For Quick Alerts
ALLOW NOTIFICATIONS  
For Daily Alerts

ಇದರ ಆಗಮನದೊಂದಿಗೆ ಜಿಯೋದ ಬಂಡವಾಳ ಸಂಗ್ರಹ ಗುರಿ ಪೂರ್ಣಗೊಂಡಿದೆ

|

ಗೂಗಲ್‌ನ ಪ್ರವೇಶದೊಂದಿಗೆ ಜಿಯೋ ಪ್ಲಾಟ್‌ಫಾರ್ಮ್ಸ್‌ನ ಬಂಡವಾಳ ಸಂಗ್ರಹದ ಗುರಿ ಪೂರ್ಣಗೊಂಡಿದೆ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ಹೇಳಿದ್ದಾರೆ.

ರಿಲಯನ್ಸ್ ಈಗ ನಿಜವಾಗಿಯೂ ಶೂನ್ಯ ನಿವ್ವಳ ಸಾಲ ಕಂಪನಿಯಾಗಿದ್ದು, ಇದು ಮಾರ್ಚ್ 2021ರ ನನ್ನ ಗುರಿಗಿಂತ ಮುಂಚಿತವಾಗಿಯೇ ಸಾಧ್ಯವಾಗಿದೆ. ತನ್ನ ಮೂರು ಹೈಪರ್-ಗ್ರೋತ್ ಎಂಜಿನ್‌ಗಳಾದ ಜಿಯೋ, ರಿಟೇಲ್ ಮತ್ತು ಒ2ಸಿಗಳ ಬೆಳವಣಿಗೆಯ ಯೋಜನೆಗಳನ್ನು ಬೆಂಬಲಿಸುವ ಸದೃಢ ಬ್ಯಾಲೆನ್ಸ್ ಶೀಟ್ ಅನ್ನು ಜಿಯೋ ಹೊಂದಿದೆಯೆಂದು ಅವರು ಹೇಳಿದ್ದಾರೆ.

ದಶಕಗಳಿಂದ, ಟಿವಿ ಕಾರ್ಯಕ್ರಮಗಳು ಯಾವುದೇ ಸಂವಾದಾತ್ಮಕತೆಯಿಲ್ಲದೆ ಹೆಚ್ಚಾಗಿ ಪ್ರಸಾರ-ಅವಲಂಬಿತವಾಗಿವೆ. ಜಿಯೋ ಫೈಬರ್‌ನೊಂದಿಗೆ, ನಾವು ಈ ಅನುಭವವನ್ನು ಮರುರೂಪಿಸಿದ್ದೇವೆ ಮತ್ತು ಟಿವಿಗೆ ಸಂವಾದಾತ್ಮಕತೆಯನ್ನು ತಂದಿದ್ದೇವೆ. ಸೆಟ್ ಟಾಪ್ ಬಾಕ್ಸ್‌ನಲ್ಲಿರುವ ಜಿಯೋ ಆಪ್ ಸ್ಟೋರ್ ಮೂಲಕ, ಮನರಂಜನೆ, ಶಿಕ್ಷಣ, ಆರೋಗ್ಯ, ಅಡುಗೆ, ಯೋಗ, ಗೇಮಿಂಗ್, ಧರ್ಮ ಮತ್ತು ಇನ್ನಿತರ ಹಲವು ಪ್ರಕಾರಗಳಲ್ಲಿ ಇಂಟರ್ನೆಟ್ ಅಪ್ಲಿಕೇಶನ್‌ಗಳನ್ನು ಪಡೆಯಬಹುದು ಎಂದು ಅಂಬಾನಿ ಹೇಳಿದ್ದಾರೆ.

ಜಿಯೋ ಗ್ಲಾಸ್
 

ಜಿಯೋ ಗ್ಲಾಸ್

ಜಿಯೋದ ಇತ್ತೀಚಿನ ನಾವೀನ್ಯವಾದ ಜಿಯೋ ಗ್ಲಾಸ್, ತಂತ್ರಜ್ಞಾನದ ಅತ್ಯಾಧುನಿಕ ಹಂತದಲ್ಲಿದೆ. ಬಳಕೆದಾರರಿಗೆ ನಿಜಕ್ಕೂ ಅರ್ಥಪೂರ್ಣವಾದ ತಲ್ಲೀನಗೊಳಿಸುವ ಅನುಭವವನ್ನು ನೀಡಲು ಅತ್ಯುತ್ತಮ-ದರ್ಜೆಯ ಮಿಕ್ಸೆಡ್ ರಿಯಾಲಿಟಿ ಸೇವೆಗಳನ್ನು ಒದಗಿಸುತ್ತದೆ ಎಂದು ಹೇಳಿದ್ದಾರೆ.

