For Quick Alerts
ALLOW NOTIFICATIONS  
For Daily Alerts

ಅಷ್ಟ ಕಷ್ಟದಲ್ಲಿರುವ ಜಿಂಬಾಬ್ವೆಯಿಂದ ಷೇರು ಮಾರ್ಕೆಟ್ ವಹಿವಾಟು ಬಂದ್

|

ಜಿಂಬಾಬ್ವೆ ಸರ್ಕಾರ ಅಲ್ಲಿನ ಷೇರು ಮಾರುಕಟ್ಟೆ ವಹಿವಾಟನ್ನು ಸೊಮವಾರ ಅಮಾನತು ಮಾಡಿದೆ. ಆ ದೇಶದ ಕರೆನ್ಸಿಯ ರಕ್ಷಣೆಗೆ ಮುಂದಾಗಿರುವ ಸರ್ಕಾರ, ಮೊಬೈಲ್ ಹಣ ವರ್ಗಾವಣೆಯನ್ನು ಕೂಡ ತಾತ್ಕಾಲಿಕವಾಗಿ ನಿಲ್ಲಿಸಿದೆ. ಅಲ್ಲಿ ಹಣದುಬ್ಬರ ದರ ವಿಪರೀತಕ್ಕೆ ಹೋಗಿದೆ. ಸರ್ಕಾರದಿಂದ ದಿಢೀರ್ ಆಗಿ ಈ ಎರಡು ಘೋಷಣೆ ಬಂದಿದೆ.

 

ಜಿಂಬಾಬ್ವೆ ಡಾಲರ್ ಮಾರ್ಕೆಟ್ ವಿನಿಮಯ ದರಕ್ಕೂ ಹಾಗೂ ಅಧಿಕೃತ ವಿನಿಮಯ ದರಕ್ಕೂ ಭಾರೀ ವ್ಯತ್ಯಾಸ ಇದೆ. ಅದಕ್ಕೆ ಮೊಬೈಲ್ ಹಣ ವರ್ಗಾವಣೆಯೇ ಕಾರಣ ಎಂದು ಮಾಹಿತಿ ಸಚಿವಾಲಯದ ಕಾರ್ಯದರ್ಶಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಸ್ತುಗಳು ಹಾಗೂ ಸೇವೆಗಳ ದರ ಸಿಕ್ಕಾಪಟ್ಟೆ ಜಾಸ್ತಿ ಆಗುವುದಕ್ಕೆ ವಿನಿಮಯ ದರದ ಕಾಳಸಂತೆಯೇ ಕಾರಣ ಎಂದು ಅವರು ಆರೋಪ ಮಾಡಿದ್ದಾರೆ. ಜತೆಗೆ ಜಿಂಬಾಬ್ವೆ ಸ್ಟಾಕ್ ಎಕ್ಸ್ ಚೇಂಜ್ ನಲ್ಲಿ ನಡೆಯುತ್ತಿರುವ ಅನೈತಿಕ ಚಟುವಟಿಕೆಗಳಿಂದ ಆರ್ಥಿಕತೆಗೆ ಪೆಟ್ಟು ಬಿದ್ದಿದೆ ಎಂದಿದ್ದಾರೆ.

