For Quick Alerts
ALLOW NOTIFICATIONS  
For Daily Alerts

ಸಾಮಾನ್ಯ ನಾಗರಿಕನ ಮೇಲೆ ಬಜೆಟ್ ಪರಿಣಾಮವೇನು?

|

ಹಣಕಾಸು ಬಜೆಟ್ ಮಂಡನೆಯಾಗಿದೆ. ವಿವಿಧ ವಿಶ್ಲೇಷಣೆಗಳು ಹೊರಬಿದ್ದಿವೆ. ಗ್ರಾಮೀಣ ಅಭಿವೃದ್ಧಿ ಮತ್ತು ಕೃಷಿಗೆ ವಿಶೇಷ ಆದ್ಯತೆ ನೀಡಲಾಗಿದೆ ಎಂದು ವಿಶ್ಲೇಷಣೆ ಮಾಡಲಾಗಿದೆ.

ಈಗ ಎಲ್ಲರ ಮುಂದೆ ಇರುವ ಪ್ರಶ್ನೆ ಎಂದರೆ ಸಾಮಾನ್ಯ ನಾಗರಿಕನೊಬ್ಬನ ಮೇಲೆ ಬಜೆಟ್ ಯಾವ ಪರಿಣಾಮ ಬೀರಲಿದೆ? ಎನ್ನುವುದು. ಅದಕ್ಕೆ ಉತ್ತರ ಇಲ್ಲಿದೆ.

* ನೀವು ವರ್ಷಕ್ಕೆ 5 ಲಕ್ಷ ರು. ಸಂಪಾದನೆ ಮಾಡುತ್ತಿದ್ದೀರಾ? ನೀವು ಹೆಚ್ಚುವರಿ ಮೂರು ಸಾವಿರ ರು. ಟ್ಯಾಕ್ಸ್ ರಿಬೇಟ್ ಪಡೆದುಕೊಳ್ಳುತ್ತೀರಿ.[ಆದಾಯ ತೆರಿಗೆ ದರ, ಮಿತಿ, ಸಂಪೂರ್ಣ ವಿವರ]

ಸಾಮಾನ್ಯ ನಾಗರಿಕನ ಮೇಲೆ ಬಜೆಟ್ ಪರಿಣಾಮವೇನು?

* ನೀವು ಬಾಡಿಗೆ ಮನೆಯಲ್ಲಿ ವಾಸವಿದ್ದು ನಿಮ್ಮ ಒಡೆತನದಲ್ಲಿ ಯಾವುದೇ ಮನೆ ಇಲ್ಲವಾದರೆ 60 ಸಾವಿರ ರು. ವರೆಗೆ ತೆರಿಗೆ ವಿನಾಯಿತಿ ಪಡೆದುಕೊಳ್ಳಲಿದ್ದಾರೆ.

* ನೀವು ಡೀಸೆಲ್ ವಾಹನವೊಂದನ್ನು ಖರೀದಿ ಮಾಡಬೇಕು ಎಂದು ಅಂದುಕೊಂಡಿದ್ದೀರಾ? ಹಾಗಾದರೆ ಸ್ವಲ್ಪ ಹೆಚ್ಚಿಗೆ ಹಣವನ್ನು ತೆಗೆದಿರಿಸಬೇಕಾಗುತ್ತದೆ.[ಕೇಂದ್ರ ಬಜೆಟ್ 2016: ಯಾವುದು ಅಗ್ಗ? ಯಾವುದು ತುಟ್ಟಿ?]

* ಸಿಗರೇಟ್ ಸೇದುವ ಅಭ್ಯಾಸವಿದ್ದರೆ ಶೇ. 10-15 ಹೆಚ್ಚುವರಿ ಹಣ ನೀಡಬೇಕಾಗುತ್ತದೆ.

* ಬ್ರ್ಯಾಂಡೆಡ್ ವಸ್ತುಗಳನ್ನು ಕೊಳ್ಳುವ ಚಾಳಿ ನಿಮಗಿದ್ದರೆ ಹೆಚ್ಚಿಗೆ ಹಣ ನೀಡಲು ಸಿದ್ಧರಿರಬೇಕಾಗಿದೆ.

