For Quick Alerts
ALLOW NOTIFICATIONS  
For Daily Alerts

ವಾರೆನ್ ಬಫೆಟ್ ರಂತೆ ಕೋಟ್ಯಾಧಿಪತಿ ಆಗೋದು ಹೇಗೆ? ಇಲ್ಲಿವೆ ಬಫೆಟ್ ಸರಳ ಸೂತ್ರಗಳು

ಒಂದು ವೇಳೆ ಹೂಡಿಕೆಯ ಮೂಲಕ ಲಾಭ ಗಳಿಸುವುದು ನಿಮ್ಮ ಇಚ್ಛೆಯಾಗಿದ್ದರೆ ಅಥವಾ ಅರ್ಥಿಕ ವಿಷಯದಲ್ಲಿ ನಿಮಗೆ ಸಲಹೆ ಬೇಕಾಗಿದ್ದರೆ ವಾರೆನ್ ಬಫೆಟ್ (Warren Buffett) ರನ್ನು ಈ ಕ್ಷೇತ್ರದ ಪಿತಾಮಹ ಎಂದು ಪರಿಗಣಿಸಲೇಬೇಕಾಗುತ್ತದೆ.

|

ಒಂದು ವೇಳೆ ಹೂಡಿಕೆಯ ಮೂಲಕ ಲಾಭ ಗಳಿಸುವುದು ನಿಮ್ಮ ಇಚ್ಛೆಯಾಗಿದ್ದರೆ ಅಥವಾ ಅರ್ಥಿಕ ವಿಷಯದಲ್ಲಿ ನಿಮಗೆ ಸಲಹೆ ಬೇಕಾಗಿದ್ದರೆ ವಾರೆನ್ ಬಫೆಟ್ (Warren Buffett) ರನ್ನು ಈ ಕ್ಷೇತ್ರದ ಪಿತಾಮಹ ಎಂದು ಪರಿಗಣಿಸಲೇಬೇಕಾಗುತ್ತದೆ. ಇವರ ಸಂಸ್ಥೆಯಾದ ಬರ್ಕ್ಶೈರ್ ಹಾಥ್ವೇ ಯ ಮೂಲಕ ಬಫೆಯವರು ಈಗಾಗಲೇ $ 80.7 ಬಿಲಿಯನ್ ಗಳಷ್ಟು ಅಪಾರ ಸಂಪತ್ತನ್ನು ಹೊಂದಿದ್ದಾರೆ ಎಂದು ಫೋರ್ಬ್ಸ್ ಮಾಧ್ಯಮ ತಿಳಿಸಿದೆ. ಆದರೆ ಈ ಪಿತಾಮಹ ಹುಟ್ಟಿನಿಂದಲೇ ಶ್ರೀಮಂತರಾಗಿರಲಿಲ್ಲ. ಆದರೆ ಸತತ ಹೂಡಿಕೆ ಹಾಗೂ ಸಮರ್ಥ ಹೂಡಿಕೆಯಿಂದ ತನ್ನ ಮೂವತ್ತನೇ ವಯಸ್ಸಿನಲ್ಲಿ ಇವರು ತಮ್ಮ ಮೊದಲ ಮಿಲಿಯನ್ ಡಾಲರ್ ಗಳಿಸಿದರು. ಆ ಬಳಿಕ ಅವರು ಹಿಂದಿರುಗಿ ನೋಡಿದ್ದೇ ಇಲ್ಲ. ಹೂಡಿಕೆ, ಷೇರು ಮೊದಲಾದ ಕ್ಷೇತ್ರದಲ್ಲಿ ಅಪಾರವಾದ ಅನುಭವ ಇರುವ ಇವರ ಮಾತುಗಳು ಷೇರುಪೇಟೆ ಹಾಗೂ ಹೂಡಿಕೆಗಳ ಬಗ್ಗೆ ಆಸಕ್ತಿ ಇರುವ ಯಾರಿಗೂ ಸರಿಯಾದ ಮಾರ್ಗದರ್ಶನ ನೀಡುತ್ತವೆ. ಸರ್ಕಾರಗಳಿಂದ ಲಭ್ಯವಿರುವ ವಿವಿಧ ಸಾಲಗಳ ಸಂಪೂರ್ಣ ಮಾಹಿತಿ ಇಲ್ಲಿದೆ..

ಬನ್ನಿ, ಇವರ ಮಾತುಗಳನ್ನು ಸರಿಯಾಗಿ ಅನುಸರಿಸಿದರೆ ನೀವೂ ಮುಂದೊಂದು ದಿನ ಕೋಟ್ಯಾಧಿಪತಿ ಆಗಬಹುದು.

