Englishहिन्दी മലയാളം தமிழ் తెలుగు

ಪಿಎಫ್(PF) ಖಾತೆ ಯಾಕೆ ಬೇಕು?

Written By: Siddu
Subscribe to GoodReturns Kannada

ಪಿಎಫ್ ಖಾತೆ ನಿವೃತ್ತಿ ನಂತರದ ಉಳಿತಾಯ ಯೋಜನೆಯಾಗಿದ್ದು, ಸರ್ಕಾರದಿಂದ ನಿರ್ವಹಿಸಲ್ಪಡುತ್ತದೆ. ಉದ್ಯೋಗಿಗಳು ಸಲ್ಪ ಪ್ರಮಾಣದ ಮೊತ್ತವನ್ನು ಪಿಎಫ್ ಖಾತೆಯಲ್ಲಿ ಇಡುವುದು ಕಡ್ಡಾಯವಾಗಿದೆ. ಈ ಮೊತ್ತವನ್ನು ಉದ್ಯೋಗಿಗಳು ನಿವೃತ್ತಿಯಾದ ನಂತರ ನೀಡಲಾಗುತ್ತದೆ. ಪಿಎಫ್ ಬ್ಯಾಲೆನ್ಸ್ ತಕ್ಷಣದಲ್ಲಿ ಚೆಕ್ ಮಾಡುವ 5 ವಿಧಾನ ಗೊತ್ತೆ?

ಪ್ರಾವಿಡೆಂಟ್ ಫಂಡ್ ಅಥವಾ ಪಿಎಫ್ ಖಾತೆ ಪ್ರತಿಯೊಬ್ಬರಿಗೂ ನಿವೃತ್ತಿ ನಂತರದ ಜೀವನಕ್ಕೆ ಭವಿಷ್ಯದ ಬುತ್ತಿಯಾಗಿ ಕಷ್ಟಕಾಲದಲ್ಲಿ ಕೈಹಿಡಿಯುತ್ತದೆ. ಉದ್ಯೋಗ ಮಾಡುವ ಅವಧಿಯಲ್ಲಿ ಪಿಎಫ್ ಖಾತೆಯಲ್ಲಿ ಉಳಿತಾಯ ಮಾಡಬೇಕೆಂದು ಆರ್ಥಿಕ ತಜ್ಞರು ಸಲಹೆ ನೀಡುತ್ತಾರೆ.

ಪ್ರಸ್ತುತ ಹಣಕಾಸು ವರ್ಷದಲ್ಲಿ ಇಪಿಎಫ್ಒ ಶೇ. 8.65ರಷ್ಟು ಬಡ್ಡಿದರ ನಿಗದಿಪಡಿಸಿದೆ. ಪಿಎಫ್ ಭಾರತದಲ್ಲಿನ ಅತ್ಯಂತ ಸುರಕ್ಷಿತ ಹಾಗೂ ಸುಭದ್ರ ಹೂಡಿಕೆ ಆಗಿದೆ.
ಪಿಎಫ್ ಖಾತೆ ಯಾಕೆ ಹೊಂದಿರಬೇಕು ಎಂಬುದಕ್ಕೆ 11 ಕಾರಣಗಳಿವೆ ನೋಡಿ...

1. ಎಷ್ಟು ಬೇಕಾದರೂ ಹೂಡಿಕೆ ಮಾಡಿ

ಪಿಎಫ್ ನಲ್ಲಿ ಹೂಡಿಕೆ ಮಾಡುವ ವಿಧಾನ ತುಂಬಾ ಸರಳ. ನಿಗದಿತ ಹಣಕಾಸು ವರ್ಷದಲ್ಲಿ ರೂ. 500 ರಿಂದ ರೂ. 1.5 ಲಕ್ಷದವರೆಗೆ ಪಿಪಿಎಫ್ ಖಾತೆಯಲ್ಲಿ ಠೇವಣಿ ಇಡಬಹುದು. ಮೊತ್ತವನ್ನು ಒಂದೇ ಬಾರಿ ಇಡಬಹುದು ಇಲ್ಲವೇ 12 ಕಂತುಗಳಲ್ಲಿ ಠೇವಣಿ ಇಡಬಹುದು.