ವ್ಯಾಪಾರ ಸಂಸ್ಥೆಗಳನ್ನು ಜಿಯೋ ಸಂಪರ್ಕಿಸಲಿದೆ

ವ್ಯಾಪಾರ ಸಂಸ್ಥೆಗಳನ್ನು ಜಿಯೋ ಸಂಪರ್ಕಿಸಲಿದೆ

ಮುಂದಿನ ಮೂರು ವರ್ಷಗಳಲ್ಲಿ ಅರ್ಧ ಶತಕೋಟಿ ಮೊಬೈಲ್ ಗ್ರಾಹಕರು, ಒಂದು ಶತಕೋಟಿ ಸ್ಮಾರ್ಟ್ ಸೆನ್ಸರ್‌ಗಳು ಮತ್ತು 50 ದಶಲಕ್ಷ ಮನೆ ಮತ್ತು ವ್ಯಾಪಾರ ಸಂಸ್ಥೆಗಳನ್ನು ಜಿಯೋ ಸಂಪರ್ಕಿಸಲಿದೆ ಎಂದು ಮುಖೇಶ್ ಅಂಬಾನಿ ಹೇಳಿದರು. ಮೊಬೈಲ್ ಬ್ರಾಡ್‌ಬ್ಯಾಂಡ್, ಜಿಯೋ ಫೈಬರ್, ಜಿಯೋ ಎಂಟರ್‌ಪ್ರೈಸ್ ಬ್ರಾಡ್‌ಬ್ಯಾಂಡ್, ಎಸ್‌ಎಂಇಗಳಿಗಾಗಿ ಬ್ರಾಡ್‌ಬ್ಯಾಂಡ್, ಮತ್ತು ಜಿಯೋನ ನ್ಯಾರೋಬ್ಯಾಂಡ್ ಇಂಟರ್ನೆಟ್-ಆಫ್-ಥಿಂಗ್ಸ್ (ಎನ್‌ಬಿಐಒಟಿ) ಜೊತೆಗೆ ಡಿಜಿಟಲ್ ಸಂಪರ್ಕ ಬೆಳವಣಿಗೆಯ ಐದು ವೇಗವರ್ಧಕಗಳನ್ನು ನಾವು ಸಂಪೂರ್ಣವಾಗಿ ಪ್ರಾರಂಭಿಸಿದ್ದೇವೆ ಎಂದು ಅವರು ಹೇಳಿದರು.

