For Quick Alerts
ALLOW NOTIFICATIONS  
For Daily Alerts

ಜಾಗತಿಕವಾಗಿ ನಿಜಕ್ಕೂ ವಿದ್ಯುತ್‌ ಕೊರತೆ ಹೆಚ್ಚಿದೆಯೇ? ಹಾಗಿದ್ರೆ ಈ ಸಮಸ್ಯೆಗೆ ಕಾರಣಗಳೇನು?

|

ಸದ್ಯ ಜಾಗತಿಕ ಮಟ್ಟದಲ್ಲಿ ದೊಡ್ಡ ಮಟ್ಟಿನ ಚರ್ಚೆಗೆ ಕಾರಣವಾಗಿರುವುದು ವಿದ್ಯುತ್ ಕೊರತೆ. ಯುರೋಪ್‌ನಿಂದ ಹಿಡಿದು ಏಷ್ಯಾದವರೆಗೆ ವಿದ್ಯುತ್‌ ಕೊರತೆಯಿದೆ ಎಂದು ಚರ್ಚೆಯಾಗುತ್ತಿದೆ. ಚೀನಾ ಈಗಾಗಲೇ ಇಂತಿಷ್ಟೇ ವಿದ್ಯುತ್ ಬಳಕೆ ಮಾಡಬೇಕು ಎಂದು ನಿಯಮವನ್ನು ರೂಪಿಸಿದ್ದಾಗಿದೆ.

 

ಹಾಗಿದ್ದರೆ, ಇಷ್ಟು ದೊಡ್ಡ ಮಟ್ಟಿನ ವಿದ್ಯುತ್‌ ಸಮಸ್ಯೆ ನಿಜಕ್ಕೂ ಸೃಷ್ಟಿಯಾಗಿದೆಯೇ? ಕೊರತೆಯೇ ಆಗಿದ್ದರೆ ಅದಕ್ಕೆ ಕಾರಣವಾದ್ರೂ ಏನು? ವಿಶ್ವದ ಅಗ್ರ ಉತ್ಪಾದಕರು ಪೂರೈಕೆ ನಿರ್ಬಂಧಗಳನ್ನ ಎದುರಿಸಿದ್ದಾರೆಯೇ? ಹೀಗೆ ನಾನಾ ಪ್ರಶ್ನೆಗಳು ಚರ್ಚೆಗೆ ಎಡೆಮಾಡಿದೆ. ಇದರ ಜೊತೆಗೆ ಈ ಸಮಸ್ಯೆಯು ಕಾರ್ಖಾನೆ ಮುಚ್ಚಲು, ವಿದ್ಯುತ್ ಬಿಲ್‌ ಹೆಚ್ಚಳಕ್ಕೂ ದಾರಿ ಮಾಡಿಕೊಟ್ಟಿದೆ.

ಆರ್ಥಿಕ ಚೇತರಿಕೆಗೆ ದೊಡ್ಡ ಹೊಡೆತ

ಆರ್ಥಿಕ ಚೇತರಿಕೆಗೆ ದೊಡ್ಡ ಹೊಡೆತ

ವಿದ್ಯುತ್ ಕೊರತೆ ಉಂಟಾಗಲು ಪ್ರಮುಖ ಕಾರಣಗಳು ಗ್ರಾಹಕರ ಬೇಡಿಕೆ ಹೆಚ್ಚಳ, ತಾಂತ್ರಿಕ ಸಮಸ್ಯೆಗಳು, ಹೂಡಿಕೆ ಕೊರತೆ , ಉತ್ಪಾದನಾ ರಾಷ್ಟ್ರಗಳಲ್ಲಿನ ನಿರ್ಬಂಧವಾಗಿರುತ್ತದೆ. ಈ ಬಿಕ್ಕಟ್ಟು ಕೇವಲ ಉತ್ಪಾದನಾ ರಾಷ್ಟ್ರವಲ್ಲದೆ ಇತರೆ ಹೆಚ್ಚಿನ ರಾಷ್ಟ್ರಗಳಿಗೂ ಪರಿಣಾಮ ಬೀರುತ್ತದೆ. ಅದರಲ್ಲೂ ಕೋವಿಡ್-19 ಸಮಸ್ಯೆಯಿಂದ ಈಗ ತಾನೇ ಚೇತರಿಕೆ ಕಾಣುತ್ತಿರುವ ಜಾಗತಿಕ ಆರ್ಥಿಕತೆ ಮೇಲೂ ಪರಿಣಾಮ ಬೀರಲಿದೆ.

