Englishहिन्दी മലയാളം தமிழ் తెలుగు

ಕಡಿಮೆ ಬಂಡವಾಳದಲ್ಲಿ ಉದ್ಯಮ ನಡೆಸಬೇಕೆ? ಇಲ್ಲಿವೆ 8 ಮಾರ್ಗಗಳು

Written By: Siddu
Subscribe to GoodReturns Kannada

ನಿರ್ದಿಷ್ಟ ಬಂಡವಾಳದಲ್ಲಿ ನಿಮ್ಮದೇ ಸ್ಮಾರ್ಟ್ ಬಿಸಿನಸ್ ಆರಂಭ ಮಾಡಬೇಕೆಂದುಕೊಂಡಿದ್ದೀರಾ? ಅತಿ ಕಡಿಮೆ ಬಂಡವಾಳದಲ್ಲಿ ಸುಭದ್ರ ರೀತಿಯ ಕಂಪನಿ ಕಟ್ಟಬೇಕೆಂದಿದ್ದೀರಾ? ಹಾಗಾದರೆ ಕೆಳಗಿನ ಅಂಶಗಳನ್ನು ಒಮ್ಮೆ ಓದಲೇಬೇಕು. ಅತಿ ಕಡಿಮೆ ಬಂಡವಾಳದಲ್ಲಿ ಆರಂಭ ಮಾಡಬಹುದಾದ ಬಿಸಿನೆಸ್ ಗಳಾವವು? ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಲಾಭ ಪಡೆಯುವುದು ಹೇಗೆ? ಎಂಬ ಅಂಶಗಳ ಕುರಿತು ಗಮನ ಹರಿಸುವುದು ಅಗತ್ಯವಾಗುತ್ತದೆ. ಶೂನ್ಯ ಬಂಡವಾಳದಲ್ಲಿ ನಡೆಸಬಹುದಾದ 11 ಉದ್ಯಮಗಳು

ಕಡಿಮೆ ಬಂಡವಾಳದಲ್ಲಿ ಮಾಡಬಹುದಾದ ಬಿಸಿನೆಸ್ ಮೇಲಿನ ಒಂದು ನೋಟ ಇಲ್ಲಿದೆ... (ಕಡಿಮೆ ಬಂಡವಾಳ)

1. ಟ್ರಾವೆಲ್ ಎಜೆನ್ಸಿ

ನಿಜವಾಗಿಯೂ ನಿಮಗೆ ಬಿಸಿನಸ್ ಮಾಡುವ ಆಸಕ್ತಿಯಿದ್ದು ಕಡಿಮೆ ಬಂಡವಾಳ ಹೂಡಿಕೆಗೆ ಸಿದ್ಧರಿದ್ದರೆ ಟ್ರಾವೆಲ್ ಎಜೆನ್ಸಿಯೊಂದನ್ನು ತೆರೆಯಬಹುದು. ಭಾರತದಲ್ಲಿ ಇದೊಂದು ಉತ್ತಮ ಆದಾಯ ತಂದು ಕೊಡುವ ವೃತ್ತಿಯಾಗಿ ಗುರುತಿಸಲ್ಪಟ್ಟಿದೆ.

2. ಹಣಕಾಸು ಸೇವೆಗಳು

ಹಣಕಾಸು ಮತ್ತು ಬಂಡವಾಳ ಕ್ಷೇತ್ರಗಳಲ್ಲಿ ನೀವು ಪ್ರಾವಿಣ್ಯತೆ ಹೊಂದಿದ್ದಲ್ಲಿ ಸಲಹೆಗಾರರಾಗಿ ಸೇವೆ ಸಲ್ಲಿಸಬಹುದು. ಇದು ಕೂಡ ಹೆಚ್ಚಿನ ಹೊಡಿಕೆ ಅಥವಾ ಬಂಡವಾಳ ಬಯಸುವುದಿಲ್ಲ. ಹಣಕಾಸು ಸೇವೆಗಳು ಅಂದರೆ ವಿಮಾ ಏಜೆನ್ಸಿ, ಷೇರುಪೇಟೆ, ಫಿಕ್ಸಿಡ್ ಡಿಪಾಸಿಟ್ ಬಗ್ಗೆ ಮಾಹಿತಿ ನೀಡುವುದು, ಮ್ಯೂಚುವಲ್ ಫಂಡ್, ಷೇರು ಮಾರುಕಟ್ಟೆ, ದಲ್ಲಾಳಿ ಪದ್ಧತಿ ಎಲ್ಲವನ್ನು ಹಣಕಾಸು ಸೇವೆಗಳು ಒಳಗೊಂಡಿರುತ್ತವೆ. ಇದಕ್ಕೂ ಸಹ ಸಣ್ಣ ಪ್ರಮಾಣದ ಬಂಡವಾಳ ಸಾಕು.

