For Quick Alerts
ALLOW NOTIFICATIONS  
For Daily Alerts

ಉದ್ಯೋಗಿಗಳು ಪಡೆದುಕೊಳ್ಳಬಹುದಾದ 10 ತೆರಿಗೆ ಕಡಿತ/ಲಾಭಗಳನ್ನು ತಪ್ಪದೇ ತಿಳಿದುಕೊಳ್ಳಿ..

ಇಂದಿನ ದಿನಗಳು ತೆರಿಗೆಯನ್ನು ಉಳಿಸುವ ದಿನಗಳಾಗಿದ್ದು, ತೆರಿಗೆ ಕಟ್ಟುವುದು ಯಾರಿಗೆ ತಾನೇ ಇಷ್ಟ ಹೇಳಿ. ಪ್ರತಿಯೊಬ್ಬರೂ ಕೂಡ ಹೆಚ್ಚೆಚ್ಚು ತೆರಿಗೆ ಕಡಿತ ಹಾಗು ತೆರಿಗೆ ಪ್ರಯೋಜನಗಳನ್ನು ಬಯಸುತ್ತಾರೆ.

By Staff
|

ಇಂದಿನ ದಿನಗಳು ತೆರಿಗೆಯನ್ನು ಉಳಿಸುವ ದಿನಗಳಾಗಿದ್ದು, ತೆರಿಗೆ ಕಟ್ಟುವುದು ಯಾರಿಗೆ ತಾನೇ ಇಷ್ಟ ಹೇಳಿ. ಪ್ರತಿಯೊಬ್ಬರೂ ಕೂಡ ಹೆಚ್ಚೆಚ್ಚು ತೆರಿಗೆ ಕಡಿತ ಹಾಗು ತೆರಿಗೆ ಪ್ರಯೋಜನಗಳನ್ನು ಬಯಸುತ್ತಾರೆ.
ಹೆಚ್ಚಿನವರು 80C ವಿಧಿಯ ಮೂಲಕ ಕಾನೂನು ಅನುಮತಿ ನೀಡಿದ ರೂ. 1.5 ಲಕ್ಷ ಮಿತಿಯ ಸದ್ಬಳಕೆ ಪಡೆದುಕೊಳ್ಳುವ ನಿಟ್ಟಿನಲ್ಲಿ ಹೆಚ್ಚಿನ ಗಮನ ಹರಿಸುತ್ತಿದ್ದಾರೆ. ಇದೇ ಕಾರಣಕ್ಕೆ ತೆರಿಗೆಯನ್ನು ಉಳಿಸಬಹುದಾದ ಇತರ ಸಾಧ್ಯತೆಗಳ ಬಗ್ಗೆ ಗಮನ ಹರಿಯದೇ ಹೋಗುತ್ತದೆ ಹಾಗೂ ಈ ಮೂಲಕ ಸಿಗಬಹುದಾದ ಸೌಲಭ್ಯಗಳಿಂದ ವಂಚಿತರಾಗುತ್ತಾರೆ. ಈ ತೆರಿಗೆ ಕಡಿತಗಳ ಬಗ್ಗೆ ಹೆಚ್ಚಿನ ಜನರಿಗೆ ಅರಿವೇ ಇಲ್ಲದಿರುವ ಕಾರಣ ಅನಗತ್ಯವಾಗಿ ಹೆಚ್ಚಿನ ತೆರಿಗೆಯನ್ನು ಪಾವತಿಸಬೇಕಾಗಿ ಬರುತ್ತದೆ. ಈ ಬಗ್ಗೆ ಮೊದಲೇ ಅರಿತಿದ್ದರೆ ಸಾಧ್ಯವಾದಷ್ಟು ಮಟ್ಟಿಗೆ ತೆರಿಗೆಯನ್ನು ಉಳಿಸಬಹುದು. ಆದರೆ ಆದಾಯ ತೆರಿಗೆ ಕಾಯಿದೆಯ ವಿಧಿ 80C ಅಡಿಯಲ್ಲಿ ತೆರಿಗೆ ವಿನಾಯಿತಿಗಳನ್ನು ಪಡೆಯಲು ನೀವು ಹೂಡಿಕೆಯನ್ನೂ ಕ್ರಮಬದ್ದವಾಗಿ ಮಾಡಬೇಕಾಗಿದೆ. ಆರಂಕಿಯ (ಕನಿಷ್ಟ ಲಕ್ಷ) ವೇತನ ಪಡೆಯಬೇಕೆ? ಇಲ್ಲಿ ನೋಡಿ...

