For Quick Alerts
ALLOW NOTIFICATIONS  
For Daily Alerts

ಸಣ್ಣ ಸ್ವಂತ ಉದ್ಯಮ (ಕಂಪನಿ) ಪ್ರಾರಂಭಿಸುವುದು ಹೇಗೆ?

ನೀವು ಸಣ್ಣ ಉದ್ಯಮಕ್ಕೆ ಧುಮುಕಿ ಸವಾಲುಗಳನ್ನು ಎದುರಿಸಲು ನಿರ್ಧರಿಸುವುದರ ಮೂಲಕ ಸಣ್ಣ ಉದ್ಯಮದ ಮಾಲೀಕರಾಗಬಹುದು. ಅದಕ್ಕಾಗಿ ನೀವು ಪ್ರಾರಂಭದಲ್ಲೆ ವೇದಿಕೆಯನ್ನು ಹೊಂದಿಸಿಕೊಳ್ಳಬೇಕು.

By Siddu
|

ಭಾರತ 51 ದಶಲಕ್ಷ ಸಣ್ಣ ಮತ್ತು ಮಧ್ಯಮ ಉದ್ಯಮ ವ್ಯವಹಾರಗಳನ್ನು ಹೊಂದಿದ್ದು, ಸುಮಾರು 120 ದಶಲಕ್ಷ ಜನರಿಗೆ ಉದ್ಯೋಗ ಒದಗಿಸುತ್ತಿವೆ. ಯುನೈಟೆಡ್ ಸ್ಟೇಟ್ಸ್‌ನಲ್ಲಿ 28 ಮಿಲಿಯನ್‌ಗಿಂತಲೂ ಹೆಚ್ಚಿನ ಸಣ್ಣ ಉದ್ಯಮ ವ್ಯವಹಾರಗಳಿವೆ. ಅಂದರೆ ಸಣ್ಣ ಉದ್ಯಮಗಳ ವ್ಯಾಪ್ತಿ ತುಂಬಾ ದೊಡ್ಡದು.

 

ಆಶಾವಾದಿ ವ್ಯಕ್ತಿಗಳು ಅನನ್ಯವಾದ ಬಿಸಿನೆಸ್ ಐಡಿಯಾದೊಂದಿಗೆ ವೃತ್ತಿ ಜೀವನವನ್ನು ಸರಿಯಾದ ರೀತಿಯಲ್ಲಿ ವಿನ್ಯಾಸಗೊಳಿಸಿಕೊಂಡು ಆರ್ಥಿಕ ಸ್ವಾತಂತ್ರ್ಯದ ಕಡೆಗೆ ಬೆಳೆಯಲು ಮುನ್ನಡೆಯಬೇಕು.

ಸ್ವಂತ ಕೆಲಸ, ಹಣಕಾಸು ಸ್ವಾತಂತ್ರ್ಯ ಮತ್ತು ನಿಮಗಾಗಿ ಹೂಡಿಕೆ ಮಾಡುವ ಕಾರಣಗಳಿಗಾಗಿ ಸಣ್ಣ ಉದ್ಯಮವನ್ನು ನೀವು ಪ್ರಾರಂಭಿಸಲು ಪರಿಗಣಿಸಬೇಕು. ಹಾಗಾಗಿ ಈ ಉದ್ಯಮವೂ ಆರಂಭಿಸುವ ಯೋಚನೆ ಆಶ್ಚರ್ಯಕರವಾದದೇನು ಅಲ್ಲ.

ಅದರೆ ಪ್ರತಿ ಸಣ್ಣ ಉದ್ಯಮವೂ ಯಶಸ್ಸಿನ ಸ್ಥಾನದಲ್ಲಿ ಇರುವುದಿಲ್ಲ. ವಾಸ್ತವವಾಗಿ ಸುಮಾರು ಮೂರನೇ ಎರಡು ಭಾಗದಷ್ಟು ಉದ್ಯಮಗಳು ಮತ್ತು ಉದ್ಯೋಗಿಗಳನ್ನು ಕನಿಷ್ಟ ಎರಡು ವರ್ಷಗಳವರಗೆ ಇದು ಜೀವಂತವಾಗಿರಿಸುತ್ತದೆ. ಅಲ್ಲದೆ ಅರ್ಧದಷ್ಟು ಜನರು ಸುಮಾರು ಐದು ವರ್ಷಗಳವರಗೆ ಈ ಉದ್ಯಮವನ್ನು ನಂಬಿ ಬದುಕಬಹುದು. ನೀವು ಸಣ್ಣ ಉದ್ಯಮಕ್ಕೆ ಧುಮುಕಿ ಸವಾಲುಗಳನ್ನು ಎದುರಿಸಲು ನಿರ್ಧರಿಸುವುದರ ಮೂಲಕ ಸಣ್ಣ ಉದ್ಯಮದ ಮಾಲೀಕರಾಗಬಹುದು. ಅದಕ್ಕಾಗಿ ನೀವು ಪ್ರಾರಂಭದಲ್ಲೆ ವೇದಿಕೆಯನ್ನು ಹೊಂದಿಸಿಕೊಳ್ಳಬೇಕು. ಆದ್ದರಿಂದ ಉದ್ಯಮವನ್ನು ಪ್ರಾರಂಭಿಸಿದಾಗ ಎಲ್ಲ ಅಗತ್ಯ ಹಂತಗಳನ್ನು ಅನುಸುರಿಸುವುದರೊಂದಿಗೆ ಅದರ ಯಶಸ್ವಿಗಾಗಿ ಭದ್ರ ಅಡಿಪಾಯ ಹಾಕಬೇಕು. ಅತಿ ಕಡಿಮೆ ಬಂಡವಾಳದಲ್ಲಿ ನಡೆಸಬಹುದಾದ 10 ಉದ್ಯಮ

