Englishहिन्दी മലയാളം தமிழ் తెలుగు

ರೆಪೊ ದರ ಕಡಿತ ಎಫೆಕ್ಟ್: ಗೃಹ, ವಾಹನ, ವೈಯಕ್ತಿಕ ಸಾಲ ಅಗ್ಗ

Written By: Siddu
Subscribe to GoodReturns Kannada

ಭಾರತೀಯ ರಿಸರ್ವ್ ಬ್ಯಾಂಕು (ಆರ್ಬಿಐ) ರೆಪೊ ಮತ್ತು ರಿವರ್ಸ್ ರೆಪೊ ದರಗಳನ್ನು ಶೇ. 0.25ರಷ್ಟು ಕಡಿತಗೊಳಿಸಿದೆ. ರೆಪೊ ದರ ಕಡಿಮೆಯಾಗಿರುವುದರಿಂದ ಬ್ಯಾಂಕುಗಳು ಕೇಂದ್ರ ಬ್ಯಾಂಕಿನಿಂದ ತರುವ ಅಲ್ಪಾವಧಿ ಸಾಲದ ಮೇಲಿನ ಬಡ್ಡಿದರ ಕಡಿಮೆಯಾಗಲಿದೆ.

ರೆಪೊ ದರ ಕಡಿತಗೊಳಿಸಿರುವುದರಿಂದ ಸಾಲದ ಬೇಡಿಕೆಯಲ್ಲಿ(home loan) ಹೆಚ್ಚಳಕ್ಕೆ, ಹೂಡಿಕೆದಾರರಲ್ಲಿ ಉತ್ತೇಜನ ಮೂಡಿಸಿ ಆರ್ಥಿಕ ಅಭಿವೃದ್ಧಿಗೆ ಸ್ಫರ್ತಿದಾಯಕವಾಗಲಿದೆ ಎನ್ನಲಾಗಿದೆ.

ಎಸ್‌ಬಿಐ ಬಡ್ಡಿದರ ಕಡಿತ: ಗೃಹಸಾಲ ಪಡೆಯಲು ಇದು ಸುಸಮಯ

ಗೃಹ, ವಾಹನ ಸಾಲ ಅಗ್ಗ

ರೆಪೊ ದರ ಕಡಿತದಿಂದಾಗಿ ಗೃಹ ಸಾಲ, ವಾಹನ ಸಾಲ ಹಾಗೂ ವೈಯಕ್ತಿಕ ಸಾಲಗಳ ಮೇಲಿನ ಬಡ್ಡಿದರ ಅಗ್ಗವಾಗಲಿದ್ದು, ಸಾಲದ ಬೇಡಿಕೆ ಹೆಚ್ಚಾಗಲಿದೆ. ಆರ್ಬಿಐ ರೆಪೊ ದರ ಕಡಿಮೆಯಾಗಿರುವುದರಿಂದ ವಿವಿಧ ಸಾಲಗಳ ಮೇಲೆ ಬ್ಯಾಂಕುಗಳು ನೀಡುವ ಬಡ್ಡಿದರ ಕಡಿಮೆಯಾಗಲಿದೆ.

ಹೊಸ ಸಾಲಗಾರರಿಗೆ ಲಾಭ

ಈಗಾಗಲೇ ಹೊಸ ಉದ್ಯಮ/ವ್ಯಾಪಾರ ಪ್ರಾರಂಭಿಸಲು ಬಯಸುವವರಿಂದ ಬ್ಯಾಂಕುಗಳಲ್ಲಿ ತೀವ್ರ ಪೈಪೋಟಿ ಇದೆ. ಹೊಸ ರಿಟೇಲ್ ಮತ್ತು ಕಾರ್ಪೊರೇಟ್ ಸಾಲಗಾರರು ಇದರ ಪ್ರಯೋಜನ ಪಡೆಯಲಿದ್ದಾರೆ.ಬ್ಯಾಂಕುಗಳು ಮನೆ, ಕಾರು, ವೈಯಕ್ತಿಕ ಸಾಲ ಇತ್ಯಾದಿಗಳಿಗೆ ಖಂಡಿತವಾಗಿ ಕಡಿಮೆ ಬಡ್ಡಿದರಗಳನ್ನು ನೀಡಲಿವೆ.

ಎಸ್ಬಿಐ ಠೇವಣಿ ದರಗಳಲ್ಲಿ ಕುಸಿತ

ಮೊದಲ ಬಾರಿಗೆ ದೇಶದ ಅತಿದೊಡ್ಡ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ಉಳಿತಾಯ ಖಾತೆ ದರವನ್ನು ಶೇ. 4 ರಿಂದ ಶೇ. 3.5 ಕ್ಕೆ ಕಡಿತಗೊಳಿಸಲು ನಿರ್ಧರಿಸಿದೆ. ಹಿಂದೆ, ಅನಾಣ್ಯೀಕರಣದ ನಂತರದಲ್ಲಿ ಠೇವಣಿಗಳ ಬೃಹತ್ ಪ್ರಮಾಣದ ಒಳಹರಿವು ಬಂದಿರುವುದರ ಹೊರತಾಗಿಯೂ, ಬಡ್ಡಿದರಗಳನ್ನು ಕಡಿಮೆ ಮಾಡಲು ಬ್ಯಾಂಕುಗಳು ಮುಂದಾಗಿರಲಿಲ್ಲ. ವಾಸ್ತವದಲ್ಲಿ, ಇತರ ದೊಡ್ಡ ಬ್ಯಾಂಕುಗಳು ಕೂಡ ಎಸ್ಬಿಐ ನೀತಿಯನ್ನು ಅನುಸರಿಸುವ ಸಾಧ್ಯತೆಯಿದೆ.

ಅರುಂಧತಿ ಭಟ್ಟಾಚಾರ್ಯ

ಆರ್ಬಿಐ ನ ರೆಪೊ ದರ ಕಡಿತದಿಂದಾಗಿ ಸರಕು ಮತ್ತು ಸೇವೆಗಳ ಬೇಡಿಕೆ ಹೆಚ್ಚಳಗೊಂಡು, ಸಾಲ ವಸೂಲಾತಿಯಲ್ಲಿ ಕ್ರಮೇಣವಾಗಿ ಪ್ರಗತಿ ಕಾಣಲಿದೆ ಎಂದು ಎಸ್ಬಿಐ ಅಧ್ಯಕ್ಷೆ ಅರುಂಧತಿ ಭಟ್ಟಾಚಾರ್ಯ ಹೇಳಿದ್ದಾರೆ. 2017ರಲ್ಲಿ ಕಡಿಮೆ ಬಡ್ಡಿದರದಲ್ಲಿ ಗೃಹಸಾಲ ನೀಡುವ ಬ್ಯಾಂಕುಗಳು

English summary

RBI cuts repo rate: car, home, personal loans may get cheaper

The Reserve Bank of India (RBI) has cut the repo rate, the rate at which banks borrows fund from the central bank, from 6.25 per cent to 6 per cent.
Company Search
Enter the first few characters of the company's name or the NSE symbol or BSE code and click 'Go'
Thousands of Goodreturn readers receive our evening newsletter.
Have you subscribed?

Find IFSC

Get Latest News alerts from Kannada Goodreturns