For Quick Alerts
ALLOW NOTIFICATIONS  
For Daily Alerts

ಯೆಸ್ ಬ್ಯಾಂಕ್‌ ಮೇಲೆ RBI ನಿರ್ಬಂಧ: 50 ಸಾವಿರ ಮಾತ್ರ ವಿತ್‌ಡ್ರಾ ಅವಕಾಶ

|

ಖಾಸಗಿ ಬ್ಯಾಂಕ್‌ಗಳಲ್ಲಿ ಒಂದಾದ ಯೆಸ್‌ ಬ್ಯಾಂಕ್‌ ಗ್ರಾಹಕರಿಗೆ ಗುರುವಾರ ಆರ್‌ಬಿಐ ಶಾಕ್ ನೀಡಿದೆ. ಬ್ಯಾಂಕ್‌ ಆಡಳಿತವನ್ನು ಸುಪರ್ದಿಗೆ ತೆಗೆದುಕೊಂಡಿರುವ 'ರಿಸರ್ವ್‌ ಬ್ಯಾಂಕ್ ಆಫ್ ಇಂಡಿಯಾ' ಹಣ ವಿತ್‌ ಡ್ರಾ ಮೇಲೆ ನಿರ್ಬಂಧ ಹೇರಿದೆ.

 

ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಯೆಸ್‌ ಬ್ಯಾಂಕ್ ಆಡಳಿತ ಮಂಡಳಿಯನ್ನು ವಜಾಗೊಳಿಸಿರುವ ಆರ್‌ಬಿಐ, ವಿತ್‌ಡ್ರಾ ಮಿತಿಯನ್ನು ತಕ್ಷಣವೇ ಜಾರಿಗೆ ಬರುವಂತೆ 50 ಸಾವಿರ ರುಪಾಯಿಗೆ ನಿಗದಿ ಮಾಡುವ ಮೂಲಕ ಬ್ಯಾಂಕ್ ಗ್ರಾಹಕರಿಗೆ ಆಘಾತ ನೀಡಿದೆ. ಈ ಮೂಲಕ ಗ್ರಾಹಕರು ಕೇವಲ 50 ಸಾವಿರ ಮಾತ್ರ ವಿತ್‌ಡ್ರಾ ಮಾಡಿಕೊಳ್ಳಬಹುದು.

 
ಯೆಸ್‌ ಬ್ಯಾಂಕ್‌ನಲ್ಲಿ 50 ಸಾವಿರ ಮಾತ್ರ ವಿತ್‌ಡ್ರಾ ಅವಕಾಶ: ಆರ್‌ಬಿಐ

ಹಣಕಾಸು ಇಲಾಖೆ ಗುರುವಾರ ಸಂಜೆ ಹೊರಡಿಸಿರುವ ಸುತ್ತೋಲೆಯಲ್ಲಿ ಬ್ಯಾಂಕ್‌ನಲ್ಲಿ ಇಟ್ಟಿರುವ ಎಲ್ಲಾ ಠೇವಣಿಗಳ ವಿತ್‌ ಡ್ರಾ ಮೇಲೆ ಈ ಮಿತಿ ಇರಲಿದೆ. ಈ ನಿರ್ಬಂಧವು 2020 ಏಪ್ರಿಲ್ 3ರವರೆಗೆ ಜಾರಿಯಲ್ಲಿರುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಬ್ಯಾಂಕಿನ ಆರ್ಥಿಕ ಪರಿಸ್ಥಿತಿ ಗಂಭೀರವಾಗಿ ಕುಸಿದಿರುವ ಹಿನ್ನೆಲೆಯಲ್ಲಿ ಆಡಳಿತ ಮಂಡಳಿಯನ್ನು ವಜಾಗೊಳಿಸಿರುವುದಾಗಿ ಆರ್‌ಬಿಐ ಸ್ಪಷ್ಟಪಡಿಸಿದೆ. ಪ್ರತ್ಯೇಕ ಪ್ರಕಟಣೆಯಲ್ಲಿ ಆರ್‌ಬಿಐ ಬ್ಯಾಂಕ್‌ನ ಆಡಳಿತ ಮಂಡಳಿಯನ್ನು 30 ದಿನಗಳ ಕಾಲ ಸೂಪರ್‌ಸೀಡ್ ಮಾಡಿರುವುದಾಗಿ ಹೇಳಿದೆ.

ಗುರುವಾರ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಎಲ್‌ಐಸಿ ಯೆಸ್ ಬ್ಯಾಂಕ್ ನ 49 ಪರ್ಸೆಂಟ್ ರಷ್ಟು ಷೇರುಗಳನ್ನು ಖರೀದಿಸಬಹುದು ಎಂದು ವರದಿಯಾಗಿತ್ತು. ಆದರೆ ಅದರ ಬೆನ್ನಲ್ಲೇ ಈ ಬೆಳವಣಿಗೆ ಕಂಡುಬಂದಿರುವುದು ಆಶ್ಚರ್ಯ ಮೂಡಿಸಿದೆ.

English summary

Yes Bank Financial Failure Withdrawal Limit At 50,000 Rupees

The Reserve Bank of India (RBI) on March 5 said it is superseding the board of troubled private sector lender YES Bank with immediate effect.
Story first published: Friday, March 6, 2020, 9:46 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X