ಜಿಂಬಾಬ್ವೆ ಆರ್ಥಿಕತೆಯ ಶವಪೆಟ್ಟಿಗೆಗೆ ಕೊನೆ ಮೊಳೆ

ಜಿಂಬಾಬ್ವೆ ಆರ್ಥಿಕತೆಯ ಶವಪೆಟ್ಟಿಗೆಗೆ ಕೊನೆ ಮೊಳೆ

ಜಿಂಬಾಬ್ವೆ ಸ್ಟಾಕ್ ಎಕ್ಸ್ ಚೇಂಜ್ (ZSE) ಮುಖ್ಯಾಧಿಕಾರಿ ಜಸ್ಟಿನ್ ಗೋನಿ ಮಾತನಾಡಿ, ನೀತಿ ನಿರೂಪಕರ ಆದೇಶಕ್ಕಾಗಿ ಎದುರು ನೋಡುತ್ತಿದ್ದೇವೆ. ಮುಂದಿನ ಆದೇಶದ ತನಕ ವಹಿವಾಟನ್ನು ಅಮಾನತಿನಲ್ಲಿ ಇಡಲಾಗುವುದು ಎಂದು ತಿಳಿಸಿದ್ದಾರೆ. ಆರ್ಥಿಕ ತಜ್ಞರು ಹೇಳುವ ಪ್ರಕಾರ, ಸ್ಟಾಕ್ ಎಕ್ಸ್ ಚೇಂಜ್ ಮುಚ್ಚುವುದು ಹಾಗೂ ಮೊಬೈಲ್ ಹಣ ವರ್ಗಾವಣೆ ಮಿತಿಗೊಳಿಸುವ ನಡೆಯಿಂದ ಬಹಳ ತೊಂದರೆ ಆಗುತ್ತದೆ. ಆರ್ಥಿಕತೆ ಶವಪೆಟ್ಟಿಗೆಗೆ ಸರ್ಕಾರದ ಈ ನಡೆಯು ಮತ್ತೊಂದು ಮೊಳೆ ಹೊಡೆದಂತೆ. ಮತ್ತೆ ದೀರ್ಘಾವಧಿಯಲ್ಲಿ ಏನಾಗುತ್ತದೆ ಎಂದು ಯಾರಿಗೂ ಹೇಳಲು ಸಾಧ್ಯವಿಲ್ಲ ಎಂದು ಜಿಂಬಾಬ್ವೆ ವಿಶ್ವವಿದ್ಯಾಲಯದ ಪ್ರೊಫೆಸರ್ ಟೋನಿ ಹಾಕಿನ್ಸ್ ಹೇಳಿದ್ದಾರೆ. ಇದರಿಂದ ಅನಿಶ್ಚಿತತೆ ಕಾಡುತ್ತದೆ ಹಾಗೂ ಹೂಡಿಕೆದಾರರ ವಿಶ್ವಾಸದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಇದರರ್ಥ ಯಾರು ಸ್ಟಾಕ್ ಎಕ್ಸ್ ಚೇಂಜ್ ಬಳಸಿಕೊಂಡು, ಷೇರು ಖರೀದಿ ಮಾಡುವ ಮೂಲಕ ಜಿಮ್ ಡಾಲರ್ ಗಳನ್ನು ಪಡೆಯುತ್ತಿದ್ದರೋ ಅವರಿಗೆ ಬಾಗಿಲು ಮುಚ್ಚಿದಂತಾಗಿದೆ ಎಂದು ಹಾಕಿನ್ಸ್ ಹೇಳಿದ್ದಾರೆ.

ಮೊಬೈಲ್ ಹಣ ವರ್ಗಾವಣೆಗೆ ಮಿತಿ
 

ಮೊಬೈಲ್ ಹಣ ವರ್ಗಾವಣೆಗೆ ಮಿತಿ

ಈ ಮಧ್ಯೆ ಜಿಂಬಾಬ್ವೆಯ ಕೇಂದ್ರ ಬ್ಯಾಂಕ್ ಹೇಳಿಕೆ ನೀಡಿ, ಮೊಬೈಲ್ ಹಣ ವರ್ಗಾವಣೆ ಸಂಪೂರ್ಣವಾಗಿ ನಿಲ್ಲಿಸಲು ಎಂಬುದನ್ನು ಹೇಳಿದೆ. ಆದರೆ ಒಂದು ದಿನಕ್ಕೆ ಗರಿಷ್ಠ ಮಿತಿ ಎಂದು 87 US$ಗೆ ನಿಗದಿ ಮಾಡಲಾಗಿದೆ. ಈಗಾಗಲೇ ಬಿಕ್ಕಟ್ಟಿನಿಂದ ನರಳುತ್ತಿರುವ ದೇಶ ಜಿಂಬಾಬ್ವೆಯಲ್ಲಿ ಈಗಿನ ಆದೇಶ ಮತ್ತಷ್ಟು ಗೊಂದಲ ಸೃಷ್ಟಿಸಿದೆ. ಈ ಮೊಬೈಲ್ ಹಣ ವರ್ಗಾವಣೆ ಮಿತಿ ಏಕೆ ಮಾಡಲಾಗಿದೆ ಅಂದರೆ, ಕೆಲವು ಏಜೆಂಟರು ಮೊಬೈಲ್ ಹಣ ವರ್ಗಾವಣೆ ಮಾಡಿಕೊಂಡು, ಬದಲಿಗೆ ನಗದು ನೀಡುತ್ತಿದ್ದಾರೆ. ಅವರಿಗೆ ಈ ಕಮಿಷನ್ ಹಣದಿಂದಲೇ ಜೀವನ ನಡೆಯುತ್ತಿದೆ. ಸರ್ಕಾರದ ಈಗಿನ ನಿರ್ಧಾರದಿಂದ ಅಂಥವರಿಗೆ ಆದಾಯಕ್ಕೆ ದಾರಿ ಇಲ್ಲದಂತಾಗುತ್ತದೆ ಎನ್ನುತ್ತಾರೆ ಜಿಂಬಾಬ್ವೆ ರಾಜಧಾನಿ ಹರಾರೆಯ ನಿವಾಸಿಯೊಬ್ಬರು.

