For Quick Alerts
ALLOW NOTIFICATIONS  
For Daily Alerts

ಜುಲೈ 31, 2016 ರ ಒಳಗಾಗಿ ತೆರಿಗೆ ಕಟ್ಟದಿದ್ದರೆ ಈ 7 ಅಂಶಗಳನ್ನು ತಪ್ಪದೆ ಓದಿ

|

ತೆರಿಗೆ ಕಟ್ಟಲು ನಿಮಗೆ ಜುಲೈ 31 ಕೊನೆಯ ದಿನಾಂಕವಾಗಿರುತ್ತದೆ. ನಿಮ್ಮ ಆದಾಯ ತೆರಿಗೆ ಕಟ್ಟುವಷ್ಟು ಅಂದರೆ ವಾರ್ಷಿಕವಾಗಿ 2.5 ಲಕ್ಷಗಳಿಗಿಂತ ಹೆಚ್ಚಿದ್ದಲ್ಲಿ ನೀವು ತೆರಿಗೆ ಕಟ್ಟಬೇಕಾಗುತ್ತದೆ. ಒಂದು ವೇಳೆ ಜುಲೈ 31 ರ ಒಳಗಾಗಿ ನೀವು ತೆರಿಗೆ ಕಟ್ಟದಿದ್ದಲ್ಲಿ ಏನಾಗುತ್ತದೆಂಬುದನ್ನು ತಿಳಿಯಲು ಈ ಕೆಳಗಿನ 7 ಅಂಶಗಳನ್ನು ನೋಡಿ.

1. ಫೆನಾಲ್ಟಿಸ್ (ದಂಡಗಳು)

1. ಫೆನಾಲ್ಟಿಸ್ (ದಂಡಗಳು)

ಒಂದು ವೇಳೆ ನೀವು ಜುಲೈ 31 ರ ಒಳಗಾಗಿ ತೆರಿಗೆ ಕಟ್ಟದಿದ್ದಲ್ಲಿ ದಂಡ ವಿಧಿಸಲಾಗುತ್ತದೆ. ಮೊತ್ತ ಮತ್ತು ದಂಡವನ್ನು ಎಷ್ಟು ವಿಧಿಸಬೇಕು ಎಂಬುದು ತೆರಿಗೆ ಅಧಿಕಾರಿಗಳನ್ನು ಅವಲಂಬಿಸಿರುತ್ತದೆ.

 

2. ನೀವು ತೆರಿಗೆ ಆದಾಯವನ್ನು ಬದಲಾಯಿಸಲು ಸಾಧ್ಯವಿಲ್ಲ

2. ನೀವು ತೆರಿಗೆ ಆದಾಯವನ್ನು ಬದಲಾಯಿಸಲು ಸಾಧ್ಯವಿಲ್ಲ

ಜುಲೈ 31 ಕಡೆಯ ದಿನಾಂಕವಾಗಿದ್ದು, ಅದರ ಒಳಗಾಗಿ ತೆರಿಗೆಯನ್ನು ಪಾವತಿಸಿದರೆ ನಿಮ್ಮ ತೆರಿಗೆ ಆದಾಯದ ಮೇಲೆ ನೀವು ಬದಲಾವಣೆ ತರಬಹುದು. ಇದರ ನಂತರ ತೆರಿಗೆ ಆದಾಯದ ಮೇಲೆ ಬದಲಾವಣೆ ತರಲು ಸಾಧ್ಯವಿರುವುದಿಲ್ಲ.

3. ಸೂಚನೆ ಜಾರಿ

3. ಸೂಚನೆ ಜಾರಿ

ವಾರ್ಷಿಕವಾಗಿ ನಿಮ್ಮ ಆದಾಯ 2.5 ಲಕ್ಷಕ್ಕಿಂತಲೂ ಹೆಚ್ಚಿದ್ದು, ತೆರಿಗೆ ಪಾವತಿಸದಿದ್ದಲ್ಲಿ ಆದಾಯ ತೆರಿಗೆ ಇಲಾಖೆಯವರು ನಿಮಗೆ ಸೂಚನೆ ಜಾರಿ ಮಾಡುತ್ತಾರೆ.

4. 1% ಶುಲ್ಕ

4. 1% ಶುಲ್ಕ

ಒಂದು ವೇಳೆ ಇಲಾಖೆಯವರು ತೆರಿಗೆ ಬೇಡಿಕೆ ಇಟ್ಟಲ್ಲಿ ಅದನ್ನು ಪಡೆಯುವ ಹಕ್ಕನ್ನು ಹೊಂದಿರುತ್ತಾರೆ. ಹಾಗಾಗಿ ನೀವು ತೆರಿಗೆ ಕಟ್ಟುವವರೆಗೂ ಪ್ರತಿ ತಿಂಗಳಿಗೆ 1% ನಂತೆ ಶುಲ್ಕವನ್ನು ಕಟ್ಟಬೇಕಾಗುತ್ತದೆ.