 

ಬನ್ನಿ, ವೇತನದಲ್ಲಿಯೇ ಮಾಡಬಹುದಾದ ತೆರಿಗೆ ಕಡಿತಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಅರಿಯೋಣ..

1. ಒಂದು ವೇಳೆ ಸ್ವ ಉದ್ಯೋಗಿಯಾಗಿದ್ದರೆ ಬಾಡಿಗೆ ನೀಡಿದ ಪಾವತಿಯ ಕಡಿತ

1. ಒಂದು ವೇಳೆ ಸ್ವ ಉದ್ಯೋಗಿಯಾಗಿದ್ದರೆ ಬಾಡಿಗೆ ನೀಡಿದ ಪಾವತಿಯ ಕಡಿತ

ಆದಾಯ ತೆರಿಗೆ ವಿಧಿ 80GG 1961ರ ಪ್ರಕಾರ ಓರ್ವ ವ್ಯಕ್ತಿ ತನ್ನ ಸ್ವಂತ ಮನೆಗಾಗಿ ನೀಡುವ ಬಾಡಿಗೆಯನ್ನು ತನ್ನ ಅದಾಯದಿಂದ ಕಳೆದು ನೀಡಬಹುದಾಗಿದೆ. ಬಾಡಿಗೆಯ ರೂಪದಲ್ಲಿ ಕಡಿತ ಮಾಡಬಹುದಾದ ಮೊತ್ತವು ಈ ಮೂರರಲ್ಲಿ ಯಾವುದು ಕನಿಷ್ಟವೋ ಅದು ಅನ್ವಯವಾಗುತ್ತದೆ.
ಪಾವತಿಸಿದ ಕನಿಷ್ಟ ಬಾಡಿಗೆಯಲ್ಲಿ ಆತನ ಒಟ್ಟು ಆದಾಯದ ಶೇ. 10ರಷ್ಟು ಕಳೆದು, ಒಟ್ಟು ಆದಾಯದ ಶೇ. 25ರಷ್ಟು ಅಥವಾ ತಿಂಗಳಿಗೆ ರೂ. 5,000. "ಈ ಕಡಿತವನ್ನು ಪಡೆಯಬೇಕಾದರೆ ಆ ವ್ಯಕ್ತಿಯು ವಿಭಾಗ 10(13 ಎ) ಅಡಿಯಲ್ಲಿ ವಿನಾಯಿತಿ ಪಡೆದುಕೊಳ್ಳಬಹುದಾದ ಆದಾಯವನ್ನು ಹೊಂದಿರಬಾರದು. ಉದ್ಯೋಗದಾತನ ಸ್ಥಳದಲ್ಲಿ ವ್ಯಕ್ತಿ, ವೈಯಕ್ತಿಕ ಅಥವಾ ಪ್ರಾಯಕ್ಕೆ ಬರದ ಮಕ್ಕಳು ಈ ಸ್ಥಳದಲ್ಲಿ ವಾಸವಾಗಿರಬಾರದು. ಇದಲ್ಲದೆ, ವ್ಯಕ್ತಿಗೆ ಸ್ವ-ಆಕ್ರಮಿತ ವಸತಿಯೂ ಇರಬಾರದು" ಎಂಬುದು ಗ್ರಾಂಟ್ ಥ್ರಾಂಟನ್ ಇಂಡಿಯಾ ಎಲ್ಎಲ್ಪಿ ಸಂಸ್ಥೆಯ ನಿರ್ದೇಶಕ ಅಖಿಲ್ ಚಂದ್ರ ರವರು ತಿಳಿಸುತ್ತಾರೆ. ಇವು ಬಡ್ಡಿದರ ಕಡಿತ ಮಾಡಿರುವ ಪ್ರಮುಖ ಬ್ಯಾಂಕುಗಳು

