For Quick Alerts
ALLOW NOTIFICATIONS  
For Daily Alerts

ಮೊಬೈಲಿನಲ್ಲೇ ಇಪಿಎಫ್ ಬ್ಯಾಲೆನ್ಸ್ ಚೆಕ್ ಮಾಡಿ

By Mahesh
|

ಬೆಂಗಳೂರು, ಮೇ.4: ಉದ್ಯೋಗಿಗಳ ಭವಿಷ್ಯನಿಧಿ ಮಾಹಿತಿ ಆನ್ ಲೈನ್ ನಲ್ಲಿ ಲಭ್ಯವಿರುವುದು ಎಲ್ಲರಿಗೂ ತಿಳಿದಿದೆ. ಈ ಸೌಲಭ್ಯ ಆರಂಭಿಸಿ ಎರಡು ವರ್ಷ ಕಳೆದಿದೆ. ಈಗ ಮೊಬೈಲ್ ಫೋನಿನಿಂದ ಎಸ್ಎಂಎಸ್ ಕಳುಹಿಸುವಇಪಿಎಫ್ ಬ್ಯಾಲೆನ್ಸ್ ಚೆಕ್ ಮಾಡುವ ಸೌಲಭ್ಯವನ್ನು ಒದಗಿಸಲಾಗಿದೆ.

ಭವಿಷ್ಯ ನಿಧಿಯನ್ನು ಆನ್ ಲೈನ್ ಮೂಲಕ ವರ್ಗಾಯಿಸುವ ನೂತನ ಕ್ರಮವನ್ನು ಉದ್ಯೋಗಿಗಳ ಭವಿಷ್ಯನಿಧಿ ಸಂಸ್ಥೆ (ಇಎಫ್ ಪಿಒ) ಯು ಜಾರಿಗೆ ತಂದ ಮೇಲೆ ಆನ್ ಲೈನ್ ನಲ್ಲೇ ಪಾಸ್ ಬುಕ್ ಓಪನ್ ಮಾಡಬಹುದಾಗಿತ್ತು. ಇದರಿಂದ ವಾರ್ಷಿಕವಾಗಿ ಲಕ್ಷಾಂತರ ಫಲಾನುಭವಿಗಳಿಗೆ ಉಪಯೋಗವಾಗಲಿದೆ.

ಮೊಬೈಲ್ ಫೋನ್ ಮೂಲಕ ಇಪಿಎಫ್ ಬ್ಯಾಲೆನ್ಸ್ ತಿಳಿಯಲು ಉದ್ಯೋಗ ಸಂಸ್ಥೆ ನೀಡುವ ಯೂನಿವರ್ಸಲ್ ಅಕೌಂಟ್ ನಂಬರ್ (UAN) ಹೊಂದಿರಬೇಕು. ಈ ಮೂಲಕ ಭವಿಷ್ಯ ನಿಧಿ ಮೊತ್ತವನ್ನು ತಿಳಿಯಬಹುದು. ಹಳೆ ಪಿಎಫ್ ನಂಬರ್ ಕೂಡಾ ಯುಎಎನ್ ಗೆ ಹೊಂದಿಸಿಕೊಳ್ಳಬಹುದು.

ಮೊಬೈಲಿನಲ್ಲೇ ಇಪಿಎಫ್ ಬ್ಯಾಲೆನ್ಸ್ ಚೆಕ್ ಮಾಡಿ

ಪದೇ ಪದೇ ಉದ್ಯೋಗ ಬದಲಾಯಿಸುವವರೂ ಕೂಡಾ ಪಿಎಫ್ ನಂಬರ್ ಬದಲಾವಣೆಯಾದರೆ ಯುಎಎನ್ ನಂಬರ್ ಮೂಲಕ ಇಪಿಎಫ್ ವರ್ಗಾವಣೆ ಆನ್ ಲೈನ್ ನಲ್ಲೇ ಮಾಡಿಕೊಳ್ಳಬಹುದು. ಅದರೆ, ಇಪಿಎಫ್ ವರ್ಗಾವಣೆ ಹಾಗೂ ವಿಥ್ ಡ್ರಾ ಮಾಡಲು ಕೆಲ ಸಮಯ ಹಿಡಿಯುತ್ತದೆ. [ಇಪಿಎಫ್ ಆನ್ ಲೈನ್ ವರ್ಗ]

ಮೊಬೈಲ್ ಮೂಲಕ ಚೆಕ್ ಮಾಡುವ ವಿಧಾನ
ಇಪಿಎಫ್ ಒ ಈಗ ಎಸ್ಎಂಎಸ್ ಬ್ಯಾಲೆನ್ಸ್ ಚೆಕ್ಕಿಂಗ್ ವ್ಯವಸ್ಥೆ ನೀಡುತ್ತಿದೆ. ಯುಎಎನ್ ಹಾಗೂ ನೋಂದಾಯಿತ ಮೊಬೈಲ್ ಸಂಖ್ಯೆ ಇದ್ದರೆ ಬ್ಯಾಲೆನ್ಸ್ ವಿವರ ಪಡೆದುಕೊಳ್ಳಬಹುದು.

ನೋಂದಾಯಿತ ಮೊಬೈಲ್ ಫೋನಿನಿಂದ ಹೀಗೆ ಟೈಪ್ ಮಾಡಿ
EPFOHO UAN ENG ಈ ಸಂದೇಶವನ್ನು 7738299899 ಸಂಖ್ಯೆಗೆ ಎಸ್ಎಂಎಸ್ ಕಳಿಸಿ

ಕನ್ನಡದಲ್ಲೂ ಮಾಹಿತಿ: ಇಪಿಎಫ್ಒ ಈಗ 10 ಭಾಷೆಗಳಲ್ಲಿ ಬ್ಯಾಲೆನ್ಸ್ ಮಾಹಿತಿ ನೀಡುತ್ತಿದೆ. ಕನ್ನಡ ಅಲ್ಲದೆ ಇಂಗ್ಲೀಷ್, ಹಿಂದಿ, ಪಂಜಾಬಿ, ಗುಜರಾತಿ, ಮರಾಠಿ, ಮಲೆಯಾಳಂ, ತಮಿಳು ಹಾಗೂ ಬೆಂಗಾಲಿ.

ಗಮನಿಸಿ: ನಿಮ್ಮ ಉದ್ಯೋಗ ಸಂಸ್ಥೆಯಿಂದ ಆಧಾರ್, ಪ್ಯಾನ್ ಅಥವಾ ಬ್ಯಾಂಕ್ ಅಕೌಂಟ್ ಮಾಹಿತಿ ಡಿಜಿಟಲಿ ಅನುಮೋದನೆಯಾಗಿದ್ದರೆ ಮಾತ್ರ ಮಾಹಿತಿ ಸಿಗಲಿದೆ.

ಹೆಚ್ಚಿನ ಮಾಹಿತಿಗೆ 1800118005 ಸಹಾಯವಾಣಿಗೆ ಕರೆ ಮಾಡಿ.

ಈ ಸುದ್ದಿಯನ್ನು ಕೇಳಿಸಿಕೊಳ್ಳಿ:

(ಗುಡ್ ರಿಟರ್ನ್ಸ್,ಇನ್)

English summary

How to check Employee Provident Fund or EPF Balance Through Mobile-SMS?

Most EPF subscribers are aware that they can check their EPF balance and track the passbook online. Do you know we can check the balance even on the mobile by just sending SMS.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X