Englishहिन्दी മലയാളം தமிழ் తెలుగు

ಅನವಶ್ಯಕ ಖರ್ಚು ತಪ್ಪಿಸುವ 9 ಸರಳ ಮಾರ್ಗಗಳು

Written By: Siddu
Subscribe to GoodReturns Kannada

ಮನುಷ್ಯನ ಆದಾಯ ಗಳಿಸುವ ಸಾಮರ್ಥ್ಯ ಹೆಚ್ಚಾಗಿದಂತೆ ಖರ್ಚು ಮಾಡುವ ಹವ್ಯಾಸವು ಹೆಚ್ಚಾಗುತ್ತಾ ಹೋಗುತ್ತದೆ. ಯುವ ವಯೋಮಾನದವರು ಹೆಚ್ಚು ಸಂಬಳ ಗಳಿಸಿದರೂ ಮಾಸಿಕ ಖರ್ಚುವೆಚ್ಚದ ನಂತರ ಉಳಿತಾಯ ಮಾಡಲು ಸಾಧ್ಯ ಆಗುವುದೇ ಇಲ್ಲ.

ಅವಶ್ಯಕತೆ ಇಲ್ಲದಿರುವ ವಸ್ತುಗಳನ್ನು ಖರೀದಿಸುವ ಪ್ರವೃತ್ತಿಯಿಂದಾಗಿ ಅನಗತ್ಯ ಖರ್ಚು ಆಗುತ್ತಲೇ ಇರುತ್ತದೆ. ಇಂದಿನ ವಿಭಿನ್ನ ಜೀವನ ಶೈಲಿಯ ಕಾಲಮಾನದಲ್ಲಿ ಹೆಚ್ಚೆಚ್ಚು ಹಾಗೂ ಅನವಶ್ಯಕ ಖರ್ಚು ಮಾಡುವುದು ಒಂದು ತರದ ಪ್ರವೃತ್ತಿ ಮತ್ತು ಪ್ರತಿಷ್ಠೆ ಆಗುತ್ತಿದೆ.

ಆದರೆ ಕೆಲ ಸರಳ ಮಾರ್ಗಗಳನ್ನು ಅನುಸರಿಸುವುದರ ಮೂಲಕ ಅನವಶ್ಯಕ ಖರ್ಚು ವೆಚ್ಚಗಳನ್ನು ನಿಯಂತ್ರಿಸಬಹುದು. ಆರಂಭದಲ್ಲಿ ನಿಯಮಗಳನ್ನು ಪಾಲಿಸುವುದು ಕಷ್ಟವಾದರೂ ಕ್ರಮೇಣ ಉಳಿತಾಯ ಮಾಡಲು ಪ್ರಾರಂಭಿಸಿದಾಗ ಅದು ಹವ್ಯಾಸವಾಗಿ ಬದಲಾಗುತ್ತದೆ. (ಪ್ರತಿ ತಿಂಗಳ ಸಂಬಳದಲ್ಲಿ ಉಳಿತಾಯ ಮಾಡಬೇಕೆ? ಇಲ್ಲಿವೆ 8 ಮಾರ್ಗ)

ಹೀಗಾಗಿ ಅನಗತ್ಯ ಖರ್ಚುಗಳಿಗೆ ಅವಕಾಶ ಮಾಡಿಕೊಡದೆ ಉಳಿತಾಯ ಮಾಡಿ ಸಂತೋಷಕರ ಹಾಗೂ ನೆಮ್ಮದಿಯ ಜೀವನ ನಡೆಸಲು ಉಪಯೋಗ ಆಗಬಲ್ಲ 9 ಸುಲಭ ಮಾರ್ಗಗಳು ಇಲ್ಲಿವೆ ನೋಡಿ.