2. ಉನ್ನತ ಶಿಕ್ಷಣಕ್ಕಾಗಿ ಪಡೆದ ಸಾಲದ ಬಡ್ಡಿಗಾಗಿ ಮಾಡುವ ಕಡಿತ
 

2. ಉನ್ನತ ಶಿಕ್ಷಣಕ್ಕಾಗಿ ಪಡೆದ ಸಾಲದ ಬಡ್ಡಿಗಾಗಿ ಮಾಡುವ ಕಡಿತ

ಆದಾಯ ತೆರಿಗೆ ವಿಧಿ 80E ಪ್ರಕಾರ ಓರ್ವ ವ್ಯಕ್ತಿ ಉನ್ನತ ಶಿಕ್ಷಣವನ್ನು (ಹಿರಿಯ ಮಾಧ್ಯಮಿಕ ಶಿಕ್ಷಣದ ಬಳಿಕದ ಯಾವುದೇ ಪಠ್ಯಕ್ರಮ) ಪಡೆಯಲು ಶಿಕ್ಷಣ ಸಾಲವನ್ನು ಪಡೆದಿದ್ದರೆ ಇದಕ್ಕೆ ನೀಡುವ ಬಡ್ಡಿ ನೀಡುವ ಮೊತ್ತವನ್ನು ತನ್ನ ಆದಾಯದಿಂದ ಕಳೆದು ನೀಡಬಹುದು. ಈ ಸಾಲವನ್ನು ವ್ಯಕ್ತಿ ತನಗಾಗಿ, ತನ್ನ ಕುಟುಂಬ ಸದಸ್ಯರಿಗಾಗಿ ಅಂದರೆ ಪತ್ನಿ, ಮಕ್ಕಳು ಹಾಗೂ ಈ ವ್ಯಕ್ತಿ ದತ್ತು ಪೋಷಕನಾಗಿರುವ ವ್ಯಕ್ತಿಗಳ ಶಿಕ್ಷಣಕ್ಕಾಗಿ ಸಾಲ ಪಡೆದಿರಬೇಕು. ಈ ಕಡಿತ ಸಾಲದ ಮರುಪಾವತಿಯ ಪ್ರಾರಂಭದಿಂದ ಒಟ್ಟು ಎಂಟು ವರ್ಷಗಳ ಕಾಲ ಅನ್ವಯವಾಗುತ್ತದೆ.

3. ದತು ಸಂಸ್ಥೆಗಳಿಗೆ ನೀಡುವ ದಾನದ ಹಣದ ಕಡಿತ

3. ದತು ಸಂಸ್ಥೆಗಳಿಗೆ ನೀಡುವ ದಾನದ ಹಣದ ಕಡಿತ

ಆದಾಯ ತೆರಿಗೆ ವಿಧಿ 80G ಪ್ರಕಾರ ಕಡಿತಕ್ಕಾಗಿ ಅಗತ್ಯವಿರುವ ಹೂಡಿಕೆಯ ದಾಖಲೆಗಳು ಉದ್ಯೋಗದಾರನಿಗೆ ಒದಗಿಸುವ ವೇಳೆಯಲ್ಲಿ ಲಭ್ಯವಿರದ ಕಾರಣ ಈ ಕಡಿತ ಲಭ್ಯವಾಗದು. ಆದ್ದರಿಂದ "ವ್ಯಕ್ತಿ ದತ್ತುಸಂಸ್ಥೆಗಳಿಗೆ ಹಾಗೂ ಧರ್ಮಾರ್ಥ ಸಂಸ್ಥೆಗಳಿಗೆ ದಾನ ರೂಪದಲ್ಲಿ ನೀಡುವ ಹಣದ ಮೊತ್ತವನ್ನು ಕಡಿತ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಒಟ್ಟು ದಾನ ನೀಡಿದ ಪೂರ್ಣ ಅಥವಾ ಶೇ. ಐವತ್ತರ ಕಡಿತದ ದರವನ್ನು ನಿಗದಿಪಡಿಸಲಾಗುತ್ತದೆ. ಅಲ್ಲದೇ ಈ ಕಡಿತಕ್ಕಾಗಿ ವ್ಯಕ್ತಿಯ ಒಟ್ಟು ಆದಾಯದ ಶೇ. 10ರಷ್ಟನ್ನೂ ಮಾತ್ರವೇ ಈ ಕಡಿತಕ್ಕಾಗಿ ಪರಿಗಣಿಸಬಹುದಾಗಿದೆ.

