Englishहिन्दी മലയാളം தமிழ் తెలుగు

ಉದ್ಯಮಿಗಳು/ಹೂಡಿಕೆದಾರರು ಓದಲೇಬೇಕಾದ ಪುಸ್ತಕಗಳು

Written By: Siddu
Subscribe to GoodReturns Kannada

'ದೇಶ ಸುತ್ತು ಕೋಶ ಓದು' ಎಂಬುದು ಸುಪ್ರಸಿದ್ದ ಗಾದೆ. ಇದು ಎಲ್ಲರಿಗೂ ಒಂದಿಲ್ಲೊಂದು ಸಂದರ್ಭದಲ್ಲಿ ಅನ್ವಯಿಸುತ್ತದೆ...

ಉದ್ಯಮಗಳನ್ನು ಪ್ರಾರಂಭಿಸುವ ಅಥವಾ ಹೂಡಿಕೆ ಮಾಡುವ ಉತ್ಸಾಹಿಗಳು ನಮ್ಮಲ್ಲಿ ತುಂಬಾ ಜನ ಇದ್ದಾರೆ. ಅದರಲ್ಲೂ ಸ್ಟಾರ್ಟ್ಅಪ್ ಯುಗದಲ್ಲಿ ಯುವಕರೆಲ್ಲಾ ನವೋದ್ಯಮದತ್ತ ಆಕರ್ಷಿತರಾಗಿ ಹೊಸ ಹೊಸ ಸಾಹಸಗಳಿಗೆ ಕೈ ಹಾಕುತ್ತಿದ್ದಾರೆ.

ಹೊಸ ಸಾಹಸಕ್ಕೆ ಮುನ್ನುಗ್ಗುವಾಗ ತಿಳಿವಳಿಕೆಯ ಕೊರತೆ ಕಾಡುತ್ತದೆ. ಉದ್ಯಮ ಪ್ರಾರಂಭ ಹೇಗೆ, ಎಲ್ಲಿ, ಸಂಪನ್ಮೂಲ ಬಳಕೆ, ಕಾನೂನಾತ್ಮಕ ಮಾನದಂಡಗಳು, ಮಾರುಕಟ್ಟೆಯ ತಿಳಿವಳಿಕೆ, ಉದ್ಯಮಿ ಮತ್ತು ಹೂಡಿಕೆದಾರರಲ್ಲಿರಬೇಕಾದ ಗುಣಗಳು ಇತ್ಯಾದಿಗಳ ಬಗ್ಗೆ ಹಲವಾರು ಸಂಶಯಗಳಿರುತ್ತವೆ. ಅಂತಹ ಸಂದರ್ಭದಲ್ಲಿ ಸಲಹೆ, ಸಹಕಾರ, ಪ್ರೋತ್ಸಾಹ ಅಗತ್ಯವಾಗಿ ಬೇಕಾಗುತ್ತದೆ. ಸ್ವಂತ ಉದ್ಯಮ(ಕಂಪನಿ) ಪ್ರಾರಂಭಿಸುವುದು ಹೇಗೆ?

ಹೀಗಾಗಿ ನಿಮ್ಮಲ್ಲಿನ ಗೊಂದಲಗಳ ಪರಿಹಾರಕ್ಕಾಗಿ, ಹೆಚ್ಚಿನ ಜ್ಞಾನಕ್ಕಾಗಿ ಉದ್ಯಮಿಗಳು ಕೆಲ ಪುಸ್ತಕಗಳನ್ನು ಓದಬೇಕಾಗುತ್ತದೆ. ಅಂತಹ ಪ್ರಮುಖ ಪುಸ್ತಕಗಳ ವಿವರ ಇಲ್ಲಿದೆ ನೋಡಿ... 

1. ಝಿರೋ ಟು ಒನ್(Zero to One)

ಝಿರೋ ಟು ಒನ್: ನೋಟ್ಸ್ ಆನ್ ಸ್ಟಾರ್ಟ್ಅಪ್ಸ್, ಹವ್ ಟು ಬಿಲ್ಟ್ ದಿ ಪ್ಯೂಚರ್ ಇದು ಪೀಟರ್ ಥೇಲ್ ಬರೆದ ಪ್ರಸಿದ್ದ ಪುಸ್ತಕ. ಪೀಟರ್ ಥೇಲ್ ಸ್ವತಹ ಒಬ್ಬ ವೆಂಚರ್ ಕ್ಯಾಪಿಟಲಿಸ್ಟ್ ಮತ್ತು ಪೇಪಾಲ್ ಸಹ ಸ್ಥಾಪಕರು. ಪೀಟರ್ ಥೇಲ್ ಉದ್ಯಮ ಮತ್ತು ಹೂಡಿಕೆ ಬಗ್ಗೆ ಸ್ವಯಂ ಅನುಭವದ ಆಧಾರದ ಮೇಲೆ ಈ ಪುಸ್ತಕದಲ್ಲಿ ಅನೇಕ ಸಲಹೆಗಳನ್ನು ನೀಡಿದ್ದಾರೆ. ಉದ್ಯಮ ಪ್ರಾರಂಭಿಸ ಬಯಸುವರು ಹೊಸ ಭವಿಷ್ಯ ಕಟ್ಟಿಕೊಳ್ಳುವುದು ಹೇಗೆ ಎಂಬುದನ್ನು ವಿವರಿಸಿದ್ದು, ಇದು ಹೂಡಿಕೆದಾರರು ಮತ್ತು ಉದ್ಯಮಿಗಳು ಅವಶ್ಯವಾಗಿ ಓದಲೇಬೇಕಾದ ಪುಸ್ತಕ.