2. ಎಲ್ಲರೂ ಖಾತೆ ತೆರೆಯಬಹುದು

ಭಾರತದ ಎಲ್ಲ ನಾಗರೀಕರು ಖಾತೆಯನ್ನು ತೆರೆಯಬಹುದು. ಸ್ವಯಂ ಉದ್ಯೋಗಿಗಳು ಹಾಗೂ ಚಿಕ್ಕ ವಯಸ್ಸಿನವರು ಪಿಪಿಎಫ್ ನಲ್ಲಿ ಹೂಡಿಕೆ ಮಾಡಬಹುದು. ಎನ್ಆರ್ಐ ಪಿಪಿಎಫ್ ಖಾತೆ ತೆರೆಯಲು ಆಗುವುದಿಲ್ಲ. ಭಾರತೀಯ ನಿವಾಸಿಯಾಗಿ ಖಾತೆ ತೆರೆದು ನಂತರ ವಿದೇಶದಲ್ಲಿ ಕೆಲಸ ಮಾಡುತ್ತಿದ್ದರೆ ಪಿಪಿಎಫ್ ಖಾತೆ ಮುಂದುವರೆಸಲಾಗುತ್ತದೆ.

3. ರಾಜೀನಾಮೆ ನಿಧಿ

ಪಿಎಫ್ ಚಂದಾದಾರ ಕೆಲಸಕ್ಕೆ ರಾಜೀನಾಮೆ ನೀಡುತ್ತಿದ್ದರೆ ಪಿಎಫ್ ಖಾತೆ ಇತ್ಯರ್ಥ ಮಾಡಬಹುದು. ಪಿಎಫ್ ಕೊಡುಗೆ, ಉದ್ಯೋಗಿಗಳ ಕೊಡುಗೆ ಮತ್ತು ಬಡ್ಡಿ ಪಡೆಯಬಹುದು.

4. ಸಾಲ ಪಡೆಯುವುದು ಸುಲಭ

ಸಾಲದ ಮೇಲೆ ಭದ್ರತೆ ಬೇಕೆ? ಹಾಗಿದ್ದರೆ ಪಿಪಿಎಫ್ ಖಾತೆ ಮೇಲೆ ಸಾಲ ಪಡೆಯಿರಿ. ಖಾತೆ ತೆರೆದ ಮೂರನೇ ವರ್ಷದಿಂದ ಆರನೇ ವರ್ಷದವರೆಗೆ ಸಾಲ ಪಡೆಯಬಹುದು. ನಿಮ್ಮ ಪಿಎಫ್ ಬ್ಯಾಲೆನ್ಸ್ ಹೆಚ್ಚಿದ್ದರೆ ಸಾಲ ಪಡೆಯಲು ಹೆಚ್ಚು ಅರ್ಹರಾಗಿರುತ್ತಿರಿ.

5. ದೀರ್ಘಾವಧಿ ಹೂಡಿಕೆ

ಪಿಎಫ್ ಖಾತೆ ದೀರ್ಘಾವಧಿ ಹೂಡಿಕೆಗಾಗಿ ಉತ್ತಮ ಆಯ್ಕೆ ಎಂದೇ ಪ್ರಸಿದ್ದಿ ಪಡೆದಿದೆ. 15 ವರ್ಷಗಳ ಅವಧಿಯನ್ನು ಸಾಮಾನ್ಯವಾಗಿ ದೀರ್ಘಾವಧಿ ಹೂಡಿಕೆ ಎನ್ನಲಾಗುತ್ತದೆ. ಹದಿನೈದು ವರ್ಷಗಳ ನಂತರ ಮತ್ತೆ 5 ವರ್ಷ ಅವಧಿಯನ್ನು ಹೆಚ್ಚಿಸಬಹುದು.

6. ಬಡ್ಡಿದರ

ಪಿಎಫ್ ಖಾತೆಯ ಮೇಲೆ ಪಡೆಯಲಾಗುವ ಬಡ್ಡಿದರವನ್ನು ಪ್ರತಿ ಹಣಕಾಸು ವರ್ಷದಲ್ಲಿ ನಿರ್ಧರಿಸಲಾಗುತ್ತದೆ. 2016-17ನೇ ಸಾಲಿನಲ್ಲಿ ಇಪಿಎಫ್ ಬಡ್ಡಿದರ ಶೇ. 8.65ರಷ್ಟು ನಿಗದಿ ಪಡಿಸಲಾಗಿದೆ. ಈ ಬಡ್ಡಿದರವನ್ನು ಖಾತೆಗೆ ಪ್ರತಿವರ್ಷ ಮಾರ್ಚ್ 31ಕ್ಕೆ ಹಾಕಲಾಗುತ್ತದೆ.