ಖರ್ಚು ಮಾಡುವ ಮುನ್ನ ಉಳಿತಾಯ ಮಾಡಿ

ಹೌದು. ಖರ್ಚು ಮಾಡುವ ಮುನ್ನವೇ ಬಂದ ಸಂಬಳ ಅಥವಾ ಆದಾಯದಲ್ಲಿ ಇಂತಿಷ್ಟು ಪ್ರಮಾಣದ ಹಣವನ್ನು ಪ್ರತಿ ತಿಂಗಳು ಉಳಿತಾಯ ಮಾಡಿಡಬೇಕು ಎಂದು ನಿರ್ಧರಿಸಿ.
ಇದನ್ನು ಸಂಬಳ ಬರುತ್ತಿದ್ದಂತೆಯೇ FD(ಸ್ಥಿರ ಠೇವಣಿ) ಅಥವಾ ಆರ್ಡಿ(RD) ನಲ್ಲಿಡಿ. ಇಲ್ಲವೇ ಬಜೆಟ್ ಯೋಜನೆ ಮಾಡುವ ಮೊದಲು ಒಂದಿಷ್ಟು ಮೊತ್ತವನ್ನು ತೆಗೆದಿರಿಸಿ.
ಒಂದು ವೇಳೆ ನೀವು ಹೂಡಿಕೆ ಮಾಡಲು ಬಯಸಿದ್ದಲ್ಲಿ ವ್ಯವಸ್ಥಿತ ಹೂಡಿಕೆಗಳನ್ನು ಆಯ್ಕೆ ಮಾಡಿ ಹೂಡಿಕೆ ಮಾಡುವುದು ಉತ್ತಮ.

ಕಾರ್ಡುಗಳನ್ನು ಬಳಸಬೇಡಿ

ನಮಗೆ ಹಣ ಉಳಿತಾಯ ಮಾಡುವ ಇಚ್ಛೆ ಇದ್ದಲ್ಲಿ ಖಂಡಿತವಾಗಿಯೂ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಗಳನ್ನು ಬಳಸುವುದನ್ನು ಕಡಿಮೆ ಮಾಡಲೇ ಬೇಕಾಗುತ್ತದೆ. ಇಲ್ಲದಿದ್ದರೆ ಶಾಪಿಂಗ್ ಸಂದರ್ಭದಲ್ಲಿ ನಮಗೆ ಗೊತ್ತಿಲ್ಲದೆ ಹೆಚ್ಚೆಚ್ಚು ಖರ್ಚಾಗುತ್ತಲೇ ಇರುತ್ತದೆ.
ಹೀಗಾಗಿ ಶಾಪಿಂಗ್ ಹೋಗುವಾಗ ನಗದು ಹಣವನ್ನು ತೆಗೆದುಕೊಂಡು ಹೋಗುವುದು ತುಂಬಾ ಒಳಿತು. ಇಲ್ಲದಿದ್ದರೆ ಕಾರ್ಡ್ ಗಳು ನಮ್ಮ ಕೈಯಲ್ಲಿದ್ದರೆ ಮನಸ್ಸು ನಮ್ಮ ಮಾತು ಕೇಳುವುದೇ ಇಲ್ಲ. ಅದು ಬೇಕು, ಇದು ಬೇಕು ಎಂದು ಪ್ರಚೋದಿಸುತ್ತಲೇ ಇರುತ್ತದೆ. ಜತೆಗೆ ನಮಗೆ ಗೊತ್ತಿಲ್ಲದೆ ಅನವರ್ಶಯಕ ಖರ್ಚು ಆಗುತ್ಲೇ ಇರುತ್ತದೆ.

ಬಜೆಟ್ ರೂಪಿಸಿ

ನಮ್ಮ ಆದಾಯ ಹಾಗೂ ಸಾಮರ್ಥ್ಯಕ್ಕನುಗುಣವಾಗಿ ದಿನಿತ್ಯದ ಅಗತ್ಯತೆಗಳ ಬಗ್ಗೆ ಯೋಜನೆ ರೂಪಿಸುವುದು ತುಂಬಾ ಉತ್ತಮ ವಿಧಾನ. ಈ ಹಿನ್ನೆಲೆಯಲ್ಲಿ ಬಜೆಟ್ ಯೋಜನೆ ಮಾಡಿ ಅದನ್ನು ಅಪ್ಡೇಟ್ ಮಾಡುತ್ತಿರಬೇಕು. ಇದಕ್ಕಾಗಿ ಅಪ್ಲಿಕೇಶನ್ (App) ಬಳಕೆ ಮಾಡುವುದರಿಂದ ಉಳಿತಾಯದ ಜತೆಗೆ ಯೋಜನೆಯನ್ನು ಸರಿಯಾಗಿ ರೂಪಿಸಬಹುದು.

