For Quick Alerts
ALLOW NOTIFICATIONS  
For Daily Alerts

ತೈಲ ಕಂಪನಿಗಳು ಸತತ 2ನೇ ದಿನ ಪೆಟ್ರೋಲ್, ಡೀಸೆಲ್ ದರ ಇಳಿಸಲು ಕಾರಣವೇನು?

|

ತೈಲ ಮಾರುಕಟ್ಟೆ ಕಂಪನಿಗಳು (ಒಎಂಸಿಗಳು) ಈ ವರ್ಷದಲ್ಲಿ ಮೊದಲ ಬಾರಿಗೆ ಸತತ ಎರಡನೇ ದಿನ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಕಡಿತಗೊಳಿಸಿವೆ. ಕಳೆದ 6 ತಿಂಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಸ್ಥಿರವಾಗಿ ಏರಿಕೆಯಾಗಿದ್ದು, ಫೆಬ್ರವರಿ 27ರ ಬಳಿಕ ಯಾವುದೇ ಬದಲಾವಣೆ ಆಗಿರಲಿಲ್ಲ.

ಸರ್ಕಾರಿ ಸ್ವಾಮ್ಯದ ತೈಲ ಸಂಸ್ಥೆಗಳು ಗುರುವಾರ ಪೆಟ್ರೋಲ್ ಬೆಲೆಯನ್ನು ಲೀಟರ್‌ಗೆ 21 ಪೈಸೆ ಇಳಿಕೆ ಮಾಡಿದ್ದು, ನವದೆಹಲಿಯಲ್ಲಿ 90.78 ರೂಪಾಯಿಗೆ ತಲುಪಿದೆ. ಡೀಸೆಲ್ ಬೆಲೆ ಲೀಟರ್‌ಗೆ 20 ಪೈಸೆ ಕುಸಿದು 81.10 ರೂಪಾಯಿ ದಾಖಲಾಗಿದೆ. ಮಾರ್ಚ್ ಆರಂಭದಲ್ಲಿ ಬ್ರೆಂಟ್ ಕಚ್ಚಾ ತೈಲ ಬೆಲೆ ಬ್ಯಾರೆಲ್‌ಗೆ 70 ಡಾಲರ್ ಗರಿಷ್ಠ ಮಟ್ಟದಿಂದ ಗುರುವಾರ 63.5 ಡಾಲರ್‌ಗೆ ಇಳಿದಿದೆ.

ತೈಲ ಬೆಲೆ ಇಳಿಕೆಗೆ ಚುನಾವಣೆಯು ಕಾರಣವಾಯ್ತೆ?

ತೈಲ ಬೆಲೆ ಇಳಿಕೆಗೆ ಚುನಾವಣೆಯು ಕಾರಣವಾಯ್ತೆ?

ಫೆಬ್ರವರಿ 27ರ ಬಳಿಕ ಸತತ 24 ದಿನಗಳು ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಿರಲಿಲ್ಲ. ಈ ಅವಧಿಯಲ್ಲಿ, ಜಾಗತಿಕ ಕಚ್ಚಾ ತೈಲ ಬೆಲೆಗಳಲ್ಲಿ ಸಾಕಷ್ಟು ಏರಿಳಿತ ಕಂಡುಬಂದಿದೆ. ವಾಸ್ತವವಾಗಿ, ಅನೇಕ ರಾಜ್ಯಗಳಲ್ಲಿನ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು, ಒಎಂಸಿ ಇಂಧನ ಬೆಲೆಯಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಿಲ್ಲ ಎಂದೇ ಅಂದಾಜಿಸಲಾಗಿತ್ತು.

ಮುಂದಿನ ದಿನಗಳಲ್ಲಿ ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ ಮತ್ತು ಅಸ್ಸಾಂ ರಾಜ್ಯಗಳಲ್ಲಿ ಚುನಾವಣೆ ನಡೆಯಲಿದೆ. ಹೀಗಾಗಿ ಮುಂಬರುವ ರಾಜ್ಯ ಚುನಾವಣೆಗಳ ಮುಂದಿಟ್ಟಿಕೊಂಡು ಇಂಧನ ಬೆಲೆಗಳು ತಗ್ಗಿಸಲಾಗಿದೆ ಎನ್ನಲಾಗಿದೆ.

