ಜಿಯೋ ಗ್ರಾಹಕರಿಗೆ ಕಾದಿದೆ ಶಾಕಿಂಗ್ ನ್ಯೂಸ್

ಚಾಲನೆಗೆ ಬಂದ ಕೆಲವೇ ತಿಂಗಳುಗಳಲ್ಲಿ ಆಕರ್ಷಕ ಯೋಜನೆಗಳ ಮೂಲಕ ಗ್ರಾಹಕರನ್ನು ಸೆಳೆದ ಜಿಯೋ ಇದೀಗ ತನ್ನ ಹೊರೆಯನ್ನ ತಗ್ಗಿಸಲು ಗ್ರಾಹಕರಿಗೆ ಶಾಕ್‌ ಕೊಡಲು ರೆಡಿಯಾಗಿದೆ.

ಈಗಾಗಲೇ ದೇಶದ ಬಹುದೊಡ್ಡ ಟೆಲಿಕಾಂ ಸಂಸ್ಥೆಗಳಾದ ಏರ್‌ಟೆಲ್, ವೋಡಾಪೋನ್,ಐಡಿಯಾ ಬಾಕಿ ಮೊತ್ತವನ್ನು ಹಿಂದಿರುಗಿಸಲು ಗ್ರಾಹಕರಿಗೆ ಬರೆ ಎಳೆಯಲು ಮುಂದಾಗಿವೆ. ಸುಪ್ರೀಂಕೋರ್ಟ್ ತೀರ್ಪಿನ ಪ್ರಕಾರ ಹೊಂದಾಣಿಕೆಯ ಒಟ್ಟು ಆದಾಯ ಕುರಿತಾಗಿ ಏರ್‌ಟೆಲ್ ವೊಡಾಫೋನ್-ಐಡಿಯಾ ಸಂಸ್ಥೆಗಳು ಒಟ್ಟಾರೆ 92,000 ಕೋಟಿ ರುಪಾಯಿಯಷ್ಟು ಬಾಕಿ ಮೊತ್ತ ಹಾಗೂ ಬಡ್ಡಿ ಹಣವನ್ನು ಪಾವತಿಸಬೇಕಿದೆ.

ಜಿಯೋ ಗ್ರಾಹಕರಿಗೆ ಕಾದಿದೆ ಶಾಕಿಂಗ್ ನ್ಯೂಸ್

ಈ ಬೃಹತ್ ಪ್ರಮಾಣದ ಬಾಕಿ ಹಿಂದುರಿಗಿಸಲು ಹಾಗೂ ನಷ್ಟದ ಪ್ರಮಾಣವನ್ನು ತಗ್ಗಿಸಲು ಕರೆ ಮತ್ತು ಡೇಟಾ ಶುಲ್ಕವನ್ನು ಹೆಚ್ಚಿಸಲು ಏರ್‌ಟೆಲ್, ಐಡಿಯಾ,ವೊಡಾಫೋನ್ ಘೋಷಿಸಿದ್ದಾಗಿದೆ. ಡಿಸೆಂಬರ್‌ನಿಂದ ಹೊಸ ದರ ಅನ್ವಯಿಸಲಿದೆ.

ಇದೇ ಹಾದಿಯಲ್ಲಿ ಸಾಗುವ ಯೋಜನೆ ಹಾಕಿರುವ ಜಿಯೋ, ಏರ್‌ಟೆಲ್, ವೊಡಾಫೋನ್ ಕಂಪನಿಗಳು ಕರೆ ಹಾಗೂ ಡೇಟಾ ಬಳಕೆಗೆ ಹೊಸ ದರ ಘೋಷಣೆ ಬಳಿಕವಷ್ಟೇ ಜಿಯೋ ಕೂಡ ದರ ಏರಿಸುವ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಿದೆ. ಮುಂದಿನ ಕೆಲವು ವಾರಗಳಲ್ಲಿ ದರ ಏರಿಕೆ ಖಚಿತ ಎಂದು ಜಿಯೋ ಕಂಪನಿ ಹೇಳಿದೆ.

ಈಗಾಗಲೇ ಸಂಪೂರ್ಣ ಉಚಿತವಿದ್ದ ವಾಯ್ಸ್ ಕರೆಗಳಿಗೆ ಅಕ್ಟೋಬರ್‌ನಿಂದ ನಿಮಿಷಕ್ಕೆ 6 ಪೈಸೆಯಂತೆ ಶುಲ್ಕ ಅನ್ವಯವಾಗಿದೆ. ಜಿಯೋ ಹೊರತುಪಡಿಸಿ ಬೇರೆ ನೆಟ್‌ವರ್ಕ್‌ಗೆ ಕರೆ ಮಾಡಿದರೆ ಪ್ರತಿ ನಿಮಿಷಕ್ಕೆ 6 ಪೈಸೆ ದರ ಪಾವತಿಸಬೇಕಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+