Englishहिन्दी മലയാളം தமிழ் తెలుగు

ಪ್ರತಿಯೊಂದು ಕಂಪನಿಯು ಉದ್ಯೋಗಿಗಳಿಗೆ ಈ 11 ಸೌಲಭ್ಯಗಳನ್ನು ಒದಗಿಸಬೇಕು...

Written By: Siddu
Subscribe to GoodReturns Kannada

ಪ್ರತಿಯೊಬ್ಬರಿಗೂ ಉನ್ನತಮಟ್ಟದ ಪ್ರಸಿದ್ದ ಕಂಪನಿಗಳಲ್ಲಿ ಉದ್ಯೋಗ ಪಡೆಯಬೇಕು ಎಂಬ ಕನಸಿರುತ್ತದೆ. ಅದೇನೆ ಇರಲಿ ಯಾವುದೇ ಕಂಪನಿಗಳಲ್ಲಿ ಕೆಲಸ ಗಿಟ್ಟಿಸಿಕೊಂಡರೂ ಆ ಕಂಪನಿಗಳು ತನ್ನ ನೌಕರರಿಗೆ ಹಲವು ಸೌಲಭ್ಯಗಳನ್ನು ಒದಗಿಸಬೇಕಾಗುತ್ತದೆ.

ಸಾಮಾನ್ಯವಾಗಿ ಕಂಪನಿಯ ಸೌಲಭ್ಯ, ಪಾಲಿಸಿ, ಷರತ್ತು ಮತ್ತು ಪ್ರೋಗ್ರಾಂಗಳ ಬಗ್ಗೆ ಆಯಾ ಕಂಪನಿಯ ಎಚ್ಆರ್(HR)ಗಳು ವಿವರಣೆ ನೀಡುತ್ತಾರೆ. ಒಂದು ವೇಳೆ ಕಂಪನಿಯ ಸೌಲಭ್ಯ ಪಾಲಿಸಿಗಳ ಬಗ್ಗೆ ವಿವರಣೆ ನೀಡದಿದ್ದಲ್ಲಿ ನಿಮ್ಮ ಎಚ್ಆರ್(HR)ಗಳಿಂದ ಮಾಹಿತಿ ಪಡೆಯಲು ಮರೆಯಬೇಡಿ. ಸ್ವಂತ ಉದ್ಯಮ(ಕಂಪನಿ) ಪ್ರಾರಂಭಿಸುವುದು ಹೇಗೆ?

ಹಾಗಿದ್ದರೆ ಪ್ರತಿಯೊಂದು ಉದ್ಯೋಗದಾತ ಕಂಪನಿ ತನ್ನ ಉದ್ಯೋಗಿಗಳಿಗೆ ಒದಗಿಸಬೇಕಾದ ಸೌಲಭ್ಯಗಳೇನು ಎಂಬುದನ್ನು ನೋಡೋಣ... (ಉದ್ಯೋಗ)

1. ಹೊಂದಿಕೊಳ್ಳುವ ಕೆಲಸದ ಸಮಯ

ಪ್ರತಿಯೊಂದು ಕಂಪನಿ ತನ್ನ ಉದ್ಯೋಗಿಗಳಿಗೆ ಹೊಂದಿಕೊಳ್ಳುವ ಕೆಲಸದ ಸಮಯ ಮತ್ತು ಮನೆಯಿಂದ ಕೆಲಸ ಮಾಡುವ ಸೌಕರ್ಯಗಳನ್ನು ಒದಗಿಸಬೇಕು. ಕಂಪನಿಗಳು ತಮ್ಮ ಉದ್ಯೋಗಿಗಳನ್ನು ನಂಬಿದರೆ ಸಾಧ್ಯವಾದಷ್ಟು ಹೆಚ್ಚು ಹೊಂದಿಕೊಳ್ಳುವ ನಮ್ಯತೆಯನ್ನು ಅವರಿಗೆ ನೀಡುತ್ತಿರಿ. ಪ್ರತಿ ತಿಂಗಳು ಸಂಬಳ ಪಡೆದ ತಕ್ಷಣ ಹೀಗೆ ಮಾಡಿ...