 

ಕಚ್ಚಾ ತೈಲ ಬೆಲೆ ಕುಸಿತ

ಕಚ್ಚಾ ತೈಲ ಬೆಲೆ ಕುಸಿತ

ಕಚ್ಚಾ ತೈಲ ಬೆಲೆ ಬ್ಯಾರೆಲ್‌ಗೆ $ 70 ತಲುಪಿದ್ದರಿಂದ ಬೆಲೆ ಬದಲಾವಣೆಗಳ ಮೇಲಿನ ಕಳೆದ 24 ದಿನಗಳ ನಿಷೇಧದಿಂದಾಗಿ ಒಎಂಸಿ ಪ್ರತಿ ಲೀಟರ್‌ಗೆ 2.5 ರಿಂದ 3 ರೂ.ಗಳ ಅಂತರವನ್ನು ಕಳೆದುಕೊಂಡಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಆದರೆ ಇತ್ತೀಚಿನ ಕಚ್ಚಾ ತೈಲ ಬೆಲೆ ಕುಸಿತದೊಂದಿಗೆ, ಒಎಂಸಿ ತೈಲ ಬೆಲೆ ಇಳಿಕೆಗೆ ಮುಂದಾಗಿದೆ.

ಅಬಕಾರಿ ಸುಂಕದಲ್ಲಿ ಬದಲಾವಣೆ ಇಲ್ಲ

ಅಬಕಾರಿ ಸುಂಕದಲ್ಲಿ ಬದಲಾವಣೆ ಇಲ್ಲ

2021ರಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕದಲ್ಲಿ ಕೇಂದ್ರ ಸರ್ಕಾರ ಇನ್ನೂ ಯಾವುದೇ ಬದಲಾವಣೆಗಳನ್ನು ಮಾಡಿಲ್ಲ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಇನ್ನೂ ದಾಖಲೆಯ ಗರಿಷ್ಠ ಮಟ್ಟದಲ್ಲಿದೆ. ಕೊರೊನಾ ಅವಧಿಯಲ್ಲಿ ಆದಾಯವನ್ನು ಹೆಚ್ಚಿಸಲು ಸರ್ಕಾರವು ಇಂಧನದ ಮೇಲಿನ ಅಬಕಾರಿ ಸುಂಕವನ್ನು ಹೆಚ್ಚಿಸಿತ್ತು. ಕಳೆದ ವರ್ಷ ಕೇಂದ್ರ ಸರ್ಕಾರ ಪೆಟ್ರೋಲ್ ಮೇಲಿನ ತೆರಿಗೆಯನ್ನು 13 ರೂ ಮತ್ತು ಡೀಸೆಲ್ ಮೇಲಿನ ತೆರಿಗೆಯನ್ನು ಲೀಟರ್‌ಗೆ 16 ರೂ. ಏರಿಕೆ ಮಾಡಿತ್ತು.

ತೆರಿಗೆಯನ್ನು ಹಿಂಪಡೆದ ರಾಜ್ಯಗಳು

ತೆರಿಗೆಯನ್ನು ಹಿಂಪಡೆದ ರಾಜ್ಯಗಳು

ಚುನಾವಣೆಯ ದೃಷ್ಟಿಯಿಂದ ಫೆಬ್ರವರಿಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ರಾಜ್ಯ ತೆರಿಗೆ ಹಿಂಪಡೆದುಕೊಳ್ಳಲಾಗಿದೆ. ಪಶ್ಚಿಮ ಬಂಗಾಳ, ಅಸ್ಸಾಂ, ರಾಜಸ್ಥಾನ ಮತ್ತು ಮೇಘಾಲಯ ತೆರಿಗೆಯನ್ನು ಕಡಿತಗೊಳಿಸಿವೆ. ಜೊತೆಗೆ ಯುರೋಪ್‌ನಲ್ಲಿ ಕೋವಿಡ್-19 ನಿಷೇಧ ಮತ್ತು ಅಮೆರಿಕಾದಲ್ಲಿ ಕಚ್ಚಾ ತೈಲ ಉತ್ಪಾದನೆಯ ಹೆಚ್ಚಳವು ಸಹ ತೈಲ ಬೆಲೆ ಕುಸಿತಕ್ಕೆ ಕಾರಣವಾಗಿದೆ.

English summary

Why Are Oil Companies Cutting Petrol And Diesel Prices Now

Here the reasons why the oil companies on Thursday cut petrol and diesel Prices for second consecutive day after a near 6 month period
Story first published: Thursday, March 25, 2021, 19:00 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X