For Quick Alerts
ALLOW NOTIFICATIONS  
For Daily Alerts

ಆಲೂಗಡ್ಡೆ ಬೆಳೆದು ವರ್ಷಕ್ಕೆ 25 ಕೋಟಿ ಗಳಿಸುವ ರೈತ ಕುಟುಂಬ; ಅದ್ಯಾವ ತಳಿ ಗೊತ್ತೆ?

|

ಅದು ಹತ್ತು ರೈತರನ್ನು ಒಳಗೊಂಡ ಕುಟುಂಬ. ಅವರ ವಾರ್ಷಿಕ ಆದಾಯ ಎಷ್ಟು ಅಂತ ತಿಳಿದರೆ, "ಏನು ನೋಟು ಪ್ರಿಂಟ್ ಮಾಡ್ತಾರಾ?" ಎಂದು ನೀವು ಅಚ್ಚರಿ ಪಡಬಹುದು. ಆದರೂ ಇದು ಸತ್ಯ ಈ ಕುಟುಂಬದ ವಾರ್ಷಿಕ ವರಮಾನ ಇಪ್ಪತ್ತೈದು ಕೋಟಿ ರುಪಾಯಿ. ಒಂದು ವರ್ಷಕ್ಕೆ ಇಪ್ಪತ್ತು ಸಾವಿರ ಮೆಟ್ರಿಕ್ ಟನ್ ಆಲೂಗಡ್ಡೆ ಬೆಳೆದು, ಗಳಿಸುವ ಆದಾಯ ಇದು.

 

ಗುಜರಾತ್ ನ ಅರವಳಿ ಜಿಲ್ಲೆಯ ದೋಲ್ಪುರ್ ಕಂಪಾ ಹಳ್ಳಿಯ ಜಿತೇಶ್ ಪಟೇಲ್ ಮತ್ತು ಅವರ ಕುಟುಂಬ ಅದೃಷ್ಟವೇ ಬದಲಾಗಿದ್ದು ಕೃಷಿ ವಿಜ್ಞಾನವನ್ನು ಲೇಡಿ ರೊಸೆಟ್ಟ (ಎಲ್ ಆರ್) ಬೆಳೆಯಲು ಬಳಸಿಕೊಂಡಾಗ. ಈ ತಳಿಯ ಆಲೂಗಡ್ಡೆಯನ್ನು ಚಿಪ್ಸ್ ಮತ್ತು ವೇಫರ್ಸ್ ಗಾಗಿ ಬಳಸಲಾಗುತ್ತದೆ.

ಇಪ್ಪತ್ತಾರು ವರ್ಷದಿಂದ ಅಲೂಗಡ್ಡೆ ಬೆಳೆಯಲಾಗುತ್ತಿದೆ

ಇಪ್ಪತ್ತಾರು ವರ್ಷದಿಂದ ಅಲೂಗಡ್ಡೆ ಬೆಳೆಯಲಾಗುತ್ತಿದೆ

ಬಾಲಾಜಿ ಮತ್ತು ಐಟಿಸಿಯಂಥ ಮುಂಚೂಣಿ ಚಿಪ್ಸ್ ತಯಾರಿಕೆ ಸಂಸ್ಥೆಗಳಿಗೆ ಈ ಕುಟುಂಬ ಆಲೂಗಡ್ದೆ ಪೂರೈಸುತ್ತದೆ. ಅಂದ ಹಾಗೆ ಕಳೆದ ಇಪ್ಪತ್ತಾರು ವರ್ಷದಿಂದ ಈ ಕುಟುಂಬ ಆಲೂಗಡ್ಡೆ ಬೆಳೆಯುತ್ತಿದೆ. "2005ರಲ್ಲಿ ಕೃಷಿ ವಿಜ್ಞಾನದಲ್ಲಿ ಎಂ.ಎಸ್ಸಿ ಮುಗಿಸಿದ ಮೇಲೆ ಕೃಷಿಗೆ ಹಿಂತಿರುಗುವುದು ನನ್ನ ಗುರಿಯಾಗಿತ್ತು. ಅದಕ್ಕೂ ಮುನ್ನ ನನ್ನ ಕುಟುಂಬ ಟೇಬಲ್ ತಳಿಯ ಆಲೂಗಡ್ಡೆ ಬೆಳೆಯುತ್ತಿದ್ದರು. ಅದರಲ್ಲಿ ವಿಭಿನ್ನತೆ ತರಲು ನಾನು ನಿರ್ಧರಿಸಿದೆ" ಎನ್ನುತ್ತಾರೆ ಪಟೇಲ್.