1. ಉದ್ಯಮಶೀಲ ಮನಸ್ಸನ್ನು ಎಷ್ಟು ಸಾಧ್ಯವೋ ಅಷ್ಟೂ ಬೇಗ ಹೊಂದಿರಿ

1. ಉದ್ಯಮಶೀಲ ಮನಸ್ಸನ್ನು ಎಷ್ಟು ಸಾಧ್ಯವೋ ಅಷ್ಟೂ ಬೇಗ ಹೊಂದಿರಿ

ಯುವಕನಾಗಿದ್ದಾಗ ಬಫೆಟ್ ಸದಾ ತಮ್ಮ ವ್ಯಾಪ್ತಿಗೂ ಹೊರತಾದ ವಿಷಯಗಳ ಬಗ್ಗೆ ಚಿಂತಿಸುತ್ತಿದ್ದು, ಹಣ ಗಳಿಸುವ ಬಗ್ಗೆ ಹೊಸ ಹಾಗೂ ಕ್ರಿಯಾತ್ಮಕ ಕ್ರಮಗಳನ್ನು ಅನ್ವೇಷಿಸುತ್ತಿದ್ದರು. ಆ ಸಮಯದಲ್ಲಿ ಇವರು ಪಿನ್ ಬಾಲ್ ಮೆಶೀನ್ ಒಂದನ್ನು ಬಾಡಿಗೆಗೆ ನೀಡುವ ಹಾಗೂ ವೃತ್ತ ಪತ್ರಿಕೆಯನ್ನು ಹಂಚುವ ಕೆಲಸ ಮಾಡುತ್ತಿದ್ದರು.

ಬಫೆಟ್ರಿಂದ ಕಲಿಯಬೇಕಾದುದು:
ಒಂದು ವೇಳೆ ನಿಮಗೆ ಮಿಲಿಯಾಧೀಶನಾಗಬೇಕಿದ್ದರೆ ನಿಮ್ಮ ತಲೆಯಲ್ಲಿ ಸ್ಥಾಪಿಸಬೇಕಿದ್ದ ಉದ್ಯಮವನ್ನು ವೃದ್ದಾಪ್ಯದವರೆಗೂ ಮುಂದೂಡಬೇಡಿ. ಹಣ ಮಾಡಬಹುದಾದ ಯಾವುದೋ ಒಂದು ಮಾರ್ಗವನ್ನು ಹುಡುಕಿ. ಇದರಿಂದ ಆದಾಯ ಬರತೊಡಗಿದ ಬಳಿಕ ಉಳಿತಾಯದ ಮಾರ್ಗವನ್ನು ಕಂಡುಕೊಳ್ಳಿ ಹಾಗೂ ಈ ಉಳಿತಾಯವನ್ನು ಹೂಡಿಕೆಯಲ್ಲಿ ಹೂಡಲು ಪ್ರಾರಂಭಿಸಿ. ಚಿಕ್ಕ ವಯಸ್ಸಿನಲ್ಲಿಯೇ ಹೂಡಿಕೆಯಲ್ಲಿ ಪ್ರಾರಂಭಿಸಿದರೆ ಕ್ರಮೇಣ ಇದರ ಗಳಿಕೆ ಚಕ್ರಬಡ್ಡಿಯ ರೂಪದಲ್ಲಿ ಏರುತ್ತಾ ಹೋಗುತ್ತದೆ ಎಂದು ಫೋರ್ಟ್ ವರ್ಥ್ ಸಂಸ್ಥೆಯ Worth Pointe Wealth Management ಟೆಕ್ಸಸ್ ಮೂಲದ ವಿಭಾಗದ ಪಾಲುದಾರರಾಗಿರುವ ಜೋಶುವಾ ವಿಲ್ಸನ್ ತಿಳಿಸುತ್ತಾರೆ. "ಚಿಕ್ಕ ವಯಸ್ಸಿನಲ್ಲಿಯೇ ಹಣ ಗಳಿಸಲು ಪ್ರಾರಂಭಿಸುವ ವ್ಯಕ್ತಿಗಳು ಇತರ ಕ್ಷೇತ್ರಗಳಲ್ಲಿಯೂ ಆರ್ಥಿಕ ಜಾಗೃತಿಯನ್ನು ಹೊಂದಿರುತ್ತಾರೆ. ಇವರು ಫಲ ನೀಡದ ಕ್ಷೇತ್ರಗಳನ್ನು ಬೇಗನೆ ಗುರುತಿಸುತ್ತಾರೆ ಹಾಗೂ ಫಲ ನೀಡುವ ಕ್ಷೇತ್ರಗಳಲ್ಲಿ ಹಣ ಹೂಡುವ ಬಗ್ಗೆ ಖಚಿತ ನಿರ್ಧಾರಗಳನ್ನು ಹೊಂದುವ ಮೂಲಕ ಬುದ್ದಿವಂತಿಕೆಯನ್ನು ಪ್ರದರ್ಶಿಸುತ್ತಾರೆ" ಎಂದು ಅವರು ಹೇಳುತ್ತಾರೆ.

2. ನಿಮ್ಮ ಲಾಭಗಳನ್ನೂ ಮರು ಹೂಡಿಕೆ ಮಾಡಿ

2. ನಿಮ್ಮ ಲಾಭಗಳನ್ನೂ ಮರು ಹೂಡಿಕೆ ಮಾಡಿ

ನಿಮ್ಮ ಹೂಡಿಕೆಯಿಂದ ನಿಮಗೆ ಲಾಭವಾಗಿದ್ದರೆ ಈ ಲಾಭವನ್ನು ಪಡೆದು ಓಡಬೇಡಿ. ಬದಲಿಗೆ ಈ ಹಣವನ್ನೂ ಮರು ಹೂಡಿಕೆ ಮಾಡಿ.ಇದು ವಾರೆನ್ ಬಫೆಯವರ ಸಿದ್ದಮಂತ್ರವಾಗಿದೆ.

