For Quick Alerts
ALLOW NOTIFICATIONS  
For Daily Alerts

ನಿಮ್ಮ ಪಿಎಫ್ ಹಣ ಪಡೆಯಲು ಮಾಲೀಕರ ಹಂಗಿಲ್ಲ

|

ಇದು ನಿಜವಾಗಿಯೂ ಉದ್ಯೋಗಿಗಳಿಗೆ ಸಂತಸದ ಸುದ್ದಿ. ಇನ್ನು ಮುಂದೆ ಇಪಿಎಫ್ ಹಣ ಪಡೆದುಕೊಳ್ಳಲು ಅಲೆದಾಡುವ ಅಗತ್ಯವಿಲ್ಲ. ಸಂಸ್ಥೆಯ ಮಾಲೀಕರ ಹಸ್ತಾಕ್ಷರಕ್ಕೆ ತಡಕಾಡುವ ಕೆಲಸವೂ ಇಲ್ಲ.

 

ನೌಕರರ ಭವಿಷ್ಯ ನಿಧಿ ಸಂಸ್ಥೆ ಚಂದಾದಾರರಿಗೆ(ಉದ್ಯೋಗಿಗಳಿಗೆ) ಮಾಲೀಕರ ದೃಢೀಕರಣವಿಲ್ಲದೇ ನಿವೃತ್ತಿ ನಿಧಿಯನ್ನು ನೇರವಾಗಿ ನೀಡುವ ವ್ಯವಸ್ಥೆ ಮಾಡಿದೆ. ಇನ್ನು ಮುಂದೆ ನೀವು ಸಹ ಮಾಲೀಕರ ಅನುಮತಿ ಕೇಳದೇ ಹಣಕ್ಕೆ ನೇರವಾಗಿ ಅರ್ಜಿ ಸಲ್ಲಿಕೆ ಮಾಡಬಹುದು.[ಯುಎಎನ್ ಎಂದರೇನು? ಡೌನ್ ಲೋಡ್ ಹೇಗೆ?]

 
ನಿಮ್ಮ ಪಿಎಫ್ ಹಣ ಪಡೆಯಲು ಮಾಲೀಕರ ಹಂಗಿಲ್ಲ

ಪಿಎಫ್ ಚಂದಾದಾರರು ಪ್ರಸಕ್ತ ಅಥವಾ ಮಾಜಿ ಮಾಲೀಕರ ಮೂಲಕ ಪಿಎಫ್ ವಾಪಸು ಪಡೆಯುತ್ತಿದ್ದರು. ಈ ಉದ್ದೇಶಕ್ಕೆ ಅನೇಕ ದೃಢೀಕರಣ ಪ್ರಕ್ರಿಯೆಗಳನ್ನು ಮಾಡಬೇಕಿತ್ತು. ಇದು ಕಡ್ಡಾಯ ಎಂದು ಹೇಳಲಾಗಿತ್ತು.

ಆದರೆ ಈಗ ನೀಡಿರುವ ಹೊಸ ಸೌಲಭ್ಯವು ಯೂನಿವರ್ಸಲ್ ಅಕೌಂಟ್ ನಂಬರ್ (ಯುಎಎನ್) ಸಕ್ರಿಯವಾದ ಮತ್ತು ಬ್ಯಾಂಕ್ ಖಾತೆ ಮತ್ತು ಆಧಾರ್ ಸಂಖ್ಯೆ ಮುಂತಾದ ಕೆವೈಸಿ ವಿವರವಿರುವ ಎಲ್ಲಾ ಚಂದಾದಾರರಿಗೆ ಲಭ್ಯವಿದೆ.[ಪಿಎಫ್ ವಿಥ್ ಡ್ರಾ ಮಾಡುವ ಮುನ್ನ ಆರು ಅಂಶ ತಲೆಯಲ್ಲಿರಲಿ]

ಯಾವ ಆಧಾರದಲ್ಲಿ ಅರ್ಜಿ ಸಲ್ಲಿಸಬೇಕು?
ಕೆಲಸ ಮಾಡುವ ಸಂಸ್ಥೆ ಬದಲಿಸಿದರೂ ಭವಿಷ್ಯ ನಿಧಿ ಸಂಖ್ಯೆ ಬದಲಾಗದಿರುವ ಸಾರ್ವತ್ರಿಕ ಖಾತೆ ಸಂಖ್ಯೆ (ಯುಎಎನ್‌) ಪಡೆದುಕೊಂಡಿದ್ದರೆ ಅದು ಬದಲಾಗುವುದಿಲ್ಲ.

ಮಾಲೀಕರ ದೃಡೀಕರಣವಿಲ್ಲದೇ ಕ್ಲೇಮುಗಳನ್ನು ನೇರವಾಗಿ ಸಲ್ಲಿಸುವವರು 19 ಯುಎಎನ್, 10-ಸಿ ಯುಎಎನ್ ಮತ್ತು 31 ಯುಎಎನ್ ಹೊಸ ಅರ್ಜಿಗಳನ್ನು ಬಳಸಬೇಕು. ಇಪಿಎಫ್‌ಒ ವೆಬ್‌ಸೈಟ್ ಪ್ರಕಾರ, 2.13 ಕೋಟಿ ಚಂದಾದಾರರು ಯುಎಎನ್ ಸಕ್ರಿಯಗೊಳಿಸಿದ್ದಾರೆ.

English summary

PF withdrawal claim without employers attestation

This is the good news for all PF subscribers . At present, subscribers submit their claims regarding provident fund withdrawals manually through their present or former employers. The attestation of the forms was mandatory for the purpose. One less hassle for provident fund subscribers after retirement fund body EPFO on Tuesday allowed filing of withdrawal applications directly to it without the attestation of employers. At present, subscribers submit their claims regarding provident fund withdrawals manually through their present or former employers.
Story first published: Thursday, December 3, 2015, 12:53 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X