2. ದಿ ಸ್ಟಾರ್ಟ್ಅಪ್ ಪ್ಲೇ ಬುಕ್

ದಿ ಸ್ಟಾರ್ಟ್ಅಪ್ ಪ್ಲೇ ಬುಕ್ : ಸಿಕ್ರೆಟ್ಸ್ ಆಫ್ ದಿ ಫಾಸ್ಟೆಸ್ಟ್-ಗ್ರೋವಿಂಗ್ ಸ್ಟಾರ್ಟ್ಅಪ್ಸ್ ಫ್ರಾಮ್ ದೇರ್ ಫೌಂಡಿಂಗ್ ಎಂಟರ್ಪ್ರಿನರ್ಸ್, ಇದು ಡೆವಿಡ್ ಕಿಡ್ಡರ್ ಎಂಬುವರು ಬರೆದ ಪುಸ್ತಕ. ಈ ಪುಸ್ತಕದಲ್ಲಿ ಡೆವಿಡ್ ಕಿಡ್ಡರ್ ಅನೇಕ ಉದ್ಯಮಿಗಳ ಸಾಹಸಗಾಥೆಗಳನ್ನು ಅನಾವರಣಗೊಳಿಸಿದ್ದಾರೆ. ಅವರೇಲ್ಲರ ಸಾಹಸ, ಸವಾಲು, ಸೋಲು-ಗೆಲುವು ಬಗ್ಗೆ ವಿವರಣೆ ನೀಡಿದ್ದಾರೆ.

3. ದಿ ಸ್ಟಾರ್ಟ್ಅಪ್ ಚೆಕ್ ಲಿಸ್ಟ್

ದಿ ಸ್ಟಾರ್ಟ್ಅಪ್ ಚೆಕ್ ಲಿಸ್ಟ್: 25 ಸ್ಟೆಪ್ಸ್ ಸ್ಕೇಬಲ್ ಹೈ-ಗ್ರೋಥ್ ಬಿಸಿನೆಸ್ ಎಂಬ ಪುಸ್ತಕವನ್ನು ಡೆವಿಡ್ ರೋಜ್ ಎಂಬುವರು ಬರೆದಿದ್ದಾರೆ. ಇದು ವಾಣಿಜ್ಯೋದ್ಯಮಿಗಳಿಗೆ ಉತ್ತಮ ಸಂಗಾತಿಯಾಗಬಲ್ಲದು. ಅನೇಕ ಪುಸ್ತಕಗಳು ಉದ್ಯಮಿಗಳಲ್ಲಿರುವ ಸಮಸ್ಯೆಗಳಿಗೆ ಉತ್ತಮ ಮಾರ್ಗದರ್ಶನ ನೀಡಬಲ್ಲವು. ಅವುಗಳಲ್ಲಿ ದಿ ಸ್ಟಾರ್ಟ್ಅಪ್ ಚೆಕ್ ಲಿಸ್ಟ್ ಕೂಡ ಒಂದು.

4. ದಿ ಚೂಸ್ ಯುವರ್ಸೆಲ್ಫ್ ಗೈಡ್ ಟು ವೆಲ್ತ್

ಜೇಮ್ಸ್ ಅಲ್ತುಚರ್ ರವರು ಇದರ ಲೇಖಕರಾಗಿದ್ದು, ಹಣ ಮಾಡುವುದು ಹೇಗೆ ಎಂಬುದನ್ನು ತುಂಬಾ ಸೂಕ್ಷ್ಮವಾಗಿ ಹಾಗೂ ಮೊನಚಾಗಿ ಹೇಳಿದ್ದಾರೆ. ಸ್ವತಹ ತಾವು ಹೇಗೆ ಹಣ ಗಳಿಸಿದರೂ ಎಂಬುದನ್ನು ತಿಳಿಸಿದ್ದಾರೆ. ಹಣ ಮಾಡ ಬಯಸುವರಿಗೆ ಹೊಸ ದಿಶೆಯನ್ನು ತೋರಿಸುವ ದಿಟ್ಟ ಪುಸ್ತಕ.