ತಾರುಣ್ಯದಲ್ಲಿಯೇ ಬಫೆಟ್ ರವರು ತಮ್ಮ ಒಬ್ಬ ಸ್ನೇಹಿತನೊಂದಿಗೆ ಪಾಲುದಾರಿಕೆಯಲ್ಲಿ ಪಿನ್ ಬಾಲ್ ಯಂತ್ರಗಳ ವ್ಯಾಪಾರ ಪ್ರಾರಂಭಿಸಿದರು. ಇದಕ್ಕಾಗಿ ಅವರು ಕೇವಲ ಇಪ್ಪತ್ತೈದು ಡಾಲರುಗಳಲ್ಲಿ ಒಂದು ಯಂತ್ರವನ್ನು ಕೊಂಡಿದ್ದರು. ಇದನ್ನು ಮಾರಿ ಬಂದ ಲಾಭವನ್ನು ಅಂದಿನ ತಾರುಣ್ಯದ ಅಗತ್ಯಗಳಿಗೆಂದು ವಿನಿಯೋಗಿಸದೇ ಈ ಲಾಭವನ್ನೂ ಯಂತ್ರಗಳನ್ನು ಕೊಂಡುಕೊಳ್ಳಲು ಬಳಸಿದರು. ಹೀಗೇ ಪ್ರತಿ ಬಾರಿಯ ಲಾಭವನ್ನೂ ಯಂತ್ರಗಳನ್ನು ಕೊಳ್ಳಲೆಂದೆ ಮೀಸಲಿಡುತ್ತಿದ್ದುದರಿಂದ ವಿವಿಧ ಕಡೆಗಳಲ್ಲಿ ಇವರು ಎಂಟು ಯಂತ್ರಗಳನ್ನು ಸ್ಥಾಪಿಸಲು ಸಾಧ್ಯವಾಯಿತು. ಒಂದು ದಿನ ಈ ಪಾಲುದಾರಿಕೆ ಮುಕ್ತಾಯವಾಗಿ ಇಬ್ಬರೂ ತಮ್ಮ ತಮ್ಮ ದಾರಿ ಹಿಡಿದರು. ವಾರೆನ್ ಬಫೆಟ್ ರವರು ತಮ್ಮ ಪಾಲಿನ ಲಾಭದಲ್ಲಿ ಇನ್ನೊಂದು ವ್ಯಾಪಾರ ಪ್ರಾರಂಭಿಸಿದರು.

ವ್ಯಾಪಾರದ ಬಗ್ಗೆ ಸದಾ ಧನಾತ್ಮಕವಾಗಿಯೇ ಯೋಚಿಸಬೇಕಾದುದು ಯಶಸ್ಸಿನ ಮೂಲವಾಗಿದೆ. ಆದರೆ ಪ್ರತಿ ಬಾರಿಯೂ ಉದ್ಯಮ ಲಾಭವನ್ನೇ ಕೊಡುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಕೆ.ವಿ. ಸೋಷಿಯಲ್ ಎಂಬ ಸಾಮಾಜಿಕ ಮಾಧ್ಯಮದ ಮಾರ್ಕೆಟಿಂಗ್ ಪರಿಹಾರಗಳನ್ನು ಒದಗಿಸುವ ಸಂಸ್ಥೆಯ ಸಂಸ್ಥಾಪಕ ಹಾಗೂ ಕಾರ್ಯನಿರ್ವಾಹಕ ನಿರ್ದೇಶಕರಾದ ನೀಲ್ ನೇಪಿಯರ್ ತಿಳಿಸುತ್ತಾರೆ. "ಪ್ರತಿ ತಿಂಗಳೂ ನಿಮ್ಮ ಆದಾಯದ ಹತ್ತರಿಂದ ಇಪ್ಪತ್ತೈದು ಶೇಖಡಾ ಹಣವನ್ನು ವಿವಿಧ ಉದ್ಯಮಗಳಲ್ಲಿ ತೊಡಗಿಸಿ, ಇದರಿಂದ ಯಾವುದಾದರೊಂದು ಉದ್ಯಮ ಕುಸಿದರೂ ಇನ್ನೊಂದು ಕಡೆ ನಿಮ್ಮ ಆಸ್ತಿ ಭದ್ರವಾಗಿರುತ್ತದೆ" ಎಂದು ಅವರು ತಿಳಿಸುತ್ತಾರೆ.