2. ಸಮಾನ ವೇತನ

ಒಂದೇ ತರಹದ ಕೆಲಸಗಳಿಗೆ ಒಂದೇ ವೇತನವನ್ನು ಪಾವತಿಸುವ ವೇತನ ಕಾರ್ಯಕ್ರಮಗಳನ್ನು ಕಂಪನಿಗಳು ನಿರ್ಮಿಸುತ್ತವೆ. ಡಿಪಾರ್ಟ್ಮೆಂಟ್ ಗಳ ಮಧ್ಯೆ ಸಮಾನತೆಯನ್ನು ಕಾಪಾಡಿಕೊಳ್ಳುತ್ತವೆ. ಅಸಾಧಾರಣ ಬಹುಮುಖ ಪ್ರತಿಭೆ/ಬಾಹ್ಯಪ್ರತಿಭೆ ಉಳ್ಳವರಿಗೆ ಹೆಚ್ಚು ವೇತನ ಸಿಗಬಹುದು.

3. ಎಂಪ್ಲಾಯಿಸ್ ರೆಫರಲ್ ಬೋನಸ್

ಹೊಸ ನೌಕರರನ್ನು ನೇಮಕ ಮಾಡುವ ಸಂದರ್ಭದಲ್ಲಿ ನಿಮ್ಮ ಉದ್ಯೋಗಿಗಳೇ ಉತ್ತಮ ಮೂಲವಾಗಬಹುದು. ಕಂಪನಿಯ ತೆರೆದ ಸ್ಥಾನಗಳಿಗೆ ಅವರ ಪರಿಚಯಸ್ಥರಿಗೆ ಅಥವಾ ಸ್ನೇಹಿತರನ್ನು ಶಿಫಾರಸ್ಸು ಮಾಡಲು ಅನುವು ಮಾಡಿಕೊಟ್ಟರೆ ಅವರಿಗಿಂತ ಉತ್ತಮ ಉದ್ಯೋಗಿಗಳನ್ನು ಬೇರೆ ಯಾರೂ ಶಿಫಾರಸ್ಸು ಮಾಡಲು ಸಾಧ್ಯವಿಲ್ಲ. ಉದ್ಯೋಗಿಗಳು ಶಿಪಾರಸ್ಸು ಮಾಡುವವರನ್ನು ನೇಮಕಾತಿ ಮಾಡಿದಲ್ಲಿ ಅವರಿಗೆ ಬೋನಸ್ ನೀಡಿದರೆ ಇನ್ನೂ ಹೆಚ್ಚಿನ ಉತ್ತಮ ನೇಮಕಾತಿಗಾಗಿ ಅವರು ಸಹಾಯ ಮಾಡಬಲ್ಲರು.

4. ಹೆರಿಗೆ ಮತ್ತು ಪಿತೃತ್ವ ರಜೆ

ಪ್ರತಿಯೊಂದು ಉದ್ಯೋಗದಾತ ಕಂಪನಿ ಮಹಿಳೆ ಅಥವಾ ಪರುಷರು ಹೊಸ ಮಗು ಪಡೆದಾಗ ಇಲ್ಲವೇ ದತ್ತು ತೆಗೆದುಕೊಂಡಾಗ ಅವರಿಗೆ ಹೆರಿಗೆ/ಪಿತೃತ್ವ ರಜೆ ನೀಡಬೇಕಾಗುತ್ತದೆ. ಇದು ನೌಕರರ ಉತ್ತಮ ಸಮತೋಲಿತ ಮಾನಸಿಕತೆಗೆ ಮತ್ತು ಕೌಶಲ್ಯಗಳಿಗೆ ತುಂಬಾ ಸಹಕಾರಿಯಾಗುತ್ತದೆ.