ಚೀನಾದಲ್ಲಿ ಪರಿಸ್ಥಿತಿ ಬಿಗಡಾಯಿಸಿದೆ!

ಚೀನಾದಲ್ಲಿ ಪರಿಸ್ಥಿತಿ ಬಿಗಡಾಯಿಸಿದೆ!

ಹೌದು, ಚೀನಾದಲ್ಲಿ ಗಗನಕ್ಕೇರಿರುವ ಕಲ್ಲಿದ್ದಲಿನ ಬೆಲೆಯ ಜೊತೆಗೆ ವಿದ್ಯುತ್ ಕೊರತೆಯ ಪರಿಸ್ಥಿತಿ ಬಿಗಡಾಯಿಸಿದೆ. ಈಗಾಗಲೇ ವಿದ್ಯುತ್ ಬಳಕೆ ಮೇಲೆ ಮಿತಿ ಹೇರಲಾಗಿದ್ದು, ಏರ್‌ ಕಂಡೀಷನರ್, ಎಲಿವೇಟರ್‌ಗಳ ಬಳಕೆಗೆ ನಿರ್ಬಂಧ ಹೇರಲಾಗಿದೆ. ಅಷ್ಟೇ ಏಕೆ ಕೈಗಾರಿಕೆ ಹಬ್ ಆಗಿರುವ ಗ್ವಾಂಡಾಂಗ್ ಸೇರಿದಂತೆ ಹಲವು ಪ್ರಾಂತ್ಯಗಳಲ್ಲಿ ಕಡಿಮೆ ವಿದ್ಯುತ್ ಬಳಕೆಗೆ ಸೂಚಿಸಲಾಗಿದೆ.

ಬಹುವರ್ಷಗಳ ಗರಿಷ್ಠ ಮಟ್ಟಕ್ಕೇರಿದೆ ಕಲ್ಲಿದ್ದಲಿನ ಬೆಲೆ
 

ಬಹುವರ್ಷಗಳ ಗರಿಷ್ಠ ಮಟ್ಟಕ್ಕೇರಿದೆ ಕಲ್ಲಿದ್ದಲಿನ ಬೆಲೆ

ಕಾರ್ಖಾನೆಗಳು ಮತ್ತು ಮನೆಗಳಲ್ಲಿ ಬಳಸಲಾಗುವ ನೈಸರ್ಗಿಕ ಅನಿಲ ಮತ್ತು ಕಲ್ಲಿದ್ದಲಿನ ಬೆಲೆಯು ಬಹು-ವರ್ಷಗಳ ಗರಿಷ್ಠ ಮಟ್ಟಕ್ಕೆ ಏರಿದೆ. ಉತ್ತರ ಗೋಳಾರ್ಧದ ಚಳಿಗಾಲದಲ್ಲಿ ಸಾಂಕ್ರಾಮಿಕ ನಂತರದ ಕೋವಿಡ್‌ ಅಲೆಯು ಪೂರೈಕೆ ನಿರ್ಬಂಧಗಳೊಂದಿಗೆ ಘರ್ಷಿಸುತ್ತಿದೆ.