4. ಅಂಗವೈಕಲ್ಯದ ಸಲುವಾಗಿ ಪಡೆಯಬಹುದಾದ ಕಡಿತ

4. ಅಂಗವೈಕಲ್ಯದ ಸಲುವಾಗಿ ಪಡೆಯಬಹುದಾದ ಕಡಿತ

ಆದಾಯ ತೆರಿಗೆ ವಿಧಿ 80U ಪ್ರಕಾರ ವ್ಯಕ್ತಿಯ ವಿಶ್ವಾಸಾರ್ಹ ವೈದ್ಯಕೀಯ ವಿಭಾಗದಿಂದ ಪ್ರಮಾಣೀಕರಿಸಲ್ಪಟ್ಟ ಶಾಶ್ವತ ಅಂಗವೈಕಲ್ಯ ಹೊಂದಿದ್ದರೆ, ಈ ವ್ಯಕ್ತಿ ರೂ. 75,000ರಷ್ಟು ಆದಾಯದಲ್ಲಿ ಕಡಿತವನ್ನು ಪಡೆಯಬಹುದು. ಒಂದು ವೇಳೆ ಅಂಗವೈಕಲ್ಯ ಅತಿ ಹೆಚ್ಚೇ ಆಗಿದ್ದರೆ ಇವರು ರೂ. 125,000 ನಷ್ಟು ಕಡಿತಕ್ಕೆ ಅರ್ಹರಾಗುತ್ತಾರೆ. ಆದರೆ ಈ ಕಡಿತದಲ್ಲಿ ಗಮನಾರ್ಹವಾದ ಸಂಗತಿ ಎಂದರೆ ಈ ಕಡಿತಗಳು ವ್ಯಕ್ತಿಯ ನೈಜ ಖರ್ಚುಗಳ ಲೆಕ್ಕಾಚಾರವನ್ನು ಪರಿಗಣಿಸುವುದಿಲ್ಲ.

5. ಮಕ್ಕಳ ಶಿಕ್ಷಣಕ್ಕಾಗಿ ಕಟ್ಟಿದ ಶುಲ್ಕ

5. ಮಕ್ಕಳ ಶಿಕ್ಷಣಕ್ಕಾಗಿ ಕಟ್ಟಿದ ಶುಲ್ಕ

ಮಕ್ಕಳ ಶಿಕ್ಷಣಕ್ಕಾಗಿ ಪಾಲಕರು ಮಾಡಬೇಕಾದ ವೆಚ್ಚ ಕಡ್ಡಾಯವಾಗಿದೆ. ಆದರೆ ಈ ವೆಚ್ಚ ಸಹಾ ತೆರಿಗೆಯಿಂದ ಮುಕ್ತವಾಗಿದೆ ಎಂದು ಹೆಚ್ಚಿನವರಿಗೆ ಗೊತ್ತಿಲ್ಲ. ನಿಮ್ಮ ಮಕ್ಕಳ ಶಿಕ್ಷಣಕ್ಕಾಗಿ ನೀಡುವ ಯಾವುದೇ ಮೊತ್ತ ತೆರಿಗೆಯಿಂದ ಮುಕ್ತವಾಗಿದೆ. ಶಾಲೆ, ಕಾಲೇಜು ಅಥವಾ ವಿಶ್ವವಿದ್ಯಾಲಯದ ಶಿಕ್ಷಣ ವೆಚ್ಚಗಳು ಆದಾಯ ತೆರಿಗೆ ವಿಧಿ 80C ಪ್ರಕಾರ ತೆರಿಗೆಯಿಂದ ಮುಕ್ತವಾಗಿದೆ.