3. ರಿಯಲ್ ಎಸ್ಟೇಟ್ ಕನ್ಸಲ್ಟನ್ಸಿ

ರಿಯಲ್ ಎಸ್ಟೇಟ್ ಬಗ್ಗೆ ನಿಮಗೆ ನಿಖರ ಮಾಹಿತಿ ಮತ್ತು ತಿಳಿವಳಿಕೆ ಇದ್ದರೆ ಕಡಿಮೆ ಬಂಡವಾಳದಲ್ಲಿ ರಿಯಲ್ ಎಸ್ಟೇಟ್ ಕನ್ಸಲ್ಟನ್ಸಿ ಏಜೆನ್ಸಿ ಆರಂಭ ಮಾಡಬಹುದು. ಭಾರತದಲ್ಲಿ ದಿನದಿಂದ ದಿನಕ್ಕೆ ಆಸ್ತಿ ಖರೀದಿಯ ಪ್ರಮಾಣ ಹೆಚ್ಚುತ್ತಲೇ ಇದೆ. ನೀವು ರಿಯಲ್ ಎಸ್ಟೇಟ್ ಸಲಹೆಗಾರರಾಗಿ ಹಣ ಸಂಪಾದಿಸಬಹುದು. ಇದು ಭಾರತದಲ್ಲಿ ಪ್ರವರ್ಧಮಾನದಲ್ಲಿರುವ ವ್ಯವಹಾರವಾಗಿದ್ದು, ಉತ್ತಮ ಆದಾಯ ಗಳಿಸಬಹುದು. ಬಹಳ ಕಡಿಮೆ ಬಂಡವಾಳದಲ್ಲಿ ಈ ಉದ್ಯಮ ಪ್ರಾರಂಭಿಸಬಹುದು. ಇದರಲ್ಲಿ ಮುಖ್ಯವಾಗಿ ನಿವು ರಿಯಲ್ ಎಸ್ಟೇಟ್ ಸಲಹೆಗಾರರಾಗಿ ಇರುವುದರಿಂದ ನಿಮಗೆ ಸುತ್ತಮುತ್ತಲಿನ ಪ್ರದೇಶದ ಬಗ್ಗೆ ಉತ್ತಮ ತಿಳುವಳಿಕೆ ಇರಬೇಕಾಗುತ್ತದೆ. ಇದರಲ್ಲಿ ಪ್ರತಿ ಒಪ್ಪಂದ ಮತ್ತು ವ್ಯವಹಾರದ ಮೆಲೆ ಶೇ.1 ಅಥವಾ 2ರಷ್ಟು ಶುಲ್ಕವನ್ನು ಪಡೆಯಬಹುದು.

4. ಬ್ಯೂಟಿ ಪಾರ್ಲರ್

ಇಲ್ಲಿಯೂ ಸಹ ಬಂಡವಾಳ ಹೂಡಿಕೆ ಮುನ್ನ ತಕ್ಕ ತಿಳಿವಳಿಕೆ ಇರಬೇಕು. ಯಾವ ಪ್ರದೇಶದಲ್ಲಿ ಪಾರ್ಲರ್ ಹಾಕಿದರೆ ಜನರನ್ನು ಸೆಳೆಯಬಹುದು ಎಂಬುದು ಗೊತ್ತಿರಬೇಕು. ಒಂದು ವೇಳೆ ಜಾಗವನ್ನು ಲೀಸ್ ಗೆ ತೆಗೆದುಕೊಂಡು ಪಾರ್ಲರ್ ಹಾಕುವುದಾದರೆ ಏರಿಯಾವನ್ನು ಒಂದೆರಡು ದಿನ ಪರಿಶೀಲಿಸದ ನಂತರ ತೀರ್ಮಾನ ತೆಗೆದುಕೊಳ್ಳುವುದು ಉತ್ತಮ.

5. ಮೊಬೈಲ್ ರೀಜಾರ್ಜ್ ಶಾಪ್

ಸಾಮಾನ್ಯ ಜನರಿಗೆ ಆನ್ ಲೈನ್ ರೀಜಾರ್ಜ್ ಇನ್ನು ಚಿರಪರಿಚಿತವಾಗಿಲ್ಲ. ನಗರವೊಂದರ ರಸ್ತೆಯಲ್ಲಿ ಅನೇಕ ರೀಜಾರ್ಜ್ ಮಳಿಗೆಗಳಿರುತ್ತವೆ. ಜನ ನಿಬಿಡ ಪ್ರದೇಶ ಆಯ್ಕೆ ಮಾಡಿಕೊಂಡು ಇಂಥಹ ಅಂಗಡಿ ಹಾಕಿದರೂ ಹೆಚ್ಚಿನ ಲಾಭ ಗಳಿಕೆ ಸಾಧ್ಯ.