ಯೂರೋಪ್‌ನಾದ್ಯಂತ ಇಂಧನ ಬಿಕ್ಕಟ್ಟು

ಯೂರೋಪ್‌ನಾದ್ಯಂತ ಇಂಧನ ಬಿಕ್ಕಟ್ಟು

ಹೌದು ಯುರೋಪಿನ ಕೆಲವು ರಸಗೊಬ್ಬರ ಉತ್ಪಾದಕರನ್ನು ಉತ್ಪಾದನೆಯನ್ನು ಕಡಿಮೆ ಮಾಡಲು ಇಂಧನ ಬಿಕ್ಕಟ್ಟು ಒತ್ತಾಯಿಸಿದೆ. ನಿಧಾನ ಗತಿಯ ನೈಸರ್ಗಿಕ ಅನಿಲ ಪೂರೈಕೆ ಮತ್ತು ಹೆಚ್ಚುತ್ತಿರುವ ಬೆಲೆಗಳು ಇದಕ್ಕೆ ಕಾರಣವಾಗಿದೆ. ಇತ್ತೀಚಿನ ತಿಂಗಳಲ್ಲಿ ವಿಂಡ್ ಟರ್ಬೈನ್​ಗಳಿಂದ ವಿದ್ಯುತ್ ಉತ್ಪಾದನೆ ಕಡಿಮೆ ಆಗಿರುವುದರಿಂದ ವಿದ್ಯುತ್​ ಪೂರೈಕೆ ಮೇಲೆ ಪರಿಣಾಮ ಆಗಿದೆ. ಈ ಕಾರಣಕ್ಕೆ ಫಾಸಿಲ್ ಫ್ಯುಯೆಲ್ ಮೇಲಿನ ಅವಲಂಬನೆ ಹೆಚ್ಚಾಗಿದೆ. ಬೇಸಿಗೆಯಲ್ಲಿ ವಿದ್ಯುತ್ ಬಳಕೆ ಹೆಚ್ಚಾದಂತೆ, ನೈಸರ್ಗಿಕ ಅನಿಲ ದಾಸ್ತಾನಿನ ಪ್ರಮಾಣ ಐತಿಹಾಸಿಕ ಕನಿಷ್ಠ ಮಟ್ಟಕ್ಕೆ ಕುಸಿದಿದೆ.

ಚೀನಾದಿಂದ ಸರಬರಾಜು ತಡೆ?

ಚೀನಾದಿಂದ ಸರಬರಾಜು ತಡೆ?

ಚೀನಾದ ಪವರ್ ಗ್ರಿಡ್‌ಗಳು ಕಾರ್ಖಾನೆಗಳಿಗೆ ಹೆಚ್ಚಿನ ಇಂಧನ ಸರಬರಾಜು ಮಾಡುತ್ತವೆ. ಆದರೆ ಚೀನಾದಲ್ಲಿ ಹೆಚ್ಚಿನ ವಿದ್ಯುತ್ ಸಮಸ್ಯೆಯು ಸರಬರಾಜನ್ನು ತಡೆಯುತ್ತಿದೆ. ಆತಂಕಕಾರಿ ವಿಷಯವೆಂದರೆ ಅದು ಇನ್ನೂ ತಣ್ಣಗಿಲ್ಲ. ಚಳಿಯ ಉಷ್ಣತೆಯು ಬೇಡಿಕೆಯನ್ನು ಹೆಚ್ಚಿಸಿದಾಗ ಶಕ್ತಿಯ ಬಳಕೆ ಸಾಮಾನ್ಯವಾಗಿ ಉತ್ತುಂಗಕ್ಕೇರುತ್ತದೆ.

ಈಗಾಗಲೇ, ಚೀನಾವು ಆಕಾಶದ ಎತ್ತರಕ್ಕೆ ಸಾಗಿರುವ ಕಲ್ಲಿದ್ದಲು ಬೆಲೆಯನ್ನು ತಣ್ಣಗಾಗಿಸಲು ಮತ್ತು ತನ್ನದೇ ಆದ ವಿದ್ಯುತ್ ಕೊರತೆಯನ್ನು ತಗ್ಗಿಸಲು ಕ್ರಮಗಳನ್ನು ತೆಗೆದುಕೊಳ್ಳಲು ನೋಡುತ್ತಿದೆ. ಆದರೆ ಪ್ರಪಂಚದಾದ್ಯಂತದ ಉಪಯುಕ್ತತೆಗಳು ಹೆಚ್ಚಿನ ಇಂಧನ ಪೂರೈಕೆಗಳನ್ನು ಪಡೆಯಲು ಪ್ರಯತ್ನಿಸುತ್ತಿವೆ.