ಐಷಾರಾಮಿ ವಸ್ತುಗಳ ಖರೀದಿ ತಪ್ಪಿಸಿ

ಅನಗತ್ಯವಾದ ಐಷಾರಾಮಿ ವಸ್ತುಗಳ ಖರೀದಿ ಮಾಡುವುದರಿದಲೇ ಅನೇಕ ಬಾರಿ ಅನವಶ್ಯಕ ಖರ್ಚುಗಳಾಗುತ್ತಿರುತ್ತದೆ. ಇವು ತಾತ್ಕಾಲಿಕ ಸುಖ, ಸಂತೋಷವನ್ನು ಮಾತ್ರ ಕೊಡಬಲ್ಲವು. ಆದರೆ ಇವುಗಳ ಅವಶ್ಯಕತೆಯೇ ಇರುವುದಿಲ್ಲ.

ಆನ್ಲೈನ್ ಖರ್ಚನ್ನು ನಿಯಂತ್ರಿಸಿ

ಇತ್ತೀಚಿಗೆ ಆನ್ಲೈನ್ ಮೂಲಕ ಶಾಪಿಂಗ್ ಮಾಡುವುದು ಹೊಸ ಟ್ರೆಂಡ್ ಹಾಗೂ ಪ್ರತಿಷ್ಠೆ ಆಗಿಬಿಟ್ಟಿದೆ. ಕೆಲವರಂತು ಇದರ ವ್ಯಸನಿಗಳಾಗಿ ಬಿಟ್ಟಿದ್ದಾರೆ.
ಚಿಲ್ಲರೆ ವ್ಯಾಪಾರಿಗಳು ಮತ್ತು ಇ-ಕಾಮರ್ಸ್ ಕಂಪನಿಗಳು
ಯಾವಾಗಲೂ ಹೊಸ ಹೊಸ ಆಫರ್ ಮತ್ತು ಡಿಸ್ಕೌಂಟ್ ಗಳನ್ನು ಘೋಷಣೆ ಮಾಡುತ್ತಲೇ ಇರುತ್ತವೆ. ಅದಕ್ಕಾಗಿ ಇದಕ್ಕೆಲ್ಲ ಮರುಳಾಗದೆ ಯಾವ ವಸ್ತುಗಳನ್ನು ಖರೀದಿಸಬೇಕೆಂದು ಪಟ್ಟಿ ಮಾಡಿ ಅಗತ್ಯತೆಗೆ ಅನುಗುಣವಾಗಿ ವ್ಯವಹಾರ ಮಾಡುವುದು ಉತ್ತಮ. ಅಲ್ಲದಿದ್ದರೆ ಅನವಶ್ಯಕ ಖರ್ಚಿಗೆ ಬಲಿಪಶು ಆಗಿಬಿಡಬೇಕಾಗುತ್ತದೆ.

ತುರ್ತು ನಿಧಿ

ಇದು ತುಂಬಾ ಮುಖ್ಯವಾಗಿ ಪ್ರತಿಯೊಬ್ಬರೂ ಗಮನವಹಿಸಿಬೇಕಾದ ವಿಚಾರ. ಏಕೆಂದರೆ ಎಲ್ಲರಿಗೂ ಜೀವನದಲ್ಲಿ ಒಂದಿಲ್ಲೊಂದು ಹಂತದಲ್ಲಿ ತುರ್ತು ಸನ್ನಿವೇಷಗಳು, ಕಷ್ಟ-ಕಾರ್ಪಣ್ಯಗಳು ಎದುರಾಗುತ್ತವೆ. ಇವು ಹೇಳಿ ಕೇಳಿ ಬರುವಂತವುಗಳಲ್ಲ.
ಹೀಗಾಗಿ ಪೂರ್ವ ಯೋಜಿತವಾಗಿ ತುರ್ತುನಿಧಿಯನ್ನು ಇಡುವುದು ಉತ್ತಮ ಹವ್ಯಾಸ. ಇದು ಕಷ್ಟಕಾಲದ ಆಪತ್ ಬಾಂಧವನಾಗಿ ಕೆಲಸ ಮಾಡುತ್ತದೆ. ಹೆಚ್ಚಿಗೆ ಉಳಿದರೆ ಹೂಡಿಕೆ ಮಾಡಬಹುದು.

