For Quick Alerts
ALLOW NOTIFICATIONS  
For Daily Alerts

Work From Home: ಐಟಿ ಕಂಪನಿಗಳ ಪ್ರಯಾಣ ವೆಚ್ಚಗಳು ಗಮನಾರ್ಹ ಇಳಿಕೆ

|

ಕೊರೊನಾವೈರಸ್ ಜಗತ್ತನ್ನು ಯಾರೂ ಊಹಿಸದ ರೀತಿ ಬದಲಾವಣೆ ಮಾಡಿ ಬಿಟ್ಟಿದೆ. ಇದು ಬದಲಾವಣೆಯ ಆರಂಭಿಕ ಹಂತ ಎಂದು ಹೇಳಲಾಗುತ್ತಿದೆ. ಒಟ್ಟಿನಲ್ಲಿ ಇನ್ಮುಂದೆ ಹಿಂದಿನಂತೆ ಎಲ್ಲವೂ ಇರುವುದಿಲ್ಲ ಎಂಬುದು ದಿಟವಾಗಿದೆ.

ಕೊರೊನಾದಿಂದ ಕೆಲವು ಕ್ಷೇತ್ರಗಳಿಗೆ ಕೆಟ್ಟ ಪರಿಣಾಮವೂ ಆಗಿದೆ. ಇನ್ನೂ ಕೆಲವು ಕ್ಷೇತ್ರಗಳಿಗೆ ಸಕಾರಾತ್ಮಕವಾದ ಪರಿಣಾಮವೂ ಆಗಿದೆ. ಹೀಗಾಗಿ ಕೆಲವು ಕ್ಷೇತ್ರಗಳು ಹೊಸ ಹುರುಪಿನೊಂದಿಗೆ ಹೊಸ ಸವಾಲನ್ನು ಮೆಟ್ಟಿ ನಿಂತು ಕೆಲಸ ಮಾಡುತ್ತಿವೆ. ಅದರಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರವೂ ಒಂದು.

ಮಾಹಿತಿ ತಂತ್ರಜ್ಞಾನದ ಕ್ಷೇತ್ರದಲ್ಲಿ ಶೇ 78 ಜನ ವರ್ಕ್ ಪ್ರಮ್ ಹೋಮ್ ಎಂಬ ಕಾನ್ಸೆಪ್ಟ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಐಟಿ ಕ್ಷೇತ್ರಕ್ಕೆ ಇದು ಒಂದು ವರದಾನವೂ ಆಗಿದೆ. ಕಂಪನಿಗಳು ಸಾಕಷ್ಟು ವೆಚ್ಚವನ್ನು ಉಳಿಸಿ, ಉದ್ಯೋಗಿಗಳಿಂದ ಮನೆಯಿಂದಲೇ ಹೆಚ್ಚು ಕೆಲಸವನ್ನು ಮಾಡಿಸಿಕೊಳ್ಳುತ್ತಿವೆ. ಇದರಿಂದ ದೊಡ್ಡ ದೊಡ್ಡ ಮಾಹಿತಿ ತಂತ್ರಜ್ಞಾನ ಸಂಸ್ಥೆಗಳಿಗೆ ಕೋಟ್ಯಾಂತರ ರುಪಾಯಿ ಹಣ ಉಳಿತಾಯವಾಗುತ್ತಿದೆ.

ಆಸಕ್ತಿದಾಯಕ ಪ್ರವೃತ್ತಿಗೆ ಸಾಕ್ಷಿಯಾಗಿವೆ

ಆಸಕ್ತಿದಾಯಕ ಪ್ರವೃತ್ತಿಗೆ ಸಾಕ್ಷಿಯಾಗಿವೆ

ಕೋವಿಡ್ ನಿಂದ ಉದ್ಯೋಗಿಗಳ ಬಹಳಷ್ಟು ಪ್ರಯಾಣಗಳು ಸ್ಥಗಿತಗೊಂಡಿರುವುದರಿಂದ ಮತ್ತು ಜನರನ್ನು ಮನೆಗಳಿಂದ ಕೆಲಸ ಮಾಡುತ್ತಿರುವುದರಿಂದ ಭಾರತೀಯ ಐಟಿ ಕಂಪನಿಗಳಾದ ಟಿಸಿಎಸ್, ಇನ್ಫೋಸಿಸ್ ಮತ್ತು ವಿಪ್ರೊ ಆಸಕ್ತಿದಾಯಕ ಪ್ರವೃತ್ತಿಗೆ ಸಾಕ್ಷಿಯಾಗಿವೆ. ಜೂನ್ ತ್ರೈಮಾಸಿಕದಲ್ಲಿ ಈ ಕಂಪನಿಗಳ ಪ್ರಯಾಣ ವೆಚ್ಚವು ಶೇಕಡಾ 86 ರಷ್ಟು ಕುಸಿದಿದೆ. ಆದರೆ ಕಮ್ಯುನಿಕೇಶನ್‌ಗಾಗಿ ಖರ್ಚು ಮಾಡುತ್ತಿದ್ದ ಅವರ ಬಿಲ್‌ಗಳಲ್ಲಿ ಶೇ 20 ರಿಂದ 30 ರಷ್ಟು ಹೆಚ್ಚಳ ಕಂಡುಬಂದಿದೆ.

