For Quick Alerts
ALLOW NOTIFICATIONS  
For Daily Alerts

"ಈಗಿನ ಆರ್ಥಿಕ ಕುಸಿತದಿಂದ ಚೇತರಿಸಿಕೊಳ್ಳಲು ಐದು ವರ್ಷ ಬೇಕಾಗಬಹುದು"

|

ಜಾಗತಿಕವಾಗಿ ಉದ್ಭವಿಸಿರುವ ಈಗಿನ ಆರ್ಥಿಕ ಬಿಕ್ಕಟ್ಟಿನಿಂದ ಚೇತರಿಸಿಕೊಳ್ಳಲು ಎಷ್ಟು ಸಮಯ ಬೇಕು? ಇದಕ್ಕೆ ಐದು ವರ್ಷ ಸಮಯ ಬೇಕಾಗಬಹುದು ಎನ್ನುತ್ತಿದ್ದಾರೆ ವಿಶ್ವ ಬ್ಯಾಂಕ್ ಮುಖ್ಯ ಆರ್ಥಿಕ ತಜ್ಞರಾದ ಕಾರ್ಮೆನ್ ರೀನ್ ಹಾರ್ಟ್. ಈ ಬಗ್ಗೆ ಗುರುವಾರ ಅವರು ಮಾತನಾಡಿದರು.

UK ಈಗ ಆರ್ಥಿಕ ಕುಸಿತದ ಸುಳಿಯಲ್ಲಿ; 'ಸೂರ್ಯ ಮುಳುಗದ ನಾಡಲ್ಲಿ' ಕತ್ತಲೆUK ಈಗ ಆರ್ಥಿಕ ಕುಸಿತದ ಸುಳಿಯಲ್ಲಿ; 'ಸೂರ್ಯ ಮುಳುಗದ ನಾಡಲ್ಲಿ' ಕತ್ತಲೆ

ಒಂದು ವೇಳೆ ಲಾಕ್ ಡೌನ್ ನ ಎಲ್ಲ ನಿರ್ಬಂಧಗಳನ್ನು ತೆರವುಗೊಳಿಸಿದರೆ ಇನ್ನೂ ಬೇಗ ಚೇತರಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಮ್ಯಾಡ್ರಿಡ್ ನಲ್ಲಿ ಸಮಾವೇಶವೊಂದರಲ್ಲಿ ಭಾಗವಹಿಸಿದ್ದ ಅವರು ಹೇಳಿದ್ದಾರೆ. ರೀನ್ ಹಾರ್ಟ್ ಮಾತನಾಡಿ, ಕೆಲವು ದೇಶಗಳಲ್ಲಿ ಕೊರೊನಾ ಸೃಷ್ಟಿಸಿರುವ ಆರ್ಥಿಕ ಕುಸಿತಕ್ಕೆ ಕೊನೆಯೇ ಇಲ್ಲ. ಶ್ರೀಮಂತ ದೇಶಗಳಲ್ಲಿ ಬಡವರು ಈ ಕೊರೊನಾದಿಂದ ಅತಿ ಹೆಚ್ಚು ಬಾಧಿತರಾಗಿದ್ದಾರೆ ಎಂದರು.

ಇನ್ನು ಬಡದೇಶಗಳಂತೂ ಶ್ರೀಮಂತ ರಾಷ್ಟ್ರಗಳಿಗಿಂತ ಹೆಚ್ಚು ಸಮಸ್ಯೆಗೆ ಈಡಾಗಿವೆ. ಕಳೆದ ಇಪ್ಪತ್ತು ವರ್ಷದಲ್ಲಿ ಇದೇ ಮೊದಲ ಬಾರಿಗೆ ಜಾಗತಿಕವಾಗಿ ಬಡತನ ದರವು ಏರಿಕೆ ಆಗಲಿದೆ ಎಂದು ಹೇಳಿದ್ದಾರೆ. ಪ್ರಸಕ್ತ ಹಣಕಾಸಿನ ಮೊದಲ ತ್ರೈಮಾಸಿಕದಲ್ಲಿ ಬಹುತೇಕ ದೇಶಗಳ ಜಿಡಿಪಿ ನೆಗೆಟಿವ್ ಇದೆ. ನಿರುದ್ಯೋಗ ಪ್ರಮಾಣ ವಿಪರೀತ ಹೆಚ್ಚಾಗಿದೆ.

English summary

World Economic Condition May Take 5 Years To Recovery: World Bank Economist

According to world bank economist Rein Hart, global economic condition may take 5 years to recovery from Corona pandemic hit recession.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X