For Quick Alerts
ALLOW NOTIFICATIONS  
For Daily Alerts

ಮೈಕ್ರೋಸಾಫ್ಟ್ ನಿಂದ ಉದ್ಯೋಗಿಗಳಿಗೆ ಶಾಶ್ವತವಾಗಿ ವರ್ಕ್ ಫ್ರಮ್ ಹೋಮ್

By ಅನಿಲ್ ಆಚಾರ್
|

ಮೈಕ್ರೋಸಾಫ್ಟ್ ನಿಂದ ಕೆಲವು ಉದ್ಯೋಗಿಗಳಿಗೆ ಶಾಶ್ವತವಾಗಿ ವರ್ಕ್ ಫ್ರಮ್ ವಿಸ್ತರಿಸಲು ನಿರ್ಧರಿಸಲಾಗಿದೆ. ಕಂಪೆನಿಯಿಂದ ಹೊಸದಾಗಿ "ಹೈಬ್ರಿಡ್ ವರ್ಕ್ ಪ್ಲೇಸ್" ಮಾರ್ಗದರ್ಶಿ ಸೂತ್ರಗಳನ್ನು ಬಿಡುಗಡೆ ಮಾಡಲಾಗಿದೆ. ಉದ್ಯೋಗಿಗಳು ಕಚೇರಿಯಿಂದ ಹೊರಗೆ ಕೆಲಸ ಮಾಡುವಾಗ ವೇಳಾಪಟ್ಟಿ ಹೇಗೆ ಮಾಡಿಕೊಳ್ಳಬೇಕು, ದೇಶದ ಮತ್ತೊಂದು ಕಡೆಯಿಂದಲೇ ಕೆಲಸ ಮಾಡುವಂತಿದ್ದರೂ ಅದು ಹೇಗೆ ಹೊಂದಾಣಿಕೆ ಮಾಡಿಕೊಳ್ಳಬೇಕು ಇತ್ಯಾದಿಗಳನ್ನು ವಿವರಿಸಿದೆ.

 

ಭಾರತದ ಉದ್ಯೋಗಿಗಳು ಬಯಸುವ ಟಾಪ್ ಬ್ರ್ಯಾಂಡ್ ಮೈಕ್ರೋಸಾಫ್ಟ್ ಇಂಡಿಯಾಭಾರತದ ಉದ್ಯೋಗಿಗಳು ಬಯಸುವ ಟಾಪ್ ಬ್ರ್ಯಾಂಡ್ ಮೈಕ್ರೋಸಾಫ್ಟ್ ಇಂಡಿಯಾ

ಕೊರೊನಾ ಬಿಕ್ಕಟ್ಟಿನ ಮಧ್ಯೆ ಬದಲಾಗುತ್ತಿರುವ ಅಗತ್ಯಗಳಿಗೆ ಹೇಗೆ ಹೊಂದಿಕೊಳ್ಳಬೇಕು ಎಂದು ತಿಳಿಸಲಾಗಿದೆ. ಉದ್ಯೋಗಿಗಳ ಶೇಕಡಾ 50 ಪರ್ಸೆಂಟ್ ಗಿಂತ ಕಡಿಮೆ ಅವಧಿಗೆ ಅನುಕೂಲಕರ ಅವಧಿಯಲ್ಲಿ ವರ್ಕ್ ಫ್ರಮ್ ಹೋಮ್ ಮಾಡಲು ಮೈಕ್ರೋಸಾಫ್ಟ್ ಅನುವು ಮಾಡಿಕೊಡುತ್ತದೆ. ಶಾಶ್ವತವಾದ ವರ್ಕ್ ಫ್ರಮ್ ಹೋಮ್ ಅನ್ನು ಮ್ಯಾನೇಜರ್ ಗಳು ಅನುಮತಿಸಬೇಕು.