3. ಅನಾವಶ್ಯಕ ಸಾಲವನ್ನು ಪಡೆಯಬೇಡಿ

3. ಅನಾವಶ್ಯಕ ಸಾಲವನ್ನು ಪಡೆಯಬೇಡಿ

"ಖರ್ಚು ಮಾಡುವ ಮೊದಲು ಹಣವನ್ನು ಸಂಪಾದಿಸಿ" ಎಂಬುದೊಂದು ಸುಭಾಷಿತವಾಗಿದೆ. ಉದ್ಯಮವೊಂದನ್ನು ಸ್ಥಾಪಿಸಬೇಕಾದರೆ ಒಂದು ಮೊತ್ತದ ಹಣ ಬೇಕಾಗಿರುತ್ತದೆ. ಕೆಲವರು ಈ ಹೂಡಿಕೆಗೆ ಅಥವಾ ಈಗಿರುವ ಸಂಸ್ಥೆಯನ್ನು ವಿಸ್ತರಿಸಲು ಸಾಲದ ಮೊರೆ ಹೋಗುತ್ತಾರೆ. ಈ ವಿಷಯದಲ್ಲಿ ಬಫೆಟ್ ರವರು ಹೀಗೆ ಹೇಳುತ್ತಾರೆ. "ಅಗತ್ಯವಿಲ್ಲದೇ ಸಾಲ ಪಡೆಯಬೇಡಿ. ಇದು ದೊಡ್ಡ ಸಾಲವೇ ಇರಬಹುದು ಅಥವಾ ಕ್ರೆಡಿಟ್ ಕಾರ್ಡ್ ಸಾಲವೇ ಇರಬಹುದು"

1991 ರಲ್ಲಿ ನಾಟ್ರೆ ಡ್ಯಾಮ್ ಎಂಬಲ್ಲಿ ನೀಡಿದ ಭಾಷಣವೊಂದರಲಿ ಬಫೆಟ್ ಹೀಗೆ ಹೇಳಿದ್ದರು "ವ್ಯಸನ ಹಾಗೂ ಸಾಲದಲ್ಲಿ ಹಲವಾರು ವ್ಯಕ್ತಿಗಳು ಸೋಲನ್ನು ಅನುಭವಿಸುತ್ತಾರೆ" ಈ ಭಾಷಣದಲ್ಲಿ ಅವರು ಇಂದಿನ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ರವರನ್ನೂ ಉಲ್ಲೇಖಿಸಿ ಅವರ ಕೆಲವು ಹೂಡಿಕೆಗಳು ಹೇಗೆ ನಷ್ಟಕ್ಕೆ ಗುರಿಯಾದವು ಎಂದು ವಿವರಿಸಿದ್ದರು. "ಇವರು ತಮಗೆ ಎಷ್ಟೊಂದು ಸಾಲ ದೊರಕುತ್ತಿದೆ ಎಂಬ ಬಗ್ಗೆ ಸಂತೋಷಟ್ಟಿದ್ದರೇ ವಿನಃ ಈ ಹಣವನ್ನು ಹಿಂದಿರುಗಿಸುವುದು ಹೇಗೆ ಎಂಬ ವಿಷಯದ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಿರಲಿಲ್ಲ' ಎಂದು ಬಫೆಟ್ ತಿಳಿಸಿದ್ದರು.
"ಒಂದು ವೇಳೆ ನೀವು ಚತುರರೇ ಆಗಿದ್ದರೆ ಸಾಲವನ್ನು ಪಡೆಯದೆಯೇ ಸಾಕಷ್ಟು ಹಣವನ್ನು ಸಂಪಾದಿಸಬಹುದು. ನನ್ನ ಜೀವಮಾನದಲ್ಲಿಯೇ ನಾನು ದೊಡ್ಡ ಮೊತ್ತದ ಸಾಲವನ್ನು ಎಂದೂ ಪಡೆದಿರಲಿಲ್ಲ" ಎಂದು ತಿಳಿಸುತ್ತಾರೆ.

4. ಸಾಲ ಪಡೆಯಲೇಬೇಕಾಗಿದ್ದರೆ ಅವಶ್ಯವಿದ್ದಷ್ಟು ಕಡಿಮೆ ಬಡ್ಡಿಯಲ್ಲಿ ಪಡೆಯಿರಿ

4. ಸಾಲ ಪಡೆಯಲೇಬೇಕಾಗಿದ್ದರೆ ಅವಶ್ಯವಿದ್ದಷ್ಟು ಕಡಿಮೆ ಬಡ್ಡಿಯಲ್ಲಿ ಪಡೆಯಿರಿ

ಬಫೆಟ್ ಸಾಲವೇ ಇಲ್ಲದ ಉದ್ಯಮಗಳನ್ನು ಕೊಳ್ಳುವತ್ತ ತಮ್ಮ ಚಿತ್ತ ಹರಿಸಿದರೂ ಹೂಡಿಕೆಯ ಮೇಲೆ ಉತ್ತಮ ವರಮಾನ ನೀಡುವ ಸಂಸ್ಥೆಗಳನ್ನೂ ಇವರು ಕಡೆಗಣಿಸುವುದಿಲ್ಲ. 2010ರಲ್ಲಿ ಪ್ರಕಟಿಸಿದ ಶೇರುದಾರದ ಪತ್ರದಲ್ಲಿ ಬಫೆಟ್ ಸಾಲ ಪಡೆಯುವ ಪ್ರತಿಫಲವನ್ನು "ಅಪಾಯ" ಎಂದು ಬಣ್ಣಿಸಿದ್ದಾರೆ.
ಸಾಲದ ಅದ್ಭುತಗಳಿಂದ ಲಾಭ ಪಡೆದ ನಂತರ, ಕೆಲವೇ ಜನರು ಹೆಚ್ಚು ಸಂಪ್ರದಾಯಶೀಲ ಅಭ್ಯಾಸಗಳಿಗೆ ಮರಳುತ್ತಾರೆ. ಒಂದು ವೇಳೆ ಮಿಲಿಯನ್ ಸಂಪಾದಿಸುವುದೇ ನಿಮ್ಮ ಆಶಯವಾಗಿದ್ದರೆ ಹಾಗೂ ಇದಕ್ಕಾಗಿ ನೀವು ಸಾಲ ಪಡೆಯುವುದು ಅನಿವಾರ್ಯವಾಗಿದ್ದರೆ ನೀವು ಕಡಿಮೆ ಹಾಗೂ ನಿಗದಿತ ಬಡ್ಡಿಯ ಸಾಲವನ್ನು ಪಡೆಯಬೇಕು ಹಾಗೂ ಇದರ ಕಂತುಗಳನ್ನು ಎಂದೂ ತಪ್ಪಿಸದೇ ಆದಷ್ಟು ಬೇಗನೇ ಈ ಸಾಲವನ್ನು ಪೂರ್ಣವಾಗಿ ಪಾವತಿಸಲು ಯತ್ನಿಸಬೇಕು" ಎಂದು ತಿಳಿಸುತ್ತಾರೆ.