ಇಲ್ಲಿ ಉದ್ಯಮವನ್ನು ಯಶಸ್ವಿಯಾಗಿ ಪ್ರಾರಂಭಿಸಲು ಅನುಕೂಲವಾಗುವ ಅಂಶಗಳನ್ನು ನೀಡಲಾಗಿದ್ದು, ಸರಿಯಾದ ಸಮಯದಲ್ಲಿ ಒಂದೊಂದೆ ಹಂತಗಳನ್ನು ಕೈಗೆತ್ತಿಕೊಳ್ಳುವುದರೊಂದಿಗೆ ಸಣ್ಣ ಉದ್ಯಮದ ಯಶಸ್ವಿ ಮಾಲೀಕರಾಗುವುದರಲ್ಲಿ ಯಾವುದೇ ಸಂಶಯವಿಲ್ಲ.

ಸಂಶೋಧನೆ ಮಾಡಿ

ಸಂಶೋಧನೆ ಮಾಡಿ

ಸ್ವಂತ ಬಿಸಿನೆಸ್ ಪ್ರಾರಂಭಿಸುವ ಕುರಿತು ನೀವು ಈಗಾಗಲೇ ಹೊಸ ಐಡಿಯಾವನ್ನು ಗುರುತಿಸಿದ್ದಿರಿ. ಇದು ನಿಮ್ಮ ಉದ್ಯಮದ ಸ್ವಲ್ಪಮಟ್ಟಿನ ವಾಸ್ತವಿಕತೆಯನ್ನು ಸಮತೋಲನಗೊಳಿಸುವ ಸಮಯ. ಹಾಗಾಗಿ ನಿಮ್ಮ ಕಲ್ಪನೆಯನ್ನು ಯಶಸ್ವಿಗೊಳಿಸಲು ಸಾಧ್ಯವಿದೆಯೇ? ಅದನ್ನು ಮುಂದುವರೆಸಲು ನಿಮ್ಮ ಬಿಸಿನೆಸ್ ಐಡಿಯಾವನ್ನು ಖಾಯಂಗೊಳಿಸುವ ಪ್ರಕಿಯೆ ಮೂಲಕ ಅದನ್ನು ನೀವು ಚಾಲನೆಯಲ್ಲಿರಿಸಬೇಕಾದ ಅಗತ್ಯವಿದೆ.
ನಾನು ಪ್ರಾರಂಭಿಸುತ್ತಿರುವ ಉದ್ಯಮದ ಅಗತ್ಯ ಯಾರಿಗಿದೆ? ಇದು ಯಾವ ಉತ್ಪನ್ನಗಳನ್ನು ಅಥವಾ ಸೇವೆಯನ್ನು ಹೊಂದಿರಬೇಕು. ನನ್ನ ಪ್ರತಿಸ್ಪರ್ಧಿ ಉದ್ಯಮಗಳು ಯಾವುವು? ನನ್ನ ಉದ್ಯಮದ ಮಾರುಕಟ್ಟೆ ಪರಿಮಿತಿ ಹಾಗು ಗ್ರಾಹಕರು ಯಾರು ಇತ್ಯಾದಿ ಕುರಿತಾಗಿ ಸರಿಯಾದ ಯೋಜನೆ ರೂಪಿಸಬೇಕು. ಸ್ವಂತ ಉದ್ಯಮ(ಕಂಪನಿ) ಪ್ರಾರಂಭಿಸುವುದು ಹೇಗೆ?