5. ನಷ್ಟವನ್ನು ಮುಂದಕ್ಕೆ ಹಾಕಲು ಬಯಸಿದ್ದಲ್ಲಿ

5. ನಷ್ಟವನ್ನು ಮುಂದಕ್ಕೆ ಹಾಕಲು ಬಯಸಿದ್ದಲ್ಲಿ

ನಿಮಗೆ ಬಂಡವಾಳ ಗಳಿಕೆಗಳಲ್ಲಿ ನಷ್ಟವಾಗಿ ತೆರಿಗೆ ಕಟ್ಟಲು ಆಗದಿದ್ದಲ್ಲಿ ಅದನ್ನು ಮುಂದಿನ ವರ್ಷಕ್ಕೆ ಮುಂದುಡಬಹುದು. ವಿಶೇಷವಾಗಿ ನಿಮಗೆ ಷೇರುಗಳ ಮಾರಾಟದ ಮೇಲೆ ಲಾಭವಿದ್ದರೆ ಮಾತ್ರ ಇದು ಸಾಧ್ಯ.

6.ನೋಟಿಸ್ ಬಂದಲ್ಲಿ ವೃತ್ತಿಪರರನ್ನು ಬೇಟಿಯಾಗಿ

6.ನೋಟಿಸ್ ಬಂದಲ್ಲಿ ವೃತ್ತಿಪರರನ್ನು ಬೇಟಿಯಾಗಿ

ಇದು ಕೇವಲ ಸಲಹೆ ಆಗಿದೆ. ನೀವು ತೆರಿಗೆ ಪಾವತಿಸುವಲ್ಲಿ ತಡವಾದಲ್ಲಿ ವೃತ್ತಿಪರ ವ್ಯಕ್ತಿಯನ್ನು ವಿಶೇಷವಾಗಿ ಚಾರ್ಟೆಡ್ ಅಕೌಂಟಂಟ್ ರನ್ನು ಬೇಟಿಯಾಗಿ ನಿಮ್ಮ ಸಮಸ್ಯೆಗೆ ಪರಿಹಾರ ಪಡೆಯಬಹುದು. ಜೊತೆಗೆ ಅವರು ತೆರಿಗೆ ಅಧಿಕಾರಿಗಳೊಂದಿಗೆ ವಿಷಯಗಳನ್ನು ಉತ್ತಮವಾಗಿ ಚರ್ಚಿಸಲು ಸಹಾಯಕವಾಗಬಹುದು.

7. ಆದಾಯ ತೆರಿಗೆ ಕಟ್ಟುವ ಕೊನೆ ದಿನ

7. ಆದಾಯ ತೆರಿಗೆ ಕಟ್ಟುವ ಕೊನೆ ದಿನ

ಜುಲೈ 31, 2016 ತೆರಿಗೆ ಪಾವತಿಸಲು ಕೊನೆಯ ದಿನಾಂಕ ಎಂಬುದನ್ನು ನೆನಪಿಡಿ. ಇದರ ಕುರಿತು ಈಗಾಗಲೆ ಸೂಚನೆ ಹೊರಡಿಸಲಾಗಿದೆ. ಹಿಂದಿನ ವರ್ಷ ಆದಾಯ ತೆರಿಗೆ ಇಲಾಖೆಯವರು ಸಮಯದ ಮಿತಿಯನ್ನು ಹೆಚ್ಚಿಸಿದ್ದರು. ಆದರೆ ಕಳೆದ ವರ್ಷ ಹೆಚ್ಚಿಸಿರಲಿಲ್ಲ. ಇಲ್ಲಿಯ ತನಕ 2015-16 ರ ಹಣಕಾಸಿನ ವರ್ಷದ ಸಮಯದ ಮಿತಿ ಹೆಚ್ಚಳದ ಕುರಿತು ಯಾವುದೆ ಸೂಚನೆ ಹೊರಡಿಸಿಲ್ಲ.

English summary

What Happens If You Do Not File Tax Returns By July 31, 2016?

July 31 is the last date to file your tax returns. If your income is above the taxable limit of Rs 2.5 lakhs per annum, you need to file your tax returns. Here is what could happen if you do not file your tax returns by July 31, 2016.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X