For Quick Alerts
ALLOW NOTIFICATIONS  
For Daily Alerts

ವಾಟ್ಸಾಪ್ ಬಳಕೆದಾರರ ಪ್ರಮಾಣ 200 ಕೋಟಿಗೆ ಏರಿಕೆ!

|

ಅತ್ಯಂತ ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸಾಪ್ ಬಳಕೆದಾರರ ಪ್ರಮಾಣ ಮತ್ತಷ್ಟು ಹೆಚ್ಚಾಗಿದ್ದು 200 ಕೋಟಿ ತಲುಪಿದೆ ಎಂದು ಹೇಳಿದೆ.

ಎರಡು ವರ್ಷಗಳ ಹಿಂದೆ 1.5 ಬಿಲಿಯನ್‌ನಷ್ಟಿದ್ದ ವಾಟ್ಸಾಪ್ ಬಳಕೆದಾರರು ಇದೀಗ ಎರಡು ಬಿಲಿಯನ್‌ನಷ್ಟು ಆಗಿದ್ದಾರೆ ಎಂದು ಫೇಸ್‌ಬುಕ್‌ ಮಾಲೀಕತ್ವದ ವಾಟ್ಸಾಪ್ ತಿಳಿಸಿದೆ. ಇಷ್ಟಾದರೂ ಇದು ಜಾಹೀರಾತುಗಳಿಂದ ಮುಕ್ತವಾಗಿ ಉಳಿದಿದೆ ಮತ್ತು ಅದರ ಬಳಕೆದಾರರಿಗೆ ಯಾವುದೇ ಶುಲ್ಕವನ್ನು ವಿಧಿಸುವುದಿಲ್ಲ.

ವಾಟ್ಸಾಪ್ ಬಳಕೆದಾರರ ಪ್ರಮಾಣ 200 ಕೋಟಿಗೆ ಏರಿಕೆ!

ಫೇಸ್‌ಬುಕ್ ಹೊರತುಪಡಿಸಿ ವಾಟ್ಸಾಪ್ ಅತಿ ಹೆಚ್ಚು ಬಳಕೆದಾರರನ್ನು ಹೊಂದಿದೆ. (ಫೇಸ್‌ಬುಕ್ 2.5 ಬಿಲಿಯನ್ ಬಳಕೆದಾರರನ್ನು ಹೊಂದಿದೆ) . ಜನವರಿಯಲ್ಲಿ ಫೇಸ್‌ಬುಕ್ ತಿಳಿಸಿದಂತೆ ಪ್ರತಿದಿನ 2.26 ಬಿಲಿಯನ್ (226 ಕೋಟಿ) ಬಳಕೆದಾರರು ಫೇಸ್‌ಬುಕ್, ಮೆಸೆಂಜರ್ ಇನ್‌ಸ್ಟಾಗ್ರಾಂ ಅಥವಾ ವಾಟ್ಸಾಪ್ ಮೂಲಕ ಪ್ರತಿದಿನ ಲಾಗ್ ಇನ್ ಆಗುತ್ತಿದ್ದಾರೆ. ಇದು ಕಳೆದ ತ್ರೈಮಾಸಿಕಕ್ಕೆ ಹೋಲಿಸಿದರೆ ಹೆಚ್ಚಾಗಿದ್ದು ಪ್ರತಿ ತಿಂಗಳು 2.89 ಬಿಲಿಯನ್ ಬಳಕೆದಾರರನ್ನು ಕಾಣುತ್ತಿದೆ. ಇದು ವರ್ಷದಿಂದ ವರ್ಷಕ್ಕೆ 9 ಪರ್ಸೆಂಟ್‌ನಷ್ಟು ಹೆಚ್ಚಾಗುತ್ತಿದೆ.

11 ವರ್ಷಗಳ ಹಿಂದೆ ಸ್ಥಾಪನೆಯಾದ ವಾಟ್ಸಾಪ್ ಅನ್ನು ಕಳೆದ ಆರು ವರ್ಷಗಳ ಹಿಂದೆ ಫೇಸ್‌ಬುಕ್ 19 ಬಿಲಿಯನ್ ಅಮೆರಿಕನ್ ಡಾಲರ್ ಕೊಟ್ಟು ಖರೀದಿಸಿತು. ಭಾರತವು ವಾಟ್ಸಾಪ್ ಬಳಸುತ್ತಿರುವ ಅತಿದೊಡ್ಡ ಮಾರುಕಟ್ಟೆಯಾಗಿದ್ದು 400 ಮಿಲಿಯನ್ ಬಳಕೆದಾರರನ್ನು ಹೊಂದಿದೆ.

English summary

WhatsApp Reached 2 Billion Users

The most famous messaging app, revealed today it hits 2 billion users across globe
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X