ಇನ್ಫೋಸಿಸ್, ವಿಪ್ರೋ, ಟಿಸಿಎಸ್

ಇನ್ಫೋಸಿಸ್, ವಿಪ್ರೋ, ಟಿಸಿಎಸ್

ಈ ಕಂಪೆನಿಗಳ ತ್ರೈಮಾಸಿಕ ಫಲಿತಾಂಶಗಳಿಂದ ಪಡೆದ ಮಾಹಿತಿಯ ಪ್ರಕಾರ, ಮೂರು ಕಂಪನಿಗಳ ಒಟ್ಟು ಪ್ರಯಾಣ ವೆಚ್ಚವು ಜೂನ್ 2019 ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ 2,153 ಕೋಟಿ ರೂ.ಗಳಿಂದ 2020 ರ ಜೂನ್‌ನಲ್ಲಿ 500 ಕೋಟಿ ರೂ.ಗೆ ಇಳಿದಿದೆ. ಈ ತ್ರೈಮಾಸಿಕದ ಕೊನೆಯಲ್ಲಿ ಅವರ ಕಮ್ಯುನಿಕೇಶನ್ ವೆಚ್ಚ 742 ಕೋಟಿ ರೂ.ಗೆ ಏರಿದೆ, ಕಳೆದ ವರ್ಷ ಇದೇ ಅವಧಿಯಲ್ಲಿ 600 ಕೋಟಿ ರೂ ಇತ್ತು.

ಇನ್ಫೋಸಿಸ್ ಗೆ ಅತಿ ಹೆಚ್ಚು

ಇನ್ಫೋಸಿಸ್ ಗೆ ಅತಿ ಹೆಚ್ಚು

ಮೂರು ಕಂಪನಿಗಳ ಪೈಕಿ, ಇನ್ಫೋಸಿಸ್ ಪ್ರಯಾಣದ ಖರ್ಚಿನಲ್ಲಿ ಅತಿದೊಡ್ಡ - ಶೇ 86 ರಷ್ಟು ಕುಸಿತ ಕಂಡಿದೆ, ಇದು 2019 ರ ಜೂನ್‌ನಲ್ಲಿ 827 ಕೋಟಿ ರೂ.ಗಳಿಂದ 2020 ರ ಜೂನ್‌ನಲ್ಲಿ 116 ಕೋಟಿ ರೂ.ಗೆ ಇಳಿದಿದೆ. ಕಂಪನಿಯ ಸಂವಹನ ವೆಚ್ಚವು ಶೇ 28 ರಷ್ಟು ಏರಿಕೆಯಾಗಿದೆ. ಟಿಸಿಎಸ್‌ಗೆ ಸಂಬಂಧಿಸಿದಂತೆ, ಪ್ರಯಾಣ ವೆಚ್ಚವು ವರ್ಷದಿಂದ ವರ್ಷಕ್ಕೆ ಶೇಕಡಾ 69 ರಷ್ಟು ಕಡಿಮೆಯಾಗಿದ್ದರೆ, ಸಂವಹನ ವೆಚ್ಚವು ಶೇಕಡಾ 22 ರಷ್ಟು ಏರಿಕೆಯಾಗಿದೆ. ವಿಪ್ರೊಗೆ ಪ್ರಯಾಣ ವೆಚ್ಚವು ಶೇಕಡಾ 75 ರಷ್ಟು ಕುಸಿಯಿತು ಮತ್ತು ಸಂವಹನ ವೆಚ್ಚವು ಶೇ 26 ರಷ್ಟು ಏರಿಕೆಯಾಗಿದೆ.

ಷೇರುಗಳ ಬೆಲೆಯಲ್ಲಿ ತೀವ್ರ ಏರಿಕೆ

ಷೇರುಗಳ ಬೆಲೆಯಲ್ಲಿ ತೀವ್ರ ಏರಿಕೆ

ಜೂನ್ 2020 ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ಲಾಭದಾಯಕತೆಯ ಬೆಳವಣಿಗೆಗೆ ಅನುಗುಣವಾಗಿ, ಇನ್ಫೋಸಿಸ್ ಮತ್ತು ವಿಪ್ರೊ ಕಳೆದ ಎರಡು ದಿನಗಳಲ್ಲಿ ತಮ್ಮ ಷೇರುಗಳ ಬೆಲೆಯಲ್ಲಿ ತೀವ್ರ ಏರಿಕೆ ಕಂಡಿದೆ. ಮಂಗಳವಾರ ಮತ್ತು ಬುಧವಾರದ ನಡುವೆ ಇನ್ಫೋಸಿಸ್ ಷೇರು ಬೆಲೆ ಶೇ 16.6 ರಷ್ಟು ಏರಿಕೆಯಾಗಿದೆ ಮತ್ತು ವಿಪ್ರೋದ ಷೇರುಗಳು ಮಂಗಳವಾರ ಶೇ 17 ರಷ್ಟು ಏರಿಕೆ ಕಂಡಿದೆ.

English summary

Work From Home Effect: A Significant Reduction In Travel Costs of IT Companies

Work From Home Effect: A Significant Reduction In Travel Costs For IT Companies
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X