ಯೋಜನೆಯನ್ನು ರೂಪಿಸಿ
 

ಯೋಜನೆಯನ್ನು ರೂಪಿಸಿ

ನಿಮ್ಮ ವ್ಯವಹಾರದ ಕಲ್ಪನೆಯನ್ನು ವಾಸ್ತವಿಕವಾಗಿ ವ್ಯವಸ್ಥಿತವಾಗಿ ಮಾಡಲು ನೀವು ಯೋಜನೆ ಮಾಡುವ ಅಗತ್ಯವಿದೆ. ನಿಮ್ಮ ವ್ಯವಹಾರದ ಸ್ಥಾಪನೆಯ ಪ್ರಾರಂಭಿಕ ಹಂತದಿಂದ ಹಿಡಿದು ಅದರ ಬೆಳವಣಿಗೆಯ ಹಂತದವರೆಗೂ ನಿಮ್ಮ ವ್ಯವಹಾರದ ಯೋಜನೆಯು (ಬಿಸಿನೆಸ್ ಪ್ಲಾನ್) ಮಾರ್ಗದರ್ಶನ ನೀಡುವ ನೀಲಿನಕ್ಷೆಯಾಗಿದೆ. ಇದನ್ನು ಎಲ್ಲ ಹೊಸ ವ್ಯವಹಾರಗಳಿಗೂ ಅಗತ್ಯವಾಗಿ ಹೊಂದಿರಬೇಕು. ವಿಭಿನ್ನ ಬಗೆಯ ವ್ಯವಹಾರಗಳಿಗೆ ವಿಭಿನ್ನ ರೀತಿಯ ವ್ಯವಹಾರ ಯೋಜನೆಗಳಿವೆ ಎಂಬುದು ಒಳ್ಳೆಯ ಸುದ್ದಿ.
ಒಂದು ವೇಳೆ ನೀವು ಹೂಡಿಕೆದಾರರು ಅಥವಾ ಹಣಕಾಸು ಸಂಸ್ಥೆಯಿಂದ ಹಣಕಾಸಿನ ನೆರವು ಪಡೆಯಲು ನೀವು ಬಯಸಿದರೆ ಸಾಂಪ್ರದಾಯಿಕ ವ್ಯಾಪಾರ ಯೋಜನೆಯು ಅತ್ಯಗತ್ಯವಾಗಿರುತ್ತದೆ. ಈ ರೀತಿಯ ವ್ಯಾಪಾರ ಯೋಜನೆ ಸಾಮಾನ್ಯವಾಗಿ ಸಂಪೂರ್ಣ ಹಾಗೂ ದೀರ್ಘಕಾಲಿಕ ಮತ್ತು ನಿಮ್ಮ ಕಲ್ಪನೆಯನ್ನು ಮೌಲ್ಯೀಕರಿಸುವಾಗ ಹೂಡಿಕೆದಾರರು ಮತ್ತು ಬ್ಯಾಂಕುಗಳು ಸಾಮಾನ್ಯ ವಿಭಾಗಗಳ ಗುಂಪನ್ನು ಹೊಂದಿದೆ.
ಹಣಕಾಸಿನ ಬೆಂಬಲ ಪಡೆಯಲು ನೀವು ಬಯಸದಿದ್ದರೆ ಸರಳವಾಗಿ ಒಂದು ಪುಟದ ವ್ಯವಹಾರ ಯೋಜನೆಯ ಮೂಲಕ ನೀವು ಏನನ್ನು ಸಾಧಿಸಲು ಆಶಿಸಿದ್ದೀರಿ ಮತ್ತು ಅದನ್ನು ಸಾಧಿಸಲು ಹೇಗೆ ಯೋಜನೆಯನ್ನು ರೂಪಿಸಿದ್ದೀರಿ ಎಂಬುದನ್ನು ಸ್ಪಷ್ಟಪಡಿಸಬಹುದು. ವಾಸ್ತವವಾಗಿ ನಿಮ್ಮ ವ್ಯಾಪಾರದ ಯೋಜನೆಯನ್ನು ನೀವು ಕರವಸ್ತ್ರದ ಹಿಂಭಾಗದಲ್ಲಿ ಸಹ ರಚಿಸಿ, ಅದನ್ನು ಕಾಲಾನಂತರದಲ್ಲಿ ಸುದಾರಿಸಬಹುದು. Something is better than nothing ಅನ್ನುವಂತೆ ಏನೂ ಇಲ್ಲದೇ ಇರುವುದಕ್ಕಿಂತ ಏನಾದರೂ ಯೋಜನೆಗಳು ಇರುವುದು ಉತ್ತಮ.