ಉದ್ಯೋಗಿಗಳಿಗೆ ಮಾರ್ಗದರ್ಶಿ ಸೂತ್ರ

ಉದ್ಯೋಗಿಗಳಿಗೆ ಮಾರ್ಗದರ್ಶಿ ಸೂತ್ರ

"ಎಷ್ಟು ಅನುಕೂಲ ಮಾಡಿಕೊಡುವುದಕ್ಕೆ ಸಾಧ್ಯವೋ ಅಷ್ಟರ ಮಟ್ಟಿಗೆ ಆಯಾ ವೈಯಕ್ತಿಕ ಕೆಲಸದ ಶೈಲಿಗೆ ಬೆಂಬಲ ನೀಡುತ್ತೇವೆ. ವ್ಯವಹಾರದ ಅಗತ್ಯಗಳು ಸಮತೋಲನವಾಗಬೇಕು ಮತ್ತು ನಮ್ಮ ಸಂಸೃತಿಗೆ ತಕ್ಕಂತೆ ಇದ್ದೇವೆ ಎಂಬುದನ್ನು ಖಾತ್ರಿ ಪಡಿಸಬೇಕು," ಎಂದು ಮೈಕ್ರೋಸಾಫ್ಟ್ ಚೀಫ್ ಪೀಪಲ್ ಅಧಿಕಾರಿ ಕತ್ಲೀನ್ ಹೊಗನ್ ತಿಳಿಸಿದ್ದಾರೆ. ಈ ಸಂಬಂಧವಾಗಿ ಉದ್ಯೋಗಿಗಳಿಗೆ ಮಾರ್ಗದರ್ಶಿ ಸೂತ್ರಗಳನ್ನು ನೀಡಿದ್ದೇವೆ. ಕೆಲಸದ ಸ್ಥಳ ಬದಲಾವಣೆ, ಕೆಲಸದ ಸ್ಥಳ, ಕೊರೊನಾ ನಿರ್ಬಂಧ ಸಂಪೂರ್ಣ ತೆರವಾದ ಮೇಲೆ ಕಚೇರಿ ಕಾರ್ಯ ನಿರ್ವಹಿಸುವ ಅವಧಿ ಇವುಗಳ ಬಗ್ಗೆ ತಿಳಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ವಿವಿಧ ಸಂಗತಿಗಳಿಗೆ ಆದ್ಯತೆ: ಸಿಇಒ ನಾಡೆಲ್ಲ

ವಿವಿಧ ಸಂಗತಿಗಳಿಗೆ ಆದ್ಯತೆ: ಸಿಇಒ ನಾಡೆಲ್ಲ

ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲ ಮಾತನಾಡಿ, ಕೊರೊನಾದ ಮಧ್ಯೆ ಹೇಗೆ ಕೆಲಸದ ಗುಣ ಧರ್ಮ ಬದಲಾಗುತ್ತಿದೆ, ಹೊಂದಾಣಿಕೆ ಹೇಗೆ ಸಾಧ್ಯ, ಕಂಪೆನಿಯೊಳಗೆ ಕಲಿಕೆ ಹೇಗೆ ನಡೆಯುತ್ತದೆ ಮತ್ತು ಸಿಬ್ಬಂದಿಗೆ ಒತ್ತಡ ಆಗುತ್ತಿಲ್ಲವೆ ಎಂಬುದನ್ನು ಖಾತ್ರಿ ಮಾಡಿಕೊಳ್ಳುವುದು ಬಹಳ ಮುಖ್ಯ ಆಗುತ್ತದೆ ಎಂದಿದ್ದಾರೆ. ಇನ್ನು ಬಹುತೇಕ ಸಿಬ್ಬಂದಿಗೆ ಕೆಲಸ ಆರಂಭಿಸುವ ಹಾಗೂ ಮುಗಿಸುವ ಅವಧಿ ಅನುಕೂಲಕರವಾಗಿ ಇರುತ್ತದೆ ಎಂದು ಕಂಪೆನಿ ಹೇಳಿದೆ. ಇನ್ನು ಉದ್ಯೋಗಿಗಳು ವಿವಿಧ ಸ್ಥಳಗಳಿಗೆ ತೆರಳಿ, ಅಲ್ಲಿಂದ ಕೆಲಸ ಮಾಡುತ್ತಿದ್ದು, ಆಯಾ ಸ್ಥಳಕ್ಕೆ ತಕ್ಕಂತೆ ಸಂಬಳ ಮತ್ತು ಭತ್ಯೆಗಳಲ್ಲಿ ವ್ಯತ್ಯಾಸ ಆಗಲಿದೆ. ವಿವಿಧೆಡೆ ಹೋಗುವವರು ತಾವೇ ಖರ್ಚನ್ನು ನಿಭಾಯಿಸಬೇಕು. ಇನ್ನು ಶಾಶ್ವತವಾಗಿ ವರ್ಕ್ ಫ್ರಮ್ ಹೋಮ್ ಪಡೆಯುವವರಿಗೆ ಮನೆಯಲ್ಲಿ ಕಚೇರಿ ವಾತಾವರಣ ನಿರ್ಮಿಸಿಕೊಳ್ಳಲು ಮೈಕ್ರೋಸಾಫ್ಟ್ ಖರ್ಚನ್ನು ಭರಿಸುತ್ತದೆ.