5. ಸರಳ ಜೀವನ ನಡೆಸಿ

5. ಸರಳ ಜೀವನ ನಡೆಸಿ

ವಾರೆನ್ ಬಫೆಟ್ ರಂತೆ ಮಿಲಿಯಾಧೀಶರಾಗಬೇಕೇ? ಹಾಗಾದರೆ ಅವರ ಹೂಡಿಕೆಯ ಜಾಣ್ಮೆಯ ಜೊತೆಗೆ ಜೀವನ ಕ್ರಮವನ್ನೂ ಅನುಸರಿಸಲು ಮರೆಯದಿರಿ. ಸಾಮಾನ್ಯವಾಗಿ ಆದಾಯ ಹೆಚ್ಚುತ್ತಿದ್ದಂತೆಯೇ ಜನರು ತಮ್ಮ ಜೀವನ ಕ್ರಮಗಳನ್ನೂ ಬದಲಿಸತೊಡಗುತ್ತಾರೆ. ಇವರ ಖರ್ಚುಗಳ ಜೊತೆಗೆ ಇತರರ ಕುರಿತಾದ ಅಭಿಪ್ರಾಯಗಳು, ಸಮಾಜದಲ್ಲಿನ ವರ್ತನೆಯೂ ಬದಲಾಗುತ್ತದೆ. ದೊಡ್ಡ ಮನೆ, ಐಷಾರಾಮಿ ಕಾರು ಹಾಗೂ ದುಬಾರಿ ರಜಾ ದಿನಗಳನ್ನು ಕಳೆಯತೊಡಗುತ್ತಾರೆ. ಆದರೆ ಬಫೆಟ್ ಇದಕ್ಕೆ ವ್ಯತಿರಿಕ್ತವಾದ ಜೀವನಶೈಲಿ ಹೊಂದಿದ್ದಾರೆ.
ಇವರಲ್ಲಿ ಬಿಲಿಯನ್ನುಗಳಷ್ಟು ಆಸ್ತಿ ಇದ್ದರೂ ಇವರ ಜೀವನ ಕ್ರಮ ಸರಳವಾಗಿದೆ. ಪ್ರಸ್ತುತ ಇವರು ಒಮಾಹಾ ಎಂಬ ಪ್ರದೇಶದಲ್ಲಿ ವಾಸಿಸುತ್ತಿದ್ದು, 1958 ರಲ್ಲಿ $ 31,500 ಮೊತ್ತಕ್ಕೆ ಒಂದು ಮನೆಯನ್ನು ಕೊಂಡಿದ್ದರು. ಈ ಮನೆಯ ಬೆಲೆ 2016ರಲ್ಲಿ 250,000 ಡಾಲರ್ ಆಗಿತ್ತು. ಆ ಸಮಯದಲ್ಲಿ ಬರ್ಕ್ ಷೈರ್ ಹಾಥ್ ವೇ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಇವರ ವೇತನವೂ ಕೇವಲ 100,000 ಡಾಲರ್ ಇತ್ತು.
ನೀವು ಎಷ್ಟು ಹೆಚ್ಚು ಖರ್ಚು ಮಾಡುತ್ತೀರೋ, ಅಷ್ಟೇ ನಿಮ್ಮ ಮೊದಲ ಮಿಲಿಯನ್ ಸಂಪಾದಿಸುವ ಸಮಯವೂ ಹೆಚ್ಚುತ್ತದೆ. ಸರಳ ಜೀವನ ಹಾಗೂ ಕನಿಷ್ಟ ಖರ್ಚುಗಳ ಮೂಲಕ ನಿಮ್ಮ ಉಳಿತಾಯದಲ್ಲಿ ಹೆಚ್ಚಳವಾಗುತ್ತದೆ ಹಾಗೂ ಇದು ಚಕ್ರಬಡ್ಡಿಯ ರೂಪದಲ್ಲಿ ಇನ್ನಷ್ಟು ವೃದ್ದಿಗೊಳ್ಳುತ್ತದೆ ಎಂಬುದು ಇದು ಬಫೆಟ್ ಸೂತ್ರವಾಗಿದೆ. ಈ ಸೂತ್ರವನ್ನು ಅನುಸರಿಸಿ ನಿಮ್ಮ ಉಳಿತಾಯವನ್ನು ಸತತವಾಗಿ ಹೂಡುತ್ತಾ ಬಂದರೆ ಶೀಘ್ರವೇ ನಿಮ್ಮ ಇಷ್ಟಾರ್ಥ ಪೂರ್ಣಗೊಳ್ಳಲಿದೆ.