ಬಜೆಟ್ (ಹಣಕಾಸು) ಯೋಜನೆ

ಬಜೆಟ್ (ಹಣಕಾಸು) ಯೋಜನೆ

ಸಣ್ಣ ಉದ್ಯಮ ಪ್ರಾರಂಭಿಸಲು ಹೆಚ್ಚು ಹಣದ ಅಗತ್ಯವಿಲ್ಲ. ಆದರೆ ನೀವು ಲಾಭವನ್ನು ಗಳಿಸುವುದಕ್ಕೆ ಮೊದಲು ಕೆಲವು ಆರಂಭಿಕ ಹೂಡಿಕೆಯನ್ನು ಮಾಡಲು ಮತ್ತು ಇನ್ನಿತರ ಖರ್ಚು ವೆಚ್ಚವನ್ನು ಪೂರೈಸುವ ಸಾಮರ್ಥ್ಯವನ್ನು ಹೊಂದಿರಬೇಕು. ನಿಮ್ಮ ವ್ಯವಹಾರಕ್ಕಾಗಿ ಒಂದು ಬಾರಿಯ ಆರಂಭಿಕ ವೆಚ್ಚಗಳನ್ನು ಅಂದಾಜು ಮಾಡುವ ಸ್ಪ್ರೆಡ್ ಶೀಟ್ ಅನ್ನು ಹೊಂದಿರಬೇಕು (ಪರವಾನಗಿ, ಉಪಕರಣಗಳು, ಕಾನೂನು ಶುಲ್ಕಗಳು, ವಿಮೆ, ಬ್ರಾಡಿಂಗ್, ಮಾರುಕಟ್ಟೆ ಸಂಶೋಧನೆ, ದಾಸ್ತಾನು, ಟ್ರೇಡ್ ಮಾರ್ಕಿಂಗ್, ಗ್ರಾಂಡ್ ಓಪನಿಂಗ್ ಈವೆಂಟ್, ಆಸ್ತಿ ಭೋಗ್ಯ ಇತ್ಯಾದಿ ಗಳನ್ನು ಇದು ಒಳಗೊಂಡಿರಬೇಕು). ಇದರೊಂದಿಗೆ ನಿಮ್ಮ ಉದ್ಯಮವನ್ನು ಕನಿಷ್ಟ 12 ತಿಂಗಳುಗಳವರಗೆ ಮುಂದುವರೆಸಿಕೊಂಡು ಹೋಗುವ ಸಾಮರ್ಥ್ಯ ಹೊಂದಿರಬೇಕು. (ಬಾಡಿಗೆ, ಉಪಯುಕ್ತತೆಗಳು, ಮಾರುಕಟ್ಟೆ ಮತ್ತು ಜಾಹೀರಾತು, ಉತ್ಪಾದನೆ, ಸರಬರಾಜು, ಪ್ರಯಾಣ ವೆಚ್ಚ, ಉದ್ಯೋಗಿಗಳ ಸಂಬಳ, ನಿಮ್ಮ ಸ್ವಂತ ಸಂಬಳ, ಇತ್ಯಾದಿ). ಇವೇಲ್ಲವೂ ನಿಮ್ಮ ಆರಂಭಿಕ ಹೂಡಿಕೆಗೆ ಅಗತ್ಯವಾಗಿ ಬೇಕಿದ್ದು, ಇದಕ್ಕಾಗಿ ಸರಿಯಾದ ರೀತಿಯಲ್ಲಿ ಬಜೆಟ್ ಯೋಜನೆ ರೂಪಿಸಬೇಕು.

ನಿಮ್ಮ ಮನಸ್ಸಿನಲ್ಲಿ ಲೆಕ್ಕಾಚಾರ ಇರಬಹುದು. ನಿಮ್ಮ ಉದ್ಯಮಕ್ಕಾಗಿ ಹಲವಾರು ವಿಧಾನವನ್ನು ಆಯ್ಕೆ ಮಾಡಬಹುದು. ಅವುಗಳೆಂದರೆ
* ಹಣಕಾಸು (financing)
* ಸಣ್ಣ ವ್ಯಾಪಾರ ಸಾಲಗಳು
* ಸಣ್ಣ ವ್ಯಾಪಾರ ಅನುದಾನ
* ಏಂಜಲ್ ಹೂಡಿಕೆದಾರರು
* ಕ್ರೌಡ್ ಫಂಡಿಂಗ್
ನಿಮ್ಮ ಉದ್ಯಮಕ್ಕೆ ಅಗತ್ಯವಿರುವಷ್ಟು ಕಡಿಮೆ ಬಂಡವಾಳವನ್ನು ಬಳಸಿಕೊಂಡು ಬೂಟ್ ಸ್ಟ್ರಾಪ್ಪಿಂಗ್ ಮೂಲಕ ನಿಮ್ಮ ವ್ಯಾಪಾರವನ್ನು ಕೆಳ ಹಂತದಿಂದ ದೃಢಗೊಳಿಸಬಹುದು. ಕಡಿಮೆ ಬಂಡವಾಳದಲ್ಲಿ ಉದ್ಯಮ ನಡೆಸಬೇಕೆ?

