Englishहिन्दी മലയാളം தமிழ் తెలుగు

IRCTC SBI ಪ್ಲಾಟಿನಮ್ ಕಾರ್ಡ್: ಇದರ ಪ್ರಯೋಜನಗಳೇನು ಗೊತ್ತೆ?

Written By: Siddu
Subscribe to GoodReturns Kannada

SBI ಪ್ಲಾಟಿನಮ್ ಕಾರ್ಡ್ ಒಂದು ಅದ್ವೀತಿಯ ಕ್ರೆಡಿಟ್ ಕಾರ್ಡ್ ಆಗಿದ್ದು, ಭಾರತೀಯ ರೇಲ್ವೆ ಇಲಾಖೆ IRCTC ಮುಖಾಂತರ ಪರಿಚಯಿಸುತ್ತಿದೆ. SBI ಕಾರ್ಡ್ ನಿಮಗೆ ಉಚಿತ ರೇಲ್ವೆ ಟಿಕೇಟ್ ಗಳನ್ನು ಪಡೆಯುವ ಅವಕಾಶ ಹಾಗೂ ನಿಮ್ಮ ಹಣಕ್ಕೆ ಉತ್ತಮ ಮೌಲ್ಯ ಪಡೆಯಲು ಇದು ಸಹಕಾರಿಯಾಗಿದೆ.

ಕಾರ್ಡುದಾರರ ಈ ಸೌಲಭ್ಯವನ್ನು ಪಡೆಯಲು ನೀವು ಆ ಕಾರ್ಡಿನ ಸಹ ಪ್ರಯಾಣಿಕರಲ್ಲಿ ಒಬ್ಬರಾಗಬೇಕು. ಕಾರ್ಡುದಾರರು ವೈಯಕ್ತಿಕ ಪ್ರಯಾಣದ ಮೇಲೆ ಮಾತ್ರ ರಿವಾರ್ಡ್ ಪಾಯಿಂಟ್ ಗಳನ್ನು ಪಡೆಯಬಹುದು ಎಂಬುದನ್ನು ನೆನಪಿನಲ್ಲಿಡಬೇಕು.

ಕಾರ್ಡಿನ ವಾರ್ಷಿಕ ಶುಲ್ಕ ರೂ. 500 ಆಗಿದ್ದು, ರೂ. 300 ನವೀಕರಣ ಶುಲ್ಕ ಆಗಿದೆ.

1. ಕ್ಯಾಶ್ ಬ್ಯಾಕ್ (ನಗದು ವಾಪಸ್ಸು)

ಕಾರ್ಡುದಾರರು ವೈಯಕ್ತಿಕವಾಗಿ ಮೂಲ ಬೆಲೆಯ ಮೇಲೆ ಶೇ. 10 ಸೌಲಭ್ಯ ಪಡೆಯುತ್ತಾರೆ. ನಿಮ್ಮ ಪೂರಕ ಸದಸ್ಯತ್ವ(complimentary membership) ಮುಖಾಂತರ ನಿಮಗೆ AC ದರ್ಜೆಯ (3 AC ಹೊರತುಪಡಿಸಿ) ರೇಲ್ವೆ ಟಿಕೇಟುಗಳ ಮೇಲೆ ಹಲವು ಸೌಲಭ್ಯಗಳನ್ನು ನೀಡಲಾಗುತ್ತದೆ.

2. ಇಂಧನ ವ್ಯವಹಾರದ ಮೇಲೆ ಯಾವುದೆ ಶುಲ್ಕ ಇಲ್ಲ

ಈ ಕಾರ್ಡು ನಿಮಗೆ ಅಗಣಿತ ಅನುಕೂಲಗಳ ಮಹಾಪೂರವನ್ನೆ ಒದಗಿಸುತ್ತದೆ. ಗೊತ್ತುಪಡಿಸಿದ ಇಂಡಿಯನ್ ಆಯಿಲ್ ಮತ್ತು ಐಬಿಪಿ ಪೇಟ್ರೋಲ್ ಪಂಪ್ ನಲ್ಲಿ ಪ್ರತಿ ಸಲ 500-3000 ರೂ. ಗಳವರೆಗಿನ ಇಂಧನ ಮತ್ತು ಇತರೆ ಲುಬ್ರಿಕೆಂಟ್ಸ್ ಖರೀದಿಸಲು SBI ಕಾರ್ಡನ್ನು ಬಳಸಬಹುದಾಗಿದ್ದು, ಇದರ ಮೇಲೆ ವಿಧಿಸುವ ವ್ಯವಹಾರ ಶುಲ್ಕವನ್ನು ಉಳಿತಾಯ ಮಾಡಬಹುದಾಗಿದೆ.