6. ಗುರುತರ ಖಾಯಿಲೆಯ ಚಿಕಿತ್ಸಾ ವೆಚ್ಚ

6. ಗುರುತರ ಖಾಯಿಲೆಯ ಚಿಕಿತ್ಸಾ ವೆಚ್ಚ

ಒಂದು ವೇಳೆ ಗುರುತರವಾದ ಹಾಗೂ ಗಂಭೀರವಾದ ಕಾಯಿಲೆಗಳಾದ ಕ್ಯಾನ್ಸರ್, ಏಡ್ಸ್ ಮೊದಲಾದವುಗಳಿಗೆ ಚಿಕಿತ್ಸೆಯ ಹಣವನ್ನು ಕೈಯಿಂದ ಹಾಕಬೇಕಾಗಿದ್ದರೆ ಇದು ದೊಡ್ಡ ಮೊತ್ತವೇ ಆಗಿರುತ್ತದೆ. ಚಿಕಿತ್ಸೆಗೆ ಹಣ ನೀಡುವ ವ್ಯಕ್ತಿಯ ಮೇಲೆ ಇದು ಭಾರಿ ಹೊರೆಯಾಗಿ ಪರಿಣಮಿಸಬಹುದು. ಈ ತೊಂದರೆಯನ್ನು ಗಮನದಲ್ಲಿಟ್ಟುಕೊಂಡು ಆದಾಯ ತೆರಿಗೆ ಇಲಾಖೆ ವಿಧಿ 80DDB ಮೂಲಕ ಈ ವ್ಯಕ್ತಿಗಳ ಚಿಕಿತ್ಸಾ ವೆಚ್ಚವನ್ನು ತೆರಿಗೆಯಿಂದ ಮುಕ್ತಗೊಳಿಸಿದೆ. ಓರ್ವ ವ್ಯಕ್ತಿ ಗರಿಷ್ಟ ರೂ. 40,000 ಕಡಿತವನ್ನು ಪಡೆಯಬಹುದು. ಒಂದು ವೇಳೆ ಚಿಕಿತ್ಸೆ ಪಡೆಯುತ್ತಿರುವ ವ್ಯಕ್ತಿ ಹಿರಿಯ ನಾಗರಿಕರಾಗಿದ್ದರೆ ಈ ಮೊತ್ತ ರೂ. 60,000 ಆಗುತ್ತದೆ ಹಾಗೂ ಎಂಭತ್ತು ದಾಟಿದ ಹಿರಿಯರಾದರೆ ಈ ಮೊತ್ತ ರೂ. 80,000 ಸಾವಿರ ಆಗುತ್ತದೆ ಎಂದು H&R ಬ್ಲಾಕ್ ಇಂಡಿಯಾ ಸಂಸ್ಥೆಯ ತೆರಿಗೆ ಸಂಶೋಧನಾ ವಿಭಾಗದ ಮುಖ್ಯಸ್ಥರಾದ ಚೇತನ್ ಚಂದಕ್ ರವರು ತಿಳಿಸುತ್ತಾರೆ.

7. ಉಳಿತಾಯ ಖಾತೆಯಲ್ಲಿ ಪಡೆದ ಬಡ್ಡಿಯ ಕಡಿತ

7. ಉಳಿತಾಯ ಖಾತೆಯಲ್ಲಿ ಪಡೆದ ಬಡ್ಡಿಯ ಕಡಿತ

ತೆರಿಗೆ ನೀಡುವ ಪ್ರತಿಯೊಬ್ಬರೂ ಕನಿಷ್ಟ ಒಂದು ಬ್ಯಾಂಕ್ ಖಾತೆಯನ್ನಾದರೂ ಹೊಂದಿಯೇ ಇರುತ್ತಾರೆ. ಇವರ ಎಲ್ಲಾ ಖಾತೆಗಳಲ್ಲಿರುವ ಒಟ್ಟು ಉಳಿತಾಯ, ಹೂಡಿಕೆಗಳ ಮೇಲೆ ಬಡ್ಡಿಯನ್ನೂ ಪಡೆಯುತ್ತಾರೆ. ಹೆಚ್ಚಿನವರಿಗೆ ತಿಳಿದಿಲ್ಲದ ವಿಷಯವೆಂದರೆ ಈ ಪರಿಯಾಗಿ ಪಡೆದ ರೂ. 10,000 ವರೆಗಿನ ಬಡ್ಡಿಯನ್ನು ಕಡಿತಕ್ಕಾಗಿ ಪರಿಗಣಿಸಬಹುದಾಗಿದೆ. ಆದಾಯ ತೆರಿಗೆ ವಿಧಿ 80TTAಯಲ್ಲಿ ಈ ಬಗ್ಗೆ ಸ್ಪಷ್ಟವಾಗಿ ತಿಳಿಸಲಾಗಿದೆ.

