For Quick Alerts
ALLOW NOTIFICATIONS  
For Daily Alerts

ಏಪ್ರಿಲ್ 1ರಿಂದ ಪಿಎಫ್, ಗ್ರಾಚ್ಯುಟಿ ನಿಯಮ ಬದಲಾವಣೆ; 12 ಗಂಟೆ ಕೆಲಸ

By ಅನಿಲ್ ಆಚಾರ್
|

ಏಪ್ರಿಲ್ 1, 2021ರಿಂದ ನಿಮ್ಮ ಗ್ರಾಚ್ಯುಟಿ, ಪ್ರಾವಿಡೆಂಟ್ ಫಂಡ್ (ಪಿಎಫ್) ಹಾಗೂ ಕೆಲಸದ ಅವಧಿಯಲ್ಲಿ ಮಹತ್ತರ ಬದಲಾವಣೆ ಆಗುವ ಸಾಧ್ಯತೆ ಇದೆ. ಅಷ್ಟೇ ಅಲ್ಲ, ಕಂಪೆನಿಗಳ ಬ್ಯಾಲೆನ್ಸ್ ಶೀಟ್ ಮೇಲೂ ಪರಿಣಾಮ ಆಗಲಿದೆ. ಇದಕ್ಕೆ ಕಾರಣ ಏನೆಂದರೆ, ಕಳೆದ ವರ್ಷ ಸಂಸತ್ ನಲ್ಲಿ ಅಂಕಿತ ಬಿದ್ದ ಮೂರು ವೇತನ ನಿಯಮಾವಳಿ ಮಸೂದೆಯ ಬದಲಾವಣೆಗಳು.

 

ಈ ಮಸೂದೆಗಳು ಈ ವರ್ಷದ ಏಪ್ರಿಲ್ 1ರಿಂದ ಜಾರಿಗೆ ಬರಲಿವೆ. ಹೊಸ ವ್ಯಾಖ್ಯಾನದಂತೆ ವೇತನ, ಭತ್ಯೆ ಒಟ್ಟು ಸಂಬಳದಲ್ಲಿ ಗರಿಷ್ಠ 50ರಷ್ಟಿರಬೇಕು. ಇದರರ್ಥ ಮೂಲವೇತನ (ಸರ್ಕಾರಿ ಉದ್ಯೋಗದಲ್ಲಿ ಬೇಸಿಕ್ ಪೇ ಮತ್ತು ತುಟ್ಟಿ ಭತ್ಯೆ) ಒಟ್ಟು ವೇತನದ ಶೇಕಡಾ 50ರಷ್ಟು ಮತ್ತು ಅದಕ್ಕಿಂತ ಹೆಚ್ಚಿರಬೇಕು.

 

2021ರ ಕೇಂದ್ರ ಬಜೆಟ್ ದಾಖಲಾತಿ ಮುದ್ರಣ ಇಲ್ಲ; ಈ ಬಾರಿ ಇ- ವರ್ಷನ್2021ರ ಕೇಂದ್ರ ಬಜೆಟ್ ದಾಖಲಾತಿ ಮುದ್ರಣ ಇಲ್ಲ; ಈ ಬಾರಿ ಇ- ವರ್ಷನ್

ಬಹುತೇಕ ಉದ್ಯೋಗಿಗಳ ವೇತನ ರಚನೆಯು ಬದಲಾವಣೆ ಕಾಣಲಿದೆ. ಭತ್ಯೆಯೇತರ ಭಾಗವು ಸಾಮಾನ್ಯವಾಗಿ 50 ಪರ್ಸೆಂಟ್ ಗಿಂತ ಕಡಿಮೆ ಇರುತ್ತದೆ. ಇದೇ ವೇಳೆ ಭತ್ಯೆಗಳ ಪಾಲು ಒಟ್ಟಾರೆ ವೇತನದ ಪಾಲಿನಲ್ಲಿ ಹೆಚ್ಚಿರುತ್ತದೆ. ಬೇಸಿಕ್ ಸ್ಯಾಲರಿ ಹೆಚ್ಚಾಗುವುದರಿಂದ ಪಿಎಫ್ ಕೂಡ ಜಾಸ್ತಿ ಆಗುತ್ತದೆ. ಏಕೆಂದರೆ ಬೇಸಿಕ್ ಸ್ಯಾಲರಿ ಮೇಲೆ ಪಿಎಫ್ ಆಧಾರವಾಗಿರುತ್ತದೆ. ಹೀಗಾದಾಗ ಕೈಗೆ ಬರುವ ಸಂಬಳದಲ್ಲಿ ಕಡಿತ ಆಗುತ್ತದೆ.