7. ತುರ್ತುನಿಧಿ

ಪ್ರಾಕೃತಿಕ ವಿಕೋಪ ಅಥವಾ ಹಾನಿ ಸಂಭವಿಸಿದ ಸಂದರ್ಭಗಳಲ್ಲಿ ಅಗತ್ಯ ಉಪಕರಣಗಳ ಖರೀದಿಗೆ ಇಪಿಎಫ್ ಖಾತೆಯಲ್ಲಿ ಅವಕಾಶವಿರುತ್ತದೆ. ಇದು ಕಷ್ಟಕಾಲದಲ್ಲಿ ಉದ್ಯೋಗಿಗಳ ನೆರವಿಗೆ ಬರುತ್ತದೆ.

8. ಕುಟುಂಬದ ಸದಸ್ಯರ ನಾಮನಿರ್ದೇಶನ ಮಾಡಬಹುದು

ಪಿಎಫ್ ಖಾತೆದಾರರು ತನ್ನ ಕುಟುಂಬದ ಸದಸ್ಯರನ್ನು ಫಲಾನುಭವಿಯಾಗಿ ನಾಮನಿರ್ದೇಶನ ಮಾಡಬಹುದು. ಅಂದರೆ ಮರಣದ ನಂತರ ಪಿಎಫ್ ಮೊತ್ತ ಪಡೆಯಲು ಕುಟುಂಬದ ಸದಸ್ಯರ ನಾಮನಿರ್ದೇಶನ ಮಾಡಲು ಅವಕಾಶವಿರುತ್ತದೆ.

9. ಅಕಾಲಿಕ ವಿತ್ ಡ್ರಾ

15 ವರ್ಷಗಳ ಮೆಚುರಿಟಿ ಅವಧಿ ಮುಗಿದ ನಂತರ ಯಾವಾಗಲಾದರೂ ಪಿಪಿಎಫ್ ಮೊತ್ತ ವಿತ್ ಡ್ರಾ ಮಾಡಿಕೊಳ್ಳಬಹುದು. ಇದಕ್ಕೂ ಮುಂಚಿತವಾಗಿ ಹಣ ಪಡೆಯ ಬಯಸಿದರೆ ಏಳು ವರ್ಷಗಳ ನಂತರ ಭಾಗಶಹವಾಗಿ ಹಣ ಪಡೆಯಬಹುದು. ಇದಕ್ಕೆ ಷರತ್ತುಗಳು ಅನ್ವಯವಾಗುತ್ತವೆ.

10. ತೆರಿಗೆ ಪ್ರಯೋಜನ

ಪಿಪಿಎಫ್ ಹೂಡಿಕೆ ತೆರಿಗೆ ವಿನಾಯಿತಿ ಅಡಿಯಲ್ಲಿ ಬರುತ್ತದೆ. ಗರಿಷ್ಠ ಮಿತಿ ರೂ 1 ಲಕ್ಷದವರೆಗೆ 80C ಸೆಕ್ಸನ್ ಅಡಿಯಲ್ಲಿ ತೆರಿಗೆ ಪ್ರಯೋಜನ ಪಡೆಯಬಹುದು.

11. ವರ್ಗಾವಣೆ ಸಾಧ್ಯ

ನೀವು ಬೇರೆ ನಗರಕ್ಕೆ ಅಥವಾ ಹೊಸ ಕೆಲಸಕ್ಕೆ ಸೇರ್ಪಡೆಯಾಗುವಾಗ ನಿಮ್ಮ ಪಿಎಫ್ ಖಾತೆಯನ್ನು ಬೇರೆ ಶಾಖೆಗೆ ವರ್ಗಾಯಿಸಬಹುದು. ಹಳೆ ಖಾತೆಯನ್ನು ಮುಚ್ಚಿ ಹೊಸ ಖಾತೆಯನ್ನು ತೆರೆಯುವ ಅಗತ್ಯ ಇರುವುದಿಲ್ಲ. ಅದೇ ಖಾತೆಯನ್ನು ಬೇರೆ ಶಾಖೆಗಳಲ್ಲಿ ಮುಂದುವರೆಸಬಹುದು.

Read more about: ppf, epf, interest rate, money
English summary

Why You Should Have A PF Account?

A provident fund functions as a form of social safety net. It is a compulsory government managed retirement savings scheme, into which workers must contribute a portion of their salaries and employers must contribute on behalf of their workers.
Please Wait while comments are loading...
Company Search
Enter the first few characters of the company's name or the NSE symbol or BSE code and click 'Go'
Thousands of Goodreturn readers receive our evening newsletter.
Have you subscribed?

Find IFSC