ಮುದ್ರಿತ ದಾಖಲೆಗಳನ್ನು ಕೈ ಬರಹದ ಸಹಿಯಿಂದ ದೃಢಿಕರಿಸುವಂತೆ ಡಿಜಿಟಲ್ ಸಹಿಯನ್ನು ವಿದ್ಯುನ್ಮಾನ ದಾಖಲೆಗಳನ್ನು (electronic documents) ದೃಢಿಕರಿಸಲು ಬಳಸಲಾಗುತ್ತದೆ. ಕಂಟ್ರೊಲರ್ ಸರ್ಟಿಪೈ ಆಥಾರಿಟಿ (CCA) ಅಧಿಕಾರಿಗಳು ಕೆಲ ಸರ್ಟಿಫಿಕೆಟ್ ಗಳ ಸಮಸ್ಯೆಗಳನ್ನು ಹಾಗೂ ಡಿಜಿಟಲ್ ಸಿಗ್ನೇಚರ್ ಬಳಕೆದಾರರ ಇನ್ನುಳಿದ ಸಮಸ್ಯೆಗಳನ್ನು ಸರಿಪಡಿಸಿ ದೃಢಿಕರಿಸುತ್ತಾರೆ.
ಡಿಜಿಟಲ್ ಸಿಗ್ನೇಚರ್ ಸರ್ಟಿಫಿಕೇಟ್ ನೋಂದಾಯಿಸುವ ಸರಳ ಹಂತಗಳು: ಹಂತ 1: ಇ ಫೈಲಿಂಗ್ ಆದಾಯ ತೆರಿಗೆ ಸೈಟ್ ಗೆ ಲಾಗಿನ್ ಆಗಿ ಪ್ರೊಫೈಲ್ ಸೆಟ್ಟಿಂಗ್ಸ್ ಗೆ ಹೋಗಿ ರೆಜಿಸ್ಟರ್ ಡಿಜಿಟಲ್ ಸಿಗ್ನೇಚರ್ ಸರ್ಟಿಫಿಕೇಟ್ ಮೇಲೆ ಕ್ಲಿಕ್ ಮಾಡಿ
ಹಂತ 2: DSC .pfx ಫೈಲ್ ಬಳಸಿ DSC .pfx ಫೈಲ್ ಆಯ್ಕೆ ಮಾಡಿ ಕೀ ಸ್ಟೋರ್ ಫೈಲ್ ನ್ನು ಬ್ರೌಸ್ ಮತ್ತು ಅಟ್ಯಾಚ್ ಮಾಡಿ ಖಾಸಗಿ ಕೀ ಗಾಗಿ ಪಾಸವರ್ಡ ಹಾಕಿ ಜನರೆಟ್ ಸಿಗ್ನೇಚರ ಫೈಲ್ ಮೇಲೆ ಕ್ಲಿಕ್ ಮಾಡಿ
ಹಂತ 2A:
USB ಟೋಕನ್
DSC USB ಟೋಕನ್ ಆಯ್ಕೆ ಮಾಡಿ USB ಟೋಕನ್ ಸರ್ಟಿಫಿಕೆಟ್ ಆಯ್ಕೆ ಮಾಡಿ ಜನರೆಟ್ ಸಿಗ್ನೇಚರ ಫೈಲ್ ಮೇಲೆ ಕ್ಲಿಕ್ ಮಾಡಿ
ಹಂತ 3: ಸಿಗ್ನೇಚರ್ ಫೈಲ್ ನ್ನು ಬ್ರೌಸ್ ಮತ್ತು ಅಟ್ಯಾಚ್ ಮಾಡಿ Submit ಕ್ಲಿಕ್ ಮಾಡಿ
DSCs ಬಗೆಗಿನ ಸಮಸ್ಯೆಗಳನ್ನು ಪರಿಹರಿಸಲು CCA 7 ಏಜೆನ್ಸಿಗಳನ್ನು ನೇಮಕ ಮಾಡಿದೆ. www.safescrypt.com www.nic.in www.idrbtca.org.in www.tcs-ca.tcs.co.in www.mtnltrustline.com www.ncodesolutions.com www.e-Mudhra.com