5. ತಾರತಮ್ಯ ನೀತಿ ಸಲ್ಲ

ಖಂಡಿತವಾಗಿಯೂ ಇದು ಮುಖ್ಯವಾದ ವಿಚಾರ. ಎಲ್ಲೆಡೆ ತಾರತಮ್ಯ, ಅಸಮಾನತೆ ತುಂಬಿರುವಾಗ ಕಚೇರಿಗಳಲ್ಲಿ ಅದನ್ನು ತಪ್ಪಿಸುವುದು ಹೇಗೆ, ಸಮಾನತೆಯಿಂದ ಕೆಲಸಗಳನ್ನು ನಿಭಾಯಿಸುವುದು ಹೇಗೆ ಎಂಬ ಮಾನವ ಸಂಪನ್ಮೂಲ(HR) ಅಭ್ಯಾಸಗಳನ್ನು ಜಾರಿಗೆ ತರಬೇಕಾಗುತ್ತದೆ. ಇಂತಹ ತಿಳಿವಳಿಕೆಗಳನ್ನು ಹಾಗೂ ಎದುರಾಗಬಹುದಾದ ತಾರತಮ್ಯದ ಸಮಸ್ಯೆಗಳನ್ನು ಕಂಪನಿಗಳು ನಿಭಾಯಿಸಿ ಉದ್ಯೋಗಿಗಳಿಗೆ ತರಭೇತಿ ನೀಡಬೇಕು.

6. ಹಾಲುಣಿಸುವ ತಾಯಂದಿರಿಗೆ ಬೆಂಬಲ

ಇತ್ತೀಚಿಗೆ ಮಗುವಿಗೆ ಜನ್ಮ ನೀಡಿದ ತಾಯಂದಿರು ಕೆಲಸಕ್ಕೆ ಬರುವುದು ತುಂಬಾ ಕಷ್ಟ. ಏಕೆಂದರೆ ಮಗುವಿಗೆ ಹಾಲುಣಿಸುವುದು ಮತ್ತು ಆರೈಕೆ ಮಾಡಬೇಕಾಗುತ್ತದೆ. ಆದರೆ ಅಂತಹ ದಿನಗಳಲ್ಲಿ ಉದ್ಯೋಗದಾತ ಕಂಪನಿ ಮಗುವಿಗೆ ಹಾಲುಣಿಸುವ ಅಗತ್ಯವನ್ನು ನಿರ್ಲಕ್ಷಿಸಿದಾಗ ತುಂಬಾ ಕಷ್ಟಕರವಾಗುತ್ತದೆ. ಹೀಗಾಗಿ ಹಾಲುಣಿಸುವಿಕೆಯ ಕೋಣೆ ಸ್ಥಾಪಿಸುವುದು ಮತ್ತು ಹಾಲುಣಿಸುವ ಅಮ್ಮಂದಿರಿಗೆ ಬೆಂಬಲ ಹಾಗೂ ಬಾಟಲ್ ಮೂಲಕ ಹಾಲುಣಿಸುವ ಆಯಾಗಳಿಗೆ ಅವಕಾಶ ಕಲ್ಪಿಸಬೇಕು.

7. ಡ್ರೆಸ್ ಕೋಡ್ ಪಾಲಿಸಿ

ನಿಮ್ಮ ನೌಕರರು ಜವಾಬ್ಧಾರಿ ಹೊಂದಿದವರು ಆಗಿರುತ್ತಾರೆ. ನೀವು ನೂರಾರು ಅಭ್ಯರ್ಥಿಗಳ ನಡುವೆ ಅವರನ್ನು ಕೆಲಸಕ್ಕೆ ಆಯ್ಕೆ ಮಾಡಿಕೊಂಡಿರುತ್ತಿರಿ. ಉದ್ಯೋಗಿಗಳನ್ನು ಎಂದಿಗೂ ನಿಮ್ಮ ಪಾಲಿಸಿಗಳೊಂದಿಗೆ ಅವಮಾನಿಸಬೇಡಿ ಇಲ್ಲವೇ ಕೀಳಾಗಿ ನೋಡಬೇಡಿ. ಸರಳವಾದ ಡ್ರೆಸ್ ಕೋಡ್ ನೀತಿಯನ್ನು ಅಳವಡಿಸಿ. ಉನ್ನತ ಗುಣಮಟ್ಟ, ಕಡಿಮೆ ಗುಣಮಟ್ಟ ಎಂಬ ಭೇದಭಾವ ಎದುರಾಗುವುದಿಲ್ಲ.