ಶೇಕಡಾ ನೂರರಷ್ಟು ಎಲ್ ಆರ್ ಆಲೂಗಡ್ಡೆ

ಶೇಕಡಾ ನೂರರಷ್ಟು ಎಲ್ ಆರ್ ಆಲೂಗಡ್ಡೆ

ಹದಿಮೂರು ವರ್ಷಗಳ ಹಿಂದೆ ಪಟೇಲ್ ಅವರು ಹತ್ತು ಎಕರೆ ಭೂಮಿಯಲ್ಲಿ ಎಲ್ ಆರ್ ತಳಿಯ ಆಲೂಗಡ್ಡೆ ಬೆಳೆಯಲು ಆರಂಭಿಸಿದ್ದಾರೆ. ಆ ನಂತರ ಇಳುವರಿ ಅದ್ಭುತವಾಗಿ ಬಂದಿದೆ. ಆಗ ಕುಟುಂಬದವರನ್ನೂ ಇದರಲ್ಲಿ ತೊಡಗಿಸಿಕೊಳ್ಳುವುದಕ್ಕೆ ನಿರ್ಧರಿಸಿದ್ದಾರೆ. ಈ ವರೆಗೆ ನೂರರಷ್ಟು ಪ್ರಮಾಣದಲ್ಲಿ ಎಲ್ ಆರ್ ಆಲೂಗಡ್ಡೆಯನ್ನೇ ಬೆಳೆಯುತ್ತಿದ್ದಾರೆ.

ಇಂಡೋನೇಷ್ಯಾ, ಕುವೈತ್, ಒಮನ್ ಗೆ ರಫ್ತು
 

ಇಂಡೋನೇಷ್ಯಾ, ಕುವೈತ್, ಒಮನ್ ಗೆ ರಫ್ತು

ಕಳೆದ ಒಂದು ವರ್ಷದಲ್ಲಿ ಎಲ್ ಆರ್ ತಳಿಯ ಒಂದು ಲಕ್ಷ ಟನ್ ಆಲೂಗಡ್ಡೆಯನ್ನು ಗುಜರಾತ್ ನಿಂದ ಇಂಡೋನೇಷ್ಯಾ, ಕುವೈತ್ ಮತ್ತು ಒಮನ್ ಗೆ ರಫ್ತು ಮಾಡಲಾಗಿದೆ. ಆಲೂಗಡ್ಡೆ ಚಿಪ್ಸ್ ತಯಾರಿಕರಿಗೆ ಉತ್ತಮ ಗುಣಮಟ್ಟದ ಎಲ್ ಆರ್ ತಳಿಯ ಆಲೂಗಡ್ಡೆ ಅಗತ್ಯವು ನಿರಂತರವಾಗಿ ಇರುತ್ತದೆ.

ವಿವಿಧ ಕ್ಷೇತ್ರದಲ್ಲಿ ತಜ್ಞರಿದ್ದಾರೆ

ವಿವಿಧ ಕ್ಷೇತ್ರದಲ್ಲಿ ತಜ್ಞರಿದ್ದಾರೆ

ಪಟೇಲ್ ಹೇಳುವ ಪ್ರಕಾರ, ಅವರ ಕುಟುಂಬದ ಒಬ್ಬೊಬ್ಬ ಸದಸ್ಯರು ಒಂದೊಂದು ಕ್ಷೇತ್ರದಲ್ಲಿ ತಜ್ಞರು. ಮೈಕ್ರೋಬಯಾಲಜಿ, ಎಂಟೋಮಾಲಜಿ, ಪಾಥಾಲಜಿ, ತೋಟಗಾರಿಕೆ ಹೀಗೆ ನಾನಾ ಕ್ಷೇತ್ರದಲ್ಲಿ ತಜ್ಞರಿದ್ದಾರೆ. ಚಿಪ್ಸ್ ಮತ್ತು ವೇಫರ್ ಉತ್ಪಾದಕರ ಜತೆಗೆ ದೀರ್ಘಾವಧಿ ಒಪ್ಪಂದ ಮಾಡಿಕೊಂಡು, ಕೇಜಿಗೆ ಹದಿನೇಳು ರುಪಾಯಿಗಳಂತೆ ಪೂರೈಸಲಾಗುತ್ತಿದೆ.

English summary

10 Members Farmers Family Earns 25 Crore Yearly By Growing Potato

Lady Rosetta potato earning 25 crore yearly to this farmers family. Here is the complete details.
Story first published: Thursday, January 30, 2020, 17:17 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X