6. ಉದ್ಯೋಗ ಕೇಂದ್ರ

ಇತ್ತೀಚಿನ ದಿನಗಳಲ್ಲಿ ನೇಮಕಾತಿ (ರಿಕ್ರ್ಯುಟ್ಮೆಂಟ್) ಉದ್ಯಮಕ್ಕೆ ತುಂಬಾ ಬೆಡಿಕೆ ಇದೆ. ಇದನ್ನು ಪ್ರಾರಂಭಿಸಲು ಹೆಚ್ಚಿನ ಬಂಡವಾಳ ಬೇಕಿಲ್ಲ. ಇದಕ್ಕೆ ಸಣ್ಣ ಕಚೇರಿ, ಸಣ್ಣ ಮತ್ತು ದೊಡ್ಡ ಕಂಪನಿಗಳ ಸಂಪರ್ಕ ಇದ್ದರೆ ಸಾಕು. ವಿವಿಧ ಕಂಪನಿಗಳಿಗೆ ಮಾನವ ಸಂಪನ್ಮೂಲ ಒದಗಿಸಿಕೊಡಬಹುದು. ಇಲ್ಲಿ ಸಹ ನೀವು ಜಾಗವನ್ನು ಲೀಸ್ ಗೆ ಪಡೆದು ವೃತ್ತಿ ಕೈಗೊಳ್ಳುವುದಾದರೆ ಇನ್ನೊಮ್ಮೆ ಯೋಚಿಸಿ ಹೆಜ್ಜೆ ಇಡಬೇಕು.

7. ಟ್ಯೂಷನ್

ಕಡಿಮೆ ಬಾಡಿಗೆಗೆ ಜಾಗವೊಂದನ್ನು ಬಾಡಿಗೆ ಪಡೆದು ನೀವು ಟ್ಯೂಷನ್ ತರಗತಿ ಆರಂಭಿಸಿದರೂ ಉತ್ತಮ ಹಣ ಗಳಿಕೆ ಸಾಧ್ಯ. ಇಲ್ಲಿ ವಿದ್ಯಾರ್ಥಿಗಳ ಲಭ್ಯತೆ ಬಗ್ಗೆ ಒಮ್ಮೆ ಯೋಚಿಸಬೇಕಾಗುತ್ತದೆ.

8. ಇವೆಂಟ್ ಮ್ಯಾನೇಜ್ ಮೆಂಟ್

ನಿಮಗೆ ಉತ್ತಮ ಜನ ಸಂಪರ್ಕ ಇದ್ದು, ಜನರೊಂದಿಗೆ ಬಾಂಧವ್ಯ ಕಾಪಾಡಿಕೊಂಡು ಬಂದಿದ್ದರೆ, ಇವೆಂಟ್ ಇವೆಂಟ್ ಮ್ಯಾನೇಜ್ ಮೆಂಟ್ ವೊಂದನ್ನು ಆರಂಭಿಸಲು ಅಡ್ಡಿ ಇಲ್ಲ. ಇದಕ್ಕೆ ಬಂಡವಾಳಕ್ಕಿಂತ ಜನರೊಂದಿಗೆ ಹೊಂದಿರುವ ಒಡನಾಟ ಮುಖ್ಯವಾಗುತ್ತದೆ. ಕಾರ್ಪೊರೇಟ್ ಇವೆಂಟ್ಸ್, ಪ್ರಶಸ್ತಿ ಪ್ರಧಾನ ಸಮಾರಂಭ ಹಾಗೂ ಪಕ್ಷ, ಸಂಘಟನೆಗಳು ಆಯೋಜಿಸುವ ಇವೆಂಟ್ಸ್ ಗಳು ಇರುತ್ತವೆ. (ಗುಡ್ ರಿಟರ್ನ್ಸ್.ಇನ್) ಅತಿ ಕಡಿಮೆ ಬಂಡವಾಳದಲ್ಲಿ ನಡೆಸಬಹುದಾದ 10 ಉದ್ಯಮ

English summary

8 Business Ideas That Require Low Investment In India

Looking to start a business of your own with limited capital take a look some smart business ideas. Most of these need very low investment, particularly as less amount is needed in storing wares and hence working capital.
Company Search
Enter the first few characters of the company's name or the NSE symbol or BSE code and click 'Go'
Thousands of Goodreturn readers receive our evening newsletter.
Have you subscribed?

Find IFSC

Get Latest News alerts from Kannada Goodreturns