6. ಕಲಿಯುವುದನ್ನೆಂದೂ ನಿಲ್ಲಿಸಬೇಡಿ

6. ಕಲಿಯುವುದನ್ನೆಂದೂ ನಿಲ್ಲಿಸಬೇಡಿ

4U Fitness ಎಂಬ ವೈಯಕ್ತಿಕ ತರಬೇತಿ ಸಂಸ್ಥೆಯ ಸಂಸ್ಥಾಪಕ ಡೇನಿಯ ನೈಯಿರಿಯವರ ಪ್ರಕಾರ ಮಿಲಿಯನ್ನುಗಳಷ್ಟು ಸಂಪಾದಿಸಲು ನಿಮಗೆ ಕಾಲೇಜು ಪದವಿಯೇ ಬೇಕೆಂದಿಲ್ಲ. ನಿಮ್ಮ ಮೆದುಳಿಗೆ ಸದಾ ಮೇವನ್ನು ಒದಗಿಸುತ್ತಿದ್ದು ಸುತ್ತ ಮುತ್ತಲ ಆಗು ಹೋಗುಗಳನ್ನು ಅಭ್ಯಸಿಸುವ ಮೂಲಕವೂ ವಿವಿಧ ಹೂಡಿಕೆಗಳ ಬಗ್ಗೆ ಮಾಹಿತಿ ಪಡೆದು ಉದ್ಯಮವನ್ನು ನಡೆಸಬಹುದು. ಬಫೆಟ್ ಓರ್ವ ದೊಡ್ಡ ಹೂಡಿಕೆದಾರರಾಗಿರಬಹುದು. ಆದರೆ ಇದು ಅವರನ್ನು ಓದುವತ್ತ ಹಾಗೂ ಈಗಾಗಲೇ ಇರುವ ಜ್ಞಾನವನ್ನು ಇನ್ನಷ್ಟು ಹೆಚ್ಚಿಸಿಕೊಳ್ಳುವುದರಿಂದ ಯಾರೂ ತಡೆಯಲಾರರು ಎಂದು ತಿಳಿಸುತ್ತಾರೆ.

"ಬಫೆಟ್ ಹೇಳುವ ಪ್ರಕಾರ ಅವರು ನಿತ್ಯವೂ ನಾಲ್ಕು ಘಂಟೆಗಳಾದರೂ ಓದುತ್ತಾರೆ. ಒಂದು ವೇಳೆ ನೀವು ಮಿಲಿಯಾಧೀಶರಾಗಬಯಸಿದರೆ ನೀವು ಯಾವುದಾದರೊಂದು ಕ್ಷೇತ್ರದಲ್ಲಿ ಪರಿಣಿತಿ ಪಡೆಯಬೇಕು ಹಾಗೂ ಈ ಪರಿಣಿತಿ ಪಡೆಯಲು ನಿಮ್ಮ ಮೆದುಳಿಗೆ ಸತತವಾಗಿ ವಿಷಯಗಳನ್ನು ಉಣಿಸುತ್ತಿರಬೇಕು" ಎಂದು ಅವರು ತಿಳಿಸುತ್ತಾರೆ.
ಸಾಮಾನ್ಯವಾಗಿ ದಿನದ ಚಟುವಟಿಕೆಗಳಲ್ಲಿ ಇಷ್ಟು ಸಮಯವನ್ನು ಓದಿಗಾಗಿ ಮೀಸಲಿಡಲು ಎಲ್ಲರಿಗೂ ಸಾಧ್ಯವಾಗಲಿಕ್ಕಿಲ್ಲ. ಆದರೆ ಯಾವಾಗ ಸಾಧ್ಯವೋ ಆಗೆಲ್ಲಾ ಕಲಿಯವ ಅವಕಾಶಗಳನ್ನು ಸದುಪಯೋಗಿಸಿಕೊಳ್ಳಬೇಕು. ಉದಾಹರಣೆಗೆ ಹೂಡಿಕೆಯ ಕ್ಷೇತ್ರದಲ್ಲಿ ಆಗುತ್ತಿರುವ ಸಭೆ, ಸೆಮಿನಾರ್ ಅಥವಾ ಇತರ ಆನ್ಲೈನ್ ಕೋರ್ಸು.

