ಆಗಸ್ಟ್ 15ರಿಂದ ಇಪಿಎಫ್ ಆನ್ ಲೈನ್ ವರ್ಗ

ಆಗಸ್ಟ್ 15ರಿಂದ ಇಪಿಎಫ್ ಆನ್ ಲೈನ್ ವರ್ಗ
ನವದೆಹಲಿ, ಜು. 29: ಭವಿಷ್ಯ ನಿಧಿಯನ್ನು ಆನ್ ಲೈನ್ ಮೂಲಕ ವರ್ಗಾಯಿಸುವ ನೂತನ ಕ್ರಮವನ್ನು ಉದ್ಯೋಗಿಗಳ ಭವಿಷ್ಯನಿಧಿ ಸಂಸ್ಥೆ (ಇಎಫ್ ಪಿಒ)ಯು ಸ್ವಾತಂತ್ರ ದಿನದ ಬಳಿಕ ಜಾರಿಗೆ ತರಲಿದೆ. ಇದರಿಂದ ವಾರ್ಷಿಕವಾಗಿ ಸುಮಾರು 13 ಲಕ್ಷ ಫಲಾನುಭವಿಗಳಿಗೆ ಉಪಯೋಗವಾಗಲಿದೆ ಎಂದು ಸಂಸ್ಥೆ ತಿಳಿಸಿದೆ.

ಸಂಸ್ಥೆಯು ಉದ್ಯೋಗಿಗಳ ಡಿಜಿಟಲ್ ಹಸ್ತಾಕ್ಷರವನ್ನು ಈಗಾಗಲೇ ನೋಂದಾಯಿಸಿಕೊಳ್ಳಲು ಆರಂಭಿಸಿದ್ದು, ಪೂರ್ವಾಪೇಕ್ಷಿತವಾಗಿ ಸೌಲಭ್ಯಗಳನ್ನು ಒದಗಿಸಿಕೊಡುವುದು ಹಾಗೂ ಉದ್ಯೋಗಿಗಳ ಅಗಾಧ ಪ್ರತಿಕ್ರಿಯೆಯನ್ನು ಎದುರು ನೋಡುವುದು ಇದರ ಹಿಂದಿರುವ ಉದ್ದೇಶವಾಗಿದೆ.

ಹೆಚ್ಚಿನ ಎಲ್ಲಾ ಕಂಪೆನಿಗಳಲ್ಲಿ ದುಡಿಯುತ್ತಿರುವ ಉದ್ಯೋಗಿಗಳ ಹಸ್ತಾಕ್ಷರಗಳನ್ನು ಮುಂದಿನ 2 ವಾರಗಳಲ್ಲಿ ಸಂಗ್ರಹಿಸಲಾಗುವುದು ಎಂಬ ವಿಶ್ವಾಸವನ್ನು ಇಪಿಎಫ್ ಒ ಪ್ರಕಟಿಸಿದೆ. ನಂತರ ಆನ್ ಲೈನ್ ವರ್ಗಾವಣಾ ಸೇವೆಯನ್ನು ವಿದ್ಯುಕ್ತವಾಗಿ ಆರಂಭಿಸಲಾಗುವುದು ಎಂದು ಇಎಫ್ ಪಿಒ ತಿಳಿಸಿದೆ.

ನೂತನ ಕ್ರಮವನ್ನು ಸ್ವಾತಂತ್ರ ದಿನದಂದು ಜಾರಿಗೆ ತಂದ ಬಳಿಕ ಈ ಸಂಬಂಧ ಜಾಗೃತಿ ಅಭಿಯಾನವನ್ನೂ ಆಯೋಜಿಸಲಾಗುವುದು ಎಂದು ಮೂಲಗಳು ಮಾಹಿತಿ ನೀಡಿವೆ. ನೂತನ ಯೋಜನೆಯ ಪ್ರಯೋಜನವನ್ನು ಶೇ. 80 ಐಟಿ ಉದ್ಯೋಗಿಗಳು ಪಡೆಯಲಿದ್ದು, ಮುಂದಿನ ಎರಡು ವಾರದಲ್ಲಿ ಅವರ ಡಿಜಿಟಲ್ ಹಸ್ತಾಕ್ಷರಗಳನ್ನು ಸಂಗ್ರಹಿಸಲಾಗುವುದು.

ಕಾರ್ಪೊರೇಟ್ ಸಚಿವಾಲಯದೊಂದಿಗೆ ಅವರು ಇದೀಗಲೇ ಡಿಜಿಟಲ್ ಹಸ್ತಾಕ್ಷರಗಳನ್ನು ಹಂಚಿಕೊಂಡಿರುವ ಕಾರಣ ಅವರ ಹಸ್ತಾಕ್ಷರವನ್ನು ಸಂಗ್ರಹಿಸಲು ಇಪಿಎಫ್ ಒ ಪ್ರಯಾಸ ಪಡುವ ಅಗತ್ಯವಿಲ್ಲ. ಆನ್ ಲೈನ್ ಸೇವೆಗಳ ಮೂಲಕ ಭವಿಷ್ಯ ನಿಧಿಯನ್ನು ಕೇವಲ ಮೂರು ದಿನಗಳಲ್ಲಿ ವರ್ಗಾಯಿಸಲಾಗುವುದು ಹಾಗೂ ಇದರಿಂದ ಸಮಯವು ಉಳಿತಾಯವಾಗುವುದು ಎಂದು ಇಪಿಎಫ್ ಒ ತಿಳಿಸಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+