* ಕಾರು ಖರೀದಿ ಮಾಡುವುದು ದುಬಾರಿ

* ಎನ್ ಪಿಎಎಸ್ ನಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚುವರಿ ತೆರಿಗೆ ವಿನಾಯಿತಿ ಲಾಭವನ್ನು ಪಡೆದುಕೊಳ್ಳಬಹುದು.

* ನ್ಯಾಶನಲ್ ಪೆನ್ಶನ್ ಸ್ಕೀಮ್ ನಲ್ಲಿ ಹೂಡಿಕೆ ಮಾಡಿದರೆ ಶೇ. 40 ರಷ್ಟು ತೆರಿಗೆ ಲಾಭ ಪಡೆದುಕೊಳ್ಳಬಹುದು.

* ಅಧಿಕ ಮೌಲ್ಯದ ಡಿವಿಡೆಂಡ್ ಪಡೆದುಕೊಂಡರೆ ನೀವು ಕೆಲ ಪ್ರಮಾಣದಲ್ಲಿ ತೆರಿಗೆ ಪದ್ಧತಿ ಅಡಿಗೆ ಬರುತ್ತೀರಿ.

* ಎನ್ ಆರ್ ಐ ಆಗಿದ್ದರೆ ಕೆಲ ದಾಖಲೆ ಪತ್ರ ಹಾಜರು ಪಡಿಸಿದರೆ ನೀವು ಕಡಿಮೆ ಪ್ರಮಾಣದ ಟಿಡಿಎಸ್ ಸಲ್ಲಿಕೆ ಮಾಡಿದರೆ ಸಾಕು.

* ಹೊಸ ಕೆಲಸಕ್ಕೆ ಸೇರುವವರೇ ಅದೃಷ್ಟವಂತರು. ಇನ್ನು ಮುಂದೆ ಮೂರು ವರ್ಷಗಳ ಕಾಲ ಇಪಿಎಫ್ ನಲ್ಲಿ ಶೇ. 8.33 ಹೆಚ್ಚುವರಿ ಲಾಭ ಪಡೆದುಕೊಳ್ಳವಬಹುದು.

* ಆರೋಗ್ಯವಿಮೆಗೆ ಸಂಬಂಧಿಸಿದ ಹೊಸ ಯೋಜನೆಯ ಅನ್ವಯ ಕುಟುಂಬಕ್ಕೆ ಒಂದು ಲಕ್ಷ ರು. ವರೆಗೆ ಲಾಭ ಸಿಗಲಿದೆ.

* ಸೆಕ್ಯೂರಿಟಿ ತೆರಿಗೆ ಹೆಚ್ಚಳವಾಗಿರುವುದರಿಂದ ಪ್ಯೂಚರ್ ಮಾರುಕಟ್ಟೆಯಲ್ಲಿ ತೊಡಗಿಕೊಂಡವರು ಹೆಚ್ಚಿನ ಹಣ ಇಟ್ಟುಕೊಂಡು ವ್ಯವಹಾರ ನಡೆಸಬೇಕಾಗುತ್ತದೆ.

ಆದಾಯ ತೆರಿಗೆ ವರ್ಗೀಕರಣದ ಪ್ರಕಾರದಲ್ಲಿ ಯಾವ ಬದಲಾವಣೆಯನ್ನು ಮಾಡಲಾಗಿಲ್ಲ. ಆದರೆ ಹಣದ ಮೌಲ್ಯದಲ್ಲಿ ಬದಲಾವಣೆ ಮಾಡಲಾಗಿದೆ. ಇದೆಲ್ಲವನ್ನು ಸೂಕ್ಷ್ಮವಾಗಿ ಗಮನಿಸಿ ಸಾಮಾನ್ಯ ಜನರು ಹೆಜ್ಜೆ ಇಡಬೇಕಾಗುತ್ತದೆ.

English summary

Union Budget 2016-17: How The Common Man Is Impacted?

The Union Budget 2016-17 has been announced with an emphasis on the rural and agricultural sector. Here are things that have got costlier and cheaper. We have added things that will affect the common man, after the implementation of the Union Budget 2016 proposals.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X