7. ನಿಮಗೆ ಪ್ರೇರಣೆ ನೀಡುವ ವ್ಯಕ್ತಿಗಳ ನಡುವೆ ಇರಿ

7. ನಿಮಗೆ ಪ್ರೇರಣೆ ನೀಡುವ ವ್ಯಕ್ತಿಗಳ ನಡುವೆ ಇರಿ

ಬಫೆಟ್ ಪ್ರಕಾರ ನಿಮ್ಮ ಸ್ನೇಹಿತ ವರ್ಗದಲ್ಲಿ ನಿಮಗಿಂತಲೂ ಉತ್ತಮವಾಗಿರುವ ವ್ಯಕ್ತಿಗಳೇ ಇರಲಿ. "ನಿಮಗಿಂತಲೂ ಉತ್ತಮವಾಗಿ ವ್ಯವಹರಿಸುವ ಹಾಗೂ ಅವರ ನಡವಳಿಕೆಯಿಂದ ಪ್ರಭಾವ ಪಡೆಯಿರಿ" ಎಂದು ಬಫೆಟ್ ತಿಳಿಸುತ್ತಾರೆ. ನೆನಪಿಡಿ, ನಿಮ್ಮ ಜೀವನದ ಭಾಗವಾಗಿರುವ ವ್ಯಕ್ತಿಗಳು ನಿಮ್ಮ ಮೇಲೆ ಒಳ್ಳೆಯ ಅಥವಾ ಕೆಟ್ಟ ಪ್ರಭಾವ ಬೀರಬಹುದು. ನೀವು ಎಂದಿಗೂ ಯಶಸ್ವಿ ವ್ಯಕ್ತಿಗಳನ್ನೇ ಅನುಸರಿಸಬೇಕು" ಪ್ರಾಯಶಃ ಆಡಿದಂತೆ ಮಾಡಿ ತೋರಿಸಿರುವ ಬಫೆಟ್ ಮೈಕ್ರೋಸಾಫ್ಟ್ ಸಂಸ್ಥೆಯ ಮಾಲಿಕರಾದ ಬಿಲ್ ಗೇಟ್ಸ್ ರೊಂದಿಗೆ ಕಳೆದ ಇಪ್ಪತ್ತೈದು ವರ್ಷಗಳಿಂದಲೂ ಆಪ್ತ ಗೆಳೆತನ ಹೊಂದಿದ್ದಾರೆ.

ಇದರ ತಾತ್ಪರ್ಯ ಸರಳವಾಗಿದೆ: ಹಣ ಮಾಡಬೇಕೆಂದರೆ ನಿಮ್ಮ ಸಹವರ್ತಿಗಳನ್ನು ಜಾಣ್ಮೆಯಿಂದ ಆಯ್ದುಕೊಳ್ಳಿ. ಇದಕ್ಕಾಗಿ ಈಗಿರುವ ನಿಮ್ಮ ಸ್ನೇಹಿತರೊಂದಿಗಿನ ಸ್ನೇಹವನ್ನು ತುಂಡರಿಸಿವುದು ಅಗತ್ಯವಿಲ್ಲ. ಆದರೆ ಸದಾ ಸಬೂಬುಗಳನ್ನೇ ಹೇಳುವ ಅಥವಾ ನಿಮ್ಮಿಂದ ಇದು ಸಾಧ್ಯವಿಲ್ಲ ಎಂಬ ನಕಾರಾತ್ಮಕ ಧೋರಣೆಯ ವ್ಯಕ್ತಿಗಳ ಸ್ನೇಹದಿಂದ ದೂರವೇ ಉಳಿಯಿರಿ ಎಂದು ನೈಯಿರಿಯವರು ತಿಳಿಸುತ್ತಾರೆ.

8. ಅವಕಾಶಗಳನ್ನು ಕಡೆಗಣಿಸದಿರಿ

8. ಅವಕಾಶಗಳನ್ನು ಕಡೆಗಣಿಸದಿರಿ

ಮೊದಲ ಮಿಲಿಯನ್ ಸಂಪಾದಿಸುವವರೆಗೂ ನೀವು ಅವಿರತವಾಗಿ ಶ್ರಮಿಸಬೇಕಾಗುತ್ತದೆ ಹಾಗೂ ನಿಮ್ಮ ಸೌಕರ್ಯ ವಲಯದಿಂದಲೂ ಹೊರ ಹೋಗಬೇಕಾಗುತ್ತದೆ. ಇದಕ್ಕಾಗಿ ನಿಮಗೆ ಆತ್ಮ ವಿಶ್ವಾಸದ ಅವಶ್ಯಕತೆ ಇದೆ. ಭಯ ಅಥವಾ ತಮ್ಮ ಬಗ್ಗೆಯೇ ಅನುಮಾನ ನಿಮ್ಮ ಮಿಲಿಯನ್ ಕಡೆಗಿನ ಪ್ರಯಾಣಕ್ಕೆ ಅಡ್ಡಗಾಲು ಒಡ್ಡಬಹುದು. ವಿಶೇಷವಾಗಿ ತಮ್ಮ ಬಗ್ಗೆ ನಂಬಿಕೆಯೇ ಇಲ್ಲದವರು ಹಾಗೂ ನಿರಾಶಾವಾದಿಗಳು ತಮಗೆ ಲಭಿಸುವ ಅವಕಾಶಗಳನ್ನು ಹಿಡಿದುಕೊಳ್ಳದೇ ಇದರ ಪ್ರಯೋಜನಗಳಿಂದ ವಂಚಿತರಾಗುತ್ತಾರೆ.