ಬಿಸಿನೆಸ್ ವಿಧಾನ ಆಯ್ಕೆ ಮಾಡಿ

ಬಿಸಿನೆಸ್ ವಿಧಾನ ಆಯ್ಕೆ ಮಾಡಿ

ನಿಮ್ಮ ಸಣ್ಣ ವ್ಯವಹಾರವು ಏಕ ಮಾಲೀಕತ್ವ, ಪಾಲುದಾರಿಕೆ, ಸೀಮಿತ ಹೊಣೆಗಾರಿಕೆಯ ಕಂಪನಿ (ಎಲ್.ಎಲ್.ಸಿ) ಅಥವಾ ಕಾರ್ಪೋರೇಷನ್ ಆಗಿರಬಹುದು. ನೀವು ಆಯ್ಕೆ ಮಾಡುವ ವ್ಯಾಪಾರ ಘಟಕವೂ ವ್ಯವಹಾರದ ಹೆಸರು, ನಿಮ್ಮ ಹೊಣೆಗಾರಿಕೆ, ನಿಮ್ಮ ತೆರಿಗೆಗಳನ್ನು ಹೇಗೆ ಫೈಲ್ ಮಾಡಬೇಕು ಎಂಬ ಅನೇಕ ಅಂಶಗಳ ಮೇಲೆ ಪರಿಣಾಮ ಬೀರುತ್ತದೆ.
ನೀವು ಆರಂಭದ ವ್ಯಾಪಾರದ ರೂಪುರೇಷೆಯನ್ನು ಆಯ್ಕೆ ಮಾಡಬಹುದು. ನಿಮ್ಮ ವ್ಯಾಪಾರದ ಬೆಳವಣಿಗೆ ಮತ್ತು ಬದಲಾವಣೆಯ ಅವಶ್ಯಕತೆಗೆ ಅನುಗುಣವಾಗಿ ಆ ರೂಪುರೇಷೆಯನ್ನು ಮರುಪರಿಶೀಲಿಸಬಹುದು ಮತ್ತು ನಿಮ್ಮ ರೂಪುರೇಷೆಯನ್ನು ಬದಲಿಸಬಹುದು.
ನಿಮ್ಮ ವ್ಯವಹಾರದ ಸಂಕೀರ್ಣತೆಯ ಆಧಾರದ ಮೇಲೆ ನಿಮ್ಮ ವ್ಯಾಪಾರಕ್ಕಾಗಿ ನೀವು ಸರಿಯಾದ ರೂಪುರೇಷೆಯನ್ನು ಆಯ್ಕೆ ಮಾಡುತ್ತಿದ್ದೀರಿ ಎಂದು ಖಚಿತಪಡಿಸಿಕೊಳ್ಳಲು ವಕೀಲರು ಅಥವಾ ಸಿಪಿಎಯೊಂದಿಗೆ ಸಮಾಲೋಚಿಸಿ ಬಂಡವಾಳ ಹೂಡಬಹುದು.

ಉದ್ಯಮದ ಹೆಸರು ಆಯ್ಕೆ ಮಾಡಿ ಮತ್ತು ನೊಂದಾಯಿಸಿ

ಉದ್ಯಮದ ಹೆಸರು ಆಯ್ಕೆ ಮಾಡಿ ಮತ್ತು ನೊಂದಾಯಿಸಿ

ನಿಮ್ಮ ವ್ಯಾಪಾರದ ಪ್ರತಿಯೊಂದು ಸಂದರ್ಭದಲ್ಲೂ ನಿಮ್ಮ ಉದ್ಯಮದ ಹೆಸರು ಪ್ರಮುಖ ಪಾತ್ರ ವಹಿಸುತ್ತದೆ. ಹಾಗಾಗಿ ಅದು ತುಂಬಾ ಒಳ್ಳೆಯದು ಎಂದು ನೀವು ಬಯಸುತ್ತೀರಿ. ನೀವು ನಿಮ್ಮ ಆಯ್ಕೆಗಳನ್ನು ಪರಿಶೋಧಿಸುವಾಗ ಮತ್ತು ನಿಮ್ಮ ವ್ಯವಹಾರದ ಹೆಸರನ್ನು ಆಯ್ಕೆ ಮಾಡುವಾಗ ಎಲ್ಲಾ ಸಂಭಾವ್ಯ ಪರಿಣಾಮಗಳನ್ನು ನೀವು ಯೋಚಿಸಿದ್ದೀರಾ ಎಂದು ಖಚಿತಪಡಿಸಿಕೊಳ್ಳಿ.
ನಿಮ್ಮ ವ್ಯಾಪಾರಕ್ಕಾಗಿ ನೀವು ಹೆಸರನ್ನು ಆಯ್ಕೆ ಮಾಡಿದ ನಂತರ ಆ ಹೆಸರು ಟ್ರೇಡ್ ಮಾರ್ಕ್ ಅಥವಾ ಪ್ರಸ್ತುತ ಬಳಕೆಯಲ್ಲಿದೆಯೇ ಎಂದು ನೀವು ಪರಿಶೀಲಿಸಬೇಕಾಗುತ್ತದೆ. ನಂತರ ನೀವು ಅದನ್ನು ನೋಂದಾಯಿಸಿಕೊಳ್ಳಬೇಕು. ಏಕೈಕ ಮಾಲೀಕತ್ವವಿರುವವರು ತಮ್ಮ ವ್ಯಾಪಾರ ಅಥವಾ ಉದ್ಯಮದ ಹೆಸರನ್ನು ತಮ್ಮ ರಾಜ್ಯ ಅಥವಾ ಕೌಂಟಿ ಗುಮಾಸ್ತರೊಂದಿಗೆ ನೋಂದಾಯಿಸಿಕೊಳ್ಳಬೇಕು. ನಿಗಮಗಳು ಎಲ್ ಎಲ್ ಸಿಗಳು ಅಥವಾ ಸೀಮಿತ ಪಾಲುದಾರಿಕೆಗಳು ತಮ್ಮ ಪತ್ರ ವ್ಯವಹಾರಕ್ಕೆ ಸಂಬಂಧಿಸಿದ ಕೆಲಸ ಮಾಡುವ ಸಂದರ್ಭದಲ್ಲಿಯೇ ತಮ್ಮ ವ್ಯಾಪಾರದ ಹೆಸರನ್ನು ನೋಂದಾಯಿಸುತ್ತವೆ. ನಿಮ್ಮ ವ್ಯಾಪಾರದ ಹೆಸರನ್ನು ಆಯ್ಕೆ ಮಾಡಿದ ನಂತರ ನಿಮ್ಮ ಡೊಮೇನ್ ಹೆಸರನ್ನು ನೋದಾಯಿಸಲು ಮರೆಯಬೇಡಿ.