5. ದಿ ಲೀನ್ ಸ್ಟಾರ್ಟ್ಅಪ್

ಇಂದಿನ ನವೋದ್ಯಮಿಗಳು ವಿಪರೀತ ಯಶಸ್ವಿಗಾಗಿ ನಿರಂತರವಾಗಿ ಅವಿಷ್ಕಾರ/ನಾವಿನ್ಯತೆಯನ್ನು ಹೇಗೆ ಬಳಸುತ್ತಾರೆ ಎಂಬುದನ್ನು ಎರಿಕ್ ರಾಯಿಸ್ ತಮ್ಮ ಪುಸ್ತಕದಲ್ಲಿ ವಿವರಿಸಿದ್ದಾರೆ. ವ್ಯವಹಾರದಲ್ಲಿ ಎದುರಾಗುವ ವೈಫಲ್ಯಗಳನ್ನು ತಡೆಯುವುದು ಹೇಗೆ ಎನ್ನುವುದನ್ನು ಹೇಳಿದ್ದಾರೆ.

6. ದಿ ಆರ್ಟ್ ಆಫ್ ದಿ ಸ್ಟಾರ್ಟ್

ದಿ ಆರ್ಟ್ ಆಫ್ ದಿ ಸ್ಟಾರ್ಟ್(The Time-Tested, Battle-Hardened Guide for Anyone Starting Anything) ಇದು ಗೈ ಕವಾಸಕಿಯವರ ಜನಪ್ರಿಯ ಬಿಸಿನೆಸ್ ಪುಸ್ತಕ. ಇದು ಉದ್ಯಮದ ಆರಂಭದ ಬಗ್ಗೆ ಇದ್ದು, ಹೂಡಿಕೆದಾರರಿಗೆ ಹೊಸ ಹೊಸ ಐಡಿಯಾಗಳನ್ನು ಒದಗಿಸುತ್ತದೆ.

7. ಲೂಸಿಂಗ್ ಮೈ ವರ್ಜಿನಿಟಿ

ವರ್ಜಿನ್ ಸಂಸ್ಥೆಯ ಸಂಸ್ಥಾಪಕ ರಿಚರ್ಡ್ ಬ್ರಾನ್ಸನ್ ಅವರ ಜೀವನ ಸಾಹಸಗಾಥೆ ಒಳಗೊಂಡಿರುವ ಪುಸ್ತಕ ಇದಾಗಿದ್ದು, ಉದ್ಯಮ ಪ್ರಾರಂಭಿಸುವವರಿಗೆ ಕೈದೀಪಿಗೆ ಆಗಬಲ್ಲದು. ಇದರಲ್ಲಿ ಹೊಸ ಹೊಸ ಸಾಹಸಗಳು, ಉದ್ಯಮ ಪಯಣದಲ್ಲಿನ ಅಸಾಮಾನ್ಯ, ವಿಭಿನ್ನ ಆಯ್ಕೆಗಳು ರೋಮಾಂಚನಗೊಳಿಸುತ್ತವೆ.

8. ಸ್ಟೇ ಫೂಲಿಷ್ ಸ್ಟೇ ಹಂಗ್ರಿ, ಕನೆಕ್ಟ್ ದಿ ಡಾಟ್ಸ್

ಈ ಎರಡು ಪುಸ್ತಕಗಳನ್ನು ಭಾರತೀಯ ಲೇಖಕಿ ರಶ್ಮಿ ಬನ್ಸಾಲ್ ಬರೆದಿದ್ದಾರೆ. ಇದು ಕೆಲಸಗಳನ್ನು ತೊರೆದು ತಮ್ಮ ಸ್ವಂತ ಉದ್ಯಮಗಳನ್ನು ಸ್ಥಾಪಿಸಿದ ಸಾಹಸಿಗರ ಕಥೆಗಳನ್ನು ತೆರೆದಿಡುತ್ತದೆ. ಇವು ಎಂತವರಿಗಾದರೂ ಸ್ಪೂರ್ತಿ ನೀಡಬಲ್ಲವು. ಇವರು ಭಾರತದ ಉದ್ಯಮವನ್ನು ಆಳಲಿರುವ ಯುವ ಉದ್ಯಮಿಗಳು!

English summary

Best books for entrepreneurs should read

Every entrepreneur needs an active reading list. After all, books are one of the most valuable knowledge resources. Even the best podcasts and YouTube videos cannot replace the in-depth lessons found in a good book.
Please Wait while comments are loading...
Company Search
Enter the first few characters of the company's name or the NSE symbol or BSE code and click 'Go'
Thousands of Goodreturn readers receive our evening newsletter.
Have you subscribed?

Find IFSC