ಸ್ಟೇಟ್ಮೆಂಟ್ ಗಳನ್ನು ಪರಿಶೀಲಿಸಿ

ನಿಯಮಿತವಾಗಿ ಬ್ಯಾಂಕು ಸ್ಟೇಟ್ಮೆಂಟ್, ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಗಳನ್ನು ಪರಿಶೀಲನೆ ಮಾಡುತ್ತ ಇರಬೇಕು. ಇದರಿಂದಾಗಿ ನಿಮ್ಮ ಖಾತೆಯ ಮಾಹಿತಿ ನಿಮಗೆ ಸಿಗುತ್ತದೆ. ಜತೆಗೆ ಅದಕ್ಕನುಗುಣವಾಗಿ ಎಷ್ಟು ಖರ್ಚು ಮಾಡಬೇಕು ಅಥವಾ ಖರ್ಚನ್ನು ನಿಯಂತ್ರಿಸಬೇಕು ಎಂಬುದು ಗೊತ್ತಾಗುತ್ತದೆ. ಇದು ಅನವಶ್ಯಕ ಖರ್ಚುಗಳನ್ನು ನಿಯಂತ್ರಿಸಬಲ್ಲದು.

ಅಪ್ಲಿಕೇಶನ್ (ಆಪ್) ಸಹಾಯ ಪಡೆಯಿರಿ

ಬ್ಯಾಂಕಿಂಗ್ ಮತ್ತು ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದ ಅನೇಕ ಅಪ್ಲಿಕೇಶನ್ (ಆಪ್) ಗಳಿವೆ. ಇವುಗಳ ಸಹಾಯ ಪಡೆಯುವುದರಿಂದ ಬಜೆಟ್ ಮತ್ತು ಖರ್ಚುವೆಚ್ಚದ ಯೋಜನೆ ತುಂಬಾ ಸಹಾಯಕ ಆಗಬಲ್ಲದು.
ಕೆಲ ಅಪ್ಲಿಕೇಶನ್ ಗಳನ್ನು ನಿಮ್ಮ ಖಾತೆಗೆ ಲಿಂಕ್ ಮಾಡಬಹುದಾಗಿದ್ದು, ಆ ಮೂಲಕ ನಿಮ್ಮ ಖರ್ಚುವೆಚ್ಚಗಳ ಮಾಹಿತಿ ಪಡೆಯುತ್ತಿರಬಹುದು.

ಟ್ರೆಂಡ್ ಗಳನ್ನು ಅನುಸರಿಸುವುದನ್ನು ನಿಲ್ಲಿಸಿ

ಇತ್ತೀಚಿನ ಪ್ರವೃತ್ತಿಗಳನ್ನು ಅನುಸರಿಸುವುದರಿಂದ ಅನವಶ್ಯಕ ಖರ್ಚು ಆಗುವುದರಲ್ಲಿ ಸಂಶಯವಿಲ್ಲ. ಇದು ಪ್ಯಾಷನ್ ಆಗಿಬಟ್ಟರೆ ಅನಗತ್ಯ ಖರ್ಚು ಕೈ ಮೀರುವುದು ಖಚಿತ. ಸಂದರ್ಭಕ್ಕೆ ಅನುಗುಣವಾಗಿ ಉಡುಪು ಮತ್ತು ಪರಿಕರಗಳ ಬಳಕೆ ಮೇಲೆ ಗಮನವಿರಲಿ. ಪ್ಯಾಷನ್ ಅನ್ನುವುದು ನಮ್ಮನ್ನು ನಾವು ಹೇಗೆ ಕ್ಯಾರಿ ಮಾಡುತ್ತೇವೆ ಎಂಬುದಾಗಿದೆ. ಅದಕ್ಕಾಗಿ ಎಲ್ಲ ಸಂದರ್ಭಗಳಲ್ಲೂ ಎಚ್ಚರಿಕೆಯಿಂದ ಇರುವುದು ಉತ್ತಮ.

English summary

Best Ways To Control Unnecessary Spending Habits

As a person's earning capacity increases so does his spending habits. Young individuals despite earning a hefty salary are hardly able to save enough amount after monthly expenses. Shopaholics have a tendency to buy things which are not even needed.
Please Wait while comments are loading...
Company Search
Enter the first few characters of the company's name or the NSE symbol or BSE code and click 'Go'
Thousands of Goodreturn readers receive our evening newsletter.
Have you subscribed?

Find IFSC