For Quick Alerts
ALLOW NOTIFICATIONS  
For Daily Alerts

ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಕುಸಿತ ಕಂಡ ಅದಾನಿ, ಅಂಬಾನಿ: ಎಷ್ಟನೇ ಸ್ಥಾನ? ಯಾರು ಮುಂದಿದ್ದಾರೆ? ತಿಳಿಯಿರಿ

|

ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಅದಾನಿ, ಅಂಬಾನಿ ಕುಸಿತ ಕಂಡಿದ್ದಾರೆ. ಭಾರತದ ಉದ್ಯಮಿಗಳಾದ ಇವರು ಸತತವಾಗಿ ಶ್ರೀಮಂತರ ಪಟ್ಟಿಯಲ್ಲಿ ಮುಂದಿದ್ದರು. ಈಗ ಒಂದು ಸ್ಥಾನ ಹಿಂದೆ ಬಂದಿದ್ದಾರೆ. ಮೂರನೇ ಸ್ಥಾನದಲ್ಲಿದ್ದ ಗೌತಮ್‌ ಅದಾನಿ ನಾಲ್ಕನೇ ಸ್ಥಾನಕ್ಕೆ ಬಂದಿದ್ದಾರೆ. ಮುಖೇಶ್‌ ಅಂಬಾನಿ ಹನ್ನೆರಡನೇ ಸ್ಥಾನದಲ್ಲಿದ್ದಾರೆಂದು ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್‌ ಮಾಹಿತಿ ನೀಡಿದೆ.

ಬರ್ನಾರ್ಡ್ ಅರ್ನಾಲ್ಟ್ (ಲೂಯಿಸ್ ವಿಟ್ಟನ್) ಮತ್ತು ಎಲೋನ್ ಮಸ್ಕ್ (ಟೆಸ್ಲಾ, ಸ್ಪೇಸ್‌ಎಕ್ಸ್, ಟ್ವಿಟರ್) ಮೊದಲ ಎರಡನೇ ಸ್ಥಾನಗಳಲ್ಲಿ ಮುಂದುವರಿದಿದ್ದಾರೆ. ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್ ಈಗ ಮೂರನೇ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಆದರೆ ರಿಲಯನ್ಸ್ ಗ್ರೂಪ್ ಅಧ್ಯಕ್ಷ ಮುಕೇಶ್ ಅಂಬಾನಿ ಕೂಡ ಕುಸಿತ ಕಂಡಿದ್ದಾರೆ. ಇಂದು ಅವರು ಒಂದು ಸ್ಥಾನ ಕುಸಿದಿದ್ದಾರೆ. ಅವರ ಪ್ರಸ್ತುತ ನಿವ್ವಳ ಮೌಲ್ಯವು ವಿಶ್ವದ 12ನೇ ಸ್ಥಾನದಲ್ಲಿದೆ.

ಮತ್ತೊಂದೆಡೆ, ಅದಾನಿ ಕಳೆದ 24 ಗಂಟೆಗಳಲ್ಲಿ $ 872 ಮಿಲಿಯನ್ ನಷ್ಟು ನಿವ್ವಳ ಮೌಲ್ಯವನ್ನು ಕಳೆದುಕೊಂಡು ಕುಸಿದ ಕಂಡಿದ್ದಾರೆ. ಜನವರಿ 24, 2022 ( ಕಳೆದ ವರ್ಷದಿಂದ) ರಿಂದ ಅವರು $ 683 ಮಿಲಿಯನ್ ಕಳೆದುಕೊಂಡಿದ್ದಾರೆ. ಅಂಬಾನಿ ಸಾಮ್ರಾಜ್ಯದ ಅಂಕಿಅಂಶಗಳು ಕ್ರಮವಾಗಿ $ 457 ಮಿಲಿಯನ್ ಮತ್ತು $ 2.38 ಶತಕೋಟಿ. ಆದಾಗ್ಯೂ, ಅವರು ಇಬ್ಬರು ಶ್ರೀಮಂತ ಏಷ್ಯನ್ನರಾಗಿ ಮುಂದುವರೆದಿದ್ದಾರೆ.

 ಶ್ರೀಮಂತರ ಪಟ್ಟಿಯಲ್ಲಿ ಕುಸಿತ ಕಂಡ ಅದಾನಿ, ಅಂಬಾನಿ- ಎಷ್ಟನೇ ಸ್ಥಾನ?

ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್

ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್, 500 ಶ್ರೀಮಂತ ವ್ಯಕ್ತಿಗಳ ದೈನಂದಿನ ಶ್ರೇಯಾಂಕಗಳನ್ನು ಸಿದ್ಧಪಡಿಸುತ್ತದೆ. ಬ್ಲೂಮ್‌ಬರ್ಗ್ ನ್ಯೂಸ್‌ನಿಂದ ಪ್ರಕಟಿಸಲ್ಪಟ್ಟಿದೆ. ಮಾರ್ಚ್ 2012 ರಲ್ಲಿ ಮೊದಲು ಪ್ರಕಟವಾದ ಸೂಚ್ಯಂಕವು ಕೇವಲ 20 ಶ್ರೀಮಂತರನ್ನು ಮಾತ್ರ ಪಟ್ಟಿಯಲ್ಲಿ ಸೇರಿಸುತ್ತಿತ್ತು. ನಂತರ 100, 200, 300, 400ಗಳ ಪಟ್ಟಿಯನ್ನು ಬಿಡುಗಡೆ ಮಾಡುತ್ತಿತ್ತು. ಅಂತಿಮವಾಗಿ, ಅಕ್ಟೋಬರ್ 2016 ರಲ್ಲಿ ಪ್ರಸ್ತುತ ಸ್ವರೂಪಕ್ಕೆ ವಿಸ್ತರಿಸಿತು.

ವಿಶ್ವದ ನೂರು ಶ್ರೀಮಂತರ ಪಟ್ಟಿ ಹಾಗೂ ಅವರ ಆಸ್ತಿ ಮೌಲ್ಯಗಳು ಹೀಗಿವೆ

ಹೆಸರು- ಒಟ್ಟು ಆಸ್ತಿ ಮೌಲ್ಯ- ನಿನ್ನೆಯಿಂದ ಆದ ಗಳಿಕೆ ಅಥವಾ ನಷ್ಟ - ಕೊನೆಯ ವರ್ಷದಿಂದ ಆದ ಗಳಿಕೆ ಅಥವಾ ನಷ್ಟ- ದೇಶ- ಉದ್ಯಮದ ಹೆಸರು

 ಶ್ರೀಮಂತರ ಪಟ್ಟಿಯಲ್ಲಿ ಕುಸಿತ ಕಂಡ ಅದಾನಿ, ಅಂಬಾನಿ- ಎಷ್ಟನೇ ಸ್ಥಾನ?

1. ಬರ್ನಾರ್ಡ್ ಅರ್ನಾಲ್ಟ್- ( $ 188 ಬಿಲಿಯನ್ ) ( + $ 2.13 ಬಿಲಿಯನ್ ) (+ $ 26 ಬಿಲಿಯನ್) (ಫ್ರಾನ್ಸ್) (ಗ್ರಾಹಕ)

2. ಎಲೋನ್ ಮಸ್ಕ್- ( $145 ಬಿಲಿಯನ್ ) ( + $6.56 ಬಿಲಿಯನ್ ) ( + $8.21 ಬಿಲಿಯನ್) (ಅಮೆರಿಕ) ( ತಂತ್ರಜ್ಞಾನ )

3. ಜೆಫ್ ಬೆಜೋಸ್- ( $121 ಬಿಲಿಯನ್ ) (+ $318 ಮಿಲಿಯನ್) (+ $13.8 ಬಿಲಿಯನ್) (ಅಮೆರಿಕ) ( ತಂತ್ರಜ್ಞಾನ )
4. ಗೌತಮ್ ಅದಾನಿ- ( $120 ಬಿಲಿಯನ್) (- $872 ಮಿಲಿಯನ್) ( - $683 ಮಿಲಿಯನ್) ( ಭಾರತ) ( ಇಂಡಸ್ಟ್ರಿಯಲ್ )
5. ಬಿಲ್ ಗೇಟ್ಸ್- ( $111 ಬಿಲಿಯನ್) (+ $630 ಮಿಲಿಯನ್) (+ $1.95 ಬಿಲಿಯನ್) ( ಅಮೆರಿಕ ) ( ತಂತ್ರಜ್ಞಾನ )
6. ವಾರೆನ್ ಬಫೆಟ್- ( $108 ಬಿಲಿಯನ್) (+ $283 ಮಿಲಿಯನ್) (+ $630 ಮಿಲಿಯನ್) (ಅಮೆರಿಕ) (ತಂತ್ರಜ್ಞಾನ)

 ಶ್ರೀಮಂತರ ಪಟ್ಟಿಯಲ್ಲಿ ಕುಸಿತ ಕಂಡ ಅದಾನಿ, ಅಂಬಾನಿ- ಎಷ್ಟನೇ ಸ್ಥಾನ?

7. ಲ್ಯಾರಿ ಎಲಿಸನ್ - ($99.5 ಬಿಲಿಯನ್ (+ $2 ಬಿಲಿಯನ್ ) ( + $7.64 ಬಿಲಿಯನ್) ( ಅಮೆರಿಕ) ( ತಂತ್ರಜ್ಞಾನ)
8. ಲ್ಯಾರಿ ಪೇಜ್- ( $92.3 ಬಿಲಿಯನ್) (+ $1.44 ಬಿಲಿಯನ್) ( + $9.42 ಬಿಲಿಯನ್) ( ಅಮೆರಿಕ) ( ತಂತ್ರಜ್ಞಾನ)
9. ಸೆರ್ಗೆ ಬ್ರಿನ್ ( $88.7 ಬಿಲಿಯನ್ ) ( + $1.44 ಬಿಲಿಯನ್ ) ( + $ 9.3 ಬಿಲಿಯನ್ ) ( ಅಮೆರಿಕ ) ( ತಂತ್ರಜ್ಞಾನ)
10. ಸ್ಟೀವ್ ಬಾಲ್ಮರ್- ( $86.9 ಬಿಲಿಯನ್) ( + $778 ಮಿಲಿಯನ್) ( + $ 1.08 ಬಿಲಿಯನ್) ( ಅಮೆರಿಕ) ( ತಂತ್ರಜ್ಞಾನ)
12. ಮುಖೇಶ್ ಅಂಬಾನಿ- ( $84.7 ಬಿಲಿಯನ್) ( - $457 ಮಿಲಿಯನ್) ( - $2.38 ಬಿಲಿಯನ್) ( ಭಾರತ) ( ಎನರ್ಜಿ)
45. ಶಪೂರ್ ಮಿಸ್ತ್ರಿ- ( $29.2 ಬಿಲಿಯನ್) ( + $245 ಮಿಲಿಯನ್) ( + $1.39 ಬಿಲಿಯನ್) ( ಭಾರತ) ( ಕೈಗಾರಿಕಾ)
51. ಶಿವ ನಾಡರ್- ( $26.5 ಬಿಲಿಯನ್ ) ( + $194 ಮಿಲಿಯನ್) ( + $1.98 ಬಿಲಿಯನ್ ) ( ಭಾರತ) ( ತಂತ್ರಜ್ಞಾನ)
57. ಅಜೀಂ ಪ್ರೇಮ್ಜಿ- ( $25 ಬಿಲಿಯನ್ ) ( + $72.2 ಮಿಲಿಯನ್ ) ( + $1.03 ಬಿಲಿಯನ್ ) ( ಭಾರತ ) ( ತಂತ್ರಜ್ಞಾನ )
81. ಲಕ್ಷ್ಮಿ ಮಿತ್ತಲ್- ( $19.4 ಬಿಲಿಯನ್) ( + $125 ಮಿಲಿಯನ್) ( + $1.99 ಬಿಲಿಯನ್ ) ( ಭಾರತ) ( ಸರಕುಗಳು )
97. ಸೈರಸ್ ಪೂನಾವಲ್ಲ- ( $17.2 ಬಿಲಿಯನ್ ) ( + $115 ಮಿಲಿಯನ್ ) ( + $3.01 ಬಿಲಿಯನ್ ) ( ಭಾರತ ) ( ಹೆಲ್ತ್ ಕೇರ್ )
100. ರಾಧಾಕಿಶನ್ ಧಮನಿ- ( $16.8 ಬಿಲಿಯನ್) ( - $442 ಮಿಲಿಯನ್) ( - $2.53 ಬಿಲಿಯನ್) ( ಭಾರತ ) ( ಚಿಲ್ಲರೆ ವ್ಯಾಪಾರ )

English summary

World's Richie Rich: Gautam Adani no more the 3rd richest person in world

Gautam Adani, India's richest businessman, is currently no longer in third place among the world's richest people,
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X