ಅವಕಾಶಗಳು ಎಂದು ಪ್ರತಿದಿನ ಬರುವುದಿಲ್ಲ. ಬಫೆಟ್ ರ ಅತ್ಯುತ್ತಮ ಹೂಡಿಕೆಗಳನ್ನು ಗಮನಿಸಿದರೆ ಅವರು ಅವಕಾಶಗಳನ್ನು ವಶಪಡಿಸಿಕೊಳ್ಳುವಲ್ಲಿ ಸಿದ್ದ ಹಸ್ತರು ಎಂದು ತಿಳಿದುಕೊಳ್ಳಬಹುದು. ಜಾರ್ಜಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಜೊತೆ ಮಾತನಾಡುವಾಗ ಅವರು ಈ ಸಲಹೆಯನ್ನು ನೀಡಿದರು. "ಜೀವನದಲ್ಲಿ ದೊಡ್ಡ ಅವಕಾಶಗಳು ಎದುರು ಬಂದಾಗ ಇವನ್ನು ಪಡೆದುಕೊಳ್ಳಿ. ಕೈಜಾರಿ ಹೋಗಲು ಬಿಡಬೇಡಿ. ನಮಗೆ ಎಲ್ಲಾ ಕೆಲಸಗಳನ್ನು ಎಲ್ಲಾ ಸಮಯದಲ್ಲಿ ಮಾಡಲು ಸಾಧ್ಯವಿಲ್ಲ. ಆದ್ದರಿಂದ ಯಾವಾಗ ದೊಡ್ಡ ಅವಕಾಶ ಕೂಡಿ ಬರುತ್ತದೆಯೋ ಹಾಗೂ ಇದು ಸೂಕ್ತವೋ ಆಗ ಇದನ್ನು ಬಿಡಬಾರದು. ಒಂದು ವೇಳೆ ಈ ಅವಕಾಶವನ್ನು ಚಿಕ್ಕ ಮಟ್ಟದಲ್ಲಿ ಪ್ರಾರಂಭಿಸುವುದು ದೊಡ್ಡ ತಪ್ಪು ಹಾಗೂ ಇದನ್ನು ಪ್ರಾರಂಭಿಸದಿರುವುದು ಉತ್ತಮ. ದೊಡ್ಡ ಅವಕಾಶಗಳು ಬಂದಾಗ ಥಟ್ಟನೇ ಹಿಡಿದು ಬಿಡಬೇಕು. ಏಕೆಂದರೆ ಇದು ತಪ್ಪಿದರೆ ಇನ್ನೂ ಐನೂರು ಅವಕಾಶಗಳು ಬರುತ್ತವೆ ಎಂದು ಹೇಳಲು ಸಾಧ್ಯವಿಲ್ಲ.

ಕಡೆಯ ಮಾತು

ಕಡೆಯ ಮಾತು

ಹೂಡಿಕೆ ವಿಧಾನ, ವ್ಯವಹಾರ ತತ್ವಗಳು ಮತ್ತು ಸರಳ ಜೀವನ ಶೈಲಿಗಳ ಮೂಲಕವೇ ಅಪಾರ ಸಂಪತ್ತಿನ ಒಡೆಯರಾದ ವಾರೆನ್ ಬಫೆಟ್ ಹೂಡಿಕೆಯ ಕ್ಷೇತ್ರದಲ್ಲಿ ಓರ್ವ ಮಾದರಿಯಾಗಿದ್ದಾರೆ. ವಾರೆನ್ ಬಫೆಟ್ ಅವರ ಹೂಡಿಕೆಗಳ ಪರಿಣಾಮವಾಗಿ ಇಂದು ಅವರ ಸಂಪತ್ತು ಶತಕೋಟಿಗಳಲ್ಲಿದೆ.

ಇವರಿಗೆ ಕೇವಲ ಹಣ ಮಾಡುವುದು ಹೇಗೆ ಎಂದು ಮಾತ್ರ ಗೊತ್ತಿರುವುದಲ್ಲ, ಇದನ್ನು ಉಳಿಸಿಕೊಳ್ಳುವುದು ಹೇಗೆ ಎಂದೂ ಗೊತ್ತು. ಇವರ ಪ್ರತಿ ನಡೆಯನ್ನೂ ನೀವು ಯಥಾವತ್ತಾಗಿ ನಕಲು ಮಾಡುವ ಅವಶ್ಯಕತೆ ಇಲ್ಲ. ಆದರೆ ಇದಕ್ಕಾಗಿ ಇವರು ಯಾವ ತಂತ್ರವನ್ನು ಬಳಸಿದರು ಎಂದು ಅರಿತು ಅಳವಡಿಸಿಕೊಳ್ಳುವ ಮೂಲಕ ಆರ್ಥಿಕ ಸ್ವಾತಂತ್ರ್ಯದ ಕಡೆಗೆ ಹೇಗೆ ಸಾಗಬಹುದು ಎಂಬುದನ್ನು ನೀವೇ ನಿಮ್ಮ ಸ್ವಂತ ಪಥದ ಮೂಲಕ ಕಂಡುಕೊಳ್ಳಬಹುದು.

English summary

How to become a Billionaire as Warren Buffett: Here are simple formulas

Whether you're looking for investment advice or you're striving for financial greatness, Warren Buffett might be the perfect role model.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X