ಹಣದುಬ್ಬರ ದರ 785.6 ಪರ್ಸೆಂಟ್

ಹಣದುಬ್ಬರ ದರ 785.6 ಪರ್ಸೆಂಟ್

ಜಿಂಬಾಬ್ವೆಯ ಆರ್ಥಿಕ ಪರಿಸ್ಥಿತಿ ದಶಕಗಳಲ್ಲೇ ಹೀನಾಯವಾಗಿದೆ. ತೈಲ, ಆಹಾರ ಪದಾರ್ಥಗಳಿಗೂ ಕೊರತೆ ಇದೆ. ಮೂಲ ಅಗತ್ಯದ ವಸ್ತುಗಳು ವಾರವಾರಕ್ಕೂ ಏರುತ್ತಲೇ ಇವೆ. ಜಿಂಬಾಬ್ವೆ ಡಾಲರ್ ಪಾತಾಳ ತಲುಪಿದೆ. ಮೇ ತಿಂಗಳಲ್ಲಿ ಆ ದೇಶದ ಅಧಿಕೃತ ವಾರ್ಷಿಕ ಹಣದುಬ್ಬರ ದರ 785.6 ಪರ್ಸೆಂಟ್ ಇತ್ತು. ಹದಿನಾರು ವರ್ಷಗಳ ಹಿಂದೆ ಒಮ್ಮೆ ವಿದೇಶಿ ಕರೆನ್ಸಿಗಳ ಹರಾಜು ಹಾಕಿತ್ತು ಜಿಂಬಾಬ್ವೆ. ಕಳೆದ ವಾರ ಮತ್ತೊಮ್ಮೆ ಅದೇ ರೀತಿ ಹರಾಜು ಹಾಕಿತು. ಆ ನಂತರ ತೈಲ ದರದಲ್ಲಿ 152 ಪರ್ಸೆಂಟ್ ಏರಿಕೆ ಆಗಿದೆ. ಇತ್ತೀಚಿನ ವಾರಗಳಲ್ಲಿ ಬ್ರೆಡ್ ದರವೂ ಹೆಚ್ಚಳವಾಗಿದೆ. ದೇಶದ ಜನಸಂಖ್ಯೆಯ ಬಹುಪಾಲು ಬಡತನದಲ್ಲೇ ಇದೆ. 77 ಲಕ್ಷ ಅಥವಾ ಜಿಂಬಾಬ್ವೆಯ ಒಟ್ಟು ಜನಸಂಖ್ಯೆಯ ಅರ್ಧದಷ್ಟು ಬಡತನದಲ್ಲಿ ಇದ್ದಾರೆ. ಅವರಿಗೆ ಆಹಾರದ ನೆರವು ನೀಡಬೇಕಿದೆ ಎಂದು ವಿಶ್ವಸಂಸ್ಥೆಯ ನೆರವು ನೀಡುವ ಏಜೆನ್ಸಿಗಳು ಹೇಳಿವೆ.

English summary

Zimbabwe Stock Exchange Trading Suspended By Government On June 29

Crisis hit Zimbabwe government suspended stock exchange trading on Monday and cancelled mobile money transfer on Friday. Here is an explainer about Zimbabwe economy.
Story first published: Monday, June 29, 2020, 20:00 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X