8. ಮನೆ ಕೊಳ್ಳುವ ಸಲುವಾಗಿ ಪಡೆದ ವೈಯಕ್ತಿಕ ಸಾಲದ ಬಡ್ಡಿ

8. ಮನೆ ಕೊಳ್ಳುವ ಸಲುವಾಗಿ ಪಡೆದ ವೈಯಕ್ತಿಕ ಸಾಲದ ಬಡ್ಡಿ

ಒಂದು ವೇಳೆ ಮನೆ ಖರೀದಿಗಾಗಿ ವೈಯಕ್ತಿಯ ಸಾಲ ಅಥವಾ ಗೃಹಸಾಲವನ್ನು ಪಡೆದಿದ್ದು, ಈ ಸಾಲದ ಬಡ್ಡಿ ಸಾಮಾನ್ಯವಾಗಿ ತೆರಿಗೆ ರಹಿತವಾಗಿರುತ್ತದೆ. ಆದಾಯ ತೆರಿಗೆ ವಿಧಿ 24ರಲ್ಲಿ ಈ ಬಗ್ಗೆ ಸ್ಪಷ್ಟವಾಗಿ ವಿವರಿಸಲಾಗಿದೆ. ಆದರೆ ಈ ಕಡಿತವನ್ನು ಹೆಚ್ಚಿನವರು ಅಲಕ್ಷಿಸುತ್ತಾರೆ. ಏಕೆಂದರೆ ಗೃಹಸಾಲದ ಕರಾರುಗಳು ಅವರ ವೈಯಕ್ತಿಯ ಸಾಲದ ಕರಾರುಗಳಿಗೆ ಹೋಲಿಕೆಯಾಗದೇ ಇದ್ದು ಈ ಮೊತ್ತವನ್ನು ಹೊಸ ಮನೆಯನ್ನು ಕಟ್ಟಿಸಲೆಂದೇ ಕೊಂಡಿರುತ್ತಾರೆ. "ಸಾಮಾನ್ಯವಾಗಿ ವಿಧಿ 24ನ್ನು ಹೆಚ್ಚಿನವರು ಅಲಕ್ಷಿಸುವುದೇಕೆಂದರೆ ಇದರ ವಿವರಗಳನ್ನು ತಪ್ಪಾಗಿ ಗ್ರಹಿಸಿಕೊಂಡಿರುವುದೇ ಆಗಿದೆ. ಮನೆಯನ್ನು ಕಟ್ಟಿಸಲೆಂದು ಸಾಲವನ್ನು ಬ್ಯಾಂಕಿನ ಹೊರತಾಗಿ ತಮ್ಮ ಆಪ್ತರಿಂದ ಸಾಲ ಪಡೆದಿದ್ದರೂ ಈ ವಿಧಿಯ ಪ್ರಕಾರ ಬಡ್ಡಿ ತೆರಿಗೆಯಿಂದ ಮುಕ್ತವಾಗಿದೆ. ಆದರೆ ಈ ಮೊತ್ತವನ್ನು ಮನೆಯನ್ನು ಕಟ್ಟಲಿಕ್ಕೇ ಬಳಸುವುದು ಮಾತ್ರ ಕಡ್ಡಾಯವಾಗಿದೆ" ಎಂದು ಚಂದಕ್ ರವರು ತಿಳಿಸುತ್ತಾರೆ.