ಏಪ್ರಿಲ್ 1ರಿಂದ ಪಿಎಫ್, ಗ್ರಾಚ್ಯುಟಿ ನಿಯಮ ಬದಲಾವಣೆ; 12 ಗಂಟೆ ಕೆಲಸ

ಗ್ರಾಚ್ಯುಟಿ ಮತ್ತು ಪಿಎಫ್ ಗೆ ಕೊಡುಗೆ ಹೆಚ್ಚಾದಂತೆಯೇ ನಿವೃತ್ತಿ ನಂತರ ದೊರೆಯುವ ಮೊತ್ತವು ಹೆಚ್ಚಾಗುತ್ತದೆ. ಹೆಚ್ಚಿನ ವೇತನ ಪಡೆಯುವ ಉದ್ಯೋಗಿಗಳ ಸಂಬಳ ರಚನೆಯ ಮೇಲೆ ಹೆಚ್ಚು ಪರಿಣಾಮ ಆಗುತ್ತದೆ. ಪಿ.ಎಫ್. ಹಾಗೂ ಗ್ರಾಚ್ಯುಟಿ ಹೆಚ್ಚಾದಂತೆ ಕಂಪೆನಿಗಳ ಪಾಲಿಗೆ ವೆಚ್ಚ ಕೂಡ ಜಾಸ್ತಿ ಆಗುತ್ತದೆ. ಏಕೆಂದರೆ ಉದ್ಯೋಗದಾತರು ಕೂಡ ಸಿಬ್ಬಂದಿಯ ಪಿ.ಎಫ್.ಗೆ ಹೆಚ್ಚಿನ ಕೊಡುಗೆ ನೀಡಬೇಕಾಗುತ್ತದೆ.

ಹೊಸ ಕಾನೂನಿನಿಂದ ಕೆಲಸದ ಅವಧಿಯು ಗರಿಷ್ಠ 12 ಗಂಟೆ ಆಗುತ್ತದೆ. ಹೊಸ ಕಾನೂನಿನ ಅನ್ವಯ, 15- 30 ನಿಮಿಷ ಹೆಚ್ಚು ಕೆಲಸ ಮಾಡಿದರೂ ಅದು ಓವರ್ ಟೈಮ್ ಎಂದು ಪರಿಗಣಿಸಲಾಗುತ್ತದೆ. ಸದ್ಯದ ನಿಯಮಾವಳಿಯಂತೆ, 30 ನಿಮಿಷಕ್ಕಿಂತ ಕಡಿಮೆ ಅವಧಿಯನ್ನು ಓವರ್ ಟೈಮ್ ಎಂದು ಪರಿಗಣಿಸಲಾಗುವುದಿಲ್ಲ.

ಇನ್ನು ಉದ್ಯೋಗಿಗಳು ಸತತವಾಗಿ 5 ಗಂಟೆಗಿಂತ ಹೆಚ್ಚು ಸಮಯ ಕಾರ್ಯ ನಿರ್ವಹಿಸುವುದನ್ನು ಕಾನೂನಿ ಪ್ರಕಾರ ನಿರ್ಬಂಧಿಸಲಾಗಿದೆ. ಸತತವಾಗಿ ಐದು ಗಂಟೆ ಕೆಲಸ ಮಾಡಿದ ಮೇಲೆ ಅರ್ಧ ಗಂಟೆ ಹೆಚ್ಚು ವಿರಾಮಕ್ಕೆ ಸೂಚನೆ ನೀಡಲಾಗಿದೆ.

English summary

Working Hours May Increase To 12 Hours From 1st April: PF And Retirement Rules Will Also Change

From April 1, 2021 working hours may increase and also PF and other retirement rules will also change. Here is the details.
Story first published: Monday, January 11, 2021, 18:09 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X