 

ಚೀನಾ ಬಿಟ್ಟ ಬಾಣವೇ ಇದೀಗ ತಿರುಗುಬಾಣವಾಗಿದೆ!

ಚೀನಾ ಬಿಟ್ಟ ಬಾಣವೇ ಇದೀಗ ತಿರುಗುಬಾಣವಾಗಿದೆ!

ಚೀನಾ ದೇಶದ ಪಾಲಿಗೆ ಸದ್ಯ ಅದು ಹಾಕಿಕೊಂಡಿರುವ ನಿಯಂತ್ರಣದ ಗೆರೆಯೇ ಇದೀಗ ಇಂಧನ ಬಿಕ್ಕಟ್ಟಿಗೆ ಕಾರಣ ಆಗಿದೆ. ಚೀನಾ ದೇಶದಲ್ಲಿ ಮೂರನೇ ಎರಡರಷ್ಟು ವಿದ್ಯುತ್ ಅನ್ನು ಕಲ್ಲಿದ್ದಲು ಉರಿಸುವುದರಿಂದ ಉತ್ಪಾದಿಸಲಾಗುತ್ತದೆ. ಇನ್ನು ಯುರೋಪಿಯನ್ ಒಕ್ಕೂಟವು 2050ರೊಳಗೆ ಕಾರ್ಬನ್ ನ್ಯೂಟ್ರಲ್ ಆಗುವ ಗುರಿ ಹಾಕಿಕೊಂಡಿದೆ. ಹಸಿರುಮನೆ ಅನಿಲ ಹೊರಸೂಸುವಿಕೆಯನ್ನು 2005ಕ್ಕೆ ಹೋಲಿಸಿದಲ್ಲಿ 2030ನೇ ಇಸವಿ ಹೊತ್ತಿಗೆ ಶೇ 55ರಷ್ಟು ಇಳಿಕೆ ಮಾಡಲು ಗುರಿ ಹಾಕಿಕೊಂಡಿದೆ.

ಹೀಗಾಗಿ ಯುರೋಪ್​ ಖಂಡದಾದ್ಯಂತ ಕಲ್ಲಿದ್ದಲು ಬಳಕೆ ಮೇಲಿನ ಅವಲಂಬನೆಯನ್ನು ಗಣನೀಯವಾಗಿ ಕಡಿಮೆ ಮಾಡಿಕೊಂಡು ಬರಲಾಗುತ್ತಿದೆ. ಹಾಗೂ ಹಸಿರು ಇಂಧನ ಮೂಲದ ಬಳಕೆ ಹೆಚ್ಚು ಮಾಡಿಕೊಂಡು ಬರಲಾಗುತ್ತಿದೆ. ಅಂದರೆ ಸೌರಶಕ್ತಿ, ವಾಯು ಶಕ್ತಿ ಮೂಲಕ ಹಾಗೂ ನೈಸರ್ಗಿಕ ಅನಿಲಗಳ ಮೂಲಕ ವಿದ್ಯುತ್ ಉತ್ಪಾದನೆ ಮಾಡಲು ಯೋಜಿಸಲಾಗಿದೆ.

ಇದರ ಜೊತೆಗೆ ಚೀನಾದ ದಕ್ಷಿಣ ಭಾಗದಲ್ಲಿ ಜಲವಿದ್ಯುತ್ ಘಟಕಗಳಲ್ಲಿನ ಉತ್ಪಾದನೆ ಕಡಿಮೆ ಆಗಿದೆ. ಇನ್ನು ಯುರೋಪ್​ನಲ್ಲಿ ವಿಂಡ್​ ಟರ್ಬೈನ್​ನಿಂದ ವಿದ್ಯುತ್ ಉತ್ಪಾದನೆ ಸಮರ್ಪಕ ಪ್ರಮಾಣದಲ್ಲಿ ಆಗದಿರುವುದು ಸಹ ವಿದ್ಯುತ್ ಬಿಕ್ಕಟ್ಟು ಸೃಷ್ಟಿಸಿದೆ.