ಲೆಸೆಸ್ಸ್ ಮತ್ತು ಪರ್ಮಿಟ್ ಪಡೆಯಿರಿ

ಲೆಸೆಸ್ಸ್ ಮತ್ತು ಪರ್ಮಿಟ್ ಪಡೆಯಿರಿ

ಸ್ವಂತ ಉದ್ಯಮವನ್ನು ಪ್ರಾರಂಭಿಸಿದಾಗ ಪತ್ರ ವ್ಯವಹಾರ ಪ್ರಕ್ರಿಯೆಯು ಒಂದು ಭಾಗವಾಗಿದೆ. ಸಣ್ಣ ವ್ಯವಹಾರಕ್ಕೆ ಸಂಬಂಧಿಸಿದ ಅನೇಕ ರೀತಿಯ ಲೆಸೆಸ್ಸ್ ಮತ್ತು ಪರ್ಮಿಟ್ ಗಳಿದ್ದು, ನಿಮ್ಮ ಪರಿಸ್ಥಿತಿಗೆ ಅನ್ವಯಿಸಿ ಯಾವ ವಿಧದ ವ್ಯವಹಾರ ಪ್ರಾರಂಭಿಸುತ್ತಿದ್ದೀರಿ ಅದು ಎಲ್ಲಿ ನೆಲೆಗೊಳ್ಳುತ್ತಿದೆ ಎಂಬುದನ್ನು ಅವಲಂಬಿಸಿ ನಿರ್ಧರಿಸಿ. ನಿಮ್ಮ ವ್ಯವಹಾರದ ಪ್ರಾರಂಭದ ಪ್ರಕ್ರಿಯೆಯ ಸಮಯದಲ್ಲೇ ನಿಮ್ಮ ವ್ಯವಹಾರಕ್ಕೆ ಅನ್ವಯವಾಗುವಂತಹ ಯಾವ ಲೆಸಸ್ಸ್ ಮತ್ತು ಪರ್ಮಿಟ್ ಗಳಿವೆ ಎಂಬುದನ್ನು ಸರಿಯಾಗಿ ಅರಿತುಕೊಂಡು ಅರ್ಜಿ ಸಲ್ಲಿಸಬೇಕು.