8. ಎಚ್ಆರ್ ಗಳು ಉದ್ಯೋಗಿಗಳ ಸಮಸ್ಯೆಗಳಿಗೆ ಸ್ಪಂದಿಸಬೇಕು

ಕಂಪನಿಯ ಎಚ್ಆರ್ ಟೀಮ್ ಬೆಳೆಯುತ್ತಿದ್ದಂತೆ ಪ್ರತಿಯೊಬ್ಬ ಎಚ್ಆರ್ ಕೂಡ ತಮ್ಮ ಉದ್ಯೋಗಿಯ ಪ್ರತಿಕ್ರಿಯೆಗಳನ್ನು ಕೇಳಬೇಕು ಮತ್ತು ಸಹದ್ಯೋಗಿಗಳಿಗೆ ಬೆಂಬಲ ನೀಡಬೇಕು. ಉದ್ಯೋಗಿಗಳ ಸಮಸ್ಯೆಗಳಿಗೆ ಸ್ಪಂದಿಸುವುದೇ ಅವರ ಪ್ರಥಮ ಆದ್ಯತೆ ಆಗಬೇಕು. ಸಾಧ್ಯವಾದಷ್ಟು ಬೇಗ ಮ್ಯಾನೇಜರ್ ಮತ್ತು ಕಂಪನಿ ಮೇಲ್ವಿಚಾರಕರೊಂದಿಗೆ ಚರ್ಚಿಸಿ ಅವರೇಲ್ಲರೂ ಕೂಡ ಸಹದ್ಯೋಗಿಗಳ ಮಾತುಗಳನ್ನು ಆಲಿಸುವಂತಿರಬೇಕು. ಇದು ಒಂದು ಸಂಸ್ಥೆಯಲ್ಲಿನ ನಂಬಿಕೆಯನ್ನು ಬೆಳೆಸುತ್ತದೆ.

9. ಲೈಂಗಿಕ ಕಿರುಕುಳ ತರಬೇತಿ

ಹಲವಾರು ಕಂಪನಿಗಳು ತಾಂತ್ರಿಕ ಮತ್ತು ಕಾರ್ಯವಿಧಾನಗಳ ಬಗ್ಗೆ ತರಬೇತಿ ನೀಡುತ್ತವೆ. ಆದರೆ ಕೆಲ ನಿರ್ಣಾಯಕ ವಿಷಯಗಳ ಬಗ್ಗೆ ಹೇಳಲು, ನಿಭಾಯಿಸಲು ವ್ಯವಸ್ಥಾಪಕರು ಹಿಂಜರಿಯಬಹುದು ಅಥವಾ ಅಸಮರ್ಥರಾಗಬಹುದು. ಹೀಗಾಗಿ ಪ್ರತಿಯೊಂದು ಕಂಪನಿಗಳಲ್ಲಿ ಲೈಂಗಿಕ ಕಿರುಕುಳ ತಡೆಗಟ್ಟುವಿಕೆಯ ತರಬೇತಿ ಮತ್ತು ಲೈಂಗಿಕ ಕಿರುಕುಳದ ಬಗೆಗಿನ ಕಂಪನಿ ಪಾಲಿಸಿಗಳನ್ನು ತಿಳಿಹೇಳಬೇಕಾಗುತ್ತದೆ.

