For Quick Alerts
ALLOW NOTIFICATIONS  
For Daily Alerts

ವಿಪ್ರೋ Q3 ಫಲಿತಾಂಶ: ನಿವ್ವಳ ಲಾಭ ಶೇ.3ರಷ್ಟು ಏರಿಕೆ

|

ಪ್ರಸ್ತುತ ಹಲವಾರು ಸಂಸ್ಥೆಗಳು ತಮ್ಮ ತ್ರೈಮಾಸಿಕ ನಿವ್ವಳ ಆದಾಯದ ವರದಿಯನ್ನು ಬಿಡುಗಡೆ ಮಾಡುತ್ತಿದೆ. ವಿಪ್ರೋ ಜನವರಿ 13ರಂದು ಡಿಸೆಂಬರ್‌ನಲ್ಲಿ ಅಂತ್ಯವಾದ ಮೂರನೇ ತ್ರೈಮಾಸಿಕದ ನಿವ್ವಳ ಆದಾಯವನ್ನು ಬಿಡುಗಡೆ ಮಾಡಿದ್ದು, ಸಂಸ್ಥೆಯ ನಿವ್ವಳ ಆದಾಯ ಶೇಕಡ 3ರಷ್ಟು ಹೆಚ್ಚಳವಾಗಿದೆ. ಅಂದಾಜಿಗೆ ಸಮವಾಗಿ ನಿವ್ವಳ ಆದಾಯ ಲಭಿಸಿದೆ.

ವರದಿಯ ಪ್ರಕಾರ ವಿಪ್ರೋ ಸಂಸ್ಥೆಯ ನಿವ್ವಳ ಆದಾಯ ಮೂರನೇ ತ್ರೈಮಾಸಿಕದಲ್ಲಿ ಶೇಕಡ 3ರಷ್ಟು ಏರಿಕೆಯಾಗಿದ್ದು 3052.9 ಕೋಟಿ ರೂಪಾಯಿಗೆ ತಲುಪಿದೆ. ಕಳೆದ ವರ್ಷ ಮೂರನೇ ತ್ರೈಮಾಸಿಕದಲ್ಲಿ ವಿಪ್ರೋ ಸಂಸ್ಥೆಯ ನಿವ್ವಳ ಆದಾಯವು 2969 ಕೋಟಿ ರೂಪಾಯಿ ಆಗಿತ್ತು. ಇದರ ಲೆಕ್ಕಾಚಾರವನ್ನು ನೋಡಿದಾಗ ವಿಪ್ರೋ ಈ ವರ್ಷ ಲಾಭವನ್ನು ಹೆಚ್ಚಿಸಿದೆ.

ವಿಪ್ರೋ Q1: ನಿವ್ವಳ ಲಾಭ ಕುಸಿತ, FY23 ರಲ್ಲಿ 38,000 ಫ್ರೆಶರ್ಸ್ ನೇಮಕವಿಪ್ರೋ Q1: ನಿವ್ವಳ ಲಾಭ ಕುಸಿತ, FY23 ರಲ್ಲಿ 38,000 ಫ್ರೆಶರ್ಸ್ ನೇಮಕ

ಆದಾಯವು 23,229 ಕೋಟಿ ರೂಪಾಯಿ ಆಗಿದ್ದು ಶೇಕಡ 14.35ರಷ್ಟು ಏರಿಕೆಯಾಗಿದೆ. ಕಳೆದ ವರ್ಷ ಇದೇ ತ್ರೈಮಾಸಿಕದಲ್ಲಿ ವಿಪ್ರೋ ಆದಾಯವು 20,313.6 ಕೋಟಿ ರೂಪಾಯಿ ಆಗಿತ್ತು. ವರ್ಷದಿಂದ ವರ್ಷಕ್ಕೆ ಶೇಕಡ 14.7ರಷ್ಟು ಏರಿಕೆಯಾಗಿ 23,436ಕ ಕೋಟಿ ರೂಪಾಯಿ ಆದಾಯ ಲಭ್ಯವಾಗುವ ನಿರೀಕ್ಷೆಯಿತ್ತು.