ಲೆಕ್ಕ ಪರಿಶೋಧಕ ವ್ಯವಸ್ಥೆಯನ್ನು ಆಯ್ಕೆ ಮಾಡಿ

ಲೆಕ್ಕ ಪರಿಶೋಧಕ ವ್ಯವಸ್ಥೆಯನ್ನು ಆಯ್ಕೆ ಮಾಡಿ

ಸಣ್ಣ ವ್ಯವಹಾರವೂ ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಹಲವಾರು ವ್ಯವಸ್ಥೆಗಳು ಪ್ರಮುಖವಾಗಿದ್ದು, ಅದರಲ್ಲಿ ಅಕೌಂಟಿಂಗ್ ವ್ಯವಸ್ಥೆಯೂ ಒಂದಾಗಿದೆ.
ನಿಮ್ಮ ಬಜೆಟ್ ನ್ನು ರಚಿಸಲು ಮತ್ತು ನಿರ್ವಹಿಸಲು ನಿಮ್ಮ ಲೆಕ್ಕ ಪರಿಶೋಧಕ ವ್ಯವಸ್ಥೆಯು ಅವಶ್ಯಕವಾಗಿದೆ. ನಿಮ್ಮ ಉದ್ಯಮದಲ್ಲಿನ ದರಗಳು ಮತ್ತು ಬೆಲೆಗಳನ್ನು ನಿಗಧಿಪಡಿಸಿ. ಇತರರೊಂದಿಗೆ ವ್ಯಾಪಾರ ನಡೆಸುವುದು ಮತ್ತು ನಿಮ್ಮ ತೆರಿಗೆಯನ್ನು ಫೈಲ್ ಮಾಡಿ ನಿಮ್ಮ ಲೆಕ್ಕ ಪರಿಶೋಧಕ ವ್ಯವಸ್ಥೆಯನ್ನು ನೀವೇ ಹೊಂದಿಸಬಹುದು ಅಥವಾ ಅಕೌಂಟೆಂಟ್ ಅನ್ನು ನೇಮಿಸಿಕೊಳ್ಳಬಹುದು. ನೀವು ಸ್ವತಂತ್ರವಾಗಿ ಇದನ್ನು ಮಾಡುವುದಾದರೆ ಲೆಕ್ಕಪತ್ರ ತಂತ್ರಾಂಶವನ್ನು ಅಯ್ಕೆ ಮಾಡುವಾಗ ಈ ಪ್ರಶ್ನೆಗಳನ್ನು ಪರಿಗಣಿಸಬೇಕು ಎಂಬುದನ್ನು ಖಚಿತಪಡಿಸಿಕೊಳ್ಳಿ.

ಉದ್ಯಮದ ಸ್ಥಳವನ್ನು ಹೊಂದಿಸಿಕೊಳ್ಳಿ

ಉದ್ಯಮದ ಸ್ಥಳವನ್ನು ಹೊಂದಿಸಿಕೊಳ್ಳಿ

ನಿಮ್ಮ ವ್ಯಾಪಾರದ ಸ್ಥಳವನ್ನು ಹೊಂದಿಸಿಕೊಳ್ಳುವುದು ನಿಮ್ಮ ವ್ಯವಹಾರದ ಕಾರ್ಯಚರಣೆಗೆ ಮುಖ್ಯವಾದುದು. ಹೋಮ್ ಆಫೀಸ್, ಪಾಲುದಾರಿಕೆ ಅಥವಾ ಖಾಸಗಿ ಕಚೇರಿ ಸ್ಥಳ ಅಥವಾ ರಿಟೈಲ್ ಸ್ಥಳ ಯಾವುದನ್ನು ಹೊಂದಿರುವಿರಿ?
ನಿಮ್ಮ ವ್ಯವಹಾರದ ಸ್ಥಳ, ಸಲಕರಣೆಗಳು ಮತ್ತು ಒಟ್ಟಾರೆ ವ್ಯವಸ್ಥೆ ಬಗ್ಗೆ ನೀವು ಯೋಚಿಸಬೇಕಾಗಿದೆ. ನಿಮ್ಮ ಉದ್ಯಮ ಸ್ಥಳವೂ ನೀವು ಮಾಡುತ್ತಿರುವ ವ್ಯವಹಾರದ ಪ್ರಕಾರ ಕಾರ್ಯನಿರ್ವಹಿಸುತ್ತಿದೆಯೆ ಎಂದು ಖಚಿತಪಡಿಸಿಕೊಳ್ಳಿ. ನೀವು ವಾಣಿಜ್ಯಾತ್ಮಕ ಸ್ಥಳವನ್ನು ಖರೀದಿಸುವಿರಾ ಅಥವಾ ಗುತ್ತಿಗೆ ಪಡೆಯುವಿರಾ ಎಂಬುದನ್ನು ನಿರ್ಧರಿಸಬೇಕು.

ಉತ್ತಮ ಟೀಮ್ ತಯಾರಿಸಿ

ಉತ್ತಮ ಟೀಮ್ ತಯಾರಿಸಿ

ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ಬಯಸಿದ್ದರೆ, ಈ ಪ್ರಕ್ರಿಯೆಗೆ ಇದು ಸರಿಯಾದ ಸಮಯ. ಮೊದಲ ಉದ್ಯೋಗಿಯನ್ನು ನೇಮಿಸಿಕೊಳ್ಳುವುದು ತುಂಬಾ ಮುಖ್ಯವಾಗಿದ್ದು, ಇದು ತದನಂತರದಲ್ಲಿ ನೇಮಿಸಿಕೊಳ್ಳುವ ಉದ್ಯೋಗಿಗಳನ್ನು ನಿರ್ಧರಿಸುವುದರಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ನೀವು ಉದ್ಯೋಗಿಗಳನ್ನು ನೇಮಿಸಿಕೊಳ್ಳುವುದಿಲ್ಲ ಎಂದಾದಲ್ಲಿ ಹೊರಗುತ್ತಿಗೆ ಕೆಲಸದ ಒಪ್ಪಂದವನ್ನು ಪಡೆಯಬಹುದು.ದೆ.
ಕೊನೆಯದಾಗಿ, ನೀವು ಸಣ್ಣ ಉದ್ಯಮವನ್ನು ನಡೆಸುವ ಏಕವ್ಯಕ್ತಿ ಯಾಗಿದ್ದರೆ ನಿಮಗೆ ನೌಕರರ ಅಥವಾ ಗುತ್ತಿಗೆದಾರರ ಅಗತ್ಯವಿಲ್ಲ. ಬದಲಾಗಿ ಉತ್ತಮ ಬೆಂಬಲವುಳ್ಳತಂಡದ ಅಗತ್ಯವಿರುತ್ತದೆ. ಈ ತಂಡವು ಮಾರ್ಗದರ್ಶಿ, ಸಣ್ಣ ಉದ್ಯಮ ತರಬೇತುದಾರ ಅಥವಾ ನಿಮ್ಮ ಕುಟುಂಬವನ್ನು ಒಳಗೊಂಡಿರಬಹುದು.