3. ವ್ಯವಹಾರ ವೆಚ್ಚ 0%

www.services.irctc.co.in ನಲ್ಲಿ ವ್ಯವಹಾರ ಮಾಡುವುದರಿಂದ ಕ್ರೆಡಿಟ್ ಕಾರ್ಡಿನ ವ್ಯವಹಾರದ ಶುಲ್ಕದ ಮೇಲೆ 1.8% ವಿಶೇಷ ವಿನಾಯಿತಿ ಲಾಭಗಳು ಇರುತ್ತವೆ.

4. 10 ಲಕ್ಷ ರೂ.ಗಳ ಉಚಿತ ವಿಮೆ

ನಿಗದಿತ ರೇಲ್ವೆ ಪ್ರಯಾಣದ ಸಂದರ್ಭದಲ್ಲಿ ಅಪಘಾತವಾಗಿ ಪ್ರಾಣಕ್ಕೆ ಅಪಾಯವಾದಲ್ಲಿ/ಪ್ರಾಣ ಕಳೆದುಕೊಂಡಲ್ಲಿ ಕಾರ್ಡುದಾರರು 10 ಲಕ್ಷ ರೂ.ಗಳ ವೈಯಕ್ತಿಕ ಅಪಘಾತ ವಿಮೆಯನ್ನು ಪಡೆಯುತ್ತಾರೆ.

5. ಉಚಿತ ಟಿಕೇಟುಗಳನ್ನು ಪಡೆಯಿರಿ

SBI ರೇಲ್ವೆ ಕಾರ್ಡು ಹೊಂದಿರುವವರು ವ್ಯಕ್ತಿಗತವಾಗಿ ಶಾಪಿಂಗ್, ಊಟ, ಪ್ರಯಾಣವನ್ನು ಮಾಡಬಹುದಾಗಿದೆ.

6. ದಾಖಲಾತಿ

ಪಾನ್ ಕಾರ್ಡ್ ಕಡ್ಡಾಯವಾಗಿ ಸಲ್ಲಿಸಬೇಕು. ಗುರುತಿನ ದಾಖಲಾತಿಯಾಗಿ ಪಾಸ್‌ಪೋರ್ಟ್‌, ಆಧಾರ್ ಕಾರ್ಡ್, ಚುನಾವಣಾ ಚೀಟಿ, ಡ್ರೈವಿಂಗ್ ಲೈಸೆನ್ಸ್, ಪಾನ್ ಕಾರ್ಡ್ ಇವುಗಳಲ್ಲಿ ಯಾವುದಾದರು ಒಂದು ಇರಬೇಕಾಗುತ್ತದೆ.

ಕೊನೆ ಮಾತು

ಕಾರ್ಡುದಾರರು www.services.irctc.co.in ನಲ್ಲಿ ಪ್ರಯಾಣದ ಟಿಕೇಟುಗಳನ್ನು ಖರೀದಿ ಮಾಡುವುದರ ಮೂಲಕ ನಿಖರ 500 ಪಾಯಿಂಟ್ಸ್ ಪಡೆದರೆ ಅವರು ಹೆಚ್ಚೆಚ್ಚು ರಿವಾರ್ಡ್ ಪಾಯಿಂಟ್ ಗಳನ್ನು ಪಡೆಯುತ್ತಾರೆ. ಅಥವಾ ಇಂಧನವನ್ನು ಹೊರತುಪಡಿಸಿ ಇನ್ನಿತರೆ ಚಿಲ್ಲರೆ ವ್ಯವಹಾರದ ಮೇಲೆ 500 ಪಾಯಿಂಟ್ಸ್ ಪಡೆದರೂ ಸಹ ರಿವಾರ್ಡ್ ಪಾಯಿಂಟ್ ಗಳನ್ನು ಪಡೆಯುತ್ತಾರೆ.

Read more about: debit card, sbi
English summary

IRCTC SBI Platinum Card: 5 Benefits of using it

Carry a piece of priceless art in your wallet, which you would love to own. Designed by the well-known artist, RK Laxman, the IRCTC SBI Platinum Card adds a stroke of aesthetic flavor to your everyday purchases.
Story first published: Saturday, December 3, 2016, 13:27 [IST]
Please Wait while comments are loading...
Company Search
Enter the first few characters of the company's name or the NSE symbol or BSE code and click 'Go'
Thousands of Goodreturn readers receive our evening newsletter.
Have you subscribed?

Find IFSC