 

ಚಳಿಗಾಲದಲ್ಲಿ ವಿದ್ಯುತ್ ಬೇಡಿಕೆ ಹೆಚ್ಚಳ

ಚಳಿಗಾಲದಲ್ಲಿ ವಿದ್ಯುತ್ ಬೇಡಿಕೆ ಹೆಚ್ಚಳ

ಉತ್ತರ ಗೋಳಾರ್ಧದಲ್ಲಿ ಸಾಮಾನ್ಯವಾಗಿ ಶೀತ ಚಳಿಗಾಲದ ಸಮಯದಲ್ಲಿ ವಿದ್ಯುತ್ ಕೊರತೆ ಹೆಚ್ಚಾಗುತ್ತದೆ. ಜೊತೆಗೆ ಪ್ರಪಂಚದಾದ್ಯಂತ ವಿದ್ಯುತ್‌ ಬೆಲೆಯನ್ನು ಹೆಚ್ಚಿಸುತ್ತದೆ. ಪ್ರಪಂಚವು ಇಂಧನ ಮತ್ತು ವಿದ್ಯುಚ್ಛಕ್ತಿಯ ಮೇಲೆ ಕಾರ್ಯನಿರ್ವಹಿಸುತ್ತಿರುವುದರಿಂದ, ವಿದ್ಯುತ್ ಬಿಕ್ಕಟ್ಟು ಜಾಗತಿಕ ಆರ್ಥಿಕತೆಯ ಪ್ರತಿಯೊಂದು ಮೂಲೆಯನ್ನು ಮುಟ್ಟುವ ಬೆದರಿಕೆಯನ್ನು ನೀಡುತ್ತದೆ. ಇದರ ಜೊತೆಗೆ ಪೂರೈಕೆ ಸರಪಳಿಗಳನ್ನು ಹಿಸುಕುತ್ತದೆ ಮತ್ತು ಆಹಾರದ ಬೆಲೆಯನ್ನು ಕೂಡ ಹೆಚ್ಚಿಸುತ್ತದೆ, ಇವೆಲ್ಲವೂ ಹಣದುಬ್ಬರದ ಏರಿಕೆಗೆ ಕಾರಣವಾಗುತ್ತದೆ. ಇಷ್ಟೇ ಅಲ್ಲದೆ ಅನೇಕ ಕಾರ್ಖಾನೆ ಮುಚ್ಚುವುದಕ್ಕೂ ಇದು ಕಾರಣವಾಗಬಹುದು. ಸಾರ್ವಜನಿಕರ ಮೇಲೂ ಹೊರೆಯನ್ನು ಹೆಚ್ಚಿಸಬಹುದು.

ಉದಾಹರಣೆಗೆ: ಬ್ರೆಜಿಲ್‌ನಲ್ಲಿನ ಕಡಿಮೆ ಜಲವಿದ್ಯುತ್ ಉತ್ಪಾದನೆಯು , ಬೆಲೆಬಾಳುವ ನೈಸರ್ಗಿಕ ಅನಿಲದ ಅವಲಂಬನೆಯನ್ನು ಹೆಚ್ಚಿಸಲು ಒತ್ತಾಯಿಸಿದೆ. ಇದರ ಜೊತೆಗೆ ಮನೆಗಳಿಗೆ ವಿದ್ಯುತ್ ಬಿಲ್‌ಗಳನ್ನು ಹೆಚ್ಚಿಸುತ್ತದೆ.

 

Read more about: china ಚೀನಾ
English summary

Why Is Everyone Talking About a Global Power Shortage? Explained in kannada

There is a worrying shortage of energy from Europe to Asia, caused by supply restraints from the world’s top producers. Why Is Everyone Talking About a Global Power Shortage? Explained in kannada
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X