ನಿಮ್ಮ ಉದ್ಯಮವನ್ನು ಪ್ರಚಾರ ಮಾಡಿ

ನಿಮ್ಮ ಉದ್ಯಮವನ್ನು ಪ್ರಚಾರ ಮಾಡಿ

ನಿಮ್ಮ ಉದ್ಯಮ ಒಂದು ಬಾರಿ ಕಾರ್ಯರೂಪಕ್ಕೆ ಬಂದ ನಂತರ ಗ್ರಾಹಕರನ್ನು ಆಕರ್ಷಿಸಲು ಪ್ರಾರಂಭಿಸಬೇಕು. ಇದನ್ನು ಮೂಲ ಅನನ್ಯ ಮಾರಾಟದ ಪ್ರತಿಪಾದನೆ (unique selling proposition) ಮೂಲಕ ಪ್ರಾರಂಭಿಸಿ, ಮಾರ್ಕೆಟಿಂಗ್ ಯೋಜನೆಯನ್ನು ರಚಿಸಬೇಕು. ನಂತರ ನಿಮ್ಮ ಉದ್ಯಮವನ್ನು ಪರಿಣಾಮಕಾರಿಯಾಗಿ ಪ್ರಚುರಪಡಿಸಲು ಸಾಧ್ಯವಾದಷ್ಟು ಅನೇಕ ಸಣ್ಣ ಉದ್ಯಮಗಳ ಐಡಿಯಾಗಳನ್ನು ಅನ್ವೇಷಿಸಿ.
ಒಮ್ಮೆ ನೀವು ಈ ಉದ್ಯಮದ ಪ್ರಾರಂಭದ ಚಟುವಟಿಕೆಯನ್ನು ಪೂರ್ಣಗೊಳಿಸಿದ ನಂತರ ನೀವು ಎಲ್ಲ ಪ್ರಮುಖ ನೆಲೆಯನ್ನು ಒಳಗೊಂಡಂತಾಗುತ್ತದೆ.

ಕೊನೆ ಮಾತು

ಕೊನೆ ಮಾತು

"ಯಶಸ್ಸು" ಒಂದೆ ರಾತ್ರಿಯಲ್ಲಿ ಬರುವಂತಹದ್ದಲ್ಲ ಎಂಬುದನ್ನು ನೆನಪಿನಲ್ಲಿಡಿ. ರಾತ್ರೋರಾತ್ರಿ ಶ್ರೀಮಂತರಾದವರು ಯಾರು ಇಲ್ಲ. ಅಂತವರು ಯಾರಾದರೂ ಇದ್ದಲ್ಲಿ ಅವರೆಲ್ಲಾ ಜೈಲಿನಲ್ಲಿದ್ದಾರೆ. ಯಶಸ್ಸಿಗೆ ಯಾವುದೆ ಅಡ್ಡದಾರಿಗಳಿಲ್ಲ. Shortcut will cut you short. ಅದರೆ ನೀವು ರೂಪಿಸಿದ ಯೋಜನೆಯನ್ನು ನಿರಂತರವಾಗಿ ಕಾರ್ಯರೂಪಕ್ಕೆ ತಂದು ನಿಮ್ಮ ಉದ್ಯಮವನ್ನು ಯಶಸ್ಸಿನ ಶಿಖರದತ್ತ ಮುನ್ನಡೆಸಿ.. ನಿರಂತರ ಶ್ರಮ ಮತ್ತು ಪ್ರಯತ್ನಕ್ಕೆ ಫಲ ಕಟ್ಟಿಟ್ಟ ಬುತ್ತಿ. ಉದ್ಯಮಿಗಳು/ಹೂಡಿಕೆದಾರರು ಓದಲೇಬೇಕಾದ ಪುಸ್ತಕಗಳು

English summary

How to start small business in india

Every small business is positioned for success. In fact, only about two-thirds of businesses with employees survive.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X