ಮೊದಲಿಗೆ ವರ್ಕ್ ಫ್ರಮ್ ಹೋಮ್ ಘೋಷಿಸಿದ್ದು ಮೈಕ್ರೋಸಾಫ್ಟ್
 

ಮೊದಲಿಗೆ ವರ್ಕ್ ಫ್ರಮ್ ಹೋಮ್ ಘೋಷಿಸಿದ್ದು ಮೈಕ್ರೋಸಾಫ್ಟ್

ಕೆಲಸದ ಸಮಯ ಹೊಂದಾಣಿಕೆ ತಕ್ಕಂತೆ ಬದಲಿಸಿಕೊಳ್ಳುವುದಕ್ಕೆ ಮ್ಯಾನೇಜರ್ ಅನುಮತಿಯ ಅಗತ್ಯ ಇಲ್ಲ. ಆದರೆ ಮೈಕ್ರೋಸಾಫೃ ಆಫೀಸ್, ಹಾರ್ಡ್ ವೇರ್, ಡೇಟಾ ಸೆಂಟರ್ ಹಾಗೂ ತರಬೇತಿಯನ್ನು ನೀಡಬೇಕಾದ ಹುದ್ದೆಯಲ್ಲಿ ಇರುವವರು ಲಭ್ಯರಿರಬೇಕು ಎಂದು ತಿಳಿಸಲಾಗಿದೆ. ಅನುಕೂಲಕರ ಸಮಯ ಎಂದರೆ ವೈಯಕ್ತಿಕವಾಗಿ ಇದು ಅನ್ವಯ ಆಗಲ್ಲ. ಆ ಉದ್ಯೋಗಿ ನಿರ್ವಹಿಸುವ ಹುದ್ದೆ, ಅವರ ಅಗತ್ಯ, ಮೈಕ್ರೋಸಾಫ್ಟ್ ನ ವ್ಯವಹಾರಕ್ಕೆ ಆ ಉದ್ಯೋಗಿಯ ಅಗತ್ಯ ಇರುವ ಸಮಯದೊಳಗೇ ಎಂದರ್ಥ ಎಂದು ಹೊಗನ್ ಹೇಳಿದ್ದಾರೆ. ಮಾರ್ಚ್ ನಲ್ಲಿ ಕೊರೊನಾ ಬಿಕ್ಕಟ್ಟು ಕಾಣಿಸಿಕೊಂಡಾಗ ತನ್ನ ಉದ್ಯೋಗಿಗಳಿಗೆ ವರ್ಕ್ ಫ್ರಮ್ ಹೋಮ್ ನೀಡಿದ ಮೊದಲ ತಂತ್ರಜ್ಞಾನ ಕಂಪೆನಿ ಮೈಕ್ರೋಸಾಫ್ಟ್. ಆ ನಂತರ ಟ್ವಿಟ್ಟರ್, ಝಿಲ್ಲೋ ಮತ್ತಿತತರ ಕಂಪೆನಿಗಳು ಅನಿರ್ದಿಷ್ಟಾವಧಿಗೆ ವರ್ಕ್ ಫ್ರಮ್ ಹೋಮ್ ಘೋಷಿಸಿದವು.

English summary

Work From Home Expand From Microsoft, Make It Permanent For Some Employees

Tech giant expand it's work from home and make it permanent for some employees, here is the new guidelines by company.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X