಡಿಜಿಟಲ್ ಕರೆನ್ಸಿಗೆ ಸಾಕಷ್ಟು ಹತ್ತಿರವಾಗಿಸುತ್ತದೆ.

ಭಾರತಕ್ಕೆ ನಿಜಕ್ಕೂ ಡಿಜಿಟಲ್ ಕರೆನ್ಸಿ ಬೇಕೆ?

ಭಾರತಕ್ಕೆ ನಿಜಕ್ಕೂ ಡಿಜಿಟಲ್ ಕರೆನ್ಸಿ ಬೇಕೆ?

ಆರ್‌ಬಿಐ ಪ್ರಕಾರ, ಭಾರತದಲ್ಲಿ ಡಿಜಿಟಲ್ ಕರೆನ್ಸಿಗಳು ಉತ್ತಮವಾಗಿ ಕಾರ್ಯನಿರ್ವಹಿಸಲು ಕನಿಷ್ಠ ಮೂರು ಕಾರಣಗಳಿವೆ: ಒಂದು, ದೇಶದಲ್ಲಿ ಡಿಜಿಟಲ್ ಪಾವತಿಗಳ ಬಳಕೆ ಹೆಚ್ಚುತ್ತಿದೆ. ಎರಡು, ಭಾರತದ ಹೆಚ್ಚಿನ ಕರೆನ್ಸಿ ಮತ್ತು ಜಿಡಿಪಿ ಅನುಪಾತವಾಗಿದೆ. ಮೂರನೆಯದಾಗಿ ಬಿಟ್ ಕಾಯಿನ್ ಮತ್ತು ಎಥೆರಿಯಮ್ ನಂತಹ ಖಾಸಗಿ ವರ್ಚುವಲ್ ಕರೆನ್ಸಿಗಳ ಹರಡುವಿಕೆಯು ಆರ್‌ಬಿಐನ ದೃಷ್ಟಿಯಿಂದ ಮುಖ್ಯವಾಗಲು ಇನ್ನೊಂದು ಕಾರಣವಾಗಿರಬಹುದು.

ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಇ-ವೋಚರ್ ಪ್ರಚಲಿತ

ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಇ-ವೋಚರ್ ಪ್ರಚಲಿತ

ಅಮೆರಿಕಾದಲ್ಲಿ ಎಜುಕೇಶನ್ ವೋಚರ್ ಅಥವಾ ಶಾಲಾ ವೋಚರ್‌ಗಳ ವ್ಯವಸ್ಥೆ ಇದೆ. ಇದು ರಾಜ್ಯ-ಅನುದಾನಿತ ಶಿಕ್ಷಣಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಸರ್ಕಾರದ ಉದ್ದೇಶಿತ ವಿತರಣಾ ವ್ಯವಸ್ಥೆಯ ಉಪಯೋಗದ ಪ್ರಮಾಣಪತ್ರವಾಗಿದೆ. ಇವುಗಳು ಮುಖ್ಯವಾಗಿ ತಮ್ಮ ಮಕ್ಕಳಿಗೆ ಶಿಕ್ಷಣ ನೀಡುವ ನಿರ್ದಿಷ್ಟ ಉದ್ದೇಶಕ್ಕಾಗಿ ವಿದ್ಯಾರ್ಥಿಗಳ ಪೋಷಕರಿಗೆ ನೇರವಾಗಿ ನೀಡುವ ಸಬ್ಸಿಡಿಗಳಾಗಿವೆ. ಯುಎಸ್ ಜೊತೆಗೆ, ಶಾಲಾ ವೋಚರ್ ವ್ಯವಸ್ಥೆಯನ್ನು ಕೊಲಂಬಿಯಾ, ಚಿಲಿ, ಸ್ವೀಡನ್, ಹಾಂಗ್ ಕಾಂಗ್, ಇತ್ಯಾದಿ ಇತರ ಹಲವು ದೇಶಗಳಲ್ಲಿ ಬಳಸಲಾಗಿದೆ.

English summary

What is e-RUPI? How to use it?? The List of banks live with this new payment option

Taking the first step towards having a digital currency in the country, Prime Minister Narendra Modi will launch an electronic voucher based digital payment system
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X