 ವಿಪ್ರೋ Q3 ಫಲಿತಾಂಶ: ನಿವ್ವಳ ಲಾಭ ಶೇ.3ರಷ್ಟು ಏರಿಕೆ

ಅಂದಾಜಿಗಿಂತ ಅಧಿಕ ನಿವ್ವಳ ಆದಾಯ

ಈ ಅಂದಾಜಿಗೂ ಅಧಿಕವಾಗಿ ಆದಾಯ ಲಭ್ಯವಾಗಿದೆ. 14.7ರಷ್ಟು ಅಧಿಕ ಲಭ್ಯವಾಗುವ ನಿರೀಕ್ಷೆಯಿತ್ತು. ಆದರೆ ಶೇಕಡ 14.35ರಷ್ಟು ಅಧಿಕ ಆದಾಯ ಲಭ್ಯವಾಗಿದೆ. ಇನ್ನು ನಿವ್ವಳ ಆದಾಯವು 2,952 ಕೋಟಿ ರೂಪಾಯಿ ಲಭ್ಯವಾಗುವ ನಿರೀಕ್ಷೆಯಿತ್ತು. ಆದರೆ ನಿವ್ವಳ ಆದಾಯವು 3052.9 ಕೋಟಿ ರೂಪಾಯಿ ಲಭ್ಯವಾಗಿದೆ.

ಭಾರತದ ಐಟಿ ಕ್ಷೇತ್ರದಲ್ಲೇ ವಿಪ್ರೊ ಸಿಇಒಗೆ ಅಧಿಕ ಸಂಬಳ: ಎಷ್ಟು ಗೊತ್ತಾ!ಭಾರತದ ಐಟಿ ಕ್ಷೇತ್ರದಲ್ಲೇ ವಿಪ್ರೊ ಸಿಇಒಗೆ ಅಧಿಕ ಸಂಬಳ: ಎಷ್ಟು ಗೊತ್ತಾ!

ಇನ್ನು ಮಧ್ಯಂತರ ಡಿವಿಡೆಂಟ್ ಅನ್ನು ಘೋಷಣೆ ಮಾಡಿದೆ. ಪ್ರತಿ ಷೇರಿಗೂ 1 ರೂಪಾಯಿಯಂತೆ ಡಿವಿಡೆಂಟ್ (ಲಾಭ) ಘೋಷಿಸಿದೆ. ಜನವರಿ 25, 2023 ಅನ್ನು ದಾಖಲೆಯ ದಿನವನ್ನಾಗಿ ವಿಪ್ರೋ ನಿರ್ಧಾರ ಮಾಡಿದೆ. ಫೆಬ್ರವರಿ 10, 2023ಕ್ಕೂ ಮುನ್ನ ಅಥವಾ ಅದಕ್ಕೂ ಮುನ್ನವೇ ಪಾವತಿಯನ್ನು ಮಾಡಲಾಗುವುದು ಎಂದು ವಿಪ್ರೋ ತಿಳಿಸಿದೆ.

ಕಳೆದ ವರ್ಷ ವಿಪ್ರೋ ಮೂರನೇ ತ್ರೈಮಾಸಿಕದ ನಿವ್ವಳ ಆದಾಯವು 2,969 ಕೋಟಿ ರೂಪಾಯಿ ಆಗಿದೆ. ಅದಕ್ಕೂ ಹಿಂದಿನ ವರ್ಷದ ನಿವ್ವಳ ಆದಾಯವು 2,968 ಕೋಟಿ ರೂ ಆಗಿತ್ತು. ಒಟ್ಟು ಆದಾಯವು ಶೇಕಡ 30 ರಷ್ಟು ಏರಿಕೆಯಾಗಿ 20,313 ಕೋಟಿ ರೂ. ದಾಖಲಾಗಿದ್ದು, ಹಿಂದಿನ ವರ್ಷ ಈ ಅವಧಿಯ ತ್ರೈಮಾಸಿಕದಲ್ಲಿ15,670 ಕೋಟಿ ರೂ ಗಳಿಸಿತ್ತು.

English summary

Wipro Q3 Results: Net Profit Up 3 Percent to Rs 3,053 Crore, Meets Estimates

Wipro Q3FY Results: Wipro on January 13 reported 2.82 percent growth in consolidated net profit for the quarter ended December 2022 at Rs 3052.9 crore as against Rs 2969 crore recorded a year ago.
Story first published: Friday, January 13, 2023, 17:23 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X