10. ಹಾಜರಾತಿ ಪಾಲಿಸಿ

ಕಂಪನಿಗಳು ದೊಡ್ಡದಾಗಿ ಬೆಳೆದಂತೆಲ್ಲಾ ಅನೇಕ ದುಷ್ಟ ಮತ್ತು ಕಠಿಣ ಸಂಸ್ಕೃತಿಗಳು ಬೆಳವಣಿಗೆಗೆ ಅವಕಾಶ ಮಾಡಿಕೊಡುತ್ತವೆ. ಆರೋಗ್ಯಕರ ಕಂಪನಿಗಳಲ್ಲಿ ಹಾಜರಾತಿ ಅಂತಹ ಅತಿ ಶಿಸ್ತಿನ ವಿಷಯವಲ್ಲ. ತಮ್ಮ ಉದ್ಯೋಗ ಮತ್ತು ಸಹದ್ಯೋಗಿಗಳನ್ನು ಇಷ್ಟಪಡುವ ಜನರು ಸಾಮಾನ್ಯವಾಗಿ ಕೆಲಸಕ್ಕೆ ಬರುತ್ತಾರೆ. ಯಾವುದೇ ಕಾರಣಕ್ಕಾಗಿ ಕೆಲಸ ಮಾಡುವಲ್ಲಿ ತೊಂದರೆ ಎದುರಿಸಿ ಹಾಜರಾತಿ ನೀತಿ ಪಾಲಿಸಲು ಸಾಧ್ಯವಾಗದಿದ್ದಲ್ಲಿ ನಿಮ್ಮ ಸಮಸ್ಯೆಯನ್ನು ಬಗೆಹರಿಸುವಲ್ಲಿ ಗಮನಹರಿಸಿ. ಕೆಲವಷ್ಟು ವಿಶಿಷ್ಟವಾದ ಮಾನವ ತೊಡಕುಗಳು ಗೈರು ಹಾಜರಾಗುವಂತೆ ಮಾಡುತ್ತದೆ.

11. ಸಂಬಳದ ನೌಕರರ ಓಟಿ(Overtime) ಮಿತಿ

ಉದ್ಯೋಗಿಗಳಿಗೆ ಸಂಬಳ ಪಾವತಿಸಲಾಗುತ್ತದೆ ಎಂದರೆ ಅವರು ಎಷ್ಟು ಹೊತ್ತು ಬೇಕಾದರೂ ಕೆಲಸ ಮಾಡಬೇಕು ಅಂತೆನಿಲ್ಲ. ಓವರ್ ಟೈಮ್ ಕೆಲಸ ಮಾಡಿಸಿಕೊಂಡರೆ ಜನರಿಗೆ ಕೆಲಸದ ಮೇಲಿನ ಕಾಳಜಿ, ಗುಣಮಟ್ಟ ಕಡಿಮೆಯಾಗಿ ನಿಧಾನವಾಗಿ ಕೆಲಸ ತೊರೆಯುತ್ತಾರೆ. ಇದಾಗುವುದಕ್ಕೆ ಅವಕಾಶ ಮಾಡಿಕೊಡಬಾರದು. ನಿಗದಿತ ಸಮಯ, ತುರ್ತು ಸಂದರ್ಭಗಳನ್ನು ಹೊರತುಪಡಿಸಿ ವಾರಾಂತ್ಯದಲ್ಲಿ ಅಥವಾ ಮನೆಯಿಂದ ಕೆಲಸ ಮಾಡಬೇಕಿಲ್ಲ. ಈ ಬಗ್ಗೆ ವ್ಯವಸ್ಥಾಪಕರೊಂದಿಗೆ ಚರ್ಚಿಸಬೇಕು. ಸ್ಯಾಲರಿ ಸ್ಲಿಪ್: ತಪ್ಪದೆ ತಿಳಿದುಕೊಳ್ಳಬೇಕಾದ 8 ಅಂಶಗಳು

English summary

11 Employee Benefits Every Company Should Provide

Here are 11 essential policies and programs every employer should offer.
Company Search
Enter the first few characters of the company's name or the NSE symbol or BSE code and click 'Go'
Thousands of Goodreturn readers receive our evening newsletter.
Have you subscribed?

Find IFSC

Get Latest News alerts from Kannada Goodreturns