ಒಂದು ಲಕ್ಷಕ್ಕೂ ಹೆಚ್ಚು ಷೇರುದಾರರು ಏಕಕಾಲದಲ್ಲಿ ಲಾಗಿನ್

ಒಂದು ಲಕ್ಷಕ್ಕೂ ಹೆಚ್ಚು ಷೇರುದಾರರು ಏಕಕಾಲದಲ್ಲಿ ಲಾಗಿನ್

ಆರ್‌ಐಎಲ್ ತನ್ನ ಮೊದಲ ಆನ್‌ಲೈನ್ ಎಜಿಎಂ ಅನ್ನು ನಡೆಸಿದೆ, ಮತ್ತು 500 ಸ್ಥಳಗಳಿಂದ ಒಂದು ಲಕ್ಷಕ್ಕೂ ಹೆಚ್ಚು ಷೇರುದಾರರು ಏಕಕಾಲದಲ್ಲಿ ಲಾಗಿನ್ ಮಾಡಬಹುದಾದ ಹೊಚ್ಚಹೊಸ ವರ್ಚುವಲ್ ಪ್ಲಾಟ್‌ಫಾರ್ಮ್‌ನೊಂದಿಗೆ ಇದು ಮುಂದೆ ಇನ್ನೂ ದೊಡ್ಡ ವ್ಯವಹಾರವಾಗಲಿದೆ ಎನ್ನುವ ಭರವಸೆ ವ್ಯಕ್ತವಾಗಿದೆ. ಲಾಗಿನ್ ಆಗುವ, ಪ್ರಶ್ನೆಗಳನ್ನು ಕೇಳುವ ಮತ್ತು ನಿರ್ಣಯದ ಮೇಲೆ ಮತದಾನ ಮಾಡುವುದನ್ನು ಕುರಿತ ವಿವರಗಳನ್ನು ನೀಡುವ ಮೂಲಕ ತನ್ನ ಷೇರುದಾರರ ಸುಲಭ ಆನ್‌ಬೋರ್ಡಿಂಗ್‌ಗಾಗಿ ವಾಟ್ಸಾಪ್ ಸಂಖ್ಯೆ +91-79771-11111 ಮೂಲಕ ಶೈಕ್ಷಣಿಕ ಚಾಟ್‌ಬಾಟ್ ಅನ್ನು ಆರ್‌ಐಎಲ್ ಪ್ರಾರಂಭಿಸಿದೆ.

ನಿವ್ವಳ ಸಾಲ-ಮುಕ್ತ ಸ್ಥಿತಿಗೆ ತಲುಪುವುದು ಸಾಧ್ಯವಾಗಿದೆ
 

ನಿವ್ವಳ ಸಾಲ-ಮುಕ್ತ ಸ್ಥಿತಿಗೆ ತಲುಪುವುದು ಸಾಧ್ಯವಾಗಿದೆ

ಆರ್‌ಐಎಲ್‌ನ ತಂತ್ರಜ್ಞಾನ ಉದ್ಯಮದಲ್ಲಿ ಮತ್ತು ಅದರ ತೈಲದಿಂದ ರಾಸಾಯನಿಕ (ಒ2ಸಿ) ವ್ಯವಹಾರದಲ್ಲಿ ಷೇರುಗಳನ್ನು ಮಾರಾಟ ಮಾಡುವ ಮೂಲಕ ಮಾರ್ಚ್ 2021ರ ವೇಳೆಗೆ ನಿವ್ವಳ ಸಾಲ ಮುಕ್ತವಾಗುವ ಯೋಜನೆಯನ್ನು ಆಗಸ್ಟ್ 12, 2019ರಂದು ನಡೆದ ಕಳೆದ ಎಜಿಎಂ‌ನಲ್ಲಿ ಅಂಬಾನಿ ಪ್ರಕಟಿಸಿದ್ದರು. ಭಾರತದ ಅತಿ ಕಿರಿಯ ಆದರೆ ಅತ್ಯಂತ ದೊಡ್ಡ ಟೆಲಿಕಾಮ್ ಸಂಸ್ಥೆ ಜಿಯೋ ಇನ್‌ಫೋಕಾಮ್ ಹಾಗೂ ಆಪ್‌ಗಳಿರುವ ಜಿಯೋ ಪ್ಲಾಟ್‌ಫಾರ್ಮ್ಸ್ ಲಿಮಿಟೆಡ್‌ನ ಶೇಕಡಾ 25.24ರಷ್ಟನ್ನು ಫೇಸ್‌ಬುಕ್‌ನಂತಹ ಸಂಸ್ಥೆಗಳಿಗೆ ಮಾರಾಟ ಮಾಡುವ, ಮತ್ತು 53,124 ಕೋಟಿ ರೂ. ಮೊತ್ತದ ದೇಶದ ಅತ್ಯಂತ ದೊಡ್ಡ ರೈಟ್ಸ್ ಇಶ್ಯೂಗಳಿಂದ ದೊರೆತ 1.18 ಲಕ್ಷ ಕೋಟಿ ರೂ.ಗಳಿಂದಾಗಿ ನಿಗದಿತ ಕಾಲಮಿತಿಗೂ ಮೊದಲೇ ನಿವ್ವಳ ಸಾಲ-ಮುಕ್ತ ಸ್ಥಿತಿಗೆ ತಲುಪುವುದು ಸಾಧ್ಯವಾಗಿದೆ.

English summary

RIL AGM 2020: Mukesh Ambani Says Capital Raise Complete, Reliance Will Now Focus on Adding Strategic Partners

With The Entry Of Google The Target Of Geo Platform Fundraising Has Been Completed
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more