9. ಮನೆಯ ದುರಸ್ತಿ ಅಥವಾ ಮರುನಿರ್ಮಾಣಕ್ಕೆ ಪಡೆದ ಸಾಲದ ಬಡ್ದಿ

9. ಮನೆಯ ದುರಸ್ತಿ ಅಥವಾ ಮರುನಿರ್ಮಾಣಕ್ಕೆ ಪಡೆದ ಸಾಲದ ಬಡ್ದಿ

ವಿಧಿ 24, ವಿಧಿ 80EE ಹಾಗೂ ವಿಧಿ 80C ಗಳ ಬಗ್ಗೆ ಹೆಚ್ಚಿನವರು ಅರಿತುಕೊಂಡೇ ಇದ್ದಾರೆ. ಏಕೆಂದರೆ ಹೊಸ ಮನೆಯನ್ನು ಕೊಳ್ಳುವಾಗ ಅಥವಾ ಕಟ್ಟಿಸುವಾಗ ಈ ವಿಧಿಗಳ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ತಿಳಿಸಿಯೇ ಇರುತ್ತಾರೆ. ಆದರೆ ಹಳೆಯ ಮನೆಯ ದುರಸ್ತಿ ಅಥವಾ ಕೆಡವಿ ಹೊಸತಾಗಿ ಕಟ್ಟಿಸುವಾಗ ಪಡೆದುಕೊಳ್ಳುವ ಸಾಲದ ಬಡ್ಡಿಯೂ ವಿಧಿ 24bರ ಪ್ರಕಾರ ತೆರಿಗೆಯಿಂದ ಮುಕ್ತವಾಗಿದೆ. ಈ ನಿಟ್ಟಿನಲ್ಲಿ ರೂ. ರೂ. 30,000 ರಷ್ಟು ಬಡ್ಡಿಯನ್ನು ಕಡಿತವನ್ನಾಗಿ ಪರಿಗಣಿಸಬಹುದು.

10. LTCG ಮೇಲಿನ ಮರುಹೂಡಿಕೆಯಲ್ಲಿ ಪಡೆಯುವ ಕಡಿತ

10. LTCG ಮೇಲಿನ ಮರುಹೂಡಿಕೆಯಲ್ಲಿ ಪಡೆಯುವ ಕಡಿತ

LTCG (long-term capital gains) ಅಂದರೆ ದೀರ್ಘಕಾಲೀನ ಹೂಡಿಕೆಯ ಬಂಡವಾಳದ ಲಾಭ ಸಹ ವಿಧಿ 54 ಹಾಗೂ 54F ರ ಪ್ರಕಾರ ತೆರಿಗೆ ವಿನಾಯಿತಿ ಪಡೆದಿವೆ. ಓರ್ವ ವ್ಯಕ್ತಿ ಒಂದು ಮನೆಯನ್ನು ಕೊಂಡು LTCG ಯಲ್ಲಿ ತೆರಿಗೆ ಉಳಿಸಲು ಬಯಸಿದರೆ, ಹೀಗೆ ಕೊಂಡ ಮನೆಯನ್ನು ಕೊಂಡ ದಿನಾಂಕದಿಂದ ಒಂದು ವರ್ಷದ ಒಳಗಾಗಿ ಇನ್ನೊಬ್ಬರಿಗೆ ಮಾರಬೇಕಾಗುತ್ತದೆ. ಒಂದು ವೇಳೆ ಮಾರಾಟವಾದ ಮನೆ ವ್ಯಕ್ತಿಯ ಆಧೀನದಲ್ಲಿ ಎರಡು ವರ್ಷಗಳ ಕಾಲ ಇದ್ದರೆ, ಈ ಪ್ರಕಾರ ಅನ್ವಯವಾಗುವ LTCG ಸಹ ವಿಧಿ 54 ರ ಪ್ರಕಾರ ತೆರಿಗೆ ವಿನಾಯಿತಿ ಪಡೆಯುತ್ತದೆ. ಒಂದು ವೇಳೆ ಇದು ಮನೆಯಾಗದೇ ಬೇರೆ ರೂಪದ ಕಟ್ಟಡವಾದರೆ ಇದಕ್ಕೆ ವಿಧಿ 54F ಅನ್ವಯ ತೆರಿಗೆ ವಿನಾಯಿತಿ ಪಡೆಯಬಹುದು ಎಂದು ಚಂದಕ್ ರವರು ತಿಳಿಸುತ್ತಾರೆ.

English summary

How to save income tax in India? Know about 10 tax reductions that employees can obtain.

How to save income tax in India? Know about 10 tax reductions / benefits that employees can obtain. Here we are taking a look at some of such deductions which will help you save more tax.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X