For Quick Alerts
ALLOW NOTIFICATIONS  
For Daily Alerts

ಆ್ಯಪಲ್ ಅನ್ನೇ ಹಿಂದಿಕ್ಕಿದ ಶಿಯೋಮಿ: ವಿಶ್ವದ 2ನೇ ಅತಿದೊಡ್ಡ ಸ್ಮಾರ್ಟ್‌ಫೋನ್ ತಯಾರಕ

|

ಸದ್ಯ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಪ್ರಬಲ ಪೈಪೋಟಿ ನಡೆಯುತ್ತಿದ್ದು, ಚೀನಾ , ತೈವಾನ್, ದಕ್ಷಿಣ ಕೊರಿಯಾದ ಸ್ಮಾರ್ಟ್‌ಫೋನ್ ತಯಾರಿಕ ಕಂಪನಿಗಳ ನಡುವೆ ಸಾಕಷ್ಟು ಪೈಪೋಟಿ ಇದೆ. ಈ ನಡುವೆ ಪ್ರಮುಖ ಸುದ್ದಿ ಹೊರಬಿದ್ದಿದ್ದು, ಚೀನಾದ ಪ್ರಮುಖ ಸ್ಮಾರ್ಟ್‌ಫೋನ್ ತಯಾರಕ ಎಕ್ಸೋಮಿಯು ಮಾರುಕಟ್ಟೆ ಗಾತ್ರದಲ್ಲಿ ಐಫೋನ್ ಅನ್ನೇ ಹಿಂದಿಕ್ಕಿದೆ.

ಚೀನಾದ ಸ್ಮಾರ್ಟ್‌ಫೋನ್ ತಯಾರಕ ಸ್ಥಳೀಯ ಪ್ರತಿಸ್ಪರ್ಧಿ ಹುವಾಯಿ ಮಾರುಕಟ್ಟೆ ಕುಸಿತದ ಲಾಭದಿಂದ ಆ್ಯಪಲ್‌ ಅನ್ನೇ ಹಿಂದಿಕ್ಕಿದ್ದು, ಸ್ಯಾಮ್‌ಸಂಗ್‌ನ ಅಗ್ರ ಸ್ಥಾನಕ್ಕೆ ಕಣ್ಣಿಟ್ಟಿದೆ.

ಆ್ಯಪಲ್ ಅನ್ನೇ ಹಿಂದಿಕ್ಕಿದ ಶಿಯೋಮಿ: ವಿಶ್ವದಲ್ಲೇ 2ನೇ ಸ್ಥಾನ

ಕ್ಯಾನಲಿಸ್ ಬಹಿರಂಗಪಡಿಸಿದ ಇತ್ತೀಚಿನ ಅಂಕಿಅಂಶಗಳ ಪ್ರಕಾರ, 2021 ರ ಎರಡನೇ ತ್ರೈಮಾಸಿಕದಲ್ಲಿ, ಶಿಯೋಮಿ ಮಾರಾಟದ ದೃಷ್ಟಿಯಿಂದ ಜಾಗತಿಕವಾಗಿ ಎರಡನೇ ಅತಿದೊಡ್ಡ ಸ್ಮಾರ್ಟ್‌ಫೋನ್‌ ತಯಾರಕ ಸಂಸ್ಥೆಯಾಗಿದೆ. ದಕ್ಷಿಣ ಕೊರಿಯಾದ ಸ್ಮಾರ್ಟ್‌ಫೋನ್ ತಯಾರಕ ಸ್ಯಾಮ್‌ಸಂಗ್ ಇನ್ನೂ ಶೇಕಡಾ 19 ರಷ್ಟು ಮಾರುಕಟ್ಟೆ ಪಾಲನ್ನು ಹೊಂದಿದೆ, ಆದರೆ ಶಿಯೋಮಿ ಅಂತರವು ಸಾಕಷ್ಟು ತಗ್ಗಿದ್ದು, ಅದೇ ಅವಧಿಯಲ್ಲಿ ಶೇಕಡಾ 17 ರಷ್ಟು ಮಾರುಕಟ್ಟೆಯನ್ನು ಹೊಂದಿದೆ.

ಶಿಯೋಮಿಯ ಮಾರಾಟವು ಲ್ಯಾಟಿನ್ ಅಮೆರಿಕಾದಲ್ಲಿ ಶೇಕಡಾ 300 ಕ್ಕಿಂತಲೂ ಹೆಚ್ಚು, ಆಫ್ರಿಕಾದಲ್ಲಿ ಶೇ. 150ರಷ್ಟು ಮತ್ತು ಪಶ್ಚಿಮ ಯುರೋಪಿನಲ್ಲಿ ಶೇ. 50ರಷ್ಟು ಹೆಚ್ಚಾಗಿದೆ. ಎಂಐ 11 ಅಲ್ಟ್ರಾ ನಂತಹ ಲೈನ್ ಫೋನ್‌ಗಳ ಮಾರಾಟವನ್ನು ಹೆಚ್ಚಿಸುವುದು ಶಿಯೋಮಿಯ ಉದ್ದೇಶವಾಗಿರಬೇಕು ಎಂದು ಕ್ಯಾನಾಲಿಸ್ ಹೇಳಿದೆ, ಆದರೆ ಶಿಯೋಮೆ ಅದೇ ಗುರಿಯನ್ನು ಹೊಂದಿರುವ ಇತರ ಚೀನಾದ ಬ್ರಾಂಡ್‌ಗಳಾದ ಒಪ್ಪೊ ಮತ್ತು ವಿವೊಗಳಿಂದ ಸವಾಲನ್ನು ಎದುರಿಸಬೇಕಾಗುತ್ತದೆ.

English summary

Xiaomi Beat Apple To Become Worlds 2nd Largest Smartphone Maker

Xiaomi has overtaken